ಜಿಯೋ ಮತ್ತೊಂದು ಸಾಧನೆ ಮಾಡಿದೆ. ಡೌನ್ಲೋಡ್ ಡೇಟಾದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಜಿಯೋ ಇದೀಗ ಅಪ್ಲೋಡ್‌ನಲ್ಲೂ ನಂಬರ್ 1 ಆಗಿದೆ. ಈ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಸ್ಪೀಡ್ ಡೇಟಾ ನೀಡುವ ನೆಟ್‌ವರ್ಕ್ ಆಗಿ ಹೊರಹೊಮ್ಮಿದೆ.
ನವದೆಹಲಿ(ನ.18) ಜಿಯೋ ಈಗಾಗಲೇ ದೇಶದಲ್ಲಿ ಅತ್ಯುತ್ತಮ ನೆಟ್‌ವರ್ಕ್ ಮೂಲಕ ಪ್ರತಿಸ್ಪರ್ಧಿಗಳಿಗೆ ತೀವ್ರ ಪ್ರತಿಸ್ಪರ್ಧೆ ಒಡ್ಡಿದೆ. ಇದೀಗ 5ಜಿ ಯ ರೋಲ್-ಔಟ್ ನಡುವೆ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ(TRAI) ಅಕ್ಟೋಬರ್ ತಿಂಗಳ 4ಜಿ ವೇಗ ಪರೀಕ್ಷೆಯ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ರಿಲಯನ್ಸ್ ಜಿಯೋ ಸರಾಸರಿ 4ಜಿ ಡೌನ್‌ಲೋಡ್ ವೇಗದೊಂದಿಗೆ ಅಪ್‌ಲೋಡ್ ವೇಗದಲ್ಲೂ ಮೊದಲ ಸ್ಥಾನದಲ್ಲಿದೆ. TRAI ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಜಿಯೋದ ಸರಾಸರಿ 4ಜಿ ಡೌನ್‌ಲೋಡ್ ವೇಗದಲ್ಲಿ 1.2 ಎಂಬಿಪಿಎಸ್ ಜಿಗಿತ ಕಂಡು ಬಂದಿದೆ. ಸೆಪ್ಟೆಂಬರ್ ತಿಂಗಳಲ್ಲಿ 19.1 ಎಂಬಿಪಿಎಸ್ ಇದ್ದ ವೇಗ ಅಕ್ಟೋಬರ್ ತಿಂಗಳಲ್ಲಿ 20.3 ಎಂಬಿಪಿಎಸ್ ತಲುಪಿದೆ.
ಅಂಕಿ ಅಂಶಗಳ ಅನ್ವಯ ಸರಾಸರಿ ಡೌನ್‌ಲೋಡ್ ವೇಗದ ವಿಚಾರದಲ್ಲಿ ಏರ್‌ಟೆಲ್ ಮತ್ತು ವಿ (ವೊಡಾಫೋನ್-ಐಡಿಯಾ) ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಅಕ್ಟೋಬರ್‌ನಲ್ಲಿ ಏರ್‌ಟೆಲ್‌ನ ಸರಾಸರಿ 4ಜಿ ಡೌನ್‌ಲೋಡ್ ವೇಗ 15 ಎಂಬಿಪಿಎಸ್ ಆಗಿದ್ದರೆ ವಿ 14.5 ಎಂಬಿಪಿಎಸ್ ವೇಗ ಹೊಂದಿತ್ತು. ಕಳೆದ ತಿಂಗಳಿನಿಂದ ಎರಡೂ ಕಂಪನಿಗಳು ತಮ್ಮ ವೇಗದಲ್ಲಿ ಸುಧಾರಣೆ ಮಾಡಿಕೊಂಡಿವೆ. ಆದರೆ ಏರ್ಟೆಲ್ ಮತ್ತು Vi ಗೆ ಹೋಲಿಸಿದರೆ ರಿಲಯನ್ಸ್ ಜಿಯೋದ ಸರಾಸರಿ 4ಜಿ ಡೌನ್‌ಲೋಡ್ ವೇಗವು 5 ಎಂಬಿಪಿಎಸ್ಗಿಂತ ಹೆಚ್ಚು ಇದೆ.
undefined
ಬೆಂಗಳೂರಿನಲ್ಲಿ ಜಿಯೋ ಟ್ರೂ 5G ಸೇವೆ ಆರಂಭ, ಗ್ರಾಹಕರಿಗೆ ಭರ್ಜರಿ ಕೊಡುಗೆ ಘೋಷಣೆ!
ರಿಲಯನ್ಸ್ ಜಿಯೋ ಕಳೆದ ತಿಂಗಳು ಸರಾಸರಿ 4ಜಿ ಅಪ್ಲೋಡ್ ವೇಗದಲ್ಲಿ ಮೊದಲ ಬಾರಿಗೆ ಪ್ರಥಮ ಸ್ಥಾನ ಪಡೆದಿದೆ. ಕಂಪನಿಯು ಈ ತಿಂಗಳು ಅಂದರೆ ಅಕ್ಟೋಬರ್‌ನಲ್ಲಿ 6.2 ಎಂಬಿಪಿಎಸ್ ವೇಗದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ವಿ (Vodafone-Idea) 4.5 ಎಂಬಿಪಿಎಸ್ ವೇಗದೊಂದಿಗೆ ಎರಡನೇ ಸ್ಥಾನದಲ್ಲಿದೆ. ಇದೇ ವೇಳೆ, ಏರ್‌ಟೆಲ್‌ನ ಅಪ್‌ಲೋಡ್ ವೇಗದಲ್ಲಿ ಗಣನೀಯ ಕುಸಿತ ಕಂಡು ಬಂದಿದೆ. ಏರ್‌ಟೆಲ್‌ನ ಸರಾಸರಿ 4ಜಿ ಅಪ್‌ಲೋಡ್ ವೇಗವು ಅಕ್ಟೋಬರ್‌ನಲ್ಲಿ 2.7 ಎಂಬಿಪಿಎಸ್ ತಲುಪಿದೆ. ಅಂದರೆ ಏರ್‌ಟೆಲ್‌ನ ಅಪ್‌ಲೋಡ್ ವೇಗವು ಜಿಯೋ ಹೊಂದಿರುವ ವೇಗದ ಅರ್ಧಕ್ಕಿಂತ ಕಡಿಮೆ ಮಟ್ಟದಲ್ಲಿದೆ.
ಫುಟ್‌ಬಾಲ್ ವಿಶ್ವ ಕಪ್‌ಗಾಗಿ ಜಿಯೋದಿಂದ ವಿಶೇಷ ರೋಮಿಂಗ್
ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಕತಾರ್ ನಲ್ಲಿ ನಡೆಯುತ್ತಿರುವ ಫಿಫಾ (FIFA) ವರ್ಲ್ಡ್ ಕಪ್ 2022 ಅನ್ನು ವೀಕ್ಷಿಸಲು ಹೋಗುವ ಗ್ರಾಹಕರಿಗಾಗಿ ವಿಶೇಷ ಅಂತರಾಷ್ಟ್ರೀಯ ರೋಮಿಂಗ್ (IR) ಪ್ಯಾಕ್‌ಗಳನ್ನು ಹೊರ ತಂದಿದೆ. ಈ ಯೋಜನೆಗಳ ಸಹಾಯದಿಂದ ಜಿಯೋ ಗ್ರಾಹಕರು ಕತಾರ್, ಯುಎಇ (UAE) ಮತ್ತು ಸೌದಿ ಅರೇಬಿಯಾ ನಲ್ಲಿರುವಾಗ ಮನಬಂದಂತೆ ಸಂವಹನ ನಡೆಸಲು ಸಾಧ್ಯವಾಗುತ್ತದೆ. ಒಟ್ಟು ಐದು ಪ್ರಿಪೇಯ್ಡ್ ಯೋಜನೆಗಳನ್ನು ಜಿಯೋ ಪರಿಚಯಿಸಿದೆ, ಭಾರತದಲ್ಲಿನ ಜಿಯೋ ಗ್ರಾಹಕರು ಫಿಫಾ ವಿಶ್ವಕಪ್‌ಗಾಗಿ ವಿದೇಶಕ್ಕೆ ಪ್ರಯಾಣಿಸುವಾಗ ಬಳಸಬಹುದಾದ ಈ ಯೋಜನೆಗಳು ಇಂತಿದೆ. ಎರಡು ರೀತಿಯ ಯೋಜನೆಗಳಿವೆ - ಒಂದು ಧ್ವನಿ, ಡೇಟಾ ಮತ್ತು SMS ಪ್ರಯೋಜನಗಳನ್ನು ಹೊಂದಿದೆ ಮತ್ತು ಇನ್ನೊಂದು ಡೇಟಾ ಲೋಡಿಂಗ್‌ಗಾಗಿ ಮಾತ್ರ.