ಮುಂಬೈ (ಜ. 08): ಹೊಸ ವರ್ಷಾರಂಭದಲ್ಲಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸ ಉಡುಗೊರೆಯನ್ನು ನೀಡಿದೆ. ರಾಷ್ಟ್ರವ್ಯಾಪಿ ಆಡಿಯೋ ಮತ್ತು ವಿಡಿಯೋ ಓವರ್ ವೈ-ಫೈ ಸೇವೆಯನ್ನು ಪ್ರಾರಂಭಿಸುವುದಾಗಿ ಜಿಯೋ ಬುಧವಾರ ಪ್ರಕಟಿಸಿದೆ.
ಸೇವೆ ಶುರುವಾದ ಆರಂಭದಲ್ಲಿಯೇ ಪ್ರತಿಯೊಬ್ಬ ಗ್ರಾಹಕರಿಗೆ ಉತ್ತಮ ಅನುಭವ ಒದಗಿಸುವಂತಾಗಲು, ಜಿಯೋ ಕಳೆದ ಕೆಲವು ತಿಂಗಳುಗಳಿಂದ ಈ ಸೇವೆಯನ್ನು ಪರೀಕ್ಷಿಸುತಿತ್ತು ಎನ್ನಲಾಗಿದೆ.
undefined
ಇದನ್ನೂ ಓದಿ | ದೇಶದ ಗಗನಯಾನಿಗಳಿಗೆ ಚಿತ್ರದುರ್ಗ ಬಳಿ ತರಬೇತಿ: ವಿಜ್ಞಾನನಗರಿಯಲ್ಲಿ ಇಸ್ರೋ ಕೇಂದ್ರ!...
ಏನಿದು ಜಿಯೋ ವೈ-ಫೈ ಕಾಲಿಂಗ್? ಗ್ರಾಹಕರಿಗೇನು ಲಾಭ?
1. ಬಳಕೆದಾರರು ಯಾವುದೇ ವೈ-ಫೈ ನೆಟ್‌ವರ್ಕನ್ನು ಜಿಯೋ ವೈ-ಫೈ-ಕರೆಗಾಗಿ ಬಳಸಬಹುದು.
2. ಬಳಕೆದಾರರಿಗೆ ಉತ್ತಮ ಆಡಿಯೋ / ವಿಡಿಯೋ ಕರೆಯ ಅನುಭವ ಸಿಗುವಂತಾಗಲು, ಆಡಿಯೋ ಮತ್ತು ವೀಡಿಯೊ ಕರೆಗಳು VoLTE ಮತ್ತು Wi-Fi ನಡುವೆ ಬದಲಾಗುತ್ತದೆ.
3. ಜಿಯೋ ಬಳಕೆದಾರರು ವೀಡಿಯೊ ಮೂಲಕ ವೈ-ಫೈ ಕರೆಗಳನ್ನು ಮಾಡಬಹುದು
4. ಈ ಸೌಲಭ್ಯಕ್ಕಾಗಿ ಬಳಕೆದಾರರು ಯಾವುದೇ ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗಿಲ್ಲ. ಇದು ಉಚಿತ!
5.150 ಕ್ಕೂ ಹೆಚ್ಚು ಹ್ಯಾಂಡ್‌ಸೆಟ್ ಗಳಲ್ಲಿ ಇದು ಕಾರ್ಯನಿರ್ವಹಿಸುತ್ತದೆ.
ಈ ಸೇವೆಗೆ ಚಾಲನೆ ನೀಡಿದ ಜಿಯೋ ನಿರ್ದೇಶಕ ಶ್ರೀ ಆಕಾಶ್ ಅಂಬಾನಿ, ಜಿಯೋ ಗ್ರಾಹಕರ ಬಳಕೆಯ ಅನುಭವವನ್ನು ಹೆಚ್ಚಿಸಲು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ನಾವು ಬದ್ದರಾಗಿದ್ದೇವೆ, ಇದಕ್ಕಾಗಿ ನಿರಂತರವಾಗಿ ಹೊಸತನವನ್ನು ಹುಡುಕುತ್ತಿದ್ದೇವೆ, ಎಂದರು.
'ಸರಾಸರಿ ಜಿಯೋ ಗ್ರಾಹಕರು ಪ್ರತಿ ತಿಂಗಳು 900 ನಿಮಿಷಗಳ ಆಡಿಯೋ ಕರೆಗಳನ್ನು ಬಳಸುತ್ತಿದ್ದಾರೆ, ಮತ್ತು ಈ ಸೇವೆಯನ್ನು ಬಳಕೆ ಮಾಡುವ ಗ್ರಾಹಕರ ಸಂಖ್ಯೆಯೂ ಹೆಚ್ಚುತ್ತಿರುವ ನೆಲೆಯಲ್ಲಿ ಜಿಯೋ ವೈ-ಫೈ ಕರೆ ಸೌಲಭ್ಯವನ್ನು ಪರಿಚಯಿಸುತ್ತಿದೆ. ಇದು ಈಗಾಗಲೇ VoLTE ನೆಟ್‌ವರ್ಕ್ ಉದ್ಯಮದಲ್ಲಿ ಬೆಂಚ್ ಮಾರ್ಕ್ ಆಗಿದೆ, ಎಂದು ಆಕಾಶ್ ಅಂಬಾನಿ ತಿಳಿಸಿದರು.
ಇದನ್ನೂ ವೀಕ್ಷಿಸಿ: ಇನ್ಮುಂದೆ ಮೊಬೈಲ್ ಇಂಟರ್ನೆಟ್ ಬಳಸಬೇಕಾದ್ರೆ ಚಹರೆ ಸ್ಕ್ಯಾನ್ ಮಾಡೋದು ಕಡ್ಡಾಯ...