ಬದಲಾಗ್ತಿದೆ Pornhub ಕಂಪನಿಯ ಹೆಸರು: ಕಾರಣ ಹೀಗಿದೆ..

By BK Ashwin  |  First Published Aug 21, 2023, 2:34 PM IST

ಕಂಪನಿಯನ್ನು Aylo ಎಂದು ರೀಬ್ರ್ಯಾಂಡ್‌ ಮಾಡುವ ನಿರ್ಧಾರವು ಹೊಸ ಪ್ರಾರಂಭದ ಅಗತ್ಯತೆ ಮತ್ತು ನಾವೀನ್ಯತೆ, ವೈವಿಧ್ಯಮಯ ಹಾಗೂ ಅಂತರ್ಗತ ವಯಸ್ಕ ವಿಷಯಗಳು ಮತ್ತು ನಂಬಿಕೆ ಹಾಗೂ ಸುರಕ್ಷತೆಗೆ ನವೀಕೃತ ಬದ್ಧತೆಗೆ ಪ್ರತಿಕ್ರಿಯೆಯಾಗಿ ಬರುತ್ತದೆ ಎಂದು ಹೇಳಿಕೆ ನೀಡಿದೆ. 


ನವದೆಹಲಿ (ಆಗಸ್ಟ್‌ 21, 2023): ಪೋರ್ನ್‌ಹಬ್ ಮೂಲಕಂಪನಿ ಮೈಂಡ್‌ಗೀಕ್ ತನ್ನ ಹೆಸರನ್ನು ಬದಲಾಯಿಸಿಕೊಳ್ತಿದೆ. ಆಯ್ಲೋ ಎಂದು ಕಂಪನಿ ಹೆಸರು ಬದಲಾಯಿಸಿಕೊಂಡಿದೆ. ಕಂಪನಿಯ ಹೊಸ ಮಾಲೀಕರು "ಹೊಸ ಪ್ರಾರಂಭ" ವನ್ನು ಬಯಸುತ್ತಿರುವುದರಿಂದ ಅದರ ಹೆಸರನ್ನು ಬದಲಾಯಿಸುತ್ತಿದೆ ಎಂದು ನ್ಯೂಯಾರ್ಕ್ ಪೋಸ್ಟ್‌ ಈ ಬಗ್ಗೆ ವರದಿ ಮಾಡಿದೆ. 
"ಕಂಪನಿಯನ್ನು Aylo ಎಂದು ರೀಬ್ರ್ಯಾಂಡ್‌ ಮಾಡುವ ನಿರ್ಧಾರವು ಹೊಸ ಪ್ರಾರಂಭದ ಅಗತ್ಯತೆ ಮತ್ತು ನಾವೀನ್ಯತೆ, ವೈವಿಧ್ಯಮಯ ಹಾಗೂ ಅಂತರ್ಗತ ವಯಸ್ಕ ವಿಷಯಗಳು ಮತ್ತು ನಂಬಿಕೆ ಹಾಗೂ ಸುರಕ್ಷತೆಗೆ ನವೀಕೃತ ಬದ್ಧತೆಗೆ ಪ್ರತಿಕ್ರಿಯೆಯಾಗಿ ಬರುತ್ತದೆ" ಎಂದು ಕಂಪನಿಯು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ. MindGeek ತಕ್ಷಣವೇ "Aylo" ಹೆಸರಿಗೆ ರೀಬ್ರ್ಯಾಂಡ್‌ ಆಗ್ತಿದೆ ಎಂದೂ ತಿಳಿದುಬಂದಿದೆ. 

ಇನ್ನು, 'Aylo' ಎಂಬ ಹೆಸರು ಏಕೆ ಬಂದಿದೆ ಎಂಬುದಕ್ಕೆ, ಕಂಪನಿಯ ವಕ್ತಾರರು ಈ ಪದವನ್ನು ನಿರ್ದಿಷ್ಟವಾಗಿ ಆಯ್ಕೆಮಾಡಲಾಗಿದೆ. ಏಕೆಂದರೆ ಅದು ಅರ್ಥವನ್ನು ಹೊಂದಿಲ್ಲ ಮತ್ತು ನಿಘಂಟಿನಲ್ಲಿ ಕಂಡುಬರುವುದಿಲ್ಲ ಎಂದು ಹೇಳಿದರು. "ನಾವು ಹೊಸ ಆರಂಭವನ್ನು ಬಯಸಿದ್ದೇವೆ, ಆದ್ದರಿಂದ ನಾವು ಆ ಸ್ವಾತಂತ್ರ್ಯವನ್ನು ನೀಡುವ ಹೆಸರನ್ನು ಆರಿಸಿಕೊಂಡಿದ್ದೇವೆ, ಇದರಿಂದ ನಮ್ಮ ತಂಡ ಮತ್ತು ನಮ್ಮ ಹೊಸ ಮಾಲೀಕರು ಅದನ್ನು ನಾವು ಹೇಗೆ ಬಯಸುತ್ತೇವೆ ಎಂಬುದನ್ನು ವ್ಯಾಖ್ಯಾನಿಸಬಹುದು" ಎಂದು ಕಂಪನಿಯು ವರದಿ ಮಾಡಿದೆ. ಹೊಸ ಬ್ರ್ಯಾಂಡಿಂಗ್ ಮತ್ತು ಲೋಗೋ ಶೀಘ್ರದಲ್ಲೇ ಎಲ್ಲಾ ಕಂಪನಿಯ ಸಂವಹನ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೊರಹೊಮ್ಮಲಿದೆ ಎಂದೂ ಹೇಳಿದ್ದಾರೆ.

Latest Videos

undefined

ಇದನ್ನು ಓದಿ: Chandrayaan- 3: ಇಸ್ರೋ ಮಾಜಿ ಮುಖ್ಯಸ್ಥರಿಗೆ ಪ್ರಕಾಶ್‌ ರೈ ಲೇವಡಿ: ತುಂಬಾ ಕೆಳಮಟ್ಟಕ್ಕೆ ಇಳಿದಿದ್ದೀರಾ ಎಂದು ನೆಟ್ಟಿಗರ ಟೀಕೆ

ಕೆನಡಾ ಮೂಲದ ಎಥಿಕಲ್ ಕ್ಯಾಪಿಟಲ್ ಪಾರ್ಟ್‌ನರ್ಸ್ ಈ ವರ್ಷದ ಮಾರ್ಚ್‌ನಲ್ಲಿ ಪೋರ್ನ್‌ಹಬ್‌ನ ಮೂಲ ಕಂಪನಿಯನ್ನು ಖರೀದಿಸಿತು. ಇತ್ತೀಚಿನ ವರ್ಷಗಳಲ್ಲಿ, ಪೋರ್ನ್‌ಹಬ್ ವಿವಾದಗಳಲ್ಲಿ ಮುಳುಗಿದೆ. Instagram ಮತ್ತು YouTube ನಲ್ಲಿ ಕಂಪನಿಯನ್ನು ಶಾಶ್ವತವಾಗಿ ನಿಷೇಧಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಪೋರ್ನ್‌ಹಬ್. ಯುತಾಹ್ ಮತ್ತು ವರ್ಜೀನಿಯಾ ಸೇರಿದಂತೆ ಕೆಲವು ಯುಎಸ್ ರಾಜ್ಯಗಳಲ್ಲಿ ಸೈಟ್‌ಗೆ ಪ್ರವೇಶವನ್ನು ನಿರ್ಬಂಧಿಸಿದೆ. ಏಕೆಂದರೆ, ಬಳಕೆದಾರರು 18 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ಪರಿಶೀಲಿಸಲು ಅಗತ್ಯವಿರುವ ಕಾನೂನನ್ನು ಆ ಸರ್ಕಾರಗಳು ವಿಧಿಸಿತ್ತು. 2020 ರಲ್ಲಿ, ಪ್ಲಾಟ್‌ಫಾರ್ಮ್‌ನಲ್ಲಿ "ಕಾನೂನುಬಾಹಿರ ವಿಷಯ" ದ ಆಪಾದಿತ ಉಪಸ್ಥಿತಿಯಿಂದಾಗಿ ವೀಸಾ ಮತ್ತು ಮಾಸ್ಟರ್‌ಕಾರ್ಡ್ ಸಹ ಪೋರ್ನ್‌ಹಬ್‌ನಲ್ಲಿ ಪೇಮೆಂಟ್‌ ಸೇವೆ ನೀಡುವುದನ್ನು ನಿಲ್ಲಿಸಿದೆ.

MindGeek YouPorn ಮತ್ತು ಇತರ ಕೆಲವು ವಯಸ್ಕ ಮಾಧ್ಯಮ ಸೈಟ್‌ಗಳ ಹಿಂದಿನ ಕಂಪನಿಯಾಗಿದೆ. ಕಂಪನಿಯ ಸಿಇಒ ಫೆರಾಸ್ ಆಂಟೂನ್ ಮತ್ತು ಸಿಒಒ ಡೇವಿಡ್ ಟ್ಯಾಸಿಲ್ಲೊ ಅವರು 2022 ರ ಮಧ್ಯದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.  

ಇದನ್ನೂ ಓದಿ: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಭೇಟಿಯಾದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್: ಭೇಟಿಯ ಮಹತ್ವ ಹೀಗಿದೆ..

click me!