ಪಿಗ್ ಬುಚರಿಂಗ್ ಸ್ಕ್ಯಾಮ್, ಮುಂದಿನ ಸೈಬರ್ ಟಾರ್ಗೆಟ್ ನೀವಾಗಬಹುದು, ಎಚ್ಚೆತ್ತುಕೊಳ್ಳಿ!

By Suvarna News  |  First Published Feb 11, 2024, 4:54 PM IST

ಪಿಗ್ ಬುಚರಿಂಗ್ ಹಗರಣ ಅಂದರೆ ಹಂದಿ ಕುಟುಕ ವಂಚನೆ. ಅರೇ ಇದೇನಿದು ಹಂದಿ ಮಾಂಸದಲ್ಲಿನ ವಂಚನೆ ಎಂದುಕೊಳ್ಳಬೇಡಿ. ಭಾರತ ಸೇರಿ ಜಗತ್ತನ್ನೇ ಕಾಡುತ್ತಿರುವ ಸೈಬರ್ ಕ್ರೈಂ. ನಿನ್ನೆ ಮೊನ್ನೆ ಹುಟ್ಟಿಕೊಂಡಿದ್ದಲ್ಲ. ಜೊತೆಗೆ ಈ ವಂಚಕರ ಟಾರ್ಗೆಟ್ ಸುದೀರ್ಘ ಅವಧಿ. ಮುಂದಿನ ಟಾರ್ಗೆಟ್ ನೀವಾಗುವ ಮೊದಲು ಈ ಸೈಬರ್ ಕ್ರೈಂ ಕುರಿತು ಎಚ್ಚೆತ್ತುಕೊಳ್ಳಿ
 


ನವದೆಹಲಿ(ಫೆ.11) ಸೈಬರ್ ಕ್ರೈಂಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜೊತೆಗೆ ಪ್ರತಿ ದಿನ ಸ್ವರೂಪ ಬದಲಾಗುತ್ತದೆ. ವಂಚಕರು ಹೊಸ ಹೊಸ ವಿಧಾನದ ಮೂಲಕ ವಂಚನೆ ಮಾಡುತ್ತಿದ್ದಾರೆ. ಡಿಜಿಟಲ್ ಜಗತ್ತಿನಲ್ಲಿ ಸೈಬರ್ ಕ್ರೈಂ ಅಪಾಯ ಹೆಚ್ಚು. ಇದೀಗ ಪಿಗ್ ಬುಚರಿಂಗ್ ಸ್ಕ್ಯಾಮ್ ಅತೀ ದೊಡ್ಡ ಸವಾಲಾಗುತ್ತಿದೆ. ಕಾರಣ ಈ ವಂಚನೆ ಹೇಗೆ ನಡೆಯುತ್ತಿದೆ ಅನ್ನೋದನ್ನು ತಿಳಿದುಕೊಳ್ಳಲು ವರ್ಷಗಳೇ ಬೇಕಾಗುತ್ತದೆ. ಈಗಾಗಲೇ ಹಲವರು ಈ ವಂಚನೆಗೆ ಸಿಲುಕಿ ಪರದಾಡಿದ್ದಾರೆ. ಮುಂದಿನ ಟಾರ್ಗೆಟ್ ನೀವಾಗುವ ಮೊದಲು ಈ ಸೈಬರ್ ಕ್ರೈಂ ಕುರಿತು ಎಚ್ಚೆತ್ತುಕೊಳ್ಳುವುದು ಉತ್ತಮ.

ಏನಿದು ಪಿಗ್‌ ಬುಚರಿಂಗ್ ಸ್ಕ್ಯಾಮ್?
ಶಾಝ್ ಹು ಪನ್ ಇದರ ಮೂಲ ಹೆಸರು. ಮೂಲತಃ ಚೀನಾದಲ್ಲಿ ಈ ವಂಚನೆ ಜಾಲ ಹುಟ್ಟಿಕೊಂಡಿದೆ. ಕೋವಿಡ್ ಸಂದರ್ಭದಲ್ಲಿ ಈ ವಂಚನೆ ಹುಟ್ಟಿಕೊಂಡ ಕಾರಣ, ಇದಕ್ಕೆ ಪಿಗ್ ಬುಚರಿಂಗ್ ಅನ್ನೋ ಹೆಸರು ಬಂದಿದೆ. ಚೀನಾದ ಈ ಶಾಝ್ ಹು ಪನ್ ಪದವನ್ನು ಇಂಗ್ಲೀಷ್‌ಗೆ ಭಾಷಾಂತರಿಸಿದರೆ ಪಿಗ್ ಬುಚರಿಂಗ್ ಸ್ಕ್ಯಾಮ್( ಹಂದಿ ಕುಟುಕರ ವಂಚನೆ). ಇಲ್ಲಿ ವಂಚಕರು ಡೇಟಿಂಗ್ ಆ್ಯಪ್, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪ್ರೊಫೈಸ್ ಸೃಷ್ಟಿಸುತ್ತಾರೆ. ಅದು ನಿಮ್ಮ ಗೆಳೆಯ-ಗೆಳತಿಯರ ಹೆಸರಿನಲ್ಲಿರಬಹುದು, ಅನಾಮಿಕರಾಗಿರಬಹುದು, ಕುಟುಂಬದ ಸದಸ್ಯರಾಗಿರಬಹುದು, ಅಥವಾ ಸೆಲೆಬ್ರೆಟಿಗಳು, ಸಮಾಜ ಸೇವಕರು ಸೇರಿದಂತೆ ಯಾರದ್ದೂ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆಯುತ್ತಾರೆ. ಬಳಿಕ ಒಬ್ಬೊಬ್ಬರನ್ನೇ ಟಾರ್ಗೆಟ್ ಮಾಡಲಾಗುತ್ತದೆ.

Tap to resize

Latest Videos

QR ಕೋಡ್ ಸ್ಕ್ಯಾನ್ ಎಚ್ಚರ, ಹೈಟೆಕ್ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ಬೆಂಗಳೂರು ನಿವಾಸಿ!

ಯಾರನ್ನು ಈ ವಂಚಕರು ಟಾರ್ಗೆಟ್ ಮಾಡುತ್ತಾರೋ? ಅವರ ಮಾಹಿತಿಯನ್ನು ಕಲೆ ಹಾಕುತ್ತಾರೆ. ಡಿಜಿಟಲ್ ಮೂಲಕ ಲಭ್ಯವಿರುವ ಬಹುತೇಕ ಮಾಹಿತಿಗಳನ್ನು ಕಲೆ ಹಾಕಿ ಕೆಲಸ ಶುರು ಮಾಡುತ್ತಾರೆ. ಇದು ಕೇವೆ ನಕಲಿ ಪ್ರೊಫೈಲ್ ಮೂಲಕ ಮಾತ್ರವಲ್ಲ, ಕಸ್ಟಮರ್ ಕೇರ್ ಸ್ವರೂಪದಲ್ಲಿ ಮೆಸೇಜ್, ಲಿಂಕ್ ಕಳುಹಿಸಿ ಕೂಡ ವಂಚನೆ ಜಾಲಕ್ಕೆ ಅಮಾಯಕರನ್ನು ಬೀಳಿಸಲಾಗುತ್ತದೆ.

ಟಾರ್ಗೆಟ್ ಮಾಡಿದ ವ್ಯಕ್ತಿಗೆ ನಕಲಿ ಖಾತೆ ಮೂಲಕ ಮೆಸೇಜ್ ಅಥವಾ ನಿಮ್ಮ ಗೆಳೆಯರೇ ಮೆಸೇಜ್ ಮಾಡಿದಂತೆ ಮೆಸೇಜ್, ಫಾರ್ವಡ್ ಮೆಸೇಜ್ ಕಳುಹಿಸಸಲಾಗುತ್ತದೆ. ಸುದೀರ್ಘ ದಿನಗಳ ಕಾಲ ಈ ರೀತಿ ಮೆಸೇಜ್, ಮಾತುಕತೆ ಮೂಲಕ ನಿಮ್ಮ ನಂಬಿಕೆ ಗಿಟ್ಟಿಸಿಕೊಳ್ಳುತ್ತಾರೆ. ಇದಕ್ಕಾಗಿ ವರ್ಷಗಳ ಕಾಲ ಮೆಸೇಜ್ ಮಾಡಿ ನಿಮ್ಮ ನಂಬಿಕೆ ಗಿಟ್ಟಿಸಿಕೊಳ್ಳುವ ಕೆಲಸ ಮಾಡಲಾಗುತ್ತದೆ.

ಅನಾಮಿಕನಾಗಿ ಅಥವಾ ಗೆಳೆಯ, ಸಂಬಂಧಿ, ಆಪ್ತ, ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್ ಆಗಿ ನಿಮ್ಮೊಡನೆ ಮಾತುಕತೆ ನಡೆಸಿ ಚಾಟ್ ಮುಂದುವರಿಸುತ್ತಾರೆ. ವರ್ಷಗಳ ಕಾಲ ಚಾಟ್ ಮುಂದುವರಿಯುತ್ತದೆ. ಬಳಿಕ ನಂಬಿಕೆ ಗಿಟ್ಟಿಸಿಕೊಂಡ ಬಳಿಕ ನಾನು, ಕ್ರಿಪ್ಟೋಕರೆನ್ಸಿ ಅಥವಾ ಇತರ ಹೂಡಿಕೆ ಕ್ಷೇತ್ರದಲ್ಲಿ ಬಂಡವಾಳ ಹಾಕಿ ಹಣಗಳಿಸುತ್ತಿದ್ದೇನೆ, ನಿನಗೆ ಆಸಕ್ತಿ ಇದ್ದರೆ ನಾನು ಹೇಳಿಕೊಡುತ್ತೇನೆ. ಮೊದಲೇ ಹೆಚ್ಚಿನ ಹಣ ಹಾಕಿ ಪೋಲು ಮಾಡಬೇಡ ಎಂಬೆಲ್ಲಾ ನಯವಾದ ಮಾತುಗಳು ನಿಮ್ಮನ್ನು ಒಂದು ಕೈ ನೋಡಿ ಬಿಡೋಣ ಅನ್ನುಷ್ಟು ವಿಶ್ವಾಸಕ್ಕೆ ತರುತ್ತಾರೆ.

ಕರೆ ಮಾಡಿ ಒಟಿಪಿ ಪಡೆದು ವಂಚಿಸುವುದು ಹಳೇ ವರ್ಸನ್: ಸೈಬರ್ ವಂಚಕರ ಹೊಸ ತಂತ್ರ ಇಲ್ಲಿದೆ ನೋಡಿ!

ಇದಕ್ಕಾಗಿ ಅವರು ಕೆಲ ಲಿಂಕ್, ಕೆಲ ಆ್ಯಪ್‌ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಸೂಚಿಸುತ್ತಾರೆ. ಇದರಿಂದೆ ನೀವು ಆ್ಯಪ್ ಡೌನ್ಲೋಡ್ ಮಾಡಿ ಖಾತೆ ತೆರೆದು ಬಂಡವಾಳ ಹಾಕಿದ ಬಳಿಕ ಈ ನಕಲಿ ಆ್ಯಪ್‌ಗಳಲ್ಲಿ ಆರಂಭಿಕ ಹಂತದಲ್ಲಿ ನೀವು ಹಾಕಿದ ಜಜುಬಿ ಹಣಕ್ಕೆ ಅವರೇ ಡಬಲ್ ಕ್ರಿಪ್ಟೋಗಳನ್ನು ನೀಡಿ ನಿಮ್ಮ ಆದಾಯ ಡಬಲ್ ಮಾಡಿಸುತ್ತಾರೆ. ನಿಮಗೆ ಈ ನಕಲಿ ಆ್ಯಪ್ ಮೇಲಿನ ವಿಶ್ವಾಸ ಹೆಚ್ಚಾದಂತೆ ಹೆಚ್ಚಿನ ಹಣ ಹಾಕಲು ಸೂಚಿಸುತ್ತಾರೆ.  ಬಳಿಕ ಹಣ ಡಬಲ್ ಆಗಿದೆ. ಈ ಹಣ ಹಿಂತಿರುಗಿ ಪಡೆಯಲು ಚಾರ್ಜಿಂಗ್, ತೆರಿಗೆ ಸೇರಿದಂತೆ ಇತರ ಕಾರಣಗಳನ್ನೂ ನೀಡಿ ಮೂಲ ಹಣವವನ್ನೇ ಲಪಾಟಾಯಿಸುತ್ತಾರೆ. ಅಥವಾ ನೀವೇ ಹಣ ನೀಡುವಂತೆ ಮಾಡುತ್ತಾರೆ. 

ಸಾಮಾಜಿಕ ಜಾಲತಾಣ, ಟಿಂಡರ್ ಡೇಟಿಂಗ್ ಆ್ಯಪ್ ಸೇಿದಂತೆ ಇತರ ಕೆಲ ಆ್ಯಪ್‌ಗಳಲ್ಲಿ ಹಲವು ಸ್ವರೂಪದಲ್ಲಿ ನಿಮ್ಮನ್ನು ಟಾರ್ಗೆಟ್ ಮಾಡಿ ವಂಚನೆ ಕೆಲಸ ಆರಂಭಿಸುತ್ತಾರೆ. ಹೀಗಾಗಿ ಅನಾಮಿಕರ ರಿಕ್ವೆಸ್ಟ್, ಚಾಟಿಂಗ್, ಲಿಂಕ್, ನಿಮ್ಮ ಗೆಳೆಯರದ್ದೇ ಹೆಸರಿನಲ್ಲಿದ್ದರೂ, ಎರೆಡರಡು ಬಾರಿ ಗೆಳೆಯರ ಜೊತೆ ಖಚಿತಪಡಿಸಿಕೊಂಡು ಮುಂದುವರಿಯುವುದು ಉತ್ತಮ.

click me!