ಬಂದಿದೆ ವಿನೂತನ ಆ್ಯಪ್‌; ಸ್ಮಾರ್ಟ್‌ಫೋನಲ್ಲೇ ಬ್ಯಾಂಕ್, ಇನ್ಶೂರೆನ್ಸ್, ಸಾಲ!

By Suvarna News  |  First Published Mar 10, 2020, 1:56 PM IST
  • ಒಪ್ಪೋ ಸ್ಮಾರ್ಟ್‌ಫೋನ್ ಕಂಪನಿಯಿಂದ  ಹಣಕಾಸು ಸೇವೆಗೆ ಚಾಲನೆ
  • ಒಪ್ಪೋ ಕ್ಯಾಶ್‌ ಆ್ಯಪ್‌ ಬಳಸಿ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಸೌಲಭ್ಯ
  • ಮುಂದಿನ 18 ತಿಂಗಳಲ್ಲಿ ಸಂಸ್ಥೆಯಿಂದ 6 ಹೊಸ ಸೇವೆ 

ನವದೆಹಲಿ (ಮಾ.10): ಒಪ್ಪೋ ಕ್ಯಾಶ್‌ (OPPO Kash) ಹಣಕಾಸು ಸೇವೆಗೆ ದೇಶದ ಅತಿದೊಡ್ಡ ಸ್ಮಾರ್ಟ್‌ ಡಿವೈಸ್‌ ಬ್ರಾಂಡ್‌ಗಳಲ್ಲಿ ಒಂದಾದ ಒಪ್ಪೋ ಸಂಸ್ಥೆಯು ಚಾಲನೆ ನೀಡಿದೆ.

ಒಪ್ಪೋ ಸ್ಮಾರ್ಟ್‌ ಫೋನಲ್ಲಿಯೇ ‘ಒಪ್ಪೋ ಕ್ಯಾಶ್‌’ ಆ್ಯಪ್‌  ಪ್ರೀ ಇನ್‌ಸ್ಟಾಲ್‌ ಮಾಡಲಾಗಿರುತ್ತದೆ. ಇತರೆ ಮೊಬೈಲ್‌ ಬಳಕೆದಾರರೂ ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು  ಎಂದು ಕಂಪನಿಯು ತಿಳಿಸಿದೆ.

Latest Videos

undefined

ಒಪ್ಪೋ ಕ್ಯಾಶ್‌ ಆ್ಯಪ್‌ ಬಳಸಿ ಗ್ರಾಹಕರು ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಸಹ ಮಾಡಬಹುದು. ಜತೆಗೆ ಉಚಿತವಾಗಿ ಕ್ರೆಡಿಟ್‌ ರಿಪೋರ್ಟ್‌ ಪಡೆಯಬಹುದು. 2 ಲಕ್ಷ ರು. ವರೆಗೆ ವೈಯಕ್ತಿಕ ಸಾಲ, 2 ಕೋಟಿ ರು. ವರೆಗೆ ವ್ಯಾಪಾರ ಸಾಲ ಮತ್ತು ಸ್ಕ್ರೀನ್‌ ಇನ್ಶೂರೆಸ್ಸ್‌ ಸಹ ಪಡೆದುಕೊಳ್ಳಬಹುದು.

ಇದನ್ನೂ ಓದಿ | ವಾಟ್ಸಾಪ್‌ನಲ್ಲಿ ಬಹು ನಿರೀಕ್ಷಿತ ಫೀಚರ್ ಶೀಘ್ರ ಬಳಕೆಗೆ ಲಭ್ಯ!

‘ಒಪ್ಪೋ ಕ್ಯಾಶ್‌’ನ ವಹಿವಾಟಿನೊಂದಿಗೆ ಎಚ್‌ಡಿಎಫ್‌ಸಿ, ಐಐಎಫ್‌ಎಲ್‌, ಆರ್‌ಬಿಎಲ್‌ ಸೇರಿದಂತೆ ಇತರೆ ಕಂಪೆನಿಗಳು ಸಹಭಾಗಿತ್ವ ಹೊಂದಿವೆ. ಮುಂದಿನ 18 ತಿಂಗಳಲ್ಲಿ ಸಂಸ್ಥೆಯು 6 ಹೊಸ ಸೇವೆಗಳನ್ನು ನೀಡುವ ಗುರಿ ಹೊಂದಿದೆ. ಪಾವತಿ, ಸಾಲ, ಉಳಿತಾಯ, ವಿಮೆ, ಹಣಕಾಸು ಶಿಕ್ಷಣ ಸೇವೆಗಳ ಜತೆಗೆ ಭಾರತದಲ್ಲಿ ಮೊದಲ ಬಾರಿಗೆ ಆರ್ಥಿಕ ಯೋಗಕ್ಷೇಮ ಸ್ಕೋರ್‌ ಸೇವೆಯನ್ನು ಸಂಸ್ಥೆಯು ಒದಗಿಸಲಿದೆ ಎಂದು ಒಪ್ಪೋ ಕ್ಯಾಶ್‌ನ ಲೀಡ್‌ ಜಾಫರ್‌ ಇಮಾಮ್‌ ತಿಳಿಸಿದರು.

ಒನ್‌ ಸ್ಟಾಪ್‌ ಫೈನಾನ್ಶಿಯಲ್‌ ಸರ್ವಿಸಸ್ ಅಪ್ಲಿಕೇಶನ್‌ ಅನ್ನು ಒದಗಿಸುತ್ತಿರುವ ಒಪ್ಪೋ ಸಂಸ್ಥೆಯು ಡೇಟಾ ಗೌಪ್ಯತೆಯ ಮಾನದಂಡಗಳು ಮತ್ತು ಎಲ್ಲ ಡೇಟಾವನ್ನು ಭಾರತದಲ್ಲಿ ಸಂಗ್ರಹಿಸಿ ಭಾರತೀಯ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸುತ್ತದೆ. ಡೇಟಾ ಅನುಮತಿಗಳನ್ನು ಸುಲಭವಾಗಿ ನಿಯಂತ್ರಿಸುವ ಆಯ್ಕೆಯನ್ನು ಬಳಕೆದಾರರಿಗೆ ಒದಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಸ್ಮಾರ್ಟ್‌ ಫೋನ್‌ ಬಳಸಿ ಒಂದೇ ಸೂರಿನಡಿ ಎಲ್ಲ ಹಣಕಾಸು ಸೇವೆಗಳನ್ನು ಗ್ರಾಹಕರಿಗೆ ನೀಡುವುದು ನಮ್ಮ ಉದ್ದೇಶ. ಮ್ಯೂಚುವಲ್‌ ಫಂಡ್‌ ಸೇವೆ ಒದಗಿಸುತ್ತಿರುವ ಭಾರತದ ಮೊದಲ ಸ್ಮಾರ್ಟ್‌ ಫೋನ್‌ ಬ್ರಾಂಡ್‌ ಒಪ್ಪೋ ಆಗಿದೆ ಎಂದು ಜಾಫರ್ ಹೇಳಿದರು.

ಇದನ್ನೂ ಓದಿ | ಹೊಸ ಪ್ಲಾನ್ ಪ್ರಕಟಿಸಿದ ಜಿಯೋ; ಹಿಂದಿನ ಆಫರ್ ಬಿಟ್ಟವರ ಸ್ಥಿತಿ ಈಗ ಅಯ್ಯೋ...

ಒಪ್ಪೋ ಕ್ಯಾಶ್‌ ಆ್ಯಪ್‌ನಿಂದ ಸಂಸ್ಥೆಯು ಎಂಡ್‌-ಟು-ಎಂಡ್‌ ಹಣಕಾಸು ಸೇವೆ ಒದಗಿಸಲು ಸಜ್ಜಾಗಿದೆ. ಮುಂದಿನ 5 ವರ್ಷದಲ್ಲಿ ಸುಮಾರು 10 ದಶಲಕ್ಷ ಬಳಕೆದಾರರನ್ನು ಈ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಗುರಿ ಹೊಂದಿದೆ ಎಂದು ಒಪ್ಪೋ ಪ್ರಾಡಕ್ಟ್ ಮತ್ತು ಮಾರ್ಕೆಟಿಂಗ್‌ ವಿಭಾಗದ ಉಪಾಧ್ಯಕ್ಷ ಸುಮಿತ್‌ ವಾಲಿಯಾ ಹೇಳಿದರು.

ಮ್ಯೂಚುವಲ್‌ ಫಂಡ್‌ ಅನ್ನು ಒಪ್ಪೋ ಕ್ಯಾಶ್‌ ಮೂಲಕ ಪ್ರಾಚಾರ ಪಡಿಸುವ ಮೂಲಕ ಮ್ಯೂಚುವಲ್‌ ಫಂಡ್‌ನಲ್ಲಿ ಹೊಸ ಶಕೆ ಆರಂಭಕ್ಕೆ ಒಪ್ಪೋ ನಾಂದಿ ಹಾಡಿದೆ. ಈವರೆಗೆ ಸೀಮತ ವಲಯಕ್ಕೆ ಮಾತ್ರ ಆಪ್ತವಾಗಿದ್ದ ಮ್ಯೂಚುವಲ್‌ ಫಂಡ್‌, ಒಪ್ಪೋ ಕ್ಯಾಶ್‌ ಮೂಲಕ ಜನಸಾಮಾನ್ಯರಿಗೆ ಹತ್ತಿರವಾಗಲಿದೆ. ಇದರಿಂದ ಹೂಡಿಕೆ ಹೆಚ್ಚಾಗಲಿದೆ ಎಂದು ಐಸಿಐಸಿ ಪ್ರ್ಯುಡೆಸಿಲ್‌ನ ಹಿರಿಯ ಉಪಾಧ್ಯಕ್ಷ ಅಭಿಜಿತ್‌ ಶಾ ಅಭಿಪ್ರಾಯಪಟ್ಟರು.

click me!