ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ಒನ್‌ಪ್ಲಸ್ ಇದೀಗ ಫಿಟ್ನೆಸ್ ಬ್ಯಾಂಡ್ ಬಿಡುಗಡೆಗೆ ಸಿದ್ಧವಾಗಿದ್ದು, ಈ ಬಗ್ಗೆ ಟೀಸರ್ ಷೇರ್ ಮಾಡಿದೆ. ಆದರೆ, ಫಿಟ್ನೆಸ್ ಬ್ಯಾಂಡ್ ಯಾವ ರೀತಿಯಲ್ಲಿರಲಿದೆ, ವಿಶೇಷತೆಗಳೇನು ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೂ ಜ.11ರಂದು ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ.
ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಅಗ್ರಗಣ್ಯವಾಗಿರುವ ಒನ್‌ಪ್ಲಸ್ ಈಗ ಫಿಟ್ನೆಸ್ ಬ್ಯಾಂಡ್ ಬಿಡುಗಡೆಗೆ ಸಿದ್ಧವಾಗಿದೆ.
ಟ್ವಿಟರ್ ಮತ್ತು ಯೂಟೂಬ್‌ನಲ್ಲಿ ಸಕ್ರಿಯವಾಗಿರುವ ಪ್ರಖ್ಯಾತ ಟಿಪ್ಸಟರ್‌ಗಳಾದ ಮುಕುಲ್ ಶರ್ಮಾ ಮತ್ತು ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ. ಅವರ ಪ್ರಕಾರ, ಒನ್‌ಪ್ಲಸ್ ಕಂಪನಿ ಫಿಟ್ನೆಸ್ ಬ್ಯಾಂಡ್ ಅನ್ನು ಜನವರಿ 11ರಂದು ಬಿಡುಗಡೆ ಮಾಡಬಹುದು ಮತ್ತು ಈ ಬ್ಯಾಂಡ್ ಬೆಲೆ 2,499 ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಂಪನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
undefined
Viನಿಂದ 1,499 ಪ್ರೀಪೇಡ್ ಪ್ಲ್ಯಾನ್ ಮೇಲೆ 50 ಜಿಬಿ ಎಕ್ಸಟ್ರಾ ಡೇಟಾ?
ಒನ್‌ಪ್ಲಸ್ ತನ್ನ ಟ್ವಿಟರ್ ಖಾತೆಯಲ್ಲಿ ಟೀಸರ್ ಮಾತ್ರವಲ್ಲದೇ ಅಮೆಜಾನ್‌ನಲ್ಲಿ ಫಿಟ್ನೆಸ್ ಬ್ಯಾಂಡ್ ಸಂಬಂಧ ನೋಟಿಫೈ ಮೀ ಆಪ್ಷನ್ ನೀಡಿದೆ. ಟಿಪ್ಸಟರ್ ಮುಕುಲ್ ಶರ್ಮಾ ತಮ್ಮ ಖಾತೆಯಲ್ಲಿ ಒನ್‌ಪ್ಲಸ್ ಫಿಟ್ನೆಸ್ ಬ್ಯಾಂಡ್‌ನ ಇಮೇಜ್‌ಗಳನ್ನು ಷೇರ್ ಮಾಡಿದ್ದಾರೆ. ಕಪ್ಪು ಬಣ್ಣದ ಆಯತಾಕಾರದ ಡಿಸ್‌ಪ್ಲೇಯೊಂದಿಗೆ ಟ್ರ್ಯಾಕರ್ ಮತ್ತು ಗ್ರೇ ಸ್ಟ್ರಿಪ್ ಇರುವ ಬ್ಯಾಂಡ್ ಇದಾಗಿದೆ. ಜೊತೆಗೆ ಈ ಫಿಟ್ನೆಸ್ ಬ್ಯಾಂಡ್ ಕಪ್ಪು, ನೇವಿ ಮತ್ತು ಟ್ಯಾಂಗರೀನ್ ಗ್ರೇ ಬಣ್ಣಗಳಲ್ಲಿರುವ ಇಮೇಜ್ ಷೇರ್ ಮಾಡಲಾಗಿದೆ.
OnePlus Band Launching on January 11 in India
🩸24/7 Heart Rate + SpO2 Blood Saturation Monitoring
🛌 Sleep Tracking
📺 1.1" Touch AMOLED Display
🔋 14 Days Battery
💦 IP68
🚴♂️13 Exercise Modes
💰 INR ₹2,499
pic.twitter.com/C1Vi4JrzV7
ಒನ್‌ಪ್ಲಸ್ ಇಂಡಿಯಾ ತನ್ನ ಫಿಟ್ನೆಸ್ ಬ್ಯಾಂಡ್ ಬಗ್ಗೆ ಟ್ವಿಟರ್ ಮತ್ತು ಅಮೆಜಾನ್‌ನಲ್ಲಿ ಟೀಸರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಕಳೆದ ತಿಂಗಳವೇ ಒನ್‌ಪ್ಲಸ್ ಫಿಟ್ನೆಸ್ ಬ್ಯಾಂಡ್ ರೆಡಿ ಮಾಡಿದೆ ಎಂಬ ಬಗ್ಗೆ ರೂಮರ್‌ಗಳಿದ್ದವು. ಆದರೆ, ಈ ಫಿಟ್ನೆಸ್ ಬ್ಯಾಂಡ್ ಅನ್ನು ಕಂಪನಿ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಈಗ ನೋಡಿದರೆ, ಕಂಪನಿ ಫಿಟ್ನೆಸ್ ಬ್ಯಾಂಡ್ ಅನ್ನು ಇದೇ ತಿಂಗಳು ಬಿಡುಗಡೆ ಮಾಡುತ್ತಿದೆ. ಈ ಬಗ್ಗೆ ಕೆಲವು ಖ್ಯಾತ ಟಿಪ್ಸರ್‌ಗಳು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಹೀಗಿದ್ದಾಗ್ಯೂ, ಫಿಟ್ನೆಸ್ ಬ್ಯಾಂಡ್ ಬಿಡುಗಡೆ ಬಗ್ಗೆ ಕಂಪನಿ ಯಾವುದೇ ಮಾಹಿತಿಯನ್ನು ಇನ್ನೂ ಹಂಚಿಕೊಂಡಿಲ್ಲ. ಷೇರ್ ಮಾಡಲಾಗಿರುವ ಟೀಸರ್ ಇಮೇಜ್‌ನಲ್ಲಿ ಯಾವುದೇ ಅಧಿಕೃತ ಹೆಸರಾಗಲೀ, ಅಥವಾ ಇನ್ನಾವುದೇ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ. ಚಿತ್ರದಲ್ಲಿ ದಿ ನ್ಯೂ ಫೇಸ್ ಆಫ್ ಫಿಟ್ನೆಸ್ ಮತ್ತು ಶೀಘ್ರವೇ ಬರಲಿದೆ ಎಂಬ ಒಕ್ಕಣಿಕೆ ಮಾತ್ರವೇ ಇದೆ.
ಈ ವರ್ಷ 1 ಲಕ್ಷ ಕೋಟಿ ನಿಮಿಷ ವಿಡಿಯೋ ಕಾಲ್‌ಗಳನ್ನು ಕಂಡ ಗೂಗಲ್!
ವಿಶೇಷತೆಗಳೇನಿರಬಹುದು?
ಯೂಟೂಬ್‌ನಲ್ಲಿ ಟಿಪ್ಸಟರ್ ಮುಕುಲ್ ಶರ್ಮಾ ಷೇರ್ ಮಾಡಿದ ವಿಡಿಯೋ ಪ್ರಕಾರ, ಒನ್‌ಪ್ಲಸ್ ಫಿಟ್ನೆಸ್ ಬ್ಯಾಂಡ್ ಖಂಡಿತವಾಗಿಯೂ 1.1 ಇಂಚು ಎಎಂಎಲ್ಇಡಿ ಟಚ್ ಡಿಸ್‌ಪ್ಲೇಯನ್ನು ಖಂಡಿತ ಹೊಂದಿರಲಿದೆ. ದಿನದ ಇಪ್ಪತ್ತನಾಲ್ಕು ಗಂಟೆ ಹಾರ್ಟ್ ರೇಟ್ ಮಾನಿಟರಿಂಗ್, ಎಸ್‌ಪಿಒ2 ರಕ್ತ ಶುದ್ಧತೆಯ ಮಾನಿಟರಿಂಗ್, 3 ಆಕ್ಸಿಸ್ ಆಕ್ಸೆಲರ್‌ಮೀಟರ್, ಗ್ರೇಸ್ಕೋಪ್, ಬ್ಲೂಟೂಥ್ 5.0, ಐಪಿ68 ಧೂಳು ಮತ್ತು ನೀರು ನಿರೋಧಕ ರೇಟಿಂಗ್ ಮತ್ತು ಬಹು ವ್ಯಾಯಾಮಗಳ ಮೋಡ್‌ಗಳನ್ನು ಈ ಒನ್‌ಪ್ಲಸ್ ಫಿಟ್ನೆಸ್ ಬ್ಯಾಂಡ್ ಒಳಗೊಂಡಿರಲಿದೆ ಎನ್ನಲಾಗುತ್ತಿದೆ.
ಇಷ್ಟು ಮಾತ್ರವಲ್ಲದೇ ಈ ಫಿಟ್ನೆಸ್ ಬ್ಯಾಂಡ್ ವಾಟರ್‌ಪ್ರೂಫ್ ಆಗಿದ್ದು, 50 ಮೀಟರ್ ನೀರಿನಲ್ಲೂ ಬ್ಯಾಂಡ್‌ಗೆ ಹಾನಿಯಾಗುವುದಿಲ್ಲ. 100 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಇದ್ದು, ಒಮ್ಮೆ ಚಾರ್ಜ್ ಮಾಡಿದರೆ 14 ದಿನಗಳವರೆಗೂ ಬಾಳಿಕೆ ಬರುತ್ತದೆ.
ಒನ್‌ಪ್ಲಸ್ ಇಂಡಿಯಾ ಈ ಫಿಟ್ನೆಸ್ ಬ್ಯಾಂಡ್ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲವಾದರೂ ಗ್ರಾಹಕರಲ್ಲಿ ಈ ಬಗ್ಗೆ ಕುತೂಹಲ ಮೂಡಿದೆ. ಜೊತೆಗೆ, ಅಮೆಜಾನ್‌ನಲ್ಲೂ ಈ ಬಗ್ಗೆ ಟೀಸರ್ ಇರುವುದರಿಂದ ಶೀಘ್ರವೇ ಬ್ಯಾಂಡ್ ಮಾರುಕಟ್ಟೆಗೆ ಬಿಡುಗಡೆಯಾಗಬಹುದು ಎಂಬ ಅಂದಾಜು ಬಳಕೆದಾರರು. ಟೀಸರ್ ಅನ್ನೇ ಹಂಚಿಕೊಂಡಿರುವ ಕಂಪನಿ ಕೂಡ ಈ ಬಗ್ಗೆ ಮಾಹಿತಿಯನ್ನು ಬಹಿರಂಗಗೊಳಿಸಬಹುದು.
ಕಂಪನಿಯು ಒನ್‌ಪ್ಲಸ್ 9 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದಕ್ಕಿಂತ ಮುಂಚೆಯೇ ಈ ಫಿಟ್ನೆಸ್ ಬ್ಯಾಂಡ್ ಬಿಡುಗಡೆ ಮಾಡಬಹುದು ಎನ್ನಲಾಗುತ್ತಿದೆ. ಇಷ್ಟು ಮಾತ್ರವಲ್ಲದೇ, ಕಂಪನಿ ಸ್ಮಾರ್ಟ್‌ವಾಚ್ ಸಂಬಂಧವೂ ಕಂಪನಿ ಕೆಲಸ ಮಾಡುತ್ತಿದ್ದು, ಈ ವರ್ಷವೇ ಮಾರುಕಟ್ಟೆಗೆ ಬರಲಿದೆ ಎಂದು ಒನ್‌ಪ್ಲಸ್ ಸಿಇಒ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
8 ತಿಂಗಳ ಬಳಿಕ ಪ್ಲೇ ಸ್ಟೋರ್‌ನಲ್ಲಿ WHO Covid-19 Updates ಆ್ಯಪ್!