ಹೊಸ ವರ್ಷಕ್ಕೆ ವಾಟ್ಸಾಪ್‍ನಲ್ಲಿ 140 ಕೋಟಿ ಧ್ವನಿ ಮತ್ತು ವಿಡಿಯೋ ಕರೆ!

Suvarna News   | Asianet News
Published : Jan 04, 2021, 07:39 PM IST
ಹೊಸ ವರ್ಷಕ್ಕೆ ವಾಟ್ಸಾಪ್‍ನಲ್ಲಿ 140 ಕೋಟಿ ಧ್ವನಿ ಮತ್ತು ವಿಡಿಯೋ ಕರೆ!

ಸಾರಾಂಶ

ಫೇಸ್‌ಬುಕ್ ಒಡೆತನದ ವಾಟ್ಸಾಪ್ ಹೊಸ ವರ್ಷದ ದಿನ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಕಂಪನಿಯ ಹೇಳಿಕೆಯ ಪ್ರಕಾರ, ಹೊಸ ವರ್ಷದ ಆಚರಣೆ ದಿನ ಜಗತ್ತಿನಾದ್ಯಂತ ವಾಟ್ಸಾಪ್ ಮೂಲಕ 1.4 ಶತಕೋಟಿ ಧ್ವನಿ ಮತ್ತು ವಿಡಿಯೋ ಕರೆಗಳನ್ನು ಮಾಡಲಾಗಿದೆ. ಇದೊಂದು ದಾಖಲೆಯಾಗಿ ಪರಿಣಮಿಸಿದೆ.

ಹೊಸ ಕಾಲದ ಮೋಡ್ ಆಫ್ ಕಮ್ಯುನಿಕೇಷನ್ ಆಗಿರುವ ವಾಟ್ಸಾಪ್ ಹೊಸ ವರ್ಷದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. 2020ರ ಹೊಸ ವರ್ಷದ ದಿನ ಜಗತ್ತಿನಾದ್ಯಂತ 1.4(140 ಕೋಟಿ) ಶತಕೋಟಿ ಧ್ವನಿ ಮತ್ತು ವಿಡಿಯೋ ಕಾಲ್‌ಗಳನ್ನು ಮಾಡಲಾಗಿದೆಯಂತೆ! ಒಂದೇ ದಿನದಲ್ಲಿ ಇಷ್ಟೊಂದು ಪ್ರಮಾಣದ ಧ್ವನಿ ಮತ್ತು ವಿಡಿಯೋ ಕಾಲ್‌ ಮಾಡಿದ್ದು ದಾಖಲೆಯಾಗಿದೆ ಎಂದು ವಾಟ್ಸಾಪ್‌ ಒಡೆತನ ಹೊಂದಿರುವ ಫೇಸ್‌ಬುಕ್ ತನ್ನ ಬ್ಲಾಗ್‍ನಲ್ಲಿ ತಿಳಿಸಿದೆ.

Viನಿಂದ 1,499 ಪ್ರೀಪೇಡ್ ಪ್ಲ್ಯಾನ್‌ ಮೇಲೆ 50 ಜಿಬಿ ಎಕ್ಸಟ್ರಾ ಡೇಟಾ?

ಹೊಸ ವರ್ಷದ ವರ್ಷಾಚರಣೆ ಸಂದರ್ಭದಲ್ಲಿ ಜಾಗತಿಕವಾಗಿ ವಾಟ್ಸಾಪ್‌ನಲ್ಲಿ ಜನರು 1.4 ಶತಕೋಟಿಗೂ ಹೆಚ್ಚು ಅಧಿಕ ಧ್ವನಿ ಮತ್ತು ವಿಡಿಯೋ ಕಾಲ್‌ಗಳನ್ನು ಮಾಡಿದ್ದಾರೆ. ಒಂದೇ ದಿನದಲ್ಲಿ ಅತಿ ಹೆಚ್ಚು ಕರೆ ಮಾಡಿದ ದಾಖಲೆಯನ್ನು ಇದೀಗ ವಾಟ್ಸಾಪ್ ಸಾಧಿಸಿದೆ. ಕಳೆದ ವರ್ಷಕ್ಕೆ ಇದೇ ದಿನಕ್ಕೆ ಹೋಲಿಸಿದರೆ ಧ್ವನಿ ಮತ್ತು ವಿಡಿಯೋ ಕರೆಗಳಲ್ಲಿ ಶೇ.50ರಷ್ಟು ಹೆಚ್ಚಳವಾಗಿದೆ ಎಂದು ಫೇಸ್‌ಬುಕ್ ಹೇಳಿದೆ. ಇದೇ ವೇಳೆ, ಹೊಸ ವರ್ಷಾಚರಣೆ ಸಂದರ್ಭದಲ್ಲಿ ಫೇಸ್‌ಬುಕ್ ಮತ್ತು ಇನ್ಸಾಟಾಗ್ರಮ್‌ನಲ್ಲೂ 5.5 ಕೋಟಿ ಬ್ರಾಡಕಾಸ್ಟ್‌ಗಳು ನಡೆದಿವೆ ಎಂದು ತಿಳಿಸಲಾಗಿದೆ.

ವಾಟ್ಸಾಪ್ ಉಚಿತ ಸಂದೇಶ ರವಾನೆಯ ಆಪ್ ಆಗಿದ್ದು, ಧ್ವನಿ ಮತ್ತು ವಿಡಿಯೋ ಕಾಲ್‌ಗಳಿಗೆ ಇದು ಸಪೋರ್ಟ್ ಮಾಡುತ್ತದೆ. 2014ರಲ್ಲಿ ವಾಟ್ಸಾಪ್‌ ಅನ್ನು ಫೇಸ್‌ಬುಕ್ ಸ್ವಾಧೀನ ಪಡೆಸಿಕೊಂಡಿತು. 2020ರ ಫೆಬ್ರವರಿಯ ಲೆಕ್ಕಾಚಾರದ ಪ್ರಕಾರ, ಜಗತ್ತಿನಾದ್ಯಂತ 200 ಕೋಟಿ ಜನರು ವಾಟ್ಸಾಪ್‌ ಬಳಸುತ್ತಿದ್ದಾರೆ ಎನ್ನುತ್ತವೆ ಮಾಹಿತಿಗಳು.

ವಾಟ್ಸಾಪ್‌ ಸ್ಟಿಕರ್ಸ್ ಕಳುಹಿಸುವುದು ಹೇಗೆ?
ನಾವೀಗ ಹೊಸ ವರ್ಷದಲ್ಲಿದ್ದೇವೆ. ಈಗಲೂ ನೀವು ಹೊಸ ವರ್ಷಕ್ಕೆ ನಿಮ್ಮ ಸ್ನೇಹಿತರಿಗೆ ಹೊಸ ವರ್ಷದ ಶುಭಾಶಯ ಕೋರುವ ವಾಟ್ಸಾಪ್ ಸ್ಟಿಕರ್‌ಗಳನ್ನು ಕಳುಹಿಸಬಹುದು. ಹೊಸ ವರ್ಷದಲ್ಲಿ ಎಲ್ಲ ಸಂಕಟಗಳನ್ನು ದೂರ ಮಾಡಲಿ ಎಂಬ ಆಶಯದಿಂದಲೇ ಹೊಸ ವರ್ಷವನ್ನು ಬರಮಾಡಿಕೊಂಡಿದ್ದೇವೆ.  ಈ ಹಿನ್ನೆಲೆಯಲ್ಲಿ ವಾಟ್ಸಾಪ್‌ ಸ್ಟಿಕರ್‌ಗಳು ನಿಮಗೆ ಹೊಸತನದ ಅನುಭವವನ್ನು ನೀಡಲಿವೆ. ಹೊಸ ವರ್ಷದ ಸ್ವಾಗತಕ್ಕೆ ನೀವು ಅನನ್ಯವಾದ, ಆಪ್ತವಾದ ವಾಟ್ಸಾಪ್‌ ಸ್ಟಿಕರ್‌ಗಳನ್ನು ನಿಮ್ಮ ಬಂಧು ಬಾಂಧವರು, ಸ್ನೇಹಿತರು, ಕುಟುಂಬದ ಸದಸ್ಯರಿಗೆ ಕಳುಹಿಸಿ, ಹೊಸ ವರ್ಷದ ಶುಭಾಶಯ ಕೋರಬಹುದು.

ಈ ವರ್ಷ 1 ಲಕ್ಷ ಕೋಟಿ ನಿಮಿಷ ವಿಡಿಯೋ ಕಾಲ್‌ಗಳನ್ನು ಕಂಡ ಗೂಗಲ್!

2020 ಮುಕ್ತಾಯವಾದ ಹಿನ್ನಲೆಯಲ್ಲಿ ಬಹಳಷ್ಟು ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೆ ಹೊಸ ವರ್ಷದ ಶುಭಾಶಯವನ್ನು ಯಾವ ರೀತಿ ಕೋರಬೇಕೆಂದು ಯೋಚಿಸುತ್ತಿರುತ್ತಾರೆ. ಇದಕ್ಕೆ ವಾಟ್ಸಾಪ್‌ ಸ್ಟಿಕರ್‌ಗಳು ನಿಮ್ಮ ದಾರಿಯನ್ನು ಇನ್ನಷ್ಟು ಸುಲಭಗೊಳಿಸಬಹುದು. ಹಾಗಾದರೆ, ವಾಟ್ಸಾಪ್ ಸ್ಟಿಕರ್‌ಗಳನ್ನು ಹೇಗೆ ಕಳುಹಿಸಬೇಕು ಎಂಬುದನ್ನು ನೋಡೋಣ ಬನ್ನಿ.

ಸ್ಟಿಕರ್ ಹೀಗೆ ಡೌನ್‌ಲೋಡ್ ಮಾಡಿಕೊಳ್ಳಿ
ಮೊದಲ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಲೆಟೆಸ್ಟ್ ವರ್ಷನ್ ಡೌನ್‌ಲೋಡ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮೊದಲಿಗೆ ಗೂಗಲ್ ಪ್ಲೇ ತೆಗೆಯಿರಿ. ನ್ಯೂಇಯರ್ ವಾಟ್ಸಾಪ್ ಸ್ಟಿಕರ್ ಎಂದು ಶೋಧಿಸಿ. ಬಳಿಕ ನಿಮ್ಮ ಇಚ್ಛೆಯ ಯಾವುದೇ ಸ್ಟಿಕರ್ ಆಯ್ಕೆ ಮಾಡಿಕೊಳ್ಳಿ ಮತ್ತು ಇನ್ಸ್‌ಟಾಲ್ ಆಗೋವರೆಗೆ ಕಾಯಿರಿ. ಬಳಿಕ ಡೌನ್‌ಲೋಡ್ ಆದ ಸ್ಟಿಕರ್ ಆಪ್ ತೆರೆಯಿರಿ. ಆಡ್ /+ ಬಟನ್ ಮೇಲೆ ಟ್ಯಾಪ್ ಮಾಡಿ. ಆಗ ಅದು ಆಡ್ ಆಗುತ್ತದೆ ಮತ್ತು ಯಾವುದೇ ವಾಟ್ಸಾಪ್ ಚಾಟ್ ವಿಂಡೋಗೆ ಸೇರಿಸಬಹುದು. ಜೊತೆಗೆ ಪಠ್ಯ ಬಾಕ್ಸ್ ಜಾಗದಲ್ಲಿ ಎಮೋಜಿಗಾಗಿ ಟ್ಯಾಪ್ ಮಾಡಿ. ಅದೇ ಜಾಗದ ಕೆಳಗಡೆ ಇರುವ ಸ್ಟಿಕರ್ಸ್ ಐಕಾನ್ ಮೇಲೆ ಟ್ಯಾಪ್ ಮಾಡಿ. ಆಗ ಆಗಷ್ಟೇ ಆಡ್ ಮಾಡಿದ ಸ್ಟಿಕರ್ ಪ್ಯಾಕ್ ಕಾಣಿಸಿಕೊಳ್ಳುತ್ತದೆ. ನಿಮಗೆ ಬೇಕಿರುವ ಸ್ಟಿಕರ್ ಟ್ಯಾ ಮಾಡಿ ನಿಮಗೆ ಬೇಕಾದವರಿಗೂ ಅದನ್ನು ಸೆಂಡ್ ಮಾಡಿ.

Realme Watch S ಮತ್ತು Watch S Pro ಬಿಡುಗಡೆ, ಮಾರಾಟ ಶುರು

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್