ಮೊಟೊರೊಲಾ ಫ್ಲ್ಯಾಗ್‌ಶಿಪ್ ಫೋನ್ ಶ್ರೇಣಿಯಲ್ಲಿ 'ಫ್ರಂಟಿಯರ್' ಎಂಬ ಹೆಸರಿನೊಂದಿಗೆ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಸಿದ್ಧತೆ ನಡೆಸಿದೆ.ಈ ಸಾಧನವು ಸ್ನಾಪ್‌ಡ್ರಾಗನ್ 8 Gen 1 SoC ಮತ್ತು 200-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿರುವ ನಿರೀಕ್ಷೆಯಿದೆ.
Tech Desk: ಜನರು ಸ್ಮಾರ್ಟ್‌ಫೋನ್ ಖರೀದಿಸುವಾಗ ಗಮನಿಸುವ ಪ್ರಮುಖ ಅಂಶಗಳಲ್ಲಿ ಕ್ಯಾಮೆರಾ ಕೂಡ (Camera) ಒಂದು. ಕೆಲ ಬಳಕೆದಾರರು ಉತ್ತಮ ಕ್ಯಾಮೆರಾ ಕ್ವಾಲಿಟಿಗೋಸ್ಕರವೇ ಮೊಬೈಲ್ ಖರೀದಿಸುತ್ತಾರೆ. ಇನ್ನು ಭಾರತದಲ್ಲಿ ಶಾರ್ಟ್ ವಿಡಿಯೋ, ಮೊಬೈಲ್ ಫೋಟೋಗ್ರಾಫಿ ಟ್ರೆಂಡಿಂಗ್‌ನಲ್ಲಿದೆ. ಹೀಗಿರುವಾಗ ಉತ್ತಮ ಕ್ಯಾಮೆರಾ ಕ್ವಾಲಿಟಿ ಯಾರಿಗೆ ಬೇಡ ಹೇಳಿ? ಇತ್ತೀಚೆಗಿನ ಲೀಕ್‌ವೊಂದರ ಪ್ರಕಾರ, ಮೊಟೊರೊಲಾ "ಫ್ರಂಟಿಯರ್" ಎಂಬ ಹೆಸರಿನೊಂದಿಗೆ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ. ಇದರಲ್ಲಿ 200MP ಕ್ಯಾಮೆರಾ ಇರಲಿದೆ ಎಂದು ಲೀಕ್ ಹೇಳಿದೆ. ಇದು ಬಿಡುಗಡೆಯಾದರೆ ಮೊಬೈಲ್ ಕ್ಯಾಮೆರಾ ಪ್ರಿಯರಿಗೆ ಭರ್ಜರಿ ಕೊಡುಗೆಯಾಗಲಿದೆ ಅಲ್ಲದೇ ಸ್ಯಾಮ್‌ಸಂಗ್, ಆಪಲ್ ಮತ್ತು ಇತರರೊಂದಿಗೆ ನೇರವಾಗಿ ಇದು ಸ್ಪರ್ಧಿಸಲಿದೆ.
ಮೊಟೊರೊಲಾದಿಂದ ಕೊನೆಯ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಎಡ್ಜ್ + (Edge+)ಅನ್ನು 2020 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಅದರ ಬಿಡುಗಡೆಯ ನಂತರ, ಕಂಪನಿಯು ಬಜೆಟ್ ಮತ್ತು ಮಧ್ಯಮ ಶ್ರೇಣಿಯ ಸಾಧನಗಳ ಮೇಲೆ ಗಮನ ಹರಿಸಿದೆ. ಆದಾಗ್ಯೂ, ಪ್ರಾಜೆಕ್ಟ್ ಫ್ರಂಟಿಯರ್ ಶೀಘ್ರದಲ್ಲೇ ಆಗಮಿಸುವ ನಿರೀಕ್ಷೆಯಿರುವುದರಿಂದ ಅದು 2022 ರಲ್ಲಿ ಮೊಟೊದ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಬಿಡುಡೆಯ ನಿರೀಕ್ಷೆಯಿದೆ.
undefined
ಇದನ್ನೂ ಓದಿ: Moto G Stylus 2022ರ ಹೊಸ ಫೀಚರ್ಸ್ ಲೀಕ್: ಏನೆಲ್ಲಾ ವಿಶೇಷತೆ ಇದೆ ನೋಡಿ!
ಜರ್ಮನ್ ವೆಬ್‌ಸೈಟ್ TechnikNews ಪ್ರಕಾರ, ಮೊಟೊರೊಲಾ ಈಗಾಗಲೇ ಮುಂದಿನ ಪೀಳಿಗೆಯ ಫ್ಲ್ಯಾಗ್‌ಶಿಪ್ ಸಾಧನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೊಸ ಮೊಟೊರೊಲಾ ಫ್ರಂಟಿಯರ್ ಮುಂಭಾಗದಲ್ಲಿ, 6.67-ಇಂಚಿನ ಡಿಸ್ಪ್ಲೇ ಇರುತ್ತದೆ. ಇದು P-OLED ತಂತ್ರಜ್ಞಾನದಲ್ಲಿ ಮಾಡಿದ ಮ್ಯಾಟ್ರಿಕ್ಸ್ ಆಗಿದ್ದು 144 Hz ನ ಇಮೇಜ್ ರಿಫ್ರೆಶ್‌ನೊಂದಿಗೆ Full HD ರೆಸಲ್ಯೂಶನ್ ಇರಲಿದೆ.
Always On Feature: ಕ್ಯಾಮೆರಾ ವಿಭಾಗದಲ್ಲಿ, ಹೊಸ ಮೊಟೊರೊಲಾ ಫ್ಲ್ಯಾಗ್‌ಶಿಪ್ ಸ್ಯಾಮ್‌ಸಂಗ್‌ನ 200 ಮೆಗಾಪಿಕ್ಸೆಲ್ S5KHP1 ಸೆನ್ಸರನ್ನು ಪ್ರಾಥಮಿಕ ಹಿಂಬದಿಯ ಕ್ಯಾಮೆರಾವಾಗಿ ಬಳಸುತ್ತದೆ, ಜೊತೆಗೆ 50 ಮೆಗಾಪಿಕ್ಸೆಲ್ Samsung S5KJN1SQ03 (JN1) ಅಲ್ಟ್ರಾವೈಡ್ ಲೆನ್ಸ್ ಮತ್ತು 12-ಮೆಗಾಪಿಕ್ಸೆಲ್ IMX663 ಸೆನ್ಸರ್ ಹೊಂದಿದೆ. Motorola Edge X30 ನಲ್ಲಿ ಬಳಸಲಾದ 60 ಮೆಗಾಪಿಕ್ಸೆಲ್ OmniVision OV60A ಸೆಲ್ಫಿ ಕ್ಯಾಮೆರಾ ಸಹ ಇರಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Moto Tab G70 : 7700mAh ಬ್ಯಾಟರಿ, Dolby Atmosನೊಂದಿಗೆ ಮೊಟೊರೊಲಾದ ಹೊಸ ಟ್ಯಾಬ್!
ಮುಂಭಾಗದ ಕ್ಯಾಮರಾ Snapdragon 8 Gen1 ನ 'Always On Feature' ಅನ್ನು ಬಳಸುತ್ತದೆ, ಇದು ಬಳಕೆದಾರರು ಸ್ಕ್ರೀನ್ ವೀಕ್ಷಿಸುತ್ತಿದ್ದರೆ ಅದನ್ನು ಸ್ವಯಂಚಾಲಿತವಾಗಿ ಪತ್ತೆ ಮಾಡುತ್ತದೆ ಮತ್ತು ಸ್ವಯಂಚಾಲಿತವಾಗಿ ಸ್ಕ್ರೀನ್‌ಲಾಕ್ ಮಾಡುತ್ತದೆ. ಇದು ಮೇಸೆಜ್ ಬ್ಯಾನರ್‌ಗಳನ್ನು ಸ್ವಯಂಚಾಲಿತವಾಗಿ ಮರೆಮಾಡುತ್ತದೆ ಮತ್ತು ನಿಮ್ಮ ಸ್ಕ್ರೀನ್ ಮೇಲೆ ಏನಿದೆ ಎಂಬುದನ್ನು ಇತರರು ನೋಡದಂತೆ ತಡೆಯುತ್ತದೆ. ಇದು 8GB ಅಥವಾ 12GB RAM ಜೊತೆಗೆ 128GB ಮತ್ತು 256GB ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲಾದ Qualcomm Snapdragon 8 Gen1 ಚಿಪ್‌ಸೆಟ್ ಅನ್ನು ಹೊಂದಿರುತ್ತದೆ.
ಬಿಡುಗಡೆ ದಿನಾಂಕದ ಮಾಹಿತಿ ಇಲ್ಲ: ಮೊಟೊರೊಲಾ ಫ್ರಂಟಿಯರ್‌ನ ಬ್ಯಾಟರಿ ಸಾಮರ್ಥ್ಯದ ಬಗ್ಗೆ ವರದಿಯಲ್ಲಿ ಪಟ್ಟಿ ಮಾಡಲಾಗಿಲ್ಲ, ಅದರ ಟೈಪ್-ಸಿ ಪೋರ್ಟ್ ಮೂಲಕ 125W ವರೆಗೆ ಮತ್ತು ವೈರ್‌ಲೆಸ್ ಆಗಿ 50W ವರೆಗೆ ಚಾರ್ಜ್ ಜತೆಗೆ ಬರಲಿದೆ ಎಂದು ಹೇಳಲಾಗಿದೆ. ಮೊಟೊರೊಲಾ ಫ್ರಂಟಿಯರ್ Android 12 OS ನಲ್ಲಿ ರನ್ ಆಗುವ ಸಾಧ್ಯತೆಯಿದೆ. ಪ್ರಸ್ತುತ, ಮೊಟೊರೊಲಾ ಫ್ರಾಂಟಿಯರ್‌ನ ಬಿಡುಗಡೆ ದಿನಾಂಕ ಮತ್ತು ಅಂತಿಮ ಮಾರ್ಕೆಟಿಂಗ್ ಹೆಸರಿನ ಬಗ್ಗೆ ಯಾವುದೇ ಮಾಹಿತಿಯಿಲ್ಲ
ಸದ್ಯಕ್ಕೆ ಮೊಟೊರೊಲಾ ಜಾಗತಿಕ ಮಾರುಕಟ್ಟೆಗಳಲ್ಲಿ Motorola Edge 30 Ultra ಫ್ಲ್ಯಾಗ್‌ಶಿಪ್ ಅನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ ಎಂದು ಹಲವು ವರದಿಗಳು ತಿಳಿಸಿವೆ. ಈ ಸ್ಮಾರ್ಟ್‌ಫೋನ್ ಮೊಟೊರೊಲಾ ಎಡ್ಜ್ X30 ನ ಮರುಬ್ರಾಂಡೆಡ್ ಆವೃತ್ತಿಯಾಗಿದೆ ಎಂದು ಹೇಳಲಾಗುತ್ತದೆ, ಇದನ್ನು ಡಿಸೆಂಬರ್ 2021 ರಲ್ಲಿ ಘೋಷಿಸಲಾಗಿತ್ತು.