Avatar Robot: ಅನಾರೋಗ್ಯದಿಂದ ಬಳಲುತ್ತಿರುವ ಬಾಲಕನ ಪರವಾಗಿ ಶಾಲೆಗೆ ಹಾಜರಾಗುವ ರೋಬೋಟ್!

By Suvarna News  |  First Published Jan 16, 2022, 7:57 AM IST

7 ವರ್ಷದ ಜರ್ಮನ್  ಬಾಲಕ ಜೋಶುವಾ ಮಾರ್ಟಿನಾಂಜೆಲಿ  ಶಾಲೆಗೆ ಹಾಜರಾಗಲು ಸಾಧ್ಯವಾಗದೆ ಇದ್ದಾಗ ಜೋಶುವಾ ಬದಲಾಗಿ ಅವತಾರ್‌ ರೋಬೋಟ್‌  ಶಾಲೆಗೆ ಹಾಜರಾಗುತ್ತದೆ.
 


Tech Desk: ಕೊರೋನಾ ಸಾಂಕ್ರಾಮಿಕ (Covid 19) ಹರಡಿದಾಗಿನಿಂದ ಬಹುತೇಕ ಶಾಲಾ ಕಾಲೇಜುಗಳು ಆನ್‌ಲೈನ ಅಥವಾ ಡಿಜಿಟಲ್‌ ವಿದ್ಯಾಭ್ಯಾಸದ ಮೊರೆ ಹೋಗಿವೆ. ಕೊರೋನಾ ಕಾಲದಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಬೆನ್ನೆಲುಬಾಗಿ ನಿಂತಿದ್ದು ತಂತ್ರಜ್ಞಾನ. ತಂತ್ರಜ್ಞಾನದ ಮೂಲಕ ವಿದ್ಯಾರ್ಥಿ ಹಾಗೂ ಶಿಕ್ಷಕರ ಸಂಹವನ ಸಾಧ್ಯವಾಗಿದೆ. ಹೀಗೆ ಅನಾರೋಗ್ಯದಿಂದ ಬಳಲುತ್ತಿರುವ, ಶಾಲೆಗೆ ಹಾಜರಾಗಲು ಸಾಧ್ಯವಾಗದ 7 ವರ್ಷದ ಜರ್ಮನ್ (German) ಬಾಲಕನಿಗೆ  ಈಗ ತಂತ್ರಜ್ಞಾನ ಆಸರೆಯಾಗಿದೆ. ಜರ್ಮನ್ ವಿದ್ಯಾರ್ಥಿ ಜೋಶುವಾ ಮಾರ್ಟಿನಾಂಜೆಲಿ  (Joshua Martinangeli) ಶಾಲೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿ. ಶಾಲೆಗೆ ಹಾಜರಾಗಲು ಸಾಧ್ಯವಿಲ್ಲದಿದ್ದರೂ ಜೋಶುವಾ ಯಾವುದೇತರಗತಿ ಮಿಸ್‌ ಮಾಡಿಕೊಳ್ಳುವುದಿಲ್ಲ. 

ಅದು ಹೇಗೆ ಅಂತೀರಾ? ಜೋಶುವಾ ಮಾರ್ಟಿನಾಂಜೆಲಿ ಬದಲಾಗಿ ಅವತಾರ್‌ ರೋಬೋಟ್‌ (Avatar Robot) ಶಾಲೆಗೆ ಹಾಜರಾಗುತ್ತದೆ.  ರೋಬೋಟ್ ಮೂಲಕ ಶಿಕ್ಷಕರು ಮತ್ತು ಸಹಪಾಠಿಗಳೊಂದಿಗೆ ಜೋಶುವಾ ಸಂವಹನ ನಡೆಸುತ್ತಾನೆ. ಜೋಶುವಾ ಏನನ್ನಾದರೂ ಹೇಳಬೇಕು ಎಂದು ಬಯಸಿದಾಗ  ರೋಬೋಟ್ ಮೂಲಕ ಸಂಕೇತಗಳನ್ನು (Signals) ಕಳುಹಿಸುತ್ತಾನೆ. ಜೋಶುವಾ ಅವರ ತಾಯಿ, ಸಿಮೋನ್ ಮಾರ್ಟಿನಾಂಜೆಲಿ ರಾಯಿಟರ್ಸ್‌ಗೆ ( Reuters) ನೀಡಿದ ಸಂದರ್ಶನದಲ್ಲಿ "ಜೋಶುವಾ ತೀವ್ರ ಶ್ವಾಸಕೋಶದ ಕಾಯಿಲೆಯಿಂದ ಕುತ್ತಿಗೆಯಲ್ಲಿ ಟ್ಯೂಬ್ ಅಳವಡಿಸಲಾಗಿದೆ. ಇದರಿಂದ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ" ಎಂದು ಮಾಹಿತಿ ನೀಡಿದ್ದಾರೆ.

Photo Credit : Reuters

Tap to resize

Latest Videos

undefined

ರೋಬೋಟ್‌ನೊಂದಿಗೆ ಮಾತನಾಡುವ ಮಕ್ಕಳು! : ಇನ್ನು ಬರ್ಲಿನ್‌ನ ಪಸ್ಟೆಬ್ಲೂಮ್-ಗ್ರುಂಡ್‌ಸ್ಕೂಲ್‌ನಲ್ಲಿ (ಪ್ರಾಥಮಿಕ ಶಾಲೆ) ಮುಖ್ಯೋಪಾಧ್ಯಾಯಿನಿಯಾಗಿರುವ ಉಟೆ ವಿಂಟರ್‌ಬರ್ಗ್ (Ute Winterberg), ಮಕ್ಕಳು ಅವತಾರ್ ರೋಬೋಟ್‌ನೊಂದಿಗೆ ಹೇಗೆ ಸಂವಹನ ನಡೆಸುತ್ತಾರೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. "ಮಕ್ಕಳು ರೋಬೋಟ್‌ನೊಂದಿಗೆ ಮಾತನಾಡುತ್ತಾರೆ, ಅವನೊಂದಿಗೆ ನಗುತ್ತಾರೆ ಮತ್ತು ಕೆಲವೊಮ್ಮೆ ಪಾಠದ ಸಮಯದಲ್ಲಿ ಅವರೊಂದಿಗೆ ಚಿಟ್ಚಾಟ್ ಮಾಡುತ್ತಾರೆ. ಜೋಶಿ ಕೂಡ ಅದನ್ನು ಚೆನ್ನಾಗಿ ಮಾಡಬಹುದು,"  ಎಂದು ಉಟೆ ಹೇಳಿದ್ದಾರೆ.

ಇದನ್ನೂ ಓದಿ: Brain Computer: ಮೆದುಳಿನಲ್ಲಿ ಅಳವಡಿಸಿದ ಮೈಕ್ರೋಚಿಪ್ ಬಳಸಿ ಪಾರ್ಶ್ವವಾಯು ಪೀಡಿತ ವ್ಯಕ್ತಿಯ ಟ್ವೀಟ್!

ಅವತಾರ್ ರೋಬೋಟ್ ಯೋಜನೆಯು ಖಾಸಗಿ ಯೋಜನೆಯಾಗಿದ್ದು ಇದನ್ನು ಬರ್ಲಿನ್‌ ಜಿಲ್ಲೆಯ ಮರ್ಜಾನ್-ಹೆಲ್ಲರ್ಸ್‌ಡಾರ್ಫ್ ಎಂಬ ಸ್ಥಳೀಯ ಕೌನ್ಸಿಲ್ ಪಾವತಿಸುತ್ತದೆ. ಜಿಲ್ಲೆ ತನ್ನ ಶಾಲೆಗಳಿಗೆ ನಾಲ್ಕು ಅವತಾರಗಳನ್ನು ಖರೀದಿಸಿದೆ ಎಂದು ಜಿಲ್ಲಾ ಶಿಕ್ಷಣ ಕೌನ್ಸಿಲರ್ ಟಾರ್ಸ್ಟೆನ್ ಕುಹೆನೆ (Torsten Kuehne) ತಿಳಿಸಿದ್ದಾರೆ.

ರೋಬೋಟ್‌ ಖರೀದಿಸಲು ಕೋವಿಡ್‌ 19 ಕಾರಣ:  "ನಾವು ಬರ್ಲಿನ್‌ನಲ್ಲಿ ತನ್ನ ಶಾಲೆಗಳಿಗೆ ನಾಲ್ಕು ಅವತಾರಗಳನ್ನು ಖರೀದಿಸಿದ ಏಕೈಕ ಜಿಲ್ಲೆಯಾಗಿದೆ. ಇದರ ಹಿಂದಿನ ಪ್ರಚೋದನೆಯು ಕೋವಿಡ್‌ 19 ( COVID-19) ಆಗಿತ್ತು, ಆದರೆ ಇದು ಸಾಂಕ್ರಾಮಿಕ ಹರಡುವ ಸಂದರ್ಭದಲ್ಲಿ  ಭವಿಷ್ಯವದಲ್ಲಿ ಇದು ಸಹಾಯಕವಾಗಲಿದೆ ಎಂದು ನಾನು ಭಾವಿಸುತ್ತೇನೆ" ಎಂದು ಕುಹೆನೆ ಹೇಳಿದ್ದಾರೆ.ವಿವಿಧ ಕಾರಣಗಳಿಂದ ವೈಯಕ್ತಿಕವಾಗಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದಿದ್ದಾಗ ಶಾಲಾ ಸಮುದಾಯದ ಭಾಗವಾಗಿ ಉಳಿಯಲು ಅವತಾರ್ ವಿದ್ಯಾರ್ಥಿಗೆ ಅವಕಾಶವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿPig Heart Implant: ಇದೇ ಮೊದಲ ಬಾರಿಗೆ ಮನುಷ್ಯನಿಗೆ ಹಂದಿ ಹೃದಯ ಕಸಿ: ಅಮೆರಿಕಾ ವೈದ್ಯರ ಐತಿಹಾಸಿಕ ಸಾಧನೆ!

ನೋಹ್ ಕ್ಯೂಸ್ನರ್ ಎಂಬ ವಿದ್ಯಾರ್ಥಿಯನ್ನು ಜೋಶುವಾ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೀರಾ ಎಂದು ಕೇಳಿದಾಗ "ನಾನು ಅವತಾರವನ್ನು ಇಷ್ಟಪಡುವ ಕಾರಣ, ಜೋಶೂವಾನನ್ನಯ ನೇರ ಭೇಟಿಯಾಗಲು ಮತ್ತು ರೋಬೋಟ್‌ ಮೂಲಕ ಭೇಟಿಯಾಗಲು ಎರಡೂ ರೀತಿಯಲ್ಲಿ ಇಷ್ಟಪಡುತ್ತೇನೆ" ಎಂದು ಹೇಳಿದ್ದಾನೆ.  " ಜೋಶಿ ನಿಜವಾಗಿಯೂ ಶಾಲೆಗೆ ಬಂದರೆ ಅದು ಉತ್ತಮವಾಗಿದೆ." ಎಂದು ಜೋಶುವಾ  ಮತ್ತೊಬ್ಬ ಸಹಪಾಠಿ ಬೆರಿಟಾನ್ ಅಸ್ಲಾಂಗ್ಲು ಹೇಳಿದ್ದಾನೆ.

click me!