AI ತಂತ್ರಜ್ಞಾನ ಬಳಸಿ ಗತಕಾಲದ ಸೆಲ್ಫಿ ಫೋಟೋ ಸೃಷ್ಟಿ, ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ!

By Suvarna News  |  First Published Mar 21, 2023, 5:59 PM IST

ಸದ್ಯ ಆರ್ಟಿಫೀಶಿಯಲ್ ಇಂಟಿಲೆಜೆನ್ಸ್ ಹಾಗೂ ಜಾಟ್ ಜಿಪಿಟಿ ಭಾರಿ ಸದ್ದು ಮಾಡುತ್ತಿದೆ. ಇದರ ಜೊತೆಗೆ ಆತಂಕವೂ ಹೆಚ್ಚಾಗುತ್ತಿದೆ. ಊಹೆಗೂ ನಿಲುಕದ ತಂತ್ರಜ್ಞಾನ ಈಗಾಗಲೇ ಹಲವು ಅಚ್ಚರಿ ನೀಡಿದೆ. ಇದೀಗ AI ತಂತ್ರಜ್ಞಾನ ಬಳಸಿ ಮಹಾತ್ಮಾ ಗಾಂಧಿ, ಡಾ.ಬಿಆರ್ ಅಂಬೇಡ್ಕರ್, ಮದರ್ ತೆರೆಸಾ ಸೇರಿದಂತೆ ಹಲವು ದಿಗ್ಗಜರ ಸೆಲ್ಫಿ ಫೋಟೋ ಸೃಷ್ಟಿಸಲಾಗಿದೆ. ತಂತ್ರಜ್ಞಾನದ ಸೆಲ್ಫಿ ಫೋಟೋಗೆ ಭಾರಿ ಮೆಚ್ಚುಗೆ ಜೊತೆ ಅಚ್ಚರಿಯೂ ವ್ಯಕ್ತವಾಗಿದೆ.
 


ನವದೆಹಲಿ(ಮಾ.21): ಆರ್ಟಿಫೀಶಿಯಲ್ ಇಂಟೆಲಿಡೆನ್ಸ್(AI) ಹಾಗೂ ಚಾಟ್ ಜಿಪಿಟಿ ತಂತ್ರಜ್ಞಾನ ಪ್ರತಿ ದಿನ ಅಚ್ಚರಿಗಳನ್ನು ನೀಡುತ್ತಲೇ ಇದೆ. ಈಗಿನ ತಂತ್ರಜ್ಞಾನಕ್ಕೆ ಯಾವೂದೂ ಅಸಾಧ್ಯವಲ್ಲ. ಇದೀಗ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಬಳಸಿ ಗತಗಾಲದ ದಿಗ್ಗಜರ ಸೆಲ್ಫಿ ಫೋಟೋ ಸೃಷ್ಟಿಸಲಾಗಿದೆ. ಈ ಫೋಟೋಗಳನ್ನು ಯಾವ ರೀತಿ ಪರಿಶೀಲಿಸಿದರೂ ನಕಲಿ ಎಂದು ಹೇಳಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ನೈಜತವನ್ನು ತರಲಾಗಿದೆ. ಮಹಾತ್ಮಾ ಗಾಂಧಿ, ಡಾ. ಬಿಆರ್ ಅಂಬೇಡ್ಕರ್, ಮದರ್ ತೆರೆಸಾ, ಎಲ್ವಿಸ್ ಪ್ರೆಸ್ಲೇ ಸೇರಿದಂತೆ ಹಲವು ಗಣ್ಯರು ಸೆಲ್ಫಿ ಫೋಟೋಗಳನ್ನು ಸೃಷ್ಟಿಸಲಾಗಿದೆ. ಈ ಫೋಟೋ ನೋಡಿದ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಜ್ಯೋ ಜಾನ್ ಮುಲ್ಲೂರು ಆರ್ಟಿಫಿಶೀಲಿಯಲ್ ಇಂಟೆಲಿಜೆನ್ಸ್ ಮೂಲಕ ಸೃಷ್ಟಿಸಿದ ಅಚ್ಚರಿ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಡ್ರೈವ್ ಪರಿಶೀಲಿಸುತ್ತಿರುವಾಗ ನನಗೆ ಗೆಳೆಯರು ಹಲವು ವರ್ಷಗಳ ಹಿಂದೆ ಕಳುಹಿಸಿದ ಸೆಲ್ಫಿ ಫೋಟೋಗಳು ಸಿಕ್ಕಿತು. ನಾನೀಗ ಅರ್ಟಿಫಿಶೀಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ಬಳಿಕ ಗತಕಾಲದ ಹಲವು ದಿಗ್ಗಜರ ಸೆಲ್ಫಿ ಫೋಟೋಗಳನ್ನು ಸೃಷ್ಟಿಸಿದ್ದೇನೆ ಎಂದು ಜಾನ್ ಮುಲ್ಲೂರ್ ಹೇಳಿಕೊಂಡಿದ್ದಾರೆ.

Latest Videos

undefined

 

 

ಬೆಂಗಳೂರು ಟ್ರಾಫಿಕ್‌ ಸಮಸ್ಯೆಗೆ ಸ್ಮಾರ್ಟ್‌ ಸಿಗ್ನಲ್‌ ಪರಿಹಾರ, ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಸಿಗ್ನಲ್‌ಗೆ ಟೆಂಡರ್‌

ಜಾನ್ ಮುಲ್ಲರ್ ಎರಡು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಹಲವರು ನಾಯಕರ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಸೋವಿಯತ್ ಯೂನಿಯನ್ ನಾಯಕ ಜೊಸೆಫ್ ಸ್ಟಾಲಿನ್, ಅಮೆರಿಕ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್, ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್, ಜಮೈಕಾ ಗಾಯಕ ಬಾಂಬ್ ಮರ್ಲೆ, ಮಾರ್ಕಿಸ್ಟ್ ನಾಯಕ ಚೆ ಗುವೆರಾ ಸೇರಿದಂತೆ ಹಲವು ನಾಯಕರ ಸೆಲ್ಫಿ ಫೋಟೋಗಳನ್ನು AI ತಂತ್ರಜ್ಞಾನದ ಮೂಲಕ ಸೃಷ್ಟಿಸಿ ಪೋಸ್ಟ್ ಮಾಡಲಾಗಿದೆ.

 

ಮುಲ್ಲೂರು ಫೋಟೋ ಪೋಸ್ಟ್ ಮಾಡಿದ ಬೆನ್ನಲ್ಲೇ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಷ್ಟು ನೈಜತೆಯಲ್ಲಿ ಸೆಲ್ಫಿ ಸೃಷ್ಟಿಸಿದ್ದರೆ ಇನ್ನು ಫೋಟೋ, ವಿಡಿಯೋ ದಾಖಲೆಗಳ ಕತೆ ಏನು? ಯಾವುದನ್ನೂ ದಾಖಲೆಯಾಗಿ ಪರಿಗಣಿಸಲು ಸಾಧ್ಯವಿಲ್ಲ. ಇದರಲ್ಲಿ ನಕಲಿ ಯಾವುದು ಅಸಲಿ ಯಾವುದು ಅನ್ನೋದು ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಆರ್ಟಿಫಿಶೀಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಮೂಲಕ  ಈ ಸಾಧನೆ ಮಾಡಿರುವುದು ಅಚ್ಚರಿಯಾಗಿದೆ.ಆದರೆ ಇದರ ಜೊತೆಗೆ ಆತಂಕವೂ ಎದುರಾಗುತ್ತಿದೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

 

ಕೃತಕ ಬರಹಗಾರ; ಕಂಪ್ಯೂಟರ್‌ ಕೈ ಬರೆಯುತ್ತದೆ

ಚಾಟ್‌ಜಿಪಿಟಿಯಿಂದ ಉದ್ಯೋಗ ನಷ್ಟಸಂಭವ: ಸಿಇಒ ಸ್ಯಾಮ್‌!
ಹೊಸದಾಗಿ ಆವಿಷ್ಕಾರಗೊಂಡಿರುವ ‘ಚಾಟ್‌ ಜಿಪಿಟಿ’ ಸಮಾಜಕ್ಕೆ ಹೊಸ ರೂಪ ನೀಡುತ್ತದೆ. ಆದರೆ ಇದೇ ವೇಳೆ ಬಹಳಷ್ಟುಉದ್ಯೋಗ ನಷ್ಟಕ್ಕೆ ಕಾರಣವಾಗಬಹುದು ಎಂದು ಚಾಟ್‌ ಜಿಪಿಟಿ ಸೃಷಿಸಿರುವ ಓಪನ್‌ ಎಐ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಯಾಮ್‌ ಆಲ್ಟ್‌ಮ್ಯಾನ್‌ ಆತಂಕ ವ್ಯಕ್ತಪಡಿಸಿದ್ದಾರೆ.

click me!