ಕರ್ನಾಟಕದಲ್ಲಿ ನೆಟ್‌ವರ್ಕ್ ಬಲಪಡಿಸಿದ ಜಿಯೋ, ಹೆಚ್ಚುವರಿ 5MHz ತರಂಗಾಂತರ ಅಳವಡಿಕೆ!

By Suvarna News  |  First Published Oct 10, 2021, 5:25 PM IST
  • ಕರ್ನಾಟಕದಲ್ಲಿ ಹೆಚ್ಚುವರಿ  5MHz ತರಂಗಾಂತರ ಅಳವಡಿಕೆ
  • ರಾಜ್ಯದ ಎಲ್ಲಾ ಭಾಗಗಳಲ್ಲಿ ಬಲಿಷ್ಠ ಜಿಯೋ ನೆಟ್‌ವರ್ಕ್
  • ಗ್ರಾಮೀಣ ಭಾಗದಲ್ಲೂ ಉತ್ಯಮತ್ತಮ ನೆಟ್‌ವರ್ಕ್ ಲಭ್ಯ

ಬೆಂಗಳೂರು(ಅ.10): ಕರ್ನಾಟಕದಲ್ಲಿ(Karnataka) ಜಿಯೋ ನೆಟ್‌ವರ್ಕ್‌ಗೆ ಮತ್ತಷ್ಟು ಬಲಬಂದಿದೆ. ರಾಜ್ಯದ ಯಾವುದೇ ಮೂಲೆಯಲ್ಲೂ ಜಿಯೋ(Jio) ಅತ್ಯುತ್ತಮ ನೆಟ್‌ವರ್ಕ್ ಸೇವೆ ನೀಡುವ ಮೂಲಕ ಇತಿಹಾಸ ರಚಿಸಲಿದೆ. ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿ (RJIL) ತನ್ನ ಗ್ರಾಹಕ ಅನುಭವವನ್ನು ವೃದ್ಧಿಸುವುದಕ್ಕಾಗಿ 1800 ಬ್ಯಾಂಡ್‌ನಲ್ಲಿ ಹೆಚ್ಚುವರಿ 5MHz ತರಂಗಾಂತರವನ್ನು( ಯಶಸ್ವಿಯಾಗಿ ಅಳವಡಿಸಿದೆ. ಇದರೊಂದಿಗೆ ಈ ವರ್ಷದ ಮಾರ್ಚ್‌ ತಿಂಗಳಲ್ಲಿ DOT ನಡೆಸಿದ ತರಂಗಾಂತರ (ಸ್ಪೆಕ್ಟ್ರಂ) ಹರಾಜಿನಲ್ಲಿ ಖರೀದಿಸಿದ ಹೆಚ್ಚುವರಿ 20MHz ತರಂಗಾಂತರದ(spectrum) ಅಳವಡಿಕೆಯನ್ನು ಪೂರ್ಣಗೊಳಿಸಿದೆ.

ನೆಟ್ವರ್ಕ್ ಇಲ್ಲದಿದ್ದರೂ ಈಗ ಕಾಲ್‌ ಮಾಡ್ಬಹುದು..! ಸೆಟ್ಟಿಂಗ್ಸ್‌ನಲ್ಲಿ ಹೀಗ್ಮಾಡಿ

Tap to resize

Latest Videos

ಈ ತರಂಗಾಂತರ ವೃದ್ಧಿಯು ಕರ್ನಾಟಕದಲ್ಲಿನ ಸಂಪೂರ್ಣ ಗ್ರಾಹಕ ನೆಲೆಗೆ ಜಿಯೋ ನೆಟ್‌ವರ್ಕ್ ಅನುಭವವನ್ನು ಪರಿಣಾಮಕಾರಿಯಾಗಿ ಹೆಚ್ಚಿಸಿದೆ. 850MHZ, 1800MHZ ಮತ್ತು 2300MHZ ಬ್ಯಾಂಡ್‌ಗಳಲ್ಲಿ ಹೆಚ್ಚುವರಿಯಾಗಿ 60MHz ಅಳವಡಿಸಲಾಗಿದೆ. ಇದರಿಂದ ಕರ್ನಾಟಕದಾದ್ಯಂತ ನೆಟ್‌ವರ್ಕ್ ಗುಣಮಟ್ಟ ಸುಧಾರಿಸಿದ್ದು, ಚಂದಾದಾರರ ಅನುಭವ ಸುಧಾರಣೆಗೆ ನೆರವಾಗಿದೆ. ರಾಜ್ಯಾದ್ಯಂತ ಇರುವ ನಿಯೋಜಿತ ನೆಟ್‌ವರ್ಕ್‌ ಸೈಟ್‌ಗಳ ವಿಚಾರದಲ್ಲಿ ಮತ್ತು ತನ್ನ ಚಂದಾದಾರರಿಗೆ ಒದಗಿಸುವ ನೆಟ್‌ವರ್ಕ್ ಗುಣಮಟ್ಟದಲ್ಲಿ ಜಿಯೋ ರಾಜ್ಯದ ನಾಯಕನಾಗಿ ಮುಂದುವರಿಯಲಿದೆ.

ಚಿಪ್ ಕೊರತೆ, ಗಣೇಶ ಹಬ್ಬದ ಬದಲು ದೀಪಾವಳಿಗೆ ಜಿಯೋಫೋನ್ ನೆಕ್ಸ್ಟ್ ಬಿಡುಗಡೆ!

ಹೆಚ್ಚುತ್ತಿರುವ ವರ್ಕ್‌ ಫ್ರಂ ಹೋಮ್ ಸನ್ನಿವೇಶಗಳು ಹಾಗೂ ಕಾಲದಿಂದ ಕಾಲಕ್ಕೆ ಹೇರಿಕೆಯಾಗುತ್ತಿರುವ ನಿರ್ಬಂಧಿತ ಸಂಚಾರಗಳನ್ನು ಪರಿಗಣಿಸಿ, ಈ ತರಂಗಾಂತರ ವೃದ್ಧಿಯು, ಎ) ಮನೆಯಿಂದ ಕೆಲಸ ಮಾಡುವ ವೃತ್ತಿಪರರು, ಬಿ) ಆನ್‌ಲೈನ್ ತರಗತಿಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು, ಸಿ) ಮನೆಯಲ್ಲಿ ಸುರಕ್ಷಿತವಾಗಿದ್ದುಕೊಂಡು ಯಾವುದೇ ತಡೆರಹಿತವಾಗಿ ಉದ್ಯಮವನ್ನು ಮನೆಯಿಂದಲೇ  ನಡೆಸಲು ಸಹಕಾರಿಯಾಗುತ್ತದೆ. ಹೆಚ್ಚಿಸಲಾದ ಸಂಪರ್ಕ ಜಾಲ ಮತ್ತು ಅನುಭವವು ಹೊರಭಾಗದಲ್ಲಿನ ಅಗತ್ಯ ಕೆಲಸಗಳಲ್ಲಿ ತೊಡಗಿರುವ ವೈದ್ಯಕೀಯ ಹಾಗೂ ಇತರೆ ಮುಂಚೂಣಿ ಕೆಲಸಗಾರರಿಗೆ ಖಂಡಿತವಾಗಿಯೂ ಬಹು ದೊಡ್ಡ ನೆರವು ನೀಡಲಿದೆ.

ಕರ್ನಾಟಕದಲ್ಲಿ ಜಿಯೋ 2.21 ಕೋಟಿಗೂ ಅಧಿಕ ಗ್ರಾಹಕರ ನೆಲೆಯನ್ನು ಹೊಂದಿದೆ (ಜುಲೈ ಟ್ರಾಯ್ ವರದಿ ಪ್ರಕಾರ), ಮತ್ತು ಪ್ರತಿ ಜಿಲ್ಲೆಯಲ್ಲಿಯೂ ಮತ್ತಷ್ಟು ಚಂದಾದಾರರನ್ನು ಸೇರ್ಪಡೆಯನ್ನು ಮುಂದುವರಿಸಿದೆ. ಮತ್ತಷ್ಟು 4ಜಿ ಟವರ್‌ಗಳ ಬೇಡಿಕೆಯನ್ನು ಈಡೇರಿಸಲು, ಜಿಯೋ ಕರ್ನಾಟಕ 2021ರಲ್ಲಿ ತನ್ನ 4ಜಿ ನೆಟ್‌ವರ್ಕ್ಅನ್ನು ಶೇ 28ರಷ್ಟು ವಿಸ್ತರಿಸುತ್ತಿದೆ. ಪ್ರಸ್ತುತ ಜಿಯೋ ರಾಜ್ಯದಲ್ಲಿ 22,300ಕ್ಕಿಂತ ಹೆಚ್ಚು 4ಜಿ ನೆಟ್‌ವರ್ಕ್ ಸೈಟ್‌ಗಳನ್ನು ಹೊಂದಿದ್ದು, ಇದು ಅತಿ ದೊಡ್ಡ 4ಜಿ ಹೆಜ್ಜೆಗುರುತಾಗಿದೆ.

ಟೆಲಿಕಾಂನಲ್ಲಿ ಕ್ರಾಂತಿ ಮಾಡಿದ ಜಿಯೋಗೆ 5 ವರ್ಷ; ಭಾರತದಲ್ಲಿ ಮಹತ್ತರ ಬದಲಾವಣೆ!

ರಿಲಯನ್ಸ್ ಜಿಯೋ, ಕಳೆದ ತರಂಗಾಂತರ ಹರಾಜಿನಲ್ಲಿ 20 ವರ್ಷಗಳ ಅವಧಿಗೆ 57,123 ಕೋಟಿ ರೂಪಾಯಿ ವೆಚ್ಚದಲ್ಲಿ 22 ವಲಯಗಳಿಗೆ ಒಟ್ಟು 488.35 MHZ (850 MHZ, 1800 MHZ ಮತ್ತು 2300 MHZ ಒಳಗೊಂಡಂತೆ) ತರಂಗಾಂತರಗಳನ್ನು ಖರೀದಿಸಿದೆ. ಇದರೊಂದಿಗೆ ಜಿಯೋ ತನ್ನ ಹೆಜ್ಜೆಗುರುತನ್ನು ಶೇ 55ರಷ್ಟು ಏರಿಕೆಯೊಂದಿಗೆ ಒಟ್ಟು 1717 MHZಗೆ ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಜಿಯೋ ಪ್ರಸ್ತುತ 443 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ತನ್ನ ವೃದ್ಧಿಸಿದ ತರಂಗಾಂತರ ಹೆಜ್ಜೆಗುರುತಿನೊಂದಿಗೆ ಆರ್‌ ಜೆ ಐ ಎಲ್, ತನ್ನ ಹಾಲಿ ಬಳಕೆದಾರರಿಗೆ ಸೇವೆ ಒದಗಿಸಲು ನೆಟ್‌ವರ್ಕ್ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಈ ವೃದ್ಧಿಯು ಮುಂದೆ 300 ಮಿಲಿಯನ್ ಬಳಕೆದಾರರನ್ನು ಸೇರ್ಪಡೆಗೊಳಿಸುವ ಮೂಲಕ ಡಿಜಿಟಲ್ ಸೇವೆಗಳತ್ತ ಹಾಗೂ 5ಜಿ ಸೇವೆಗಳ ಪರಿವರ್ತನೆಗೆ ಸಾಗಲು ಕೂಡ ನೆರವಾಗಲಿದೆ.
 

click me!