IRCTC Confirm Ticket App: ರೇಲ್ವೇ ತತ್ಕಾಲ್‌ ಟಿಕೇಟ್ ಪಡೆಯುವುದು ಈಗ ಇನ್ನೂ ಸುಲಭ: ಬುಕ್‌ ಮಾಡುವುದು ಹೇಗೆ?

Published : Feb 23, 2022, 11:00 AM ISTUpdated : Jul 14, 2022, 04:39 PM IST
IRCTC Confirm Ticket App: ರೇಲ್ವೇ ತತ್ಕಾಲ್‌ ಟಿಕೇಟ್ ಪಡೆಯುವುದು ಈಗ ಇನ್ನೂ ಸುಲಭ: ಬುಕ್‌ ಮಾಡುವುದು ಹೇಗೆ?

ಸಾರಾಂಶ

Confirmtkt ಅಪ್ಲಿಕೇಶನ್ ಪ್ರಯಾಣಿಕರಿಗೆ ವಿವಿಧ ರೈಲುಗಳ ಸೀಟ್ ಲಭ್ಯತೆಯನ್ನು ವೀಕ್ಷಿಸಲು ಅನುಮತಿಸುತ್ತದೆ. ಇದು ನಿರ್ದಿಷ್ಟ ಮಾರ್ಗದಲ್ಲಿ ಲಭ್ಯವಿರುವ ಎಲ್ಲಾ ತತ್ಕಾಲ್ ಟಿಕೆಟ್‌ಗಳನ್ನು ಸಹ ತೋರಿಸುತ್ತದೆ

ನವದೆಹಲಿ (ಫೆ. 23): ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಇಲಾಖೆ ಹೊಸ ಟಿಕೆಟ್ ಬುಕಿಂಗ್​ ಆ್ಯಪ್  ಪರಿಚಯಿಸಿದೆ. ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ತತ್ಕಾಲ್ ಬುಕಿಂಗ್‌ಗೆ ಉಪಯುಕ್ತವಾದ ಕನ್ಫರ್ಮ್‌ ಟಿಕೆಟ್ (Confirmtkt) ಅಪ್ಲಿಕೇಶನನ್ನು ಬಿಡುಗಡೆ ಮಾಡಿದೆ. ಐಆರ್‌ಸಿಟಿಸಿ ಪ್ರಕಾರ, ತತ್ಕಾಲ್ ಟಿಕೆಟ್‌ಗಳು ಮೊದಲು ಬಂದವರಿಗೆ ಮೊದಲು ಸೇವೆಯ ಆಧಾರದ ಮೇಲೆ ಲಭ್ಯವಿವೆ ಮತ್ತು ಪ್ರಯಾಣಿಕರು ಆಯಾ ರೈಲು ಹೊರಡುವ 24 ಗಂಟೆಗಳ ಮೊದಲು ಅಂತಹ ಟಿಕೆಟ್‌ಗಳನ್ನು ಕಾಯ್ದಿರಿಸಬೇಕು.

Confirmtkt ಅಪ್ಲಿಕೇಶನ್ ಪ್ರಯಾಣಿಕರಿಗೆ ವಿವಿಧ ರೈಲುಗಳ ಸೀಟ್ ಲಭ್ಯತೆಯನ್ನು ವೀಕ್ಷಿಸಲು ಅನುಮತಿಸುತ್ತದೆ. ಇದು ನಿರ್ದಿಷ್ಟ ಮಾರ್ಗದಲ್ಲಿ ಲಭ್ಯವಿರುವ ಎಲ್ಲಾ ತತ್ಕಾಲ್ ಟಿಕೆಟ್‌ಗಳನ್ನು ಸಹ ತೋರಿಸುತ್ತದೆ. ಪ್ರಯಾಣಿಕರು ಆ್ಯಪ್ ಅಥವಾ ವೆಬ್‌ಸೈಟ್‌ನಲ್ಲಿ ಒಮ್ಮೆ ಮುಂಚಿತವಾಗಿ ವೈಯಕ್ತಿಕ ವಿವರಗಳನ್ನು ಉಳಿಸಬೇಕು ಮತ್ತು ಟಿಕೆಟ್‌ಗಳನ್ನು ಕಾಯ್ದಿರಿಸುವಾಗ ಈ ಮಾಹಿತಿಯನ್ನು ಬಳಸಬಹುದು. 

ಇದು ತಕ್ಷಣವೇ ಖಚಿತವಾದ ಟಿಕೆಟ್ ಪಡೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. "ಯಶಸ್ವಿಯಾದ ಆನ್‌ಲೈನ್ ಪಾವತಿ ಮತ್ತು ಸರಿಯಾದ IRCTC ರುಜುವಾತುಗಳನ್ನು ನಮೂದಿಸಿದ ನಂತರ, ಎಸ್‌ಎಮ್‌ಎಸ್ (SMS) ಮತ್ತು ಇಮೇಲ್‌ನಲ್ಲಿ ಇ-ಟಿಕೆಟನ್ನು ಸ್ವೀಕರಿಸುತ್ತಾರೆ" ಎಂದು IRCTC ಹೇಳಿದೆ.

ಇದನ್ನೂ ಓದಿ: Uttara Kannada: ದಾಂಡೇಲಿ-ಅಳ್ನಾವರ ನಡುವೆ ವಿದ್ಯುತ್‌ ಚಾಲಿತ ರೈಲು ಮಾರ್ಗ

IRCTC ಯಲ್ಲಿ ತತ್ಕಾಲ್ ಬುಕಿಂಗ್ ಎಂದರೇನು ಮತ್ತು ಅದನ್ನು ಹೇಗೆ ಮಾಡಲಾಗುತ್ತದೆ?: ತತ್ಕಾಲ್ ಕೋಟಾದ ಅಡಿಯಲ್ಲಿ ಬುಕ್ ಮಾಡಲಾದ ಟಿಕೆಟ್‌ಗಳು ಕೊನೆಯ ನಿಮಿಷ ಅಥವಾ ತಕ್ಷಣದ ಯೋಜನೆಗಳಿಗೆ ಮೀಸಲಾಗಿದೆ. ಪ್ರಯಾಣಿಕರು ConfirmTkt ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ತತ್ಕಾಲ್ ಬುಕಿಂಗ್ ಏಸಿ  ರೈಲು (AC Coach) ಟಿಕೆಟ್‌ಗಳಿಗೆ 10:00 AM ಮತ್ತು  ಏಸಿ ಅಲ್ಲದ ರೈಲು ಟಿಕೆಟ್‌ಗಳಿಗೆ 11:00 AM ಕ್ಕೆ ಪ್ರಾರಂಭವಾಗುತ್ತದೆ. ಆದರೆ ತತ್ಕಾಲ್ ಟಿಕೆಟ್ ಬುಕ್ ಮಾಡುವ ಮುನ್ನ ಎಚ್ಚರದಿಂದರಬೇಕು. ರೈಲ್ವೆ ನಿಯಮದ ಪ್ರಕಾರ, ನೀವು ಪ್ರಯಾಣಿಸದಿರಲು ನಿರ್ಧರಿಸಿ ಟಿಕೆಟ್‌ ಕ್ಯಾನ್ಸಲ್‌ ಮಾಡಿದರೆ ನೀವು ಯಾವುದೇ ಮರುಪಾವತಿಯನ್ನು ಪಡೆಯುವುದಿಲ್ಲ.

Confirmtkt ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ಸೇವೆಗಳು: ಮೊಬೈಲ್ ಅಪ್ಲಿಕೇಶನ್ ಪ್ರಯಾಣಿಕರಿಗೆ ರೈಲು, ಸೀಟ್ / ಬರ್ತ್ ಲಭ್ಯತೆ, ಮುನ್ಸೂಚನೆಗಳೊಂದಿಗೆ ಪಿಎನ್‌ಆರ್ (PNR) ಸ್ಟೇಟಸ್ ಜೊತೆಗೆ ದೃಢೀಕರಣ ಸಾಧ್ಯತೆಗಳು, ವೇಳಾಪಟ್ಟಿ, ಆಫ್‌ಲೈನ್ ಪ್ರವೇಶ, ಆಸನ ಲಭ್ಯತೆ, ಪರ್ಯಾಯ ಆಯ್ಕೆಗಳು, ನಿಮ್ಮ ಪ್ರಯಾಣಗಳನ್ನು ನಿರ್ವಹಿಸುವುದು, ಶುಲ್ಕ ವಿಚಾರಣೆ ಮತ್ತು ಶುಲ್ಕ ಕ್ಯಾಲ್ಕುಲೇಟರ್‌ದಂತಹ ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. 

ಶತಾಬ್ದಿ ಎಕ್ಸ್‌ಪ್ರೆಸ್, ರಾಜಧಾನಿ, ದುರಂತೋ ಎಕ್ಸ್‌ಪ್ರೆಸ್, ಗರೀಬ್ ರಥ, ಜನ ಶತಾಬ್ದಿ, ಇಂಟರ್-ಸಿಟಿ, ಸೂಪರ್‌ಫಾಸ್ಟ್ ರೈಲುಗಳು, ಡಬಲ್ ಡೆಕ್ಕರ್, ಸಂಪರ್ಕ ಕ್ರಾಂತಿ, ಮೇಲ್ ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಸೇರಿದಂತೆ ಎಲ್ಲಾ ರೀತಿಯ ರೈಲುಗಳ ಬುಕ್ಕಿಂಗ್‌ಗಾಗಿ ಈ ಅಪ್ಲಿಕೇಶನನ್ನು ಬಳಸಬಹುದು.

ಇದನ್ನೂ ಓದಿ: ಪಂಚತಾರಾ ಹೋಟೆಲ್‌ಗಿಂತ ಕಡಿಮೆ ಇಲ್ಲ Ramayan Express, ಇಲ್ಲಿದೆ ನೋಡಿ ಫೋಟೋಸ್!

ConfirmTkt ವಿಶೇಷತೆ:  “ConfirmTkt ನೀವು ಪ್ರಯಾಣ ಮಾಡಲು ಬಯಸುವ ರೈಲು ಪರ್ಯಾಯಗಳೊಂದಿಗೆ ನಿಮ್ಮ ಬೋರ್ಡಿಂಗ್/ಡ್ರಾಪಿಂಗ್ ಪಾಯಿಂಟನ್ನು ಬದಲಾಯಿಸುವ ಮೂಲಕ ನೀವು ದೃಢೀಕೃತ ರೈಲು ಟಿಕೆಟ್‌ಗಳನ್ನು ಕಾಣಬಹುದು ಮತ್ತು ರೈಲು ಟಿಕೆಟ್ ಲಭ್ಯತೆಯು ವೇಯ್ಟ್‌ಲಿಸ್ಟ್‌ನಲ್ಲಿದ್ದರೆ, ದೃಢೀಕೃತ ರೈಲು ಟಿಕೆಟ್ ಪಡೆಯುವ ಅವಕಾಶಗಳನ್ನು ನಾವು ನಿಮಗೆ ತೋರಿಸುತ್ತೇವೆ. ಹಾಗಾಗಿ ಮುನ್ಸೂಚನೆಯ ಸ್ಥಿತಿಯು ಹಸಿರು ಬಣ್ಣದ್ದಾಗಿದ್ದರೆ ಹೋಗಿ ಮತ್ತು ಟಿಕೆಟನ್ನು ಬುಕ್ ಮಾಡಿ" ಎಂದು IRCTC ಹೇಳಿದೆ

ConfirmTkt ಅಪ್ಲಿಕೇಶನ್ ಪಡೆಯುವುದು ಹೇಗೆ?: ಆ್ಯಂಡ್ರಾಯ್ಡ್ ಅಥವಾ ಐಓಎಸ್ ಬಳಕೆದಾರರು ಗೂಗಲ್‌ ಪ್ಲೇ ಸ್ಟೋರ್ ಅಥವಾ ಆಪಲ್‌ ಸ್ಟೋರ್‌ನಿಂದ ConfirmTkt ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು.

IRCTC ರೈಲು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ confirmtkt.com ನಲ್ಲಿ ಬುಕ್ ಮಾಡುವುದು ಹೇಗೆ?

ಹಂತ 1: Confirmtkt.com ಗೆ ಭೇಟಿ ನೀಡಿ

ಹಂತ 2: ಮೂಲ ಮತ್ತು ಗಮ್ಯಸ್ಥಾನ ಕೇಂದ್ರಗಳನ್ನು ಆಯ್ಕೆಮಾಡಿ.

ಹಂತ 3: ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ

ಹಂತ 4: ಮೂಲ ಮತ್ತು ಗಮ್ಯಸ್ಥಾನದಿಂದ ರೈಲುಗಳ ಪಟ್ಟಿಯಿಂದ ರೈಲನ್ನು ಆಯ್ಕೆಮಾಡಿ

ಹಂತ 5: ವರ್ಗವನ್ನು ಆಯ್ಕೆಮಾಡಿ (ಸ್ಲೀಪರ್, 3ನೇ ಎಸಿ ಇತ್ಯಾದಿ)

ಹಂತ 6: ಬೋರ್ಡಿಂಗ್ ಪಾಯಿಂಟ್ ಆಯ್ಕೆಮಾಡಿ

ಹಂತ 7: ಪ್ರಯಾಣಿಕರ ವಿವರಗಳು ಮತ್ತು ಬರ್ತ್ ಆದ್ಯತೆಗಳನ್ನು ನಮೂದಿಸಿ

ಹಂತ 8: ಸಂಪರ್ಕ ವಿವರಗಳನ್ನು ನಮೂದಿಸಿ ಮೊಬೈಲ್ ಮತ್ತು ಇಮೇಲ್ (ಈ ಮೊಬೈಲ್ ಮತ್ತು ಇಮೇಲ್‌ನಲ್ಲಿ ನಿಮ್ಮ ರೈಲು ಟಿಕೆಟ್‌ಗಳನ್ನು ನೀವು ಸ್ವೀಕರಿಸುತ್ತೀರಿ)

ಹಂತ 9: ಇತರ ಪ್ರಾಶಸ್ತ್ಯಗಳನ್ನು ಆಯ್ಕೆಮಾಡಿ (ಬರ್ತನ್ನು ದೃಢೀಕರಿಸಿದರೆ ಮಾತ್ರ ಬುಕ್ ಮಾಡಿ, ಕೆಳಗಿನ ಬರ್ತ್ ಇದ್ದರೆ ಮಾತ್ರ ಬುಕ್ ಮಾಡಿ.)

ಹಂತ 10: ಅನ್ವಯಿಸಿದರೆ GST ವಿವರಗಳನ್ನು ನಮೂದಿಸಿ

ಹಂತ 11: ಯಾವುದೇ ಪಾವತಿ ವಿಧಾನದ ಮೂಲಕ ಪಾವತಿಸಿ.

ಹಂತ 12: ಯಶಸ್ವಿ ಪಾವತಿಯ ನಂತರ ಐಆರ್‌ಟಿಸಿ ರುಜುವಾತುಗಳನ್ನು (IRCTC credentials) ನಮೂದಿಸಿ

ಹಂತ 13: ಸರಿಯಾದ  ಐಆರ್‌ಟಿಸಿ ರುಜುವಾತುಗಳನ್ನು ನಮೂದಿಸಿದ ನಂತರ ನಿಮ್ಮ ಟಿಕೆಟನ್ನು ಬುಕ್ ಮಾಡಲಾಗುವುದು ಮತ್ತು ನಿಮ್ಮ ರೈಲು ಟಿಕೆಟ್ ಬುಕ್ ಮಾಡುವಾಗ ನೀವು ನೀಡಿದ ಇಮೇಲ್ ಮತ್ತು ಮೊಬೈಲ್‌ನಲ್ಲಿ ಟಿಕೇಟನ್ನು ಸ್ವೀಕರಿಸುತ್ತೀರಿ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್