
ನವದೆಹಲಿ: ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಶೀಘ್ರದಲ್ಲಿಯೇ ಹೊಸ ಆಯ್ಕೆಯೊಂದು ಸಿಗಲಿದೆ. ನಿಮಗೆ ಇಷ್ಟವಾಗದ ಯಾವುದೇ ಕಮೆಂಟ್‌ನ್ನು ‘dislike’ ಮಾಡುವ ಅವಕಾಶ ಸಿಗಲಿದೆ. ಈ ಸಂಬಂಧ ಮೇಟಾ ಟೆಸ್ಟಿಂಗ್ ಮಾಡುತ್ತಿದೆ. ಕೆಲ ಬಳಕೆದಾರರು ಕಮೆಂಟ್ ಬಾಕ್ಸ್‌ನಲ್ಲಿ ‘dislike’ಬಟನ್ ಇರೋದನ್ನು ಗಮನಿಸಿ, ಸ್ಕ್ರೀನ್‌ಶಾಟ್ ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದಾದ ಬಳಿಕ ಇನ್‌ಸ್ಟಾಗ್ರಾಂ ‘dislike’ಆಯ್ಕೆ ನೀಡುವ ಕುರಿತು ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಯುತ್ತಿರೋದನ್ನು ದೃಢಪಡಿಸಿದೆ. ಈ‘dislike’ ಬಟನ್ ಫೀಡ್ ಪೋಸ್ಟ್ ಮತ್ತು ರೀಲ್‌ಗಳಲ್ಲಿಯೂ ಸಿಗಲಿದೆ. ಈ ಆಯ್ಕೆ ಮೂಲಕ ಬಳಕೆದಾರರು ತಮ್ಮ ಪೋಸ್ಟ್ ಅಥವಾ ರೀಲ್ಸ್‌ಗೆ ಬರುವ ಕಮೆಂಟ್‌ಗಳು ಅಪ್ರಸ್ತುತ ಎಂದೆನಿಸಿದ್ರೆ ಡೌನ್‌ವೋಟ್ ಅಥವಾ ಡಿಸ್‌ಲೈಕ್ಸ್ ಬಳಸಿಕೊಳ್ಳಬಹುದು.
ಈ ಕುರಿತು ಇನ್‌ಸ್ಟಾಗ್ರಾಂ ಮುಖ್ಯಸ್ಥ ಆಡಮ್ ಮೊಸ್ಸೆರಿ ಅವರು ಥ್ರೆಡ್ಸ್‌ನಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ. ಕಂಪನಿಯು ಡಿಸ್‌ಲೈಕ್ ಮಾಡಿರೋದನನ್ನು ಗೌಪ್ಯವಾಗಿರಿಸುತ್ತದೆ. ಇದರಿಂದ ತಮ್ಮ ಕಮೆಂಟ್‌ಗೆ ಡಿಸ್‌ಲೈಕ್ ಬಂದಿದೆ ಎಂಬುವುದು ಆ ವ್ಯಕ್ತಿಯೂ ಗೊತ್ತಾಗಲ್ಲ. ಆದ್ರೆ ಈ ಡಿಸ್‌ಲೈಕ್‌ಗಳನ್ನು ಎಣಿಕೆ ಮಾಡಲಾಗುತ್ತದೆ ಎಂದು ಆಡಮ್ ಮೊಸ್ಸೆರಿ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ.
ಕಳೆದ ತಿಂಗಳಷ್ಟೇ ಇನ್‌ಸ್ಟಾಗ್ರಾಂ ಬಳಕೆದಾರರಾದ ಅಲೆಸ್ಸಾಂಡ್ರೊ ಪಲುಝಿ ಎಂಬವರು ತಮಗೆ ಡಿಸ್‌ಲೈಕ್ ಆಯ್ಕೆ ಸಿಕ್ಕಿರುವ ಬಗ್ಗೆ ಪೋಸ್ಟ್ ಮಾಡಿಕೊಂಡಿದ್ದರು. ಇದೀಗ ಇನ್‌ಸ್ಟಾಗ್ರಾಂ , ಡಿಸ್‌ಲೈಕ್ ಆಯ್ಕೆ ನೀಡುತ್ತಿರೋದನ್ನು ದೃಢಪಡಿಸಿದೆ. ಈ ಸಂಬಂಧ ನಡೆಯುತ್ತಿರುವ ಪ್ರಾಯೋಗಿಕ ಪರೀಕ್ಷೆ, ಸೀಮಿತ ಬಳಕೆದಾರರೊಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಜನರಿಗೆ ಉತ್ತಮ ಇನ್‌ಸ್ಟಾಗ್ರಾಂ ಸೇವೆ ನೀಡುವುದು ನಮ್ಮ ಗುರಿಯಾಗಿದೆ. ಕಮೆಂಟ್ ವಿಭಾಗದ ಗುಣಮಟ್ಟವನ್ನು ಸುಧಾರಿಸಲು ಈ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಇನ್‌ಸ್ಟಾಗ್ರಾಂ ಹೇಳಿದೆ.
ಇದನ್ನೂ ಓದಿ: ಫೇಸ್‌ಬುಕ್, ಇನ್‌ಸ್ಟಾ ಖಾತೆ ಡಿಲೀಟ್ ಮಾಡಲು ಹಲವರು ಗೂಗಲ್ ಸರ್ಚ್ ಮಾಡುತ್ತಿರುವುದೇಕೆ?
ಈ ಮೂಲಕ ಇನ್‌ಸ್ಟಾಗ್ರಾಂನ್ನು ಮತ್ತಷ್ಟು ಸ್ನೇಹಪರವಾಗಿಸಲು ಈ ಆಯ್ಕೆ ಸಹಾಯ ಮಾಡಬಹುದು ಎಂಬುವುದು ಆಡಮ್ ಮೊಸ್ಸೆರಿ ಅವರ ಬಲವಾದ ನಂಬಿಕೆಯಾಗಿದೆ. ಜನರು ತಮ್ಮ ಇನ್‌ಸ್ಟಾಗ್ರಾಮ್ ಬಳಕೆಯ ಅನುಭವವನ್ನು ಉತ್ತಮವಾಗಿಸಲು ಮತ್ತು ನಿಯಂತ್ರಿಸಲು ಸಹಾಯ ಮಾಡಲು ಈ ಆಯ್ಕೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಇನ್‌ಸ್ಟಾಗ್ರಾಂ ಕೆಲಸ ಮಾಡುತ್ತಿದೆ. ಆರಂಭದ ಪ್ರಾಯೋಗಿಕ ಪರೀಕ್ಷೆ ಬಹಳ ಬಳಕೆದಾರರೊಂದಿಗೆ ನಡೆಯುತ್ತಿದೆ ಎಂದು ಮೇಟಾ ಕಂಪನಿಯ ವಕ್ತಾರರು ಹೇಳಿಕೆ ನೀಡಿದ್ದಾರೆ.
ಹೈಡ್ ಕಮೆಂಟ್
ಕೆಲ ಬಳಕೆದಾರರು ತಮ್ಮ ಪೋಸ್ಟ್‌ಗಳಿಗೆ ಯಾವುದೇ ಕಮೆಂಟ್ ಬರದಂತೆ ಹೈಡ್ ಮಾಡುತ್ತಾರೆ. ವಿಶೇಷವಾಗಿ ಸೆಲಿಬ್ರಿಟಿಗಳು ಈ ಆಯ್ಕೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ನೆಗೆಟಿವ್ ಕಮೆಂಟ್‌ಗಳನ್ನು ನೋಡಲು ಇಷ್ಟಪಡದವರು ಈ ರೀತಿ ಎಲ್ಲಾ ಕಮೆಂಟ್‌ಗಳನ್ನು ಹೈಡ್ ಮಾಡುತ್ತಿರುತ್ತಾರೆ.
ಇದನ್ನೂ ಓದಿ: ಇನ್‌ಸ್ಟಾಗ್ರಾಂನಲ್ಲಿ 10 ಸಾವಿರ ವ್ಯೂವ್ ಬಂದ್ರೆ ಎಷ್ಟು ಸಿಗುತ್ತೆ ಹಣ?
18 ವರ್ಷದೊಳಗಿನವರಿಗೆ ಇನ್‌ಸ್ಟಾಗ್ರಾಂ ಬಳಸಲು ಹೊಸ ನೀತಿ
ಹೆಚ್ಚು ಕಠಿಣವಾದ ಗೌಪ್ಯತೆ ಸೆಟ್ಟಿಂಗ್‌ಗಳು, ವಿಷಯ ಫಿಲ್ಟರ್‌ಗಳು ಮತ್ತು ಪೋಷಕರ ಮೇಲ್ವಿಚಾರಣಾ ಆಯ್ಕೆಗಳೊಂದಿಗೆ, Instagram ಹದಿಹರೆಯದ ಖಾತೆಗಳು 18 ವರ್ಷದೊಳಗಿನ ಬಳಕೆದಾರರಿಗೆ ಅಂತರ್ನಿರ್ಮಿತ ಭದ್ರತಾ ಮುನ್ನೆಚ್ಚರಿಕೆಗಳನ್ನು ನೀಡುತ್ತವೆ. ಹದಿನಾರು ವರ್ಷದೊಳಗಿನ ಬಳಕೆದಾರರನ್ನು ಸ್ವಯಂಚಾಲಿತವಾಗಿ ಅತ್ಯುನ್ನತ ಸುರಕ್ಷತಾ ಸೆಟ್ಟಿಂಗ್‌ಗಳಲ್ಲಿ ಇರಿಸಲಾಗುತ್ತದೆ, ಇದರಲ್ಲಿ ನಿರ್ಬಂಧಿತ ಸಂವಹನಗಳು ಮತ್ತು ವಿಷಯ ಮಿತಿಗಳು ಸೇರಿವೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.