ವ್ಯಾಟ್ಸ್ಆ್ಯಪ್ನಲ್ಲಿ ನಿಮಗೆ ಮೆಸೇಜ್ ಬೀಪ್ ಬಂದ ಬೆನ್ನಲ್ಲೇ ತೆರೆದು ನೋಡಿದಾಗ ಸಂದೇಶ ಡಿಲೀಟ್. ಏನು ಕಳುಹಿಸಿ ಡಿಲೀಟ್ ಮಾಡಿರಬಹುದು? ಎಂದು ಕೆಲ ಹೊತ್ತು ತಲೆಕೆಡಿಸಿಕೊಂಡವರ ಸಂಖ್ಯೆ ಹೆಚ್ಚಿದೆ. ಈಗ ತಲೆಕೆಡಿಸಿಕೊಳ್ಳಬೇಕಿಲ್ಲ. ಡಿಲೀಟ್ ಆಗಿರುವ ಮೆಸೇಜ್ ಕೂಡ ಓದಲು ಸಾಧ್ಯವಿದೆ. ಅದು ಹೇಗೆ? ಇಲ್ಲಿದೆ.
ನವದೆಹಲಿ(ಸೆ.30) ವ್ಯಾಟ್ಸ್ಆ್ಯಪ್ 2017ರಲ್ಲಿ ಡಿಲೀಟ್ ಫಾರ್ ಎವ್ರಿಒನ್(Delete for Everyone) ಫೀಚರ್ ನೀಡಿದೆ. ಈ ಮೂಲಕ ಯಾರಿಗಾದರೂ ತಪ್ಪಿ ಸಂದೇಶ ಕಳುಹಿಸಿದರೆ, ಸಂದೇಶದಲ್ಲಿ ತಪ್ಪಿದ್ದರೆ, ಡಿಲೀಟ್ ಮಾಡುವ ಅವಕಾಶ ನೀಡಿದೆ. ಆದರೆ ಇದೇ ಡಿಲೀಟ್ ಫಾರ್ ಎವ್ರಿವನ್ ಫೀಚರ್ಸ್ ಕೆಲವರಿಗೆ ಕಿರಿಕಿರಿ ತಂದಿದ್ದು ಇದೆ. ಹಲವರು ಏನು ಕಳುಹಿಸಿರಬಹುದು ಎಂದು ತಲೆಕೆಡಿಸಿಕೊಂಡ ಘಟನೆಗಳು ಇವೆ, ಏನು ಕಳುಹಿಸಲಾಗಿದೆ, ಹೇಳಿಬಿಡು ಎಂದು ಗೊಗೆರೆದ ಉದಾಹರಣೆಗಳೂ ಇವೆ. ಇದೀಗ ಡಿಲೀಟ್ ಮೆಸೇಜ್‌ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ವ್ಯಾಟ್ಸ್‌ಆ್ಯಪ್‌ನಲ್ಲಿ ಡಿಲೀಟ್ ಆಗಿರುವ ಮೆಸೇಜ್‌ಗಳನ್ನು ಮತ್ತೆ ಓದಲು ಸಾಧ್ಯವಿದೆ.
ವ್ಯಾಟ್ಸ್ಆ್ಯಪ್‌ನಲ್ಲಿ ಬಂದ ಸಂದೇಶ ನೀವು ಓದುವ ಮೊದಲೇ ಡಿಲೀಟ್ ಆಗಿದೆ ಎಂದು ಬೇಸರಗೊಳ್ಳುವ ಅಗತ್ಯವಿಲ್ಲ. ಡಿಲೀಟ್ ಮೆಸೇಜ್ ರಿಟ್ರೀವ್ ಮಾಡಿ ಓದಲು ಸಾಧ್ಯವಿದೆ. ಆದರೆ ಈ ಅವಕಾಶ ಕೇವಲ ಆ್ಯಂಡಾಯ್ಡ್ ಫೋನ್ ಬಳಕೆದಾರರಿಗೆ ಮಾತ್ರ ಸಾಧ್ಯ. ವ್ಯಾಟ್ಸ್ಆ್ಯಪ್‌ನಲ್ಲಿ ಡಿಲೀಟ್ ಮೆಸೇಜ್ ಓದಲು ಯಾವುದೇ ಫೀಚರ್ ಇಲ್ಲ. ಇದಕ್ಕೆ ಇತರ ಕೆಲ ಆ್ಯಪ್ ನೆರವು ಪಡೆಯಬೇಕು. ಹೀಗಾಗಿ ಗೂಗಲ್ ಪ್ಲೇಸ್ಟೋರ್‌ನಲ್ಲಿರುವ ಕೆಲ ಆ್ಯಪ್‌ಗಳಲ್ಲಿ ಅತ್ಯುತ್ತಮ ಆ್ಯಪ್ ಆಯ್ಕೆ ಮಾಡಿಕೊಂಡು ಡಿಲೀಟ್ ಮೆಸೇಜ್ ಓದಲು ಸಾಧ್ಯವಿದೆ. ಐಫೋನ್ ಬಳಕೆದಾರರಿಗೆ ಈ ಅವಕಾಶವಿಲ್ಲ. ಸುಲಭ ವಿಧಾನದ ಮೂಲಕ ವ್ಯಾಟ್ಸ್ಆ್ಯಪ್ ಡಿಲೀಟ್ ಮೆಸೇಜ್ ಓದಲು ಇಲ್ಲಿದೆ ಸಿಂಪಲ್ ಟಿಪ್ಸ್
ಈ ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಅ.24ರಿಂದ WhatsApp ಕೆಲಸ ಮಾಡಲ್ಲ, ಇಲ್ಲಿದೆ ಲಿಸ್ಟ್!
ಗರಿಷ್ಠ ಫಾಲೋವರ್ಸ್ ಪಡೆದ ವಿಶ್ವನಾಯಕ, ವ್ಯಾಟ್ಸ್ಆ್ಯಪ್ ಚಾನೆಲ್‌ನಲ್ಲಿ ಮೋದಿಗೆ 5 ಮಿಲಿಯನ್ ಹಿಂಬಾಲಕರು!
ಇದನ್ನು ಹೊರತುಪಡಿಸಿದರೆ ವ್ಯಾಟ್ಸ್ಆ್ಯಪ್ ನೋಟಿಫೀಕೆಶನ್‌ನಲ್ಲೂ ಡಿಲೀಟ್ ಮೆಸೇಜ್ ಓದಲು ಸಾಧ್ಯವಿದೆ. ಆದರೆ ನೋಟಿಫಿಕೇಶನ್‌ನಲ್ಲಿ ಸಂಪೂರ್ಣ ಮೆಸೇಜ್ ಓದಲು ಸಾಧ್ಯವಿಲ್ಲ. ಇನ್ನು ನೋಟಿಫಿಕೇಶನ್ ಕ್ಲಿಕ್ ಮಾಡಿದರೆ ವ್ಯಾಟ್ಸ್ಆ್ಯಪ್ ತೆರೆದುಕೊಳ್ಳಲಿದೆ. ಬಳಿಕ ಈ ಡಿಲೀಟ್ ಮೆಸೇಜ್ ಓದಲು ಸಾಧ್ಯವಿಲ್ಲ.