X ಗ್ರಾಹಕರಿಗೆ ಮತ್ತೊಂದು ಬಂಪರ್, ಗೂಗಲ್ ಪೇ ರೀತಿ ಡಿಜಿಟಲ್ ಪೇಮೆಂಟ್ ಘೋಷಿಸಿದ ಮಸ್ಕ್!

By Suvarna News  |  First Published Sep 21, 2023, 4:31 PM IST

ಎಲಾನ್ ಮಸ್ಕ್ X(ಟ್ವಿಟರ್) ಈಗಾಗಲೇ ಹಲವು ಫೀಚರ್ ಪರಿಚಯಿಸಿದೆ. ಇತ್ತೀಚೆಗೆ ವಿಡಿಯೋ ಕಾಲ್ ಫೀಚರ್ ಕೂಡ ಘೋಷಿಸಿದೆ. ಇದೀಗ ಡಿಜಿಟಲ್ ಪೇಮೆಂಟ್ ಫೀಚರ್ ಶೀಘ್ರದಲ್ಲೆ X ಬಳಕೆದಾರರಿಗೆ ಲಭ್ಯವಾಗಲಿದೆ. ಹೊಸ ಫೀಚರ್ ಬಳಕೆ ಹೇಗೆ?
 


ನವದೆಹಲಿ(ಸೆ.21)ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿದ್ದ  X(ಟ್ವಿಟರ್) ಇದೀಗ ಕೇವಲ ಸಾಮಾಜಿಕ ಮಾಧ್ಯಮವಾಗಿ ಉಳಿದುಕೊಂಡಿಲ್ಲ. ಪದಗಳ ಸಂದೇಶ, ವಿಡಿಯೋ, ಫೋಟೋ ಹಂಚಿಕೊಳ್ಳುವುದಕ್ಕಿಂತಲೂ ಇದೀಗ ಬ್ಯೂಸಿನೆಸ್ ಪ್ಲಾಟ್‌ಫಾರ್ಮ್ ಆಗಿರುವ X ಹೊಸ ಹೊಸ ಫೀಚರ್ ಜಾರಿಗೊಳಿಸುತ್ತಿದೆ. ಅದರಲ್ಲೂ  ಉದ್ಯಮಿ ಎಲಾನ್ ಮಸ್ಕ್  X(ಟ್ವಿಟರ್) ಖರೀದಿಸಿದ ಬಳಿಕ ಹಲವು ಮಹತ್ವದ ಬದಲಾವಣೆ ಮಾಡಿದ್ದಾರೆ. ಹೊಸ ಫೀಚರ್ ಕೂಡ ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ಎಲಾನ್ ಮಸ್ಕ್,  X ಬಳಕೆದಾರರಿಗೆ ವಿಡಿಯೋ ಕಾಲ್ ಫೀಚರ್ ಘೋಷಿಸಿದ್ದರು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಎಲಾನ್ ಮಸ್ಕ್ ಗೂಗಲ್ ಪೇ, ಫೋನ್‌ಪೇ ರೀತಿ ಹಣ ಪಾವತಿ ಫೀಚರ್ ಘೋಷಿಸಿದ್ದಾರೆ. 

ಟ್ವಿಟರ್ ಸಿಇಒ ಲಿಂಡಾ ಯಕಾರಿನೋ ಡಿಜಿಟಲ್ ಪೇಮೆಂಟ್ ಕುರಿತ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ X ಹೊಸ ಫೀಚರ್ ಕುರಿತು ಸುಳಿವು ನೀಡಿದ್ದಾರೆ. ಶೀಘ್ರದಲ್ಲೇ ಟ್ವಿಟರ್ ಗೂಗಲ್ ಪೇ ರೀತಿಯಲ್ಲಿ ಡಿಜಿಟಲ್ ಪೇಮೆಂಟ್ ಫೀಚರ್ ಆರಂಭಿಸುವ ಮುನ್ಸೂಚನೆ ನೀಡಿದ್ದಾರೆ. ಟ್ವಿಟರ್ ಬಳಕೆದಾರರು ಯಾವುದೇ ಫೋನ್ ನಂಬರ್ ಸಹಾಯವಿಲ್ಲದೆ ಡಿಜಿಟಲ್ ಪೇಮೆಂಟ್ ಮಾಡಲು ಸಾಧ್ಯವಿದೆ.

Tap to resize

Latest Videos

 

ಟ್ವೀಟರ್‌ ಬಳಸುವ ಎಲ್ಲರಿಗೂ ಶುಲ್ಕ: ಎಲಾನ್‌ ಮಸ್ಕ್‌ ಸುಳಿವು

ಹೊಸ ಡಿಜಿಟಲ್ ಪೇಮೆಂಟ್ ಫೀಚರ್ ವೇಳೆ X(ಟ್ವಿಟರ್)ಬಳಕೆದಾರರಿ ಸ್ಕ್ಯಾನ್ ಆಯ್ಕೆ, ಸೆಂಡ್ ಮನಿ ಸೇರಿದಂತೆ ಹಲವು ಆಯ್ಕೆಗಳನ್ನು ನೀಡಲಾಗುತ್ತದೆ. ನಿಮ್ಮ X(ಟ್ವಿಟರ್)ಖಾತೆಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿಕೊಳ್ಳಬೇಕು. ಬಳಿಕ ಟ್ವಿಟರ್ ಬಳಕೆದಾರರು ಅಥವಾ ಸ್ಕ್ಯಾನ್ ಮೂಲಕ ಹಣ ಪಾವತಿಗೆ ಅಥವಾ ಟ್ರಾನ್ಸಾಕ್ಷನ್ ಮಾಡಲು ಸಾಧ್ಯವಾಗಲಿದೆ.

X(ಟ್ವಿಟರ್) ಈಗಾಗಲೇ ಹತ್ತು ಹಲವು ಫೀಚರ್ಸ್ ನೀಡಿದೆ. ಈಗಾಗಲೇ ಎಕ್ಸ್‌ ಬಳಕೆದಾರರು ತಮ್ಮ ಖಾತೆಯಿಂದ ತಮ್ಮ ಟ್ವೀಟರ್‌ ಕ್ಯಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇರುವ ವ್ಯಕ್ತಿಗಳಿಗೆ ಆಡಿಯೋ ಮತ್ತು ವಿಡಿಯೋ ಕರೆ ನೀಡುವ ಸೌಲಭ್ಯ ಘೋಷಿಸಿದ್ದಾರೆ.  ‘ಎಕ್ಸ್‌ನಲ್ಲಿ ವಿಡಿಯೋ ಮತ್ತು ಆಡಿಯೋ ಕರೆಗಳು ಬರಲಿವೆ. ಇದು ಐಒಎಸ್‌, ಆ್ಯಂಡ್ರಾಯ್ಡ್‌, ಮ್ಯಾಕ್‌ ಮತ್ತು ಕಂಪ್ಯೂಟರ್‌ಗಳಲ್ಲೂ ಸಹ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಯಾವುದೇ ಫೋನ್‌ ನಂಬರ್‌ನ ಅಗತ್ಯವಿರುವುದಿಲ್ಲ. ಎಕ್ಸ್‌ ಪರಿಣಾಮಕಾರಿ ಜಾಗತಿಕ ಅಡ್ರೆಸ್‌ ಬುಕ್‌ ಆಗಿರಲಿದೆ’ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. 

ಕಾರ್ಪೊರೇಟ್ ಸಂಸ್ಕೃತಿಗೆ ಒಗ್ಗದ ಭಾರತದ ಪರಾಗ್‌ ಟ್ವೀಟರ್ CEO ಸ್ಥಾನದಿಂದ ವಜಾ: ಎಲಾನ್‌ ಮಸ್ಕ್

ಆದರೆ ಈ ಸೇವೆ ನಿರ್ದಿಷ್ಟವಾಗಿ ಯಾವಾಗ ಆರಂಭ ಎಂಬುದರ ಕುರಿತು ಕಂಪನಿ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೆ, ಕರೆಯನ್ನು ಪರಸ್ಪರ ಫಾಲೋ ಮಾಡುವವರು ಮಾತ್ರ ಮಾಡಬಹುದೋ ಅಥವಾ ಫಾಲೋ ಮಾಡದೇ ಹೋದರೂ ಮಾಡಬಹುದೋ ಎಂಬ ಮಾಹಿತಿಯನ್ನು ‘ಎಕ್ಸ್‌’ ನೀಡಿಲ್ಲ.ಈ ಹೊಸ ಸೇವೆಯನ್ನು ಡಿಎಂ (ಡೈರೆಕ್ಟ್)ನಲ್ಲೇ ಒದಗಿಸುವ ಸಾಧ್ಯತೆ ಇದೆ. ವಿಡಿಯೋ ಕರೆ ಮಾಡುವ ಅವಕಾಶವನ್ನು ಎಕ್ಸ್‌ ಆ್ಯಪ್‌ನ ಬಲ ಮೇಲ್ಬಾಗದ ತುದಿಯಲ್ಲಿ ಇರಿಸಲಾಗುತ್ತದೆ. ಇದೇ ರೀತಿಯ ಕರೆ ಮಾಡಲು ಫೇಸ್‌ಬುಕ್‌ ಮೆಸೆಂಜರ್‌ ಮತ್ತು ವಾಟ್ಸಾಪ್‌ ನೀಡುವ ರೀತಿಯಲ್ಲೇ ಡಿಎಂ ಮೆನು ಇರಲಿದೆ ಎಂದು ವರದಿಗಳು ತಿಳಿಸಿವೆ.

click me!