Google Meetನಲ್ಲಿ ಬ್ರೇಕೌಟ್ ರೂಮ್ ಸೃಷ್ಟಿಸುವುದು ಹೇಗೆ?

Suvarna News   | Asianet News
Published : Oct 15, 2020, 05:17 PM IST
Google Meetನಲ್ಲಿ ಬ್ರೇಕೌಟ್ ರೂಮ್ ಸೃಷ್ಟಿಸುವುದು ಹೇಗೆ?

ಸಾರಾಂಶ

ಸದ್ಯ ಗೂಗಲ್‌ ಮೀಟ್‌ನಲ್ಲಿ ನೀವು 100ರವರೆಗೂ ಬ್ರೇಕೌಟ್ ರೂಮ್ಸ್ ಸೃಷ್ಟಿಸಬಹುದು. ಶಿಕ್ಷಕರು ಮತ್ತು ಎಜುಕೇಟರ್‌ಗಳಿಗೆ ಮಾತ್ರವೇ ಈ ಫೀಚರ್ ಸೌಲಭ್ಯವಿದೆ.

ಗೂಗಲ್ ಮೀಟ್ ವಿಡಿಯೋ ಕಾನ್ಫರೆನ್ಸಿಂಗ್ ಆ್ಯಪ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಳಕೆಯಲ್ಲಿದೆ. ಮನೆಯಿಂದ ಕೆಲಸ ಮಾಡುವವರು ಮತ್ತು ಆನ್‌ಕ್ಲಾಸ್‌ಗಳಿಗಾಗಿ ಈ ಆ್ಯಪ್ ಅನ್ನು ಹೆಚ್ಚಾಗಿ ಬಳಸಲಾಗುತ್ತಿದೆ.

ಇದೀಗ ಗೂಗಲ್ ಮೀಟ್ ಆ್ಯಪ್ ಅನ್ನು ಇನ್ನಷ್ಟು ಪರಿಣಾಮಕಾರಿಗೊಳಿಸುವ ನಿಟ್ಟಿನಲ್ಲಿ ಗೂಗಲ್, ಬ್ರೇಕ್‌ಔಟ್ ರೂಮ್ಸ್(Breakout Rooms) ಎಂಬ ಫೀಚರ್ ಅನ್ನು ಸೇರಿಸುತ್ತಿದೆ. ಆದರೆ, ಫೀಚರ್‌ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲೂ ಲಭ್ಯವಿಲ್ಲ. ಬದಲಿಗೆ ಜಿ ಸೂಟ್‌ನಲ್ಲಿ ಮಾತ್ರ ದೊರೆಯಲಿದ್ದು, ಅದು ಶಿಕ್ಷಣ ಉದ್ದೇಶಕ್ಕಾಗಿ ಮಾತ್ರ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಇತರ ಎಲ್ಲ ಉದ್ದೇಶಕ್ಕೆ ಈ ವೈಶಿಷ್ಟ್ಯದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. 

ಬ್ರೇಕ್‌ಔಟ್ ರೂಮ್ ಎಂದರೇನು?
ಗೂಗಲ್ ಬ್ಲಾಗ್ ಪೋಸ್ಟ್ ಪ್ರಕಾರ, ಈ ಬ್ರೇಕ್‌ಔಟ್ ರೂಮ್ ಫೀಚರ್‌ನಿಂದಾಗಿ ಶಿಕ್ಷಕರು ಮತ್ತು ಎಜುಕೇಟರ್ಸ್‌ ಅವರು ತಮ್ಮ ಕ್ಲಾಸ್‌ಗಳನ್ನು ಸಣ್ಣ ಸಣ್ಣ ಗುಂಪುಗಳಾಗಿ ವಿಂಗಡಿಸಬಹುದು. ಅದು ಪ್ರಾಜೆಕ್ಟ್ ಅಥವಾ ವಿಷಯಾಧರಿತ ಚರ್ಚೆಗಳ ಆಧಾರನ್ವಯ ಮಾಡಬಹುದು.

ಒಂದು ಸಿಂಗಲ್‌ ಕಾಲ್‌ನಲ್ಲೇ ನೀವು 100 ಬ್ರೇಕ್‌ಔಟ್‌ ರೂಮ್‌ಗಳನ್ನು ಕ್ರಿಯೆಟ್ ಮಾಡಲು ಗೂಗಲ್ ಅವಕಾಶ ಕಲ್ಪಿಸಿಕೊಡುತ್ತದೆ. ಒಮ್ಮೆ ಎಷ್ಟು ಬ್ರೇಕ್‌ಔಟ್ ರೂಮ್ಸ್ ಬೇಕು ಎಂದ ನಿರ್ಧರಿಸಿದರೆ, ಗೂಗಲ್ ತಾನಾಗೇ ರಾಂಡಮ್ ಆಗಿ ಜರನ್ನು ರೂಮ್ಸ್‌ ಗಳಲ್ಲಿ ವಿಂಗಡಿಸುತ್ತದೆ. ಆದರೆ, ಒಂದೊಮ್ಮೆ ಮತ್ತೆ ಜನರನ್ನು ಸೇರಿಸಬೇಕಿದ್ದರೆ ಮಾಡರೇಟರ್‌ಗಳು ಮ್ಯಾನುವಲ್ ಆಗಿ ಅಂಥ ಸದಸ್ಯರನ್ನು ಸೇರಿಸಬಹುದು. ಜೊತೆಗೆ, ಮೀಟಿಂಗ್ ಮಾಡರೇಟರ್‌ಗಳು ಗುಂಪುಗಳನ್ನು ಪರಿಶೀಲಿಸಲು ರೂಮ್‌ನಿಂದ ರೂಮ್‌ಗೆ ಹೋಗಬಹುದು.

ಗೂಗಲ್ ಮೀಟ್‌ನ ಬ್ಯಾಕ್ ಗ್ರೌಂಡ್ ವಾಯ್ಸ್ ಕಡಿಮೆ ಮಾಡೋದು ಹೇಗೆ?

ಶೀಘ್ರದಲ್ಲೇ ಎಲ್ಲರಿಗೂ ಲಭ್ಯ
ಗೂಗಲ್ ಮೀಟ್‌ನ ಈ ಬ್ರೇಕ್‌ಔಟ್ ರೂಮ್ ಫೀಚರ್ ಎಲ್ಲರೂ ಬಳಸಿ  ಪ್ರಯತ್ನಿಸಬಹುದು. ಆದರೆ, ಸದ್ಯಕ್ಕೆ ಅದು ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ದೊರೆಯುತ್ತಿದೆ. ಅಂದರೆ, ನೀವು ಶಿಕ್ಷಣ ಗ್ರಾಹಕರು ಅಥವಾ ಅದಕ್ಕೆ ಸಂಬಂಧಿಸಿದವರು ಅಲ್ಲದಿದ್ದರೂ ಶೀಘ್ರದಲ್ಲೇ ಬಳಸಲು ಸಾಧ್ಯವಾಗಲಿದೆ. ಈ ಫೀಚರ್ ಇತರ ಜಿ ಸೂಟ್ ಮತ್ತು ಗೂಗಲ್ ವರ್ಕ್‌ಪ್ಲೇಸ್ ಎಡಿಷನ್‌ಗಳಿಗೂ ಈ ವರ್ಷಾಂತ್ಯಕ್ಕೆ ಬರಲಿದೆ ಎಂಬುದು ಗೂಗಲ್‌ನ ಅಭಿಮತವಾಗಿದೆ. ಗೂಗಲ್ ವರ್ಕ್‌ಪ್ಲೇಸ್ ಬಗ್ಗೆ ನೀವು ಅಷ್ಟೇನೂ ಕೇಳಿರಕ್ಕಿಲ್ಲ. ಆದರೆ, ಇದು ಇತ್ತೀಚಿಗೆ ಜಿ  ಸೂಟ್‌ನ ಮರು ಬ್ರಾಂಡಿಂಗ್ ಆಗಿದೆ.  ಹಾಗಾಗಿ, ಶಿಕ್ಷಣ ಮತ್ತು ಲಾಭೋದ್ದೇಶವಲ್ಲದ ಜಿ ಸೂಟ್‌ ಬ್ರಾಂಡಿಂಗ್‌ ಸದ್ಯಕ್ಕೆ ಗಮನ ಸೆಳೆಯುತ್ತಿದೆ.

ಝೂಮ್‌ನಿಂದ ಸೌಲಭ್ಯ
ಬ್ರೇಕ್‌ಔಟ್ ರೂಮ್ ಸೌಲಭ್ಯವನ್ನು ಗೂಗಲ್‌ನ ಎದುರಾಳಿ ಝೂಮ್ ಈಗಾಗಲೇ ತನ್ನ ಬಳಕೆದಾರರಿಗೆ ನೀಡುತ್ತಿದೆ. ಹಾಗಾಗಿ, ಈ ವಿಷಯದಲ್ಲಿ ಎದುರಾಳಿಯನ್ನು ಹಿಮ್ಮೆಟ್ಟಿಸಲು ಗೂಗಲ್ ಈ ಹೊಸ ಫೀಚರ್ ಅನ್ನು ಅಳವಡಿಸುತ್ತಿದೆ. ವಿಶೇಷ  ಎಂದರೆ, ಝೂಮ್‌ ಬಳಕೆದಾರರು ಕೇವಲ 50 ಬ್ರೇಕ್‌ಔಟ್ ರೂಮ್‌ಗಳನ್ನು ಮಾಡಬಹುದು. ಆದರೆ, ಗೂಗಲ್ ಈ ಸೇವೆಯನ್ನು 100ರವರೆಗೂ ನೀಡುತ್ತಿದೆ. ಹಾಗಾಗಿ, ಈ ವಿಷಯದಲ್ಲಿ ಝೂಮ್‌ಗಿಂತ ಗೂಗಲ್ ಹೆಚ್ಚಿನ ಬಳಕೆದಾರರನ್ನು ತಲುಪಬಹುದು ಹಾಗೂ ಅವರ ಅಗತ್ಯಗಳನ್ನು ಪೂರೈಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. 

ಝೂಮ್ ಮೀಟಿಂಗ್ ವೇಳೆ ಕಾರ್ಯದರ್ಶಿಯೊಂದಿಗೆ ಅಧಿಕಾರಿ ರಾಸಲೀಲೆ

ಬ್ರೇಕ್‌ಔಟ್ ರೂಮ್ ಕ್ರಿಯೆಟ್ ಮಾಡುವುದು ಹೇಗೆ?
- ನಿಮ್ಮ ಕಂಪ್ಯೂಟರ್‌ನಲ್ಲಿ ವಿಡಿಯೋ ಕಾಲ್ ಶುರು ಮಾಡಿ.
- ಸ್ಕ್ರೀನ್‌ನ ಮೇಲ್ತುದಿಯ  ಬಲಬದಿಯ ಆಕ್ಟಿವಿಟಿಸ್ ಮೇಲೆ ಕ್ಲಿಕ್ ಮಾಡಿ ಬ್ರಿಕ್‌ಔಟ್ ರೂಮ್ಸ್‌ಗೆ ಹೋಗಿ.
- ಬ್ರೇಕ್‌ಔಟ್ ರೂಮ್ಸ್ ಪ್ಯಾನೆಲ್‌ನಲ್ಲಿ ಬ್ರೇಕ್‌ಔಟ್ ರೂಮ್ಸ್ ಎಷ್ಟು ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ನೀವು 100ರವರೆಗೆ ಬ್ರೇಕ್‌ಔಟ್ ರೂಮ್ಸ್ ಕ್ರಿಯೇಟ್ ಮಾಡಬಹುದು.
- ಕರೆ ಮಾಡಿದ ಪಾರ್ಟಿಸಿಪೆಂಟ್ಸ್ ರಾಂಡಮ್ ಆಗಿ ಮತ್ತು ಸಮಾನಂತರವಾಗಿ ರೂಮ್‌ಗಳ ನಡುವೆ ವಿಂಗಣೆಯಾಗುತ್ತಾರೆ.
- ಇಷ್ಟಾಗಿಯೂ ನೀವು ಮ್ಯಾನುವಲ್ ಆಗಿಯೂ ಸದಸ್ಯರನ್ನು ರೂಮ್‌ಗಳಿಗೆ ಸೇರಿಸಬಹುದು. 
- ಅಥವಾ ಪಾರ್ಟಿಸಿಪೆಂಟ್ಸ್ ಹೆಸರನ್ನು ನಮೂದಿಸಿ. ಬಳಿಕ ಪಾರ್ಟಿಸಿಪೆಂಟ್ ಹೆಸರಿನ ಮೇಲೆ ಕ್ಲಿಕ್ ಮಾಡಿ, ಮೌಸ್ ಅನ್ನು ಹಿಡಿದಿಟ್ಟುಕೊಂಡು ಕೆಳಗೆ ಡ್ರ್ಯಾಗ್ ಮಾಡಿ, ಮತ್ತೊಂದು ಬ್ರೇಕ್‌ಔಟ್‌ ರೂಮ್‌ನಲ್ಲಿ ಬಿಟ್ಟು ಬಿಡಿ.
- ಗುಂಪುಗಳನ್ನು ರಾಂಡಮ್ ಆಗಿ ವಿಂಗಡಿಸಲು ಅಲ್ಲಿರುವ ಶಫಲ್ ಮೇಲೆ ಕ್ಲಿಕ್ ಮಾಡಿ
- ಬಳಿಕ ಕೆಳತುದಿಯ ಬಲಬದಿಯಲ್ಲಿರುವ ಕ್ರಿಯೇಟ್ ಮೇಲೆ ಕ್ಲಿಕ್ ಮಾಡಿ.

ಮಗುವಿನ ಆನ್‌ಲೈನ್ ಕ್ಲಾಸ್ ವೇಳೆ ಬೆತ್ತಲೆ ತಾಯಿ ಪ್ರತ್ಯಕ್ಷ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್