ವ್ಯಾಟ್ಸಾಪ್‌ನಲ್ಲಿದೆ ವಾಯ್ಸ್ ರೀತಿ ರಿಯಲ್ ಟೈಮ್ ವಿಡಿಯೋ ಮೆಸೇಜ್, ಬಳಸುವುದು ಹೇಗೆ?

By Chethan Kumar  |  First Published Oct 11, 2024, 11:16 AM IST

ವ್ಯಾಟ್ಸಾಪ್‌ನಲ್ಲಿ ಹಲವು ಫೀಚರ್ಸ್ ಲಭ್ಯವಿದೆ. ಹೆಚ್ಚಿನವರು ತಮಗೆ ಇಷ್ಟವಾದ, ಅವಶ್ಯಕತೆ ಅನುಗುಣವಾಗಿ ಫೀಚರ್ಸ್ ಬಳಸುತ್ತಾರೆ. ಬಹುತೇಕ ಫೀಚರ್ ಟತಚ್ ಕೂಡ ಮಾಡುವುದಿಲ್ಲ. ಹೀಗೆ ವ್ಯಾಟ್ಸಾಪ್‌ನಲ್ಲಿ ವಾಯ್ಸ್ ಚಾಟ್ ರೀತಿ, ರಿಯಲ್ ಟೈಮ್ ವಿಡಿಯೋ ಮೆಸೇಜ್ ಫೀಚರ್ಸ್ ಲಭ್ಯವಿದೆ. ಈ ಫೀಚರ್ ಉಪಯೋಗ, ಬಳಸುವುದು ಹೇಗೆ?


ನವದೆಹಲಿ(ಅ.11) ವ್ಯಾಟ್ಸ್ಆ್ಯಪ್ ಅಪ್‌ಡೇಟ್ ಆಗುತ್ತಲೇ ಇರುತ್ತದೆ. ಹೊಸ ಹೊಸ ಫೀಚರ್ಸ್ ಪರಿಚಯ ಮಾಡುತ್ತಾ, ಬಳಕೆದಾರರಿಗೆ ಮತ್ತಷ್ಟು ಅನುಕೂಲ ಹಾಗೂ ಫೀಚರ್ಸ್ ಲಭ್ಯವಾಗುವಂತೆ ಮಾಡಿದ್ದಾರೆ. ಈಗಾಗಲೇ ಎಐ ಫೀಚರ್ ಸೇರಿದಂತೆ ಹಲವು ಅಪ್‌ಡೇಟೆಡ್ ಫೀಚರ್ಸ್ ವ್ಯಾಟ್ಸ್ಆ್ಯಪ್‌ನಲ್ಲಿ ಲಭ್ಯವಿದೆ. ವ್ಯಾಟ್ಸ್ಆ್ಯಪ್‌ನಲ್ಲಿರುವ ಅಷ್ಟು ಫೀಚರ್ ಪೈಕಿ ಬಳಕೆದಾರರು ಎಲ್ಲವನ್ನೂ ಬಳಸುವುದಿಲ್ಲ. ತಮಗೆ ಅವಶ್ಯಕತೆ ಇರುವ, ಗೊತ್ತಿರುವ ಫೀಚರ್ಸ್ ಮಾತ್ರ ಬಳಕೆ ಮಾಡುತ್ತಾರೆ. ಕೆಲ ಫೀಚರ್ಸ್ ಬಳಕೆ ಮಾಡಬೇಕು ಎಂದಿದ್ದರೂ ಹೆಚ್ಚಿನ ಮಾಹಿತಿ ಇಲ್ಲದ ಕಾರಣ, ಗೊತ್ತಿಲ್ಲದ ಕಾರಣ ಸೌಲಭ್ಯ ಬಳಸುವುದಿಲ್ಲ. ಈ ಪೈಕಿ ರಿಯಲ್ ಟೈಮ್ ವಿಡಿಯೋ ಮೆಸೇಜ್ ಕೂಡ ಒಂದು.

ವ್ಯಾಟ್ಸ್ಆ್ಯಪ್ ಚಾಟ್ ಎಲ್ಲರೂ ಮಾಡುತ್ತಾರೆ. ಕೆಲವು ಬಾರಿ ವಾಯ್ಸ್ ಮೆಸೇಜ್ ಕೂಡ ಕಳುಹಿಸುತ್ತಾರೆ. ಅಗತ್ಯ ಬಿದ್ದಾಗ ವಾಯ್ಸ್ ಮೆಸೇಜ್ ಕಳುಹಿಸುತ್ತಾರೆ. ಚಾಟ್ ಹಾಗೂ ವಾಯ್ಸ್ ಮೆಸೇಜ್ ಬಳಕೆ ಬಹುತೇಕರಿಗೆ ತಿಳಿದಿದೆ. ಬಹುತೇಕರು ಬಳಸಿದ್ದಾರೆ. ಆದರೆ ವಾಯ್ಸ್ ಮೆಸೇಜ್ ರೀತಿ, ರಿಯಲ್ ಟೈಮ್ ವಿಡಿಯೋ ಮೆಸೇಜ್ ಫೀಚರ್ ವ್ಯಾಟ್ಸ್ಆ್ಯಪ್‌ನಲ್ಲಿ ಲಭ್ಯವಿದೆ.

Latest Videos

undefined

ನೀವು ವ್ಯಾಟ್ಸಾಪ್ ಪ್ರೈವೈಸಿ ಕಾಪಾಡಿಕೊಂಡಿದ್ದೀರಾ? ಖಾತೆ ಸುರಕ್ಷಿತವಾಗಿಡಲು ಇಲ್ಲಿದೆ 5 ಟಿಪ್ಸ್!

ಇದು ವಾಯ್ಸ್ ರೀತಿ ವಿಡಿಯೋ ಮೂಲಕ ಮೆಸೇಜ್ ಮಾಡುವುದು. 60 ಸೆಕೆಂಡ್ ವಿಡಿಯೋಗಳನ್ನು ಮೆಸೇಜ್‌ಗಳನ್ನು ಈ ರೀತಿ ಕಳುಹಿಸಬಹುದು. ವ್ಯಾಟ್ಸ್ಆ್ಯಪ್ ಚಾಟ್ ಬಾಕ್ಸ್ ಬಲ ಭಾಗದಲ್ಲಿ ಡಾಕ್ಯುಮೆಂಟ್ ಅಥವಾ ಫೈಲ್ ಅಟ್ಯಾಚ್‌ಮೆಂಟ್ ಆಯ್ಕೆ, ಪಾವತಿ ಆಯ್ಕೆ, ಕ್ಯಾಮೆರಾ ಹಾಗೂ ವಾಯ್ಸ್ ರೆಕಾರ್ಡರ್ ಆಯ್ಕೆ ಲಭ್ಯವಿದೆ. ವಾಯ್ಸ್ ಮೆಸೇಜ್ ಮಾಡಲು ವಾಯ್ಸ್ ರೆಕಾರ್ಡರ್ ಪ್ರೆಸ್ ಮಾಡಿ ಹಿಡಿದು ಧ್ವನಿ ಮೂಲಕ ಸಂದೇಶ ಕಳುಹಿಸುತ್ತೇವೆ. ಇದೇ ರೀತಿ ಚಾಟ್ ಬಾಕ್ಸ್ ಪಕ್ಕದಲ್ಲಿರುವ ಕ್ಯಾಮೆರಾ ಬಟನ್ ಪ್ರೆಸ್ ಮಾಡಿ ಹಿಡಿದರೆ ಗರಿಷ್ಠ 60 ಸೆಕೆಂಡ್ ವಿಡಿಯೋ ರೆಕಾರ್ಡ್ ಮಾಡಲು ಸಾಧ್ಯವಿದೆ. 60 ಸೆಕೆಂಡ್ ಒಳಗೆ ಬಟನ್ ಅನ್‌ಪ್ರೆಸ್ ಮಾಡಿದರೆ ಸಾಕು, ವಾಯ್ಸ್ ಮೆಸೇಜ್ ರೀತಿಯಲ್ಲೇ ವಿಡಿಯೋ ಮೆಸೇಜ್ ಆಪ್ತರಿಗೆ ಅಥವಾ ಗ್ರೂಪ್‌ಗೆ ಕಳುಹಿಸಲು ಸಾಧ್ಯವಿದೆ. 

ಬಹುತೇಕರು ಈ ಫೀಚರ್ ಬಳಸುವುದೇ ಇಲ್ಲ. ಇದು 2023ರಲ್ಲಿ ವ್ಯಾಟ್ಸ್ಆ್ಯಪ್ ವಿಡಿಯೋ ರಿಯಲ್ ಟೈಮ್ ಮೆಸೇಜ್ ಫೀಚರ್ ಜಾರಿ ಮಾಡಿದೆ. ಆದರೆ ಬಳಕೆ ಪ್ರಮಾಣ ಕಡಿಮೆ. ಈ ಫೀಚರ್ ಜಾರಿಯಾಗಿ ವರ್ಷ ಕಳೆದರೂ ಹೆಚ್ಚಿನ ಬಳಕೆದಾರರು ವಿಡಿಯೋ ಮೆಸೇಜ್ ಬಳಕೆ ಮಾಡಿಲ್ಲ. ವಾಯ್ಸ್ ಮೆಸೇಜ್ ರೀತಿ ಇದು ಕೂಡ ಅತ್ಯಂತ ಸುಲಭದ ಫೀಚರ್ಸ್ ಆಗಿದೆ. 

ವ್ಯಾಟ್ಸ್ಆ್ಯಪ್ ಮೂಲಕ ನೋಡಿ ಇನ್‌ಸ್ಟಾಗ್ರಾಂ ರೀಲ್ಸ್, ವೀಕ್ಷಿಸಲು ಸುಲಭ ಟಿಪ್ಸ್ ಫಾಲೋ ಮಾಡಿ!
 

click me!