ವೆನಿಜುವೆಲಾ ಭೂಕಂಪಕ್ಕೂ ಮುನ್ನ ಗೂಗಲ್ ನೀಡಿತ್ತು ಅಲರ್ಟ್, ಆ್ಯಂಡ್ರಾಯ್ಡ್ ಫೋನ್ ಪ್ರಾಣ ಉಳಿಸಿದ್ದು ಹೇಗೆ?

Published : Jun 26, 2026, 12:11 PM IST
Google Earthquake Alert

ಸಾರಾಂಶ

ವೆನಿಜುವೆಲಾ ಭೀಕರ ಭೂಕಂಪದಲ್ಲಿ ಸಾವಿನ ಸಂಖ್ಯೆ 250 ದಾಟಿದೆ. ಈ ಭೂಕಂಪಕ್ಕೂ ಕೆಲವೆ ನಿಮಿಷಗಳ ಮೊದಲು ಆ್ಯಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಗೂಗಲ್ ಅಲರ್ಟ್ ಸಂದೇಶ ನೀಡಿತ್ತು. ಆ್ಯಂಡ್ರಾಯ್ಡ್ ಫೋನ್ ಪ್ರಾಣ ಉಳಿಸಿದ್ದು ಹೇಗೆ 

ವೆನಿಜುವೆಲಾ (ಜೂ.26) ವೆನಿಜುವೆಲಾದಲ್ಲಿ ಸಂಭವಿಸಿದ ಸರಣಿ ಭೂಕಂಪದ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಶಾಂತವಾಗಿದ್ದ ವೆನಿಜುವೆಲಾದಲ್ಲಿ ಗಗನಚುಂಬಿ ಕಟ್ಟಡಗಳು ಧರೆಗುರುಳಿತ್ತು. ಜನರು ಪ್ರಾಣ ಉಳಿಸಿಕೊಳ್ಳಲು ಓಡಿದ್ದರು, ಚೀರಾಟಗಳು, ಸಹಾಯಕ್ಕಾಗಿ ಕೂಗಾಟ ಕೇಳಿಸಿತ್ತು. ಆದರೆ ಆ್ಯಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಗೂಗಲ್ ಭೂಕಂಪಕ್ಕೂ ಮುನ್ನ ಅಲರ್ಟ್ ಸಂದೇಶ ನೀಡಿತ್ತು. ಗೂಗಲ್ ಭೂಕಂಪಕ್ಕೂ ಕೆಲವೇ ಸೆಕೆಂಡ್ ಮುನ್ನ ಭೂಕಂಪದ ಅಲರ್ಟ್ ನೋಟಿಫಿಕೇಶನ್ ಕಳುಹಿಸಿದೆ. ವಿಶೇಷ ಅಂದರೆ ನಿಮ್ಮ ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಈ ಫೀಚರ್ ಇದೆ. ತುರ್ತು ಸಂದರ್ಭದಲ್ಲಿ ಈ ಅಲರ್ಟ್ ಹಲವರ ಪ್ರಾಣ ಉಳಿಸಿದೆ.

ಆ್ಯಂಡ್ರಾಯ್ಡ್ ಆ್ಯಕಲೆರೊಮೀಟರ್ ಸೆನ್ಸರ್

ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಗೂಗಲ್ ಅಲರ್ಟ್ ಸಂದೇಶ ನೀಡಿದೆ. ಆ್ಯಂಡ್ರಾಯ್ಡ್ ಫೋನ್‌ನಲ್ಲಿ ಗೂಗಲ್ ಚಾಲಿತ ಭೂಕಂಪ ಎಚ್ಚರಿಕೆ ವ್ಯವಸ್ಥೆ (Android Earthquake Alerts System) ನೀಡಲಾಗಿದೆ. ಆ್ಯಂಡ್ರಾಯ್ಡ್ ಫೋನ್‌ನಲ್ಲಿ ಅಕ್ಸೆಲೆರೊಮೀಟರ್' (Accelerometer) ಸೆನ್ಸರ್ ಇದೆ. ಮೊಬೈಲ್‌ನಲ್ಲಿ ಸ್ಕ್ರೀನ್ ರೊಟೇಟ್ ಸೇರಿದಂತೆ ಇತರ ಕೆಲ ಉಪಯೋಗಕ್ಕಾಗಿ ಈ ಸೆನ್ಸಾರ್ ಬಳಕೆಯಾಗುತ್ತದೆ. ಈ ಸೆನ್ಸರ್‌ನ ಮತ್ತೊಂದು ಪ್ರಮುಖ ಉಪಯೋಗವೆಂದರೆ ಭೂಮಿಯೊಳಗಿನ ಸಣ್ಣ ಸಣ್ಣ ಕಂಪನಗಳನ್ನು ಸೆನ್ಸರ್ ಪತ್ತೆ ಹಚ್ಚುತ್ತದೆ. ಅಷ್ಟೇ ವೇಗದಲ್ಲಿ ಸಂಕೇತಗಳನ್ನು ರವಾನಿಸುತ್ತದೆ.

ಕ್ರಾಸ್ ವೆರಿಫೈ ಮಾಡಿ ಗಗೂಲ್ ಅಲರ್ಟ್

ಆ್ಯಕ್ಸಲೆರೋಮಿಟರ್ ಸೆನ್ಸರ್ ಕಂಪನಗಳನ್ನು ಪತ್ತೆ ಹಚ್ಚುತ್ತದೆ. ಬಳಿಕ ತಕ್ಷಣವೇ ಲೋಕೇಶನ್ ಹಾಗೂ ಕಂಪನದ ಸಿಗ್ನಲ್ ಗೂಗಲ್‌ ಸರ್ವರ್‌ಗೆ ರವಾನಿಸುತ್ತದೆ. ಸರ್ವರ್ ಇದೇ ಲೋಕೇಶನ್‌ನಿಂದ ಇತರ ಆ್ಯಂಡ್ರಾಯ್ಡ್ ಫೋನ್ ಕಳುಹಿಸಿರುವ ಸಿಗ್ನಲ್‌ಗಳನ್ನು ಪರಿಶೀಲಿಸುತ್ತಿದೆ. ಕ್ರಾಸ್ ವೆರಿಫೈ ಬಳಿಕ ಗೂಗಲ್ ಸರ್ವರ್ ಭೂಕಂಪನ ಸೂಚನೆ ಖಚಿತಪಡಿಸಿ ಜನರಿಗೆ ಅಲರ್ಟ್ ಸಂದೇಶ ನೀಡಲಿದೆ. ಇವೆಲ್ಲವೂ ಕೆಲವೆ ಕೆಲೆವು ಸೆಕೆಂಡ್‌ಗಳಲ್ಲಿ ನಡೆಯಲಿದೆ.

ನಿಮ್ಮ ಫೋನ್‌ನಲ್ಲಿ ಭೂಕಂಪನ ಅಲರ್ಟ್ ಆನ್ ಮಾಡಿದರೆ ಸಾಕು

ಭೂಕಂಪದ ಅಲೆಗಳು ಚಲಿಸುವ ವೇಗಕ್ಕಿಂತ ಅತೀ ವೇಗದಲ್ಲಿ ಗೂಗಲ್ ಸಿಗ್ನಲ್ ನೀಡಿ ಆ್ಯಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಅಲರ್ಟ್ ಸಂದೇಶ ನೀಡಲಿದೆ. ಅರ್ಥ್‌ಕ್ವೇಕ್ ಅಲರ್ಟ್ (Earthquake Alerts) ಆಯ್ಕೆಯನ್ನು ಆನ್ ಮಾಡಿರಬೇಕು. ಆ್ಯಂಡ್ರಾಯ್ಡ್ 5 ಹಾಗೂ ಅದಕ್ಕಿಂತ ನಂತರ ಬಂದ ವರ್ಶನ್ ಫೋನ್‌ಗಳಲ್ಲಿ ಈ ಸೇವೆ ಲಭ್ಯವಿದೆ. ಭಾರತದಲ್ಲಿ 2023ರಿಂದ ಈ Earthquake Alerts ಆಪ್ಶನ್ ಆನ್ ಮಾಡಿರಬೇಕು. ಹಾಗೂ ಮೊಬೈಲ್ ಫೋನ್ ಇಂಟರ್ನೆಟ್ ಸಂಪರ್ಕದಲ್ಲಿರಬೇಕು. ಹೀಗಿದ್ದರೆ ದೇಶದೊಳಗಿನ ಭೂಕಂಪನ ಅಥವಾ ಸುಮಾರು 200 ರಿಂದ 300 ಕಿಲೋಮೀಟರ್ ಒಳಗಿನ ಭೂಕಂಪನದ ಅಲರ್ಟ್ ಸಂದೇಶವನ್ನು ಗೂಗಲ್ ಆ್ಯಂಡ್ರಾಯ್ಡ್ ಬಳಕೆದಾರರಿಗೆ ನೀಡಲಿದೆ.

ಲಘು ಭೂಕಂಪಗಳ ವೇಳೆ ಗೂಗಲ್ Be Aware Alert ಅಲರ್ಟ್ ನೀಡಲಿದೆ. ಇನ್ನು ಕಟ್ಟಡಗಳು ಧರೆಗುರುಳುವ, ಅತ್ಯಂತ ಅಪಾಯಕಾರಿ ಭೂಕಂಪದ ವೇಳೆ Take Action Alert ಸಂದೇಶ ನೀಡಲಿದೆ. ಇದೇ ಅಲರ್ಟ್ ಸಂದೇಶ ಕ್ಲಿಕ್ ಮಾಡಿದರೆ ಭೂಕಂಪದ ವೇಳೆ ಜೀವ ಉಳಿಸಿಕೊಳ್ಳಲು ಇರುವ ಸುರಕ್ಷತಾ ಮಾರ್ಗದರ್ಶನ, ಸದ್ಯ ನಡೆದಿರುವ ಭೂಕಂಪದ ತೀವ್ರತೆ ಸೇರಿದಂತೆ ಇತರ ಮಾಹಿತಿಗಳು ಇರಲಿದೆ.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Mobile Charger: ಮೊಬೈಲ್ ಚಾರ್ಜ್‌ಗೆ ಹಾಕಿದಾಗಲೇ ಯಾಕೆ ಬ್ಲಾಸ್ಟ್ ಆಗುತ್ತೆ? ನೀವು ಈ ತಪ್ಪು ಎಂದಿಗೂ ಮಾಡಬೇಡಿ!
Best Budget Cars: ಬಡ ಮಧ್ಯಮ ವರ್ಗದವರು ಕಣ್ಮುಚ್ಚಿ ಖರೀದಿ ಮಾಡಬಹುದಾದ 5 ಬಜೆಟ್‌ ಫ್ರೆಂಡ್ಲಿ ಕಾರುಗಳು