
ನವದೆಹಲಿ (ಅ.17) ದೀಪಾವಳಿ ಹಬ್ಬಕ್ಕೆ ಹಲವು ಆಫರ್ ಚಾಲ್ತಿಯಲ್ಲಿದೆ. ಇಗೀಗ ಭಾರತದಲ್ಲಿ ಗೂಗಲ್ ಕೂಡ ಮೆಗಾ ಆಫರ್ ನೀಡಿದೆ. ಪ್ರತಿಯೊಬ್ಬರಿಗೂ ಗೂಗಲ್ ಸ್ಟೋರೇಜ್ ಅತ್ಯವಶ್ಯಕ. ಮೊಬೈಲ್‌ನಲ್ಲಿ ಫೋಟೋ, ವಿಡಿಯೋ ಸ್ಟೋರೇಜ್ ಮಾಡಲು, ಜಿಮೇಲ್, ವ್ಯಾಟ್ಸಾಪ್ ಸೇರಿದಂತೆ ಇತರ ಡಾಕ್ಯುಮೆಂಟ್ ಕ್ಲೌಡ್‌ನಲ್ಲಿ ಸ್ಟೋರ್ ಮಾಡಲು ಸ್ಟೋರೇಜ್ ಬೇಕೆ ಬೇಕು. ಫ್ರೀ ಸ್ಟೋರೇಜ್ ಭರ್ತಿಯಾದರೆ ಒಂದಾ ಡಿಲೀಟ್ ಮಾಡಬೇಕು, ಇಲ್ಲಾ ಸ್ಟೋರೇಜ್ ಖರೀದಿಬೇಕು. ತಿಂಗಳಿಗೆ 130 ರೂಪಾಯಿಯಿಂದ 210 ರೂಪಾಯಿವರೆಗೂ ಚಾರ್ಜ್ ಮಾಡಲಾಗುತ್ತದೆ. ಆದರೆ ದೀಪಾವಳಿ ಆಫರ್ ಮೂಲಕ ಗೂಗಲ್ 2ಟಿಬಿ ಸ್ಟೋರೇಜ್‌ಗೆ ಕೇವಲ 11 ರೂಪಾಯಿಗೆ ನೀಡುತ್ತಿದೆ.
ಗೂಗಲ್ ದೀಪಾವಳಿ ಆಫರ್ ಹೊಸ ಬಳಕೆದಾರರು ಹಾಗೂ ಹಳೇ ಬಳಕೆದಾರರಿಗೂ ಲಭ್ಯವಿದೆ. ಸ್ಟೋರೇಜ್ ಭರ್ತಿಯಾಗುತ್ತಿದೆ, ಡೀಲೀಟ್ ಮಾಡಲು ಗೂಗಲ್ ಹೇಳುತ್ತಿದ್ದರೆ, ನೀವು ಈ ದೀಪಾವಳಿ ಸಮಯದಲ್ಲಿ ಸ್ಟೋರೇಜ್ ಖರೀದಿಸುವುದು ಉತ್ತಮ. ಕಾರಣ ಅತೀ ಕಡಿಮೆ ಬೆಲೆಯಲ್ಲಿ ಗೂಗಲ್ ಸ್ಟೋರೇಜ್ ಖರೀದಿ ಸಾಧ್ಯವಾಗುತ್ತಿದೆ.
ಗೂಗಲ್ ಒನ್ ದೀಪಾವಳಿ ಆಫರ್ ಎಲ್ಲಾ ಗೂಗಲ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ. 30 ಜಿಬಿಯಿಂದ 2 ಟಿಬಿ ವರೆಗೆ ಪ್ಲಾನ್ ಲಭ್ಯವಿದೆ. ಗೂಗಲ್ ಒನ್ ಲೈಟ್ ಪ್ಲಾನ್ 30 ಜಿಬಿ ಸ್ಟೋರೇಜ್ ನೀಡಲಿದೆ. ಇದರ ಬೆಲೆ ತಿಂಗಳಿಗೆ 30 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಇದೀಗ ಕೇವಲ 11 ರೂಪಾಯಿಗೆ ಲಭ್ಯವಿದೆ. ಇಷ್ಟೇ ಅಲ್ಲ ಬೇಸಿಕ್ ಹಾಗೂ ಸ್ಟಾಂಡರ್ಡ್ ಪ್ಲಾನ್ ಕೂಡ ಇದೀಗ 11 ರೂಪಾಯಿಗೆ ಲಭ್ಯವಿದೆ. ಬೇಸಿಕ್ ಹಾಗೂ ಸ್ಟಾಂಡರ್ಡ್ ಪ್ಲಾನ್‌ನಲ್ಲಿ 100 ಜಿಬಿ ಹಾಗೂ 200 ಜಿಬಿ ಸ್ಟೋರೇಜ್ ಪ್ಲಾನ್ ನೀಡಲಾಗುತ್ತದೆ.
ಗೂಗಲ್ ಒನ್ ಪ್ರೀಮಿಯಂ ಪ್ಲಾನ್ 2ಟಿಬಿ ಸ್ಟೋರೇಜ್ ನೀಡುತ್ತದೆ. ದೀಪಾವಳಿ ಆಫರ್ ಮೂಲಕ ಈ ಪ್ಲಾನ್ ಖರೀದಿಸಿದರೆ ಈಗ ಕೇವಲ 11 ರೂಪಾಯಿಗೆ ಮಾತ್ರ ಲಭ್ಯವಿದೆ. ದೀಪಾವಳಿ ಆಫರ್ ಮುಗಿದ ಬಳಿಕ ಇದರ ಎಂದಿನ ದರ 650 ರೂಪಾಯಿ ಆಗಲಿದೆ. 2ಟಿಬಿಯ 650 ರೂಪಾಯಿ ಪ್ಲಾನ್ ದೀಪಾವಳಿಗೆ 11 ರೂಪಾಯಿಗೆ ನೀಡಲಾಗುತ್ತದೆ.
ನೀವು ಗೂಗಲ್ ಪ್ಲಾನ್ ಖರೀದಿಗೆ ಮುಂದಾಗಿದ್ದರೆ ಅಕ್ಟೋಬರ್ 31ರ ವರೆಗೆ ಲಭ್ಯವಿದೆ. ಬಳಿಕ ಆಫರ್ ಬೆಲೆಯಲ್ಲಿ ಲಭ್ಯವಿರುವುದಿಲ್ಲ. ಹೀಗಾಗಿ ಗೂಗಲ್ ಸ್ಟೋರೇಜ್ ಖರೀದಿಸಲು ಬಯಸಿದ್ದರೆ ಅಕ್ಟೋಬರ್ 31ರ ಒಳಗೆ ಆಫರ್ ಬೆಲೆಯಲ್ಲಿ ಲಭ್ಯವಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.