
ನವದೆಹಲಿ (ಅ.01) ಮೊಬೈಲ್, ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಸೇರಿದಂತೆ ಯಾವುದೇ ಗ್ಯಾಜೆಟ್ಸ್ ಬಳಸುತ್ತಿರುವ ಜನರು ಗೂಗಲ್ ಕ್ರೋಮ್ ಬಳಸುತ್ತಾರೆ. ಆದರೆ ಇದೇ ಗೂಗಲ್ ಕ್ರೋಮ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಭಾರತದಲ್ಲಿ ಕ್ರೋಮ್ ಬಳಸುತ್ತಿರುವ ಎಲ್ಲಾ ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ತಕ್ಷಣವೇ ಕ್ರೋಮ್ ಅಪ್‌ಡೇಟ್ ಮಾಡಲು ಸೂಚಿಸಿದೆ. ಹೈ ಸೆಕ್ಯೂರಿಟಿ ರಿಸ್ಕ್ ಸಮಸ್ಯೆಗಳು ಎದುರಾಗಿದೆ. ಇದರ ಪರಿಣಾಮ ಕ್ರೋಮ್ ಅಪ್‌ಡೇಟ್ ಉಪಯುಕ್ತ ಎಂದು ಸೂಚಿಸಿದೆ. ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ಟೀಂ (CERT-In) ಈ ಕುರಿತು ಮಹತ್ವದ ಎಚ್ಚರಿಕೆ ನೀಡಿದೆ. ಅಪ್‌ಡೇಟ್ ಮಾಡದೇ ಬಳಕೆ ಮಾಡಿದರೆ ನಿಮ್ಮ ಡೇಟಾವನ್ನು ಹ್ಯಾಕರ್ಸ್ ಕದಿಯುವ ಸಾಧ್ಯತೆ ಇದೆ.
ಗೂಗಲ್ ಕ್ರೋಮ್ ಡೆಸ್ಕ್‌ಟಾಪ್‌ನಲ್ಲಿ ಸೆಕ್ಯೂರಿಟಿ ಸಮಸ್ಯೆಗಳು ಎದುರಾಗಿದೆ ಎಂದು CERT-In ಹೇಳಿದೆ. ವಿಂಡೋಸ್, ಮ್ಯಾಕ್ಒಎಸ್ ಹಾಗೂ ಲಿನಕ್ಸ್ ಪ್ಲಾಟ್‌ಫಾರ್ಮ್ ಕೂಡ ರಿಸ್ಕ್‌ನಲ್ಲಿದ ಎಂದಿದೆ. ಹ್ಯಾಕರ್ಸ್ ಸುಲಭವಾಗಿ ಆರ್ಟಿಬಿಟರಿ ಕೋಡ್ ಮೂಲಕ ಮಾಹಿತಿ, ಡೇಟಾಗಳನ್ನು ಕದಿಯುವ ಸಾದ್ಯತೆ ಹೆಚ್ಚಿದೆ ಎಂದು CERT-In ಹೇಳಿದೆ. ಸೆಕ್ಯೂರಿಟಿ ರಿಸ್ಕ್ ಎದುರಾಗಿರುವ ಕಾರಣ ಹ್ಯಾಕರ್ಸ್ ಸುಲಭಾಗಿ ಡೇಟಾಗಳನ್ನು ಕದಿಯುವ ಸಾಧ್ಯೆತಗೆಳಿವೆ ಎಂದಿದೆ.
ಕ್ರೋಮ್ ವಿ8 ಎಂಜಿನ್‌ನಲ್ಲಿ ಸೆಕ್ಯೂರಿಟಿ ರಿಸ್ಕ್ ಕಾಣಿಸಿಕೊಂಡಿರುವ ಕಾರಣ ಬಳಕೆದಾರರ ಮಾಹಿತಿ, ವೈಯುಕ್ತಿಕ ಡೇಟಾಗಳನ್ನು ಹ್ಯಾಕರ್ಸ್ ಸುಲಭವಾಗಿ ಕಲೆಹಾಕುವ ಸಾದ್ಯತೆ ಇದೆ. ಇದು ಬಳಕೆದಾರರಿಗೆ ಗೊತ್ತಿಲದೆ ಈ ರೀತಿಯ ಸೆಕ್ಯೂರಿಟಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
CERT-In ವರದಿ ಪ್ರಕಾರ, ಗಗೂಲ್ ಕ್ರೋಮ್ ಬಳೆಕೆದಾರರು ತಮ್ಮ ಕ್ರೋಮ್ ಬ್ರೌಸರ್‌ಗಳನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು, ಇಲ್ಲದಿದ್ದರೆ, ಹ್ಯಾಕರ್ಸ್ ದಾಳಿಯಾಗುವ ಸಾಧ್ಯತೆ ಇದೆ. ಕ್ರೋಮ್ ಅಪ್‌ಡೇಟ್ ಮಾಡುವ ಮೂಲಕ ಹ್ಯಾಕರ್ಸ್ ದಾಳಿಯಿಂದ ದೂರವಿರಬಹುದು. ಗೂಗಲ್ ಕ್ರೋಮ್ ಅತೀ ಹೆಚ್ಚು ಬಳಸುವ ಸರ್ಜ್ ಎಂಜಿನ್. ದೇಶ ವಿದೇಶಗಳಲ್ಲಿ ಕ್ರೋಮ್ ಬಳಕೆದಾರರು ಸಂಖ್ಯೆ ದುಪ್ಪಟ್ಟಿದೆ. ಹೀಗಾಗಿ ಕ್ರೋಮ್‌ನಲ್ಲಿನ ಸಣ್ಣ ತಪ್ಪು ಪರಿಣಾಮ ದೊಡ್ಡದಾಗಿರುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಗಗೂಲ್ ಮೂಲಕ ಅಧಿಕೃತವಲ್ಲದ, ಗೊತ್ತಿಲ್ಲದ ಲಿಂಕ್ ಕ್ಲಿಕ್ ಮಾಡಬೇಡಿ. ಸಮಸ್ಯೆಗಳು ಕಂಡು ಬಂದರೆ ಸಾಹಸ ಮಾಡಬೇಡಿ, ತಜ್ಞರ ಸಹಾಯ ಪಡೆದುಕೊಳ್ಳಿ. ಒಂದು ಬಾರಿಗೆ ಹಲವು ಸಮಸ್ಯೆ ಸೃಷ್ಟಿಸಿಕೊಳ್ಳಬೇಡಿ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.