Viral Instagram Trend ನಿಮ್ಮ ವೈಯಕ್ತಿಕ ಡೇಟಾ ಹ್ಯಾಕರ್‌ ಕೈ ಸೇರಬಹುದು ಜೋಕೆ!

Published : Dec 28, 2023, 04:51 PM ISTUpdated : Dec 28, 2023, 06:12 PM IST
Viral Instagram Trend ನಿಮ್ಮ ವೈಯಕ್ತಿಕ ಡೇಟಾ ಹ್ಯಾಕರ್‌ ಕೈ ಸೇರಬಹುದು ಜೋಕೆ!

ಸಾರಾಂಶ

ವೈರಲ್ ಟ್ರೆಂಡ್ ಅತೀವೇಗದಲ್ಲಿ ಜನಪ್ರಿಯವಾಗುತ್ತದೆ. ಆದರೆ ಈ ಟ್ರೆಂಡಿಂಗ್ ಹಿಂದೆ ಓಡಿ ನಿಮ್ಮ ವೈಯುಕ್ತಿಕ ಡೇಟಾ ಹ್ಯಾಕರ್ ಕೈಗೆ ನೀಡಬೇಡಿ ಜೋಕೆ. ಇದೇ ರೀತಿ ಇನ್‌ಸ್ಟಾಗ್ರಾಂನಲ್ಲಿನ ಗೆಟ್ ಟು ನೋ ಮಿ ಟ್ರೆಂಡಿಂಗ್ ಮೂಲಕ ನೀವೂ ಹೆಚ್ಚು ಲೈಕ್ಸ್, ಕಮೆಂಟ್ ಪಡೆಯಲು ಮುಂದಾದರೆ, ನಿಮ್ಮ ವೈಯುಕ್ತಿಕ ಡೇಟಾ ಹ್ಯಾಕರ್ ಕೈಸೇರಲಿದೆ.     

ವೈರಲ್ ಇನ್‌ಸ್ಟಾಗ್ರಾಮ್ ಟ್ರೆಂಡ್ ಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು, ಎಲ್ಲರೂ ಟ್ರೆಂಡ್ ಗಳ ಹಿಂದೆ ಓಡುತ್ತಿದ್ದಾರೆ. ವಿಡಿಯೋಗಳನ್ನು ಹಿಂದೆ ಮುಂದೆ ನೋಡದೆ ಪೋಸ್ಟ್ ಮಾಡಿ ಫೇಮಸ್‌ ಆಗಬೇಕೆಂಬ ಗೋಜಿನಲ್ಲಿ ತಮ್ಮ ಖಾಸಗಿ ಮಾಹಿತಿ ಮತ್ತು ಜೀವನವನ್ನು ಸಾರ್ವಜನಿಕವಾಗಿ ಹಂಚುತ್ತಿದ್ದಾರೆ. ಈ ರೀತಿಯ ವಿದ್ಯಮಾನವು ಹ್ಯಾಕರ್‌‌ಗಳಿಗೆ ಒಂದು ದೊಡ್ಡ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ. ಈ ರೀತಿಯ ಟ್ರೆಂಡ್‌ನಿಂದ ಸುಲಭವಾಗಿ ವ್ಯಕ್ತಿಯ ಖಾಸಗಿ ಮಾಹಿತಿಯನ್ನು  ಹ್ಯಾಕರ್‌ಗಳು ಪ್ರವೇಶಿಸಬಹುದಾಗಿದೆ.

ವೈರಲ್ ಇನ್‌ಸ್ಟಾಗ್ರಾಮ್ ಟ್ರೆಂಡ್ 'ಗೆಟ್ ಟು ನೋ ಮಿ' ಬಗ್ಗೆ ಸೈಬರ್ ತಜ್ಞೆ ಲಿಯಾನಾ ಶಿಲೋ (Eliana Shiloh) ಕಳವಳ ವ್ಯಕ್ತಪಡಿಸಿದ್ದಾರೆ, ವೈರಲ್‌  ಇನ್‌ಸ್ಟಾಗ್ರಾಮ್ ಟ್ರೆಂಡ್ ಗಳು ನಮ್ಮ ವೈಯಕ್ತಿಕ ಭದ್ರತೆಗಳನ್ನು ಮೊಟಕುಗೊಳಿಸುತ್ತವೆ. ಅಲ್ಲದೇ ನಮ್ಮನ್ನು ಸೈಬರ್‌ ಹ್ಯಾಕಿಂಗ್‌ ಗೆ ಬಲಿಪಶು ಮಾಡುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ. ಶಿಲೋ,  ಡೆಲಾಯ್ಟ್‌ (Deloitte) ನಲ್ಲಿ ಸೈಬರ್ ಮತ್ತು ಸ್ಟ್ರಾಟೆಜಿಕ್ ರಿಸ್ಕ್ ವಿಶ್ಲೇಷಕರಾಗಿದ್ದು,(Cyber and strategic risk analyst) ಟ್ರೆಂಡ್‌ಗಳು ವ್ಯಕ್ತಿಯ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತರುವುದಾಗಿ ತಿಳಿಸಿದ್ದಾರೆ.

ಡೀಪ್ ಫೇಕ್ ವಿಡಿಯೋ ಪತ್ತೆ - ನಿಯಂತ್ರಣಕ್ಕೆ ಬೆಂಗಳೂರು ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಟಾಸ್ಕ್!

ಈ ಟ್ರೆಂಡ್ ನಲ್ಲಿ ವಯಸ್ಸು, ಎತ್ತರ, ಜನ್ಮ ದಿನಾಂಕದಂತಹ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವುದರಿಂದ ಗೌಪ್ಯತೆಯ ಅಪಾಯಗಳು ಉಂಟಾಗಬಹುದು. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ರೆಂಡ್ ಗಳಲ್ಲಿ ಹೆಚ್ಚು ಭಾಗಿಯಾಗುತ್ತಿದ್ದು, ಅಪಾಯದ ಪ್ರಮಾಣವನ್ನೂ ಹೆಚ್ಚಿಸಿದೆ.  Instagram ನ ಟ್ರೆಂಡ್‌ಗಳು ಕುರಿತು ಜನರು ಸಂಪೂರ್ಣವಾಗಿ ತಿಳಿಯದೆ, ಏಕಾಏಕಿ ಧುಮುಕುತ್ತಿದ್ದಾರೆ. ಟ್ರೆಂಡ್‌ನ ಒಳ್ಳೆಯ ಮತ್ತು ಕೆಟ್ಟ ಪರಿಣಾಮ ಅರಿವಿಲ್ಲದೆ ಬಳಸುತ್ತಿರುವುದು ವೈಯಕ್ತಿಕ ಗೌಪ್ಯತೆಗೆ ರಕ್ಷಣೆಗೆ ದೊಡ್ಡ ಸವಾಲಾಗಿದೆ.

ಟಿಕ್‌ಟಾಕ್‌ನಲ್ಲಿ @elshiloh ಎಂದು ಕರೆಯಲ್ಪಡುವ ಸೈಬರ್‌ ಸೆಕ್ಯುರಿಟಿ ತಜ್ಞ ಎಲಿಯಾನಾ ಶಿಲೋಹ್ ಇತ್ತೀಚೆಗೆ ಈ ಟ್ರೆಂಡ್ ವೈಯಕ್ತಿಕ ಡೇಟಾ ಸುರಕ್ಷತೆಗೆ ಸಂಬಂಧಿಸಿದ ಹಲವು ತೊಂದರೆಗಳ ಬಗ್ಗೆ ತಿಳಿಸಿದ್ದಾರೆ. ಶಿಲೋ ಅವರು ಡಿಸೆಂಬರ್ 23 ರಂದು ವೀಡಿಯೊವನ್ನು ಹಂಚಿಕೊಂಡಿದ್ದು, 1.5 ಮಿಲಿಯನ್ ಜನರು ವೀಕ್ಷಿಸಿದ್ದಾರೆ,  ಶಿಲೋ ವೈಯಕ್ತಿಕ ಮಾಹಿತಿ ಕಳವಾಗುವ ಕುರಿತು ಎಚ್ಚರಿಕೆ ನೀಡಿದ್ದಾರೆ. ಈ ರೀತಿಯ ಟ್ರೆಂಡ್‌ ಗಳಿಂದ ವ್ಯಕ್ತಿಯು ದೂರವಿರುವಂತೆ ಮತ್ತು ಈಗಾಗಲೇ ಈ ಟ್ರೆಂಡ್‌ ನಲ್ಲಿ  ಭಾಗಿಯಾಗಿದ್ದರೆ, ಆ ಮಾಹಿತಿಯನ್ನು ಅಥವಾ ವಿಡಿಯೋಗಳನ್ನು ಶೀಘ್ರವೇ ಡಿಲೀಟ್‌ ಮಾಡುವಂತೆ ಒತ್ತಾಯಿಸಿದ್ದಾರೆ.

ಸೂಕ್ಷ್ಮ ಮಾಹಿತಿ ಹ್ಯಾಕ್, ಐಫೋನ್ ಬಳಕೆದಾರರಿಗೆ ಕೇಂದ್ರ ಸರ್ಕಾರದ ಹೈರಿಸ್ಕ್ ವಾರ್ನಿಂಗ್!

Instagram ನಲ್ಲಿ Get to Know me ಎಂಬ ಟ್ರೆಂಡ್ ಆನ್‌ಲೈನ್ ಸುರಕ್ಷತೆಯ ಬಗ್ಗೆ ಕಳವಳವನ್ನು ಸೃಷ್ಟಿಸಿದೆ. "Get to Know me" ಚಾಲೆಂಜ್‌ ಬಳಕೆದಾರರ ವಯಸ್ಸು, ಎತ್ತರ, ಜನ್ಮದಿನಾಂಕ, ಆದ್ಯತೆಗಳು, ಹಚ್ಚೆಗಳು,  ಮತ್ತು ಭಯಗಳಂತಹ ವೈಯಕ್ತಿಕ ವಿವರಗಳನ್ನು ತಿಳಿಸುವಂತೆ ಕೇಳುತ್ತದೆ. ಇದು  ಭದ್ರತಾ ಪರೀಕ್ಷೆಗಳಲ್ಲಿ ಸಾಮಾನ್ಯವಾಗಿ ಬಳಸುವ ಮಾಹಿತಿಯಾಗಿದೆ. ಈ ಡೇಟಾವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಅಪಾಯಕ್ಕೆ ದಾರಿ ಮಾಡಿಕೊಟ್ಟಂತೆ  ಈ ಟ್ರೆಂಡ್‌ಗಳಲ್ಲಿ ನೇರವಾಗಿ ಭದ್ರತಾ ಪ್ರಶ್ನೆಗಳಿಗೆ ಉತ್ತರಗಳನ್ನು ಸ್ಪಷ್ಟವಾಗಿ ನೀಡದಿದ್ದರೂ, ಈ ರೀತಿಯ ವೈಯಕ್ತಿಕ ಮಾಹಿತಿಗಳನ್ನು ಬಳಸಿಕೊಂಡು ಹ್ಯಾಕರ್‌ಗಳು ಸುಲಭವಾಗಿ ನಮ್ಮ ಮಾಹಿತಿಗಳನ್ನು ಪಡೆಯಬಹುದಾಗಿದ್ದು, ಇದು  ನಮ್ಮ ಗೌಪ್ಯತೆಗೆ ಅಪಾಯಗಳನ್ನು ಉಂಟುಮಾಡಬಹುದು.

ಸೂಕ್ಷ್ಮ ವಿವರಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವುದರ ಉತ್ತಮವಲ್ಲ ಎಂದು  ಶಿಲೋ ಎಚ್ಚರಿಸಿದ್ದಾರೆ. ಸಾಮಾಜಿಕ ಭದ್ರತೆ ಸಂಖ್ಯೆಗಳಂತಹ ಇನ್ನೂ ಹೆಚ್ಚಿನ ಸೂಕ್ಷ್ಮ ಮಾಹಿತಿಗಳು ಸಾರ್ವಜನಿಕವಾಗಬಹುದಾದ ಸಂಭಾವ್ಯ ಸನ್ನಿವೇಶದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಸಿಂಧು ಕೆ ಟಿ, ಕುವೆಂಪು ವಿಶ್ವವಿದ್ಯಾಲಯ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್