ವಿಶ್ವಪಾರಂಪರಿಕ ತಾಣ ಹಂಪಿ, ಕರ್ನಾಟಕದ ಕಡಲೀ ತೀರ, ಕೊಡಗಿನ ದಟ್ಟ ಕಾಡು, ಚಿಕ್ಕಮಗಳೂರಿನ ಮುಳ್ಳಯನಗಿರಿ ಸೇರಿದಂತೆ ಕರ್ನಾಟಕದ 31 ಜಿಲ್ಲೆಯಲ್ಲಿ ಏರ್‌ಟೆಲ್ 5ಜಿ ಸೇವೆ ವಿಸ್ತರಣೆಗೊಂಡಿದೆ.
ಬೆಂಗಳೂರು(ನ.16): ಭಾರತದ ದೂರಸಂಪರ್ಕ ಸೇವೆ ನೀಡುತ್ತಿರುವ ಭಾರತಿ ಏರ್‌ಟೆಲ್ ಇದೀಗ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಏರ್‌ಟೆಲ್ ಪರಿಚಯಿಸಿದ ಏರ್‌ಟೆಲ್ 5G ಪ್ಲಸ್ ಯೋಜನೆಯ ಒಂದು ವರ್ಷದೊಳಗೆ ರಾಜ್ಯದ 31 ಜಿಲ್ಲೆಗಳಲ್ಲಿ ವಿಸ್ತರಣೆಗೊಂಡಿದೆ. ಇದರಿಂದ ಕರ್ನಾಟಕದಲ್ಲಿ 5.1 ದಶಲಕ್ಷ ಅನನ್ಯ 5G ಗ್ರಾಹಕರಿ ಅನುಕೂಲವಾಗಲಿದೆ. ಯೋಜನೆ ಜಾರಿಗೊಂಡ ಕೇವಲ 12 ತಿಂಗಳೊಳಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಏರ್‌ಟೆಲ್ 5G ಪ್ಲಸ್ ಸೇವೆ ಲಭ್ಯವಿದೆ ಎಂದೂ ಏರ್‌ಟೆಲ್ ಹೇಳಿದೆ.
ಏರ್‌ಟೆಲ್ ಅವರ 5G ಸೇವೆಯು ಈಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ದೇಶದ ಎಲ್ಲಾ ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಲಭ್ಯವಿದೆ. ಏರ್‌ಟೆಲ್ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ಸೇವೆಗಳನ್ನು ಲಭ್ಯವಾಗಿಸುವ ಮೂಲಕ ಬಹಳ ದೊಡ್ಡ ಸಾಧನೆಯನ್ನು ಮಾಡಿದೆ. ಕೊಡಗಿನ ಪಶ್ಚಿಮ ಘಟ್ಟಗಳಲ್ಲಿನ ದಟ್ಟ ಕಾಡುಗಳು, ಐತಿಹಾಸಿಕ ನಗರ ಮೈಸೂರು, ತಂತ್ರಜ್ಞಾನದ ಗೂಡಾಗಿರುವ ಬೆಂಗಳೂರಿನಿಂದ ಹಿಡಿದು ಮಂಗಳೂರಿನ ಶ್ರೀಮಂತ ಕಡಲ ತೀರವರೆಗೆ ಏರ್‌ಟೆಲ್ ತನ್ನ 5G ವ್ಯಾಪ್ತಿಯನ್ನು ವೇಗವಾಗಿ ವಿಸ್ತರಣೆಗೊಂಡಿದೆ. ಇದಲ್ಲದೆ, ಇದು ತನ್ನ ಡಿಜಿಟಲ್ ಉನ್ನತಿಯ ಮಾರ್ಗದಲ್ಲಿ ಕರ್ನಾಟಕದ ಚಿಕ್ಕಮಗಳೂರಿನ ಉನ್ನತ ಶಿಖರವಾದ ಮುಳ್ಳಯ್ಯನಗಿರಿ ಮತ್ತು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಹಂಪಿಯನ್ನೂ ಸೇರಿಸಿಕೊಂಡಿದೆ.
undefined
ಭಾರತೀಯ ಬಿಲಿಯನೇರ್ ಭಾರ್ತಿ ಏರ್‌ಟೆಲ್ ಮಾಲೀಕರ ಮಗಳು, ಲಂಡನ್‌ನಲ್ಲಿ ಬೃಹತ್ ಉದ್ಯಮಿ
ರಾಜ್ಯದಲ್ಲಿ ಅಧಿಕ-ವೇಗದ 5G ತಂತ್ರಜ್ಞಾನವನ್ನು ಸ್ಥಾಪಿಸುವ ಮೊದಲ ದೂರಸಂಪರ್ಕ ಸಂಸ್ಥೆ ನಾವಾಗಿದ್ದೇವೆ ಮತ್ತು ಇಂದು ನಮ್ಮ ಗ್ರಾಹಕರ ಜೀವನಗಳಲ್ಲಿ ಸಂಪರ್ಕ ಸಾಧನೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತಿರಲು ನಮಗೆ ಬಹಳ ಸಂತೋಷವಾಗುತ್ತಿದೆ ಎಂದುಭಾರತಿ ಏರ್‌ಟೆಲ್ ನ ಕರ್ನಾಟಕದ ಸಿಇಒ ವಿವೇಕ್ ಮೆಹೆಂದಿರತ್ತ ಹೇಳಿದ್ದಾರೆ. ನಮ್ಮ ಏರ್‌ಟೆಲ್ 5G ಪ್ಲಸ್ ನೆಟ್ವರ್ಕ್ ಅನ್ನು ತುಂಬು ಹೃದಯದಿಂದ ಸ್ವಾಗತಿಸಿದ ಎಲ್ಲಾ 5.1 ದಶಲಕ್ಷ ಗ್ರಾಹಕರಿಗೆ ನಮ್ಮ ಧನ್ಯವಾದಗಳು. ನಾವು ನವಯುಗದ 5G ತಂತ್ರಜ್ಞಾನಕ್ಕೆ ಮತ್ತು ಗ್ರಾಹಕರ ತೃಪ್ತಿಗೆ ಆದ್ಯತೆ ನೀಡುವ ಮೂಲಕ 5G ಗ್ರಾಹಕರ ಸಾಟಿಯಿಲ್ಲದ ಬೆಳವಣಿಗೆಯೊಂದಿಗೆ ನಮ್ಮ ಸೇವೆಗಳನ್ನು ಒದಗಿಸುವುದನ್ನು ಮುಂದುವರೆಸುತ್ತೇವೆ. ನಮ್ಮ 5G ಸೇವೆಗಳು ಎಲ್ಲಾ 31 ಜಿಲ್ಲೆಗಳಲ್ಲಿ ಉತ್ಕೃಷ್ಟ ವಿಸ್ತಾರವಾದ, ವೇಗದ ಮತ್ತು ಅತ್ಯಂತ ಅವಲಂಬಿತ ನೆಟ್ವರ್ಕ್ ಹೊಂದಿದೆ ಎಂದು ಮೆಹೆಂದಿರತ್ತ ಹೇಳಿದ್ದಾರೆ.
ದೇಶದ 125 ನಗರಗಳಲ್ಲಿ 5G ಸೇವೆ ಪ್ರಾರಂಭಿಸಿದ ಏರ್ ಟೆಲ್; ಈಗ ಒಟ್ಟು 265 ನಗರಗಳಲ್ಲಿ ಲಭ್ಯ
ಕಳೆದ ವರ್ಷದಲ್ಲಿ, ಏರ್‌ಟೆಲ್ 5G ನಾವಿನ್ಯತೆಯು ಆವಿಷ್ಕಾರದ ತುದಿಯಲ್ಲಿತ್ತು ಮತ್ತು ಇದು ಗ್ರಹಕರು ತಮ್ಮ ಜೀವನವನ್ನು ಹೇಗೆ ನಡೆಸುತ್ತಾರೆ ಮತ್ತು ವ್ಯವಹಾರ ಹೇಗೆ ನಡೆಸುತ್ತಾರೆ ಎಂಬುದನ್ನು ಕಾಂತ್ರಿಕಾರಿಯಾಗಿಸುವುದರ ಮೂಲಕ 5G ಯ ಪರಿವರ್ತಕ ಶಕ್ತಿಯನ್ನು ಯಶಸ್ವಿಯಾಗಿ ತೋರಿಸುತ್ತದೆ. ಇದರಲ್ಲಿ ಮುಖ್ಯವಾಗಿ ಬೆಂಗಳೂರಿನ ಬಾಷ್ ಕೇಂದ್ರದಲ್ಲಿ ಭಾರತದ ಮೊದಲ ಖಾಸಗಿ 5G ನೆಟ್ವರ್ಕ್ ಸ್ಥಾಪಿಸುವುದು ಮತ್ತು ಅದರ ಚಕನ್ ಉತ್ಪಾದನಾ ಘಟಕವನ್ನು ಭಾರತದ ಮೊದಲ 5G-ಸಕ್ರಿಯಗೊಳಿಸಿದ ವಾಹನ ಉತ್ಪಾದನಾ ಸೌಲಭ್ಯವಾಗಿ ಪರಿವರ್ತಿಸಲು ಮಹೀಂದ್ರಾ ಮತ್ತು ಮಹೀಂದ್ರಾ ಜೊತೆ ಪಾಲುದಾರಿಕೆಯನ್ನು ಒಳಗೊಂಡಿರುತ್ತದೆ. ಏರ್‌ಟೆಲ್ ಇತ್ತೀಚೆಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್ ಫೈಬರ್ ಅನ್ನು ಬಿಡುಗಡೆ ಮಾಡಿದೆ. ಇದು ದೆಹಲಿ ಮತ್ತು ಮುಂಬೈನಲ್ಲಿ ಏರ್‌ಟೆಲ್ 5G ಪ್ಲಸ್‌ನಿಂದ ನಡೆಸಲ್ಪಡುವ ಭಾರತದ ಮೊದಲ ವೈರ್‌ಲೆಸ್ ಹೋಮ್ ವೈ-ಫೈ ಸೇವೆಯಾಗಿದೆ. ಇದು ತನ್ನ ಗ್ರಾಹಕರಿಗೆ ತನ್ನ ಅತ್ಯುತ್ತಮ 5G ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ.