ಹಬ್ಬದ ಸೀಸನ್‌ನಲ್ಲಿ ವಿದ್ಯಾರ್ಥಿಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಇಂಟರ್ನ್ ಶಿಪ್!

By Suvarna News  |  First Published Oct 11, 2020, 5:31 PM IST
  • ದೇಶಾದ್ಯಂತ 2 ನೇ ಶ್ರೇಣಿಯ ಪಟ್ಟಣಗಳ ವಿದ್ಯಾರ್ಥಿಗಳಿಗೆ ಈ ಅವಕಾಶ
  • ಲಾಂಚ್ ಪ್ಯಾಡ್ ನಿಂದ ವಿದ್ಯಾರ್ಥಿಗಳು ಸಪ್ಲೈ ಚೇನ್ ನ ನಿರ್ವಹಣೆ ಕುರಿತು ತರಬೇತಿ ಪಡೆಯಲಿದ್ದಾರೆ

ಬೆಂಗಳೂರು(ಅ.11): ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್, ಮುಂಬರುವ ಹಬ್ಬದ ಸೀಸನ್ ಮತ್ತು ಬಿಗ್ ಬಿಲಿಯನ್ ಡೇಸ್ ಸಂದರ್ಭದಲ್ಲಿ ತನ್ನ ಸಪ್ಲೈ ಚೇನ್ ನಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ 2 ನೇ ಶ್ರೇಣಿ ಮತ್ತು ನಂತರದ ನಗರಗಳ ಪದವಿಪೂರ್ವ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಕಾರ್ಯಕ್ರಮವನ್ನು ಪರಿಚಯಿಸಿದೆ. 45 ದಿನಗಳ ಪಾವತಿ `ಲಾಂಚ್ ಪ್ಯಾಡ್’ ಇಂಟರ್ನ್ ಶಿಪ್ ಕಾರ್ಯಕ್ರಮ ಇದಾಗಿದ್ದು, ಸಪ್ಲೈ ಚೇನ್ ನಿರ್ವಹಣೆಯ ಕೌಶಲ್ಯಗಳನ್ನು ಕಲಿಯುವುದು ಮತ್ತು ಇ-ಕಾಮರ್ಸ್ ಉದ್ಯಮಕ್ಕೆ ತರಬೇತಿ ಹೊಂದಿದ ವೃತ್ತಿಪರರನ್ನೊಳಗೊಂಡ ಪರಿಸರ ವ್ಯವಸ್ಥೆಯನ್ನು ಸೃಷ್ಟಿ ಮಾಡುವುದು ಇದರ ಉದ್ದೇಶವಾಗಿದೆ.

ಬಿಲಿಯನ್‌ ಡೇಸ್‌ನಲ್ಲಿ ಮೋಟಾರೋಲಾ ಸ್ಮಾರ್ಟ್ ಫೋನ್‌ ಉಪಕರಣ ಬಿಡುಗಡೆ!

Tap to resize

Latest Videos

ವಿದ್ಯಾರ್ಥಿಗಳು ಫ್ಲಿಪ್ ಕಾರ್ಟ್ ನ ಸಪ್ಲೈ ಚೇನ್ ನಲ್ಲಿ ಕೆಲಸ ಮಾಡಲು ಪೂರಕವಾಗಿ ಲಾಂಚ್ ಪ್ಯಾಡ್ ಅನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೇ, ಇ-ಕಾಮರ್ಸ್ನ ಪ್ರಮುಖ ವಿಧಾನಗಳನ್ನು ಕಲಿಯಲು ನೆರವಾಗುತ್ತದೆ. ವಿವಿಧ ಅಗತ್ಯ ಸಪ್ಲೈ ಚೇನ್ ಪಾತ್ರಗಳ ನಿರ್ವಹಣೆಯಲ್ಲಿ ಭಾರತದ ಭವಿಷ್ಯದ ಉದ್ಯೋಗ ಶಕ್ತಿಯನ್ನು ರೂಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಇದು ದೀರ್ಘಾವಧಿಯಲ್ಲಿ ಅರ್ಹವಾದ, ಉತ್ತಮ ತರಬೇತಿ ಹೊಂದಿದ ಮತ್ತು ಕೌಶಲ್ಯಭರಿತ ವೃತ್ತಿಪರರನ್ನು ರೂಪಿಸಲು ಇದು ಸಹಕಾರಿಯಾಗುತ್ತದೆ.

ಈ ದಿಸೆಯಲ್ಲಿ ಫ್ಲಿಪ್ ಕಾರ್ಟ್ ಬಿನೋಲಾ(ಹರ್ಯಾಣ), ಭಿವಾಂಡಿ(ಮಹಾರಾಷ್ಟ್ರ), ಉಲುಬೇರಿಯಾ ಮತ್ತು ಡಾಂಕುನಿ (ಪಶ್ಚಿಮ ಬಂಗಾಳ), ಮಾಲೂರು (ಕರ್ನಾಟಕ), ಮೇಡ್ಚಲ್(ತೆಲಂಗಾಣ) ಸೇರಿದಂತೆ ಒಟ್ಟು 21 ಪಟ್ಟಣಗಳ ಶಿಕ್ಷಣ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸುತ್ತಿದೆ. ಆಯ್ಕೆಯಾದ ವಿದ್ಯಾರ್ಥಿಗಳನ್ನು ಫ್ಲಿಪ್ ಕಾರ್ಟ್ ತನ್ನ ಫುಲ್ ಫಿಲ್ ಮೆಂಟ್ ಕೇಂದ್ರಗಳಲ್ಲಿ ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸಲಿದೆ. ಮುಂಬರುವ ಹಬ್ಬದ ಋತುವಿನಲ್ಲಿ ಮತ್ತು ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇಸ್ ವರೆಗೆ ಈ ಇಂಟರ್ನ್ ಶಿಪ್ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಇ-ಕಾಮರ್ಸ್ ಕಾರ್ಯಾಚರಣೆಗಳ ಉನ್ನತ ಮಟ್ಟದ ಒಳನೋಟಗಳನ್ನು ತಿಳಿಸಿಕೊಡಲಿದೆ.

ಬಿಗ್ ಬಿಲಿಯನ್ ಡೇಸ್ ಆಫರ್: ಕೇವಲ 1 ರೂಪಾಯಿಯಲ್ಲಿ ಪ್ರೀ- ಬುಕಿಂಗ್

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಪ್ಲೈ ಚೇನ್ ನಿರ್ವಹಣೆಗೆ ಸಂಬಂಧಿಸಿದ ವಿವಿಧ ಅಂಶಗಳ ಕುರಿತು ತರಬೇತಿಯನ್ನು ನೀಡಲಾಗುತ್ತದೆ. ಈ ವೇಳೆ ಆರೋಗ್ಯ ಮತ್ತು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ತನ್ನ ಎಲ್ಲಾ ಕೇಂದ್ರಗಳಲ್ಲಿ ಸಿಬ್ಬಂದಿ ಪ್ರವೇಶ ಮಾಡುವ ಮುನ್ನ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ, ಕೆಲಸ ಮಾಡುವ ಸ್ಥಳದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತದೆ, ಎಲ್ಲಾ ಸಂದರ್ಭದಲ್ಲಿಯೂ ಆರೋಗ್ಯ ಸೇತು ಆ್ಯಪ್ ಅನ್ನು ಬಳಸಲಾಗುತ್ತದೆ.

ಜ್ಞಾನವನ್ನು ಹಂಚಿಕೆ ಮಾಡಿಕೊಳ್ಳುವಲ್ಲಿ ಮತ್ತು ಭಾರತದಲ್ಲಿ ಇ-ಕಾಮರ್ಸ್ ಉದ್ಯಮದ ಕ್ಷಿಪ್ರಗತಿಯ ಬೆಳವಣಿಗೆಗೆ ಕೌಶಲ್ಯಭರಿತವಾದ ಉದ್ಯೋಗಿಗಳ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡುವಲ್ಲಿ ಮುಂಚೂಣಿಯಲ್ಲಿರುತ್ತದೆ. ಈ ನಿಟ್ಟಿನಲ್ಲಿ ನಾವು ಕಳೆದ ವರ್ಷ ಲಾಂಚ್ ಪ್ಯಾಡ್ ಇಂಟರ್ನ್ ಶಿಪ್ ಕಾರ್ಯಕ್ರಮವನ್ನು ಪರಿಚಯಿಸಿದ್ದೆವು. ಆಧುನಿಕ ಸಪ್ಲೈ ಚೇನ್ ನಲ್ಲಿ ಕೆಲಸ ಮಾಡುವ ಅನುಭವ ಹೊಂದಲು ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದ ಮೂಲಕ ಅವಕಾಶವನ್ನು ನೀಡಲಾಗುತ್ತದೆ. ಅಲ್ಲದೇ, ಈ ಉದ್ಯಮದಲ್ಲಿ ಯಶಸ್ಸು ಸಾಧಿಸುವ ಅಗತ್ಯ ಕೌಶಲ್ಯಗಳನ್ನು ಹೇಳಿಕೊಡಲಾಗುತ್ತದೆ. ವೃತ್ತಿಪರ ಜಗತ್ತಿಗೆ ಪಾದಾರ್ಪಣೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಲ್ಲಿ ಈ ಇಂಟರ್ನ್ ಶಿಪ್ ಕಾರ್ಯಕ್ರಮಗಳು ತೀವ್ರ ಕುತೂಹಲವನ್ನು ಮೂಡಿಸುತ್ತಿವೆ. ಎಚ್ಚರಿಕೆಯಿಂದ ರೂಪಿಸಲಾಗಿರುವ ನಮ್ಮ ಇಂಟರ್ನ್ ಶಿಪ್ ಕಾರ್ಯಕ್ರಮ ವಿದ್ಯಾರ್ಥಿಗಳ ಒಟ್ಟಾರೆ ಅಭಿವೃದ್ಧಿಗಾಗಿ ಕೆಲಸ ಮಾಡುತ್ತದೆ. ಮುಂಬರುವ ಹಬ್ಬದ ಋತುವಿನಲ್ಲಿ ನಮ್ಮ ತರಬೇತಿ ಹೊಂದುವ ಅಭ್ಯರ್ಥಿಗಳಿಗೆ ಆಕರ್ಷಕವಾಗಿ ಮತ್ತು ಕೆಲಸದಲ್ಲಿ ಅನುಭವವನ್ನು ಒದಗಿಸುವ ವಿಶ್ವಾಸ ನಮಗಿದೆ. ಅಲ್ಲದೇ, ಸಪ್ಲೈ ಚೇನ್ ಕಡೆಗೆ ಹೆಚ್ಚಿನ ಆಸಕ್ತಿಯನ್ನು ಮೂಡಿಸಲು ಇದು ಸಹಾಯ ಮಾಡುತ್ತದೆ ಎಂದು  ಫ್ಲಿಪ್ ಕಾರ್ಟ್ ನ ಹಿರಿಯ ಉಪಾಧ್ಯಕ್ಷ ಅಮಿತೇಶ್ ಝಾ ಹೇಳಿದರು.`

ಕಳೆದ ವರ್ಷ ಆರಂಭವಾದ ಇಂಟರ್ನ್ ಶಿಪ್ ಕಾರ್ಯಕ್ರಮದಲ್ಲಿ ದೇಶಾದ್ಯಂತ 2000 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಬಿಗ್ ಬಿಲಿಯನ್ ಡೇಸ್ ಸಂದರ್ಭದಲ್ಲಿ ಸಪ್ಲೈ ಚೇನ್ ನಿರ್ವಹಣೆ ಕುರಿತು ತಿಳಿದುಕೊಂಡಿದ್ದರು. ಅಲ್ಲದೇ, ಪಾಲುದಾರರ ಪರಿಸರ ವ್ಯವಸ್ಥೆಯನ್ನು ಒಂದೆಡೆ ಸೇರಿಸುವ ಫ್ಲಿಪ್ ಕಾರ್ಟ್ ನ ಹಲವಾರು ಉಪಕ್ರಮಗಳ ಬಗ್ಗೆ ಅರಿತುಕೊಳ್ಳಲು ಇದು ಸಹಕಾರಿಯಾಗಿದೆ. ಈ ಮಾನ್ಯತೆ ಪಡೆದ ವಿದ್ಯಾರ್ಥಿಗಳಿಗೆ ತಮ್ಮ ಕಾರ್ಯಾಚರಣೆಗಳಲ್ಲಿ ದೀರ್ಘಕಾಲೀನವಾದ ಸ್ಥಿತಿ ಸ್ಥಾಪಕತ್ವ ಮತ್ತು ಚುರುಕುತನವನ್ನು ಬೆಳೆಸಲು ಇದು ಸಹಾಯ ಮಾಡುತ್ತದೆ.

click me!