ಕೊರೋನಾ ವೈರಸ್ ನಿಯಂತ್ರಣದ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಆತ್ಮನಿರ್ಭರ್ ಭಾರತಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದೀಗ ಆ್ಯಪಲ್ ಕಂಪನಿ ಇದೇ ಮೊದಲ ಬಾರಿಗೆ ಟಾಪ್ ಮಾಡೆಲನ್ನು ಭಾರತದಲ್ಲೇ ಉತ್ಪಾದನೆ ಮಾಡಿದೆ.
ಚೆನ್ನೈ(ಜು.24) ಆತ್ಮನಿರ್ಭರ್ ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಬೆನ್ನಲ್ಲೇ ಸ್ಥಳೀಯ ವಸ್ತುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗಲು ಆರಂಭವಾಯಿತು. ಹಲವು ವಿದೇಶಿ ಕಂಪನಿಗಳು ಭಾರತದಲ್ಲೇ ನಿರ್ಮಾಣಕ್ಕೆ ತಯಾರಿ ಆರಂಭಿಸಿತು. ಇದೀಗ ಮೋದಿ ಆತ್ಮನಿರ್ಭರ್ ಭಾರತ ಮೊದಲ ಯಶಸ್ಸು ಸಿಕ್ಕಿದೆ. ಆ್ಯಪಲ್ ಐಪೋನ್ 11 ಭಾರತದಲ್ಲೇ ಉತ್ಪಾದನೆಯಾಗಿದೆ.
ಅಮೆರಿಕದ ಉದ್ಯಮಿಗಳಿಗೆ ಮೋದಿ ರತ್ನಗಂಬಳಿ!
ಭಾರತದಲ್ಲಿ ಮಾರಾಟವಾಗುತ್ತಿದ್ದ ಆ್ಯಪಲ್ ಫೋನ್‌ಗಳು ಚೀನಾದಲ್ಲಿ ಉತ್ಪಾದನೆಯಾಗುತ್ತಿತ್ತು. ಆದರೆ ಆತ್ಮನಿರ್ಭರ್ ಭಾರತಕ್ಕೆ ಪ್ರಧಾನಿ ಒತ್ತು ನೀಡಿದ ಬೆನ್ನಲ್ಲೇ ಆ್ಯಪಲ್ ಇದೇ ಮೊದಲ ಬಾರಿಗೆ ಐಫೋನ್ 11 ಟಾಪ್ ಮಾಡೆಲ್‌ನ್ನು ಚೆನ್ನೈ ಫಾಕ್ಸ್‌ಕಾನ್ ಘಟಕದಲ್ಲಿ ಉತ್ಪಾದನೆ ಮಾಡಲಾಗಿದೆ. ಈ ಕುರಿತು ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
ಯುದ್ಧವೂ ಇಲ್ಲ, ಬಂದೂಕೂ ಇಲ್ಲ ಚೀನಾ ಮಟ್ಟ ಹಾಕಲು ಮೋದಿ ಮಾಸ್ಟರ್ ಪ್ಲಾನ್..
ಮೇಡ್ ಇನ್ ಇಂಡಿಯಾ ಕಲ್ಪನೆಗೆ ಮತ್ತಷ್ಟು ಯಶಸ್ಸು ಸಿಕ್ಕಿದೆ. ಆ್ಯಪಲ್ ಕಂಪನಿ ಇದೇ ಮೊದಲ ಬಾರಿಗೆ ಟಾಪ್ ಮಾಡೆಲ್ ಆದ ಐಫೋನ್ 11 ಭಾರತದಲ್ಲೇ ನಿರ್ಮಾಣ ಮಾಡಿದೆ ಎಂದು ಪಿಯೂಷ್ ಗೋಯೆಲ್ ಹೇಳಿದ್ದಾರೆ.
2016ರಲ್ಲಿ ಆ್ಯಪಲ್ ಕಂಪನಿ ಐಫೋನ್ SE ಮಾಡೆಲ್‌ನ್ನು ಬೆಂಗಳೂರಿನ ಘಟಕದಲ್ಲಿ ಉತ್ಪಾದನೆ ಮಾಡಿತ್ತು. ಆದರೆ ಟಾಪ್ ಮಾಡೆಲ್‌ಗಳು ಭಾರತದಲ್ಲಿ ಉತ್ಪಾದನೆ ಇರಲಿಲ್ಲ. ಇಲ್ಲಿ ಬಿಡಿ ಭಾಗಗಳನ್ನು ಆಮದು ಮಾಡಿಕೊಂಡು ಜೋಡಣೆ ಮಾಡಲಾಗುತ್ತಿತ್ತು. ಇದೀಗ ಐಫೋನ್ 11 ಮಾಡೆಲ್ ಎಲ್ಲಾ ಭಾಗಗಳು ಭಾರತದಲ್ಲೇ ನಿರ್ಮಾಣವಾಗೋ ಮೂಲಕ ಇದು ಮೇಡ್ ಇನ್ ಇಂಡಿಯಾ ಉತ್ಪನ್ನವಾಗಿದೆ.