ಕೊರೋನಾ ಹೆಸರಿನಲ್ಲಿ ನಿಮ್ಮ ಖಾತೆಗೂ ಕನ್ನ ಬೀಳಬಹುದು ಹುಷಾರ್‌

By Suvarna News  |  First Published Jul 24, 2020, 5:06 PM IST

ಕೊರೋನಾ ಮಹಾಮಾರಿಯ ಹೆಸರಿನಲ್ಲಿ ಸೈಬರ್‌ ವಂಚಕರು, ಹ್ಯಾಕರ್‌ಗಳು ಕೂಡ ರಂಗಕ್ಕೆ ಇಳಿದಿದ್ದಾರೆ. ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸೈಬರ್ ಖದೀಮರು ದಿನಕ್ಕೊಂದು ಹೊಸ ಕೈಚಳಕ ತೋರಿಸುತ್ತಲೇ ಇದ್ದಾರೆ. ಅದರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಹೆಸರಲ್ಲೂ ನಿಮ್ಮ ಹಣ ಲೂಟಿ ಮಾಡುವವರಿದ್ದಾರೆ ಎಚ್ಚರ.


ನಿಮಗೆ ಕೊರೋನಾ ನಿಧಿಗೆ ಹಣ ಸಹಾಯ ಮಾಡುವಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್ಒ)ಯ ಅಥವಾ ಪ್ರಧಾನ ಮಂತ್ರಿ ಕೋವಿಡ್‌ ಫಂಡ್‌ ಹೆಸರಿನಲ್ಲಿ ಇಮೇಲ್‌, ಯಾವುದಾದರೂ ವೆಬ್‌ಸೈಟ್‌ ಲಿಂಕ್‌ ಬಂದಿದ್ದರೆ ಹುಷಾರಾಗಿರಿ. ಯಾವುದೇ ಕಾರಣಕ್ಕೂ ಅದನ್ನು ಕ್ಲಿಕ್‌ ಮಾಡಲು ಹೋಗಬೇಡಿ. ಇಂಥವರ ಬಗ್ಗೆ ಖುದ್ದು ಡಬ್ಲೂಎಚ್ಒ ಸಂಸ್ಥೆಯೇ ತನ್ನ ವೆಬ್ಸೈಟ್‌ನಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಬಲ್ಲ ಮೂಲಗಳ ಅಂದಾಜಿನ ಪ್ರಕಾರ ವಿಶ್ವದಾದ್ಯಂತ ಇದುವರೆಗೆ ನೂರಾರು ಕೋಟಿ ರೂ. ಸೈಬರ್ ಕಳ್ಳರ ಬೊಕ್ಕಸಕ್ಕೆ ಹೋಗಿದೆ.
 
ವಂಚನೆ ಹೇಗೆ?
ಡಬ್ಲೂಎಚ್ಒ ಸಂಸ್ಥೆಯ ಸಿಬ್ಬಂದಿ ಹೆಸರಿನಲ್ಲಿ ನಿಮ್ಮ ಇಮೇಲ್‌ಗೆ ಸೈಬರ್ ಕಳ್ಳರು ಸಂದೇಶ ಹಾಗೂ ಲಿಂಕ್ ಕಳಿಸುತ್ತಾರೆ. ಕೊರೋನಾ ವಿರುದ್ಧ ಹೋರಾಟ ನಡೆಸಲು, ಕೊರೋನಾ ಸಂತ್ರಸ್ತರಿಗೆ ಪರಿಹಾರ ನೀಡಲು ಅಥವಾ ಕರೊನಾ ವಾರಿಯರ್ಸ್ಗಳಿಗೆ ನೆರವು ನೀಡುವ  ನಿಟ್ಟಿನಲ್ಲಿ ನಿಧಿ ಸಂಗ್ರಹಿಸುತ್ತಿದ್ದೇವೆ. ನಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿ ಎಂದು ಸಂದೇಶದಲ್ಲಿ ಉಲ್ಲೇಖಿಸುತ್ತಾರೆ. ಇದನ್ನು ನಂಬಿ ಅವರು ಕಳಿಸಿದ ಖಾತೆಗೆ ಹಣ ಜಮೆ ಮಾಡಿದ ಲಕ್ಷಾಂತರ ಜನರ ದುಡ್ಡು ಸದ್ಯ ಸೈಬರ್ ಖದೀಮರ ಖಜಾನೆ ಸೇರಿದೆ. ಆನ್ಲೈನ್ ವಂಚಕರು ಕಳಿಸಿದ ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಂಡವರ ಸಂಖ್ಯೆಯೂ ಸಾಕಷ್ಟಿದೆ. ನಿಧಿ ಸಂಗ್ರಹಿಸುವ ಹೆಸರಿನಲ್ಲಿ ಸೈಬರ್ ವಂಚನೆ ನಡೆಯುತ್ತಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಡಬ್ಲೂಎಚ್ಒ ಸಂಸ್ಥೆ, ನಕಲಿ ಸಂದೇಶಗಳಿಗೆ ಮರುಳಾಗಬೇಡಿ ಎಂಬುದಾಗಿ ಎಚ್ಚರಿಕೆ ನೀಡಿದೆ.

Tap to resize

Latest Videos

ರಾಮಮಂದಿರ ಭೂಮಿಪೂಜೆ ಮುಹೂರ್ತವೇ ಸರಿಯಿಲ್ಲ..! 

ಡಬ್ಲೂಎಚ್ಒ ಏನು ಹೇಳಿದೆ? 
*ಡಬ್ಲೂಎಚ್ಒಗೆ ಸಂಬಂಧಿಸಿದಂತೆ ಹ್ಯಾಕಿಂಗ್ ಮಾಡುತ್ತಿರುವುದು ಬೆಳಕಿಗೆ ಬಂದರೆ ಸಂಸ್ಥೆಯ ವೆಬ್ಸೈಟ್ನಲ್ಲಿ ಈ ಕುರಿತು ವರದಿ ಮಾಡಿ.
*ಡಬ್ಲೂಎಚ್ಒ ಲಾಟರಿ ನಡೆಸುತ್ತದೆ, ಬಹುಮಾನ, ಅನುದಾನ, ಪ್ರಮಾಣ ಪತ್ರ, ಹಣ ಇಮೇಲ್ ಮೂಲಕ ನೀಡುತ್ತದೆ ಎಂಬುದನ್ನು ನಂಬಬೇಡಿ. ಇಂತಹ ವದಂತಿಗೆ ಕಿವಿಗೊಡಬೇಡಿ.
*ಡಬ್ಲೂಎಚ್ಒ ಸಂಸ್ಥೆಯ ಹೆಸರಿನಲ್ಲಿ ಕೊರೋನಾ ವಿಚಾರಕ್ಕೆ ಸಂಬಂಧಿಸಿ ಬರುವ ಭಯಭೀತಿಕಾರಕ ಸಂದೇಶಗಳನ್ನು ನಂಬಬೇಡಿ.
*ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವಾಗ ಎಚ್ಚರಿಕೆ ವಹಿಸಿ.  
*ದೇಣಿಗೆ ನೀಡಲು ಬಳಕೆದಾರರ ಹೆಸರು ಮತ್ತು ಪಾಸ್ವರ್ಡ್ ಬೇಕಾಗುವುದಿಲ್ಲ.
*ಬ್ಯಾಂಕ್ ಖಾತೆ, ಇಮೇಲ್‌ ಪಾಸ್‌ವರ್ಡ್ಗಳನ್ನು ನೀಡಬೇಡಿ.  
*ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರಿಂದ ಸಂದೇಶಗಳು ಬಂದರೆ ವೈಯಕ್ತಿಕ ಮಾಹಿತಿ ನೀಡಬೇಡಿ.  

ತನ್ನನ್ನು ಕೊಲ್ಲಲು ಯತ್ನಿಸಿದ ತಂದೆಯನ್ನೇ ಕೊಂದ 15 ವರ್ಷದ ಬಾಲಕಿ..!

ಪ್ರಧಾನ ಮಂತ್ರಿ ಫಂಡ್ ಹೆಸರಲ್ಲೂ ಟೋಪಿ
ಪ್ರಧಾನ ಮಂತ್ರಿ ಫಂಡ್‌ಗೆ ಧನಸಹಾಯ ಮಾಡಬಹುದು ಎಂಬುದಾಗಿ ಮೊಬೈಲ್ ಅಥವಾ ಇ&ಮೇಲ್ಗೆ ಕಳಿಸುವ ಲಿಂಕ್ಗೆ ಕ್ಲಿಕ್ ಮಾಡಿದರೆ ಕೂಡಲೇ ಅದರಲ್ಲಿ ಹಲವು ಆಯ್ಕೆಗಳು ಬರುತ್ತವೆ. ಆ ಆಯ್ಕೆಗಳಲ್ಲಿ ಬ್ಯಾಂಕ್ ಮಾಹಿತಿ ನೀಡಿದರೆ, ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ
ಹಣ ಕ್ಷಣಾರ್ಧದಲ್ಲೇ ಮಾಯವಾಗುವುದು ಗ್ಯಾರೆಂಟಿ. ಸುಳ್ಳು ಸಿಮ್‌ಕಾರ್ಡ್ ಖರೀದಿಸುವ ವಂಚಕರು, ನಕಲಿ ವ್ಯಾಲೆಟ್ ಸೃಷ್ಟಿಸಿ ಕರೊನಾ ಹೋರಾಟಕ್ಕೆ ನಿಧಿ ಸಂಗ್ರಹಿಸುವುದಾಗಿ ಸಾರ್ವಜನಿಕರ ಇಮೇಲ್ ಅಥವಾ ಮೊಬೈಲ್‌ಗೆ ಸಂದೇಶಗಳನ್ನು ಕಳಿಸುತ್ತಾರೆ. ಇವರ ಸಂದೇಶಕ್ಕೆ ಮರುಳಾದ ಅದೆಷ್ಟೋ ಜನ ಲಕ್ಷಾಂತರ ರೂಪಾಯಿಗಳನ್ನು ಸೈಬರ್ ಕಳ್ಳರ ಖಾತೆಗೆ ವರ್ಗಾವಣೆ ಮಾಡಿದ್ದಾರೆ.

ಆನ್‌ಲೈನ್‌ ಕ್ಲಾಸ್‌ಗಾಗಿ ಹಸು ಮಾರಿ ಮಕ್ಕಳಿಗೆ ಮೊಬೈಲ್‌ ತಂದ ಅಪ್ಪ..! 

ಸಂಘಸಂಸ್ಥೆ ಹೆಸರು ರ್ದುಬಳಕೆ:
ಡಬ್ಲೂಎಚ್ಒ ಮಾತ್ರವಲ್ಲದೇ, ಸುಳ್ಳು ಸಂಘಸಂಸ್ಥೆಗಳ ಹೆಸರು ದುರ್ಬಳಕೆ ಮಾಡಿ ಕೊರೋನಾ ನಿಧಿ ಹೆಸರಿನಲ್ಲಿ ಆನ್ಲೈನ್ನಲ್ಲಿ ಹಣ ವಸೂಲು ಮಾಡುವ ಸೈಬರ್ ಕಳ್ಳರೂ ಹುಟ್ಟಿಕೊಂಡಿದ್ದಾರೆ. ಕೊರೋನಾ ಬೀತಿಯಿಂದ ಕಂಗೆಟ್ಟು ಹೋಗಿರುವ ಜನಸಾಮಾನ್ಯರನ್ನೇ  ಗುರಿಯಾಗಿಸಿಕೊಂಡು ಔಷಧಿ, ಪಿಪಿಇ ಕಿಟ್, ಕೊರೋನಾ ಹೆಲ್ತ್ ಇನ್ಸೂರೆನ್ಸ್ ಹೆಸರಲ್ಲಿ ಹಣ ಪೀಕಿಸುವ ತಂಡ ಸಕ್ರಿಯವಾಗಿದೆ.ಇಂತಹ ನಕಲಿ ವೆಬ್‌ಸೈಟ್‌ಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಿ ಎನ್ನುತ್ತಾರೆ ಸೈಬರ್ ತಜ್ಞರು. ವಂಚಿಸುತ್ತಿರುವ ಈ ಜಾಲವನ್ನು ಬೇಧಿಸುವುದು ಸುಲಭದ ಮಾತಲ್ಲ. ಇದನ್ನು ತಿಳಿದೇ ಕೃತ್ಯ ಎಸಗುತ್ತಿದ್ದಾರೆ ಎನ್ನುತ್ತಾರೆ ಸೈಬರ್ ತಜ್ಞರು.

click me!