ವ್ಯಾಟ್ಸ್ಆ್ಯಪ್ ಹೊಸ ಹೊಸ ಫೀಚರ್ ಪರಿಚಿಸುತ್ತಿದೆ. ಇದೀಗ ಬಳಕೆದಾರರಿಗೆ ಮತ್ತೊಂದು ಕೊಡುಗೆ ನೀಡಿದೆ. ಒಂದೇ ವ್ಯಾಟ್ಸ್ಆ್ಯಪ್ ಖಾತೆಯಲ್ಲಿ ಅಲ್ಟರ್‌ನೇಟ್ ಪ್ರೊಫೈಲ್ ಬಳಸಲು ಸಾಧ್ಯವಿದೆ. ಇದರಿಂದ ಒಂದೇ ಖಾತೆಯಲ್ಲಿ ಎರಡು ಡಿಪಿ, ಎರಡು ಹೆಸರು ಬಳಸಲು ಸಾಧ್ಯವಿದೆ. ಈ ಅಲ್ಟರ್‌ನೇಟ್ ಪ್ರೊಫೈಲ್‌ನ್ನು ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಕಾಣುವಂತೆ ಮಾಡಲು ಸಾಧ್ಯವಿದೆ.
ನವದೆಹಲಿ(ನ.02) ವ್ಯಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಅತ್ಯುತ್ತಮ ಸೇವೆ ನೀಡಲು ಹೊಸ ಹೊಸ ಫೀಚರ್ ಪರಿಚಯಿಸುತ್ತಿದೆ. ಈಗಾಗಲೇ ಹತ್ತು ಹಲವು ಫೀಚರ್ಸ್ ನೀಡಲಾಗಿದೆ. ಇದೀಗ ಅಲ್ಟರ್‌ನೇಟ್ ಪ್ರೊಫೈಲ್ ಫೀಚರ್ ನೀಡಿದೆ. ಈ ಮೂಲಕ ಒಂದೇ ವ್ಯಾಟ್ಸ್ಆ್ಯಪ್ ಖಾತೆಯಲ್ಲಿ ಎರಡು ಪ್ರೊಫೈಲ್ ಸೃಷ್ಟಿಸಲು ಸಾಧ್ಯವಿದೆ. ಈ ಆಲ್ಟರ್‌ನೇಟ್ ಪ್ರೊಫೈಲ್‌ನ್ನು ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಕಾಣುವಂತೆ ಮಾಡಲು ಸಾಧ್ಯವಿದೆ. ಈ ವಕ್ತಿಗಳಿಗೆ ನಿಮ್ಮ ವ್ಯಾಟ್ಸ್ಆ್ಯಪ್ ಖಾತೆಯ ಜನರಲ್ ಪ್ರೊಫೈಲ್ ಅಂದರೆ, ಖಾತೆ ಆರಂಭಿಸುವಾಗ ಹಾಕಿರುವ ಹೆಸರು, ಡಿಪಿ(ಬದಲಾವಣೆ ಮಾಡಿರುವ) ಫೋಟೋಗಳು ಕಾಣಿಸುವುದಿಲ್ಲ.
ಆಲ್ಟರ್‌ನೇಟ್ ಪ್ರೊಫೈಲ್ ಫೀಚರ್‌ನಲ್ಲಿ ಒಂದು ವ್ಯಾಟ್ಸ್ಆ್ಯಪ್ ಖಾತೆಯಲ್ಲಿ ಎರಡು ಪ್ರೊಫೈಲ್ ಬಳಕೆ ಮಾಡಲು ಸಾಧ್ಯವಿದೆ. ಸಾಮಾನ್ಯವಾಗಿ ವ್ಯಾಟ್ಸ್ಆ್ಯಪ್ ಖಾತೆ ಆರಂಭಿಸುವಾಗ ಹೆಸರು, ಅಬೌಟ್(ವಿವರಣೆ ಅಥವಾ ಒಂದು ವಾಕ್ಯದ ಬರಹ)ಗಳನ್ನು ಹಾಕುತ್ತೇವೆ. ಬಳಿಕ ಡಿಪಿ ಹಾಕುತ್ತೇವೆ. ಇದು ಜನರಲ್ ಪ್ರೊಫೈಲ್. ಇದನ್ನು ಯಾವಾಗಬೇಕಾದರು ಬದಲಾಯಿಸಲು ಸಾಧ್ಯವಿದೆ. ಈ ಪ್ರೊಫೈಲ್ ಇತರ ವ್ಯಾಟ್ಸ್ಆ್ಯಪ್ ಬಳಕೆದಾರರು ಅಥವಾ ನಿಮ್ಮ ಸಂಪರ್ಕದಲ್ಲಿರುವ ಬಳಕೆದಾರರಿಗೆ ಕಾಣಲಿದೆ. ಸದ್ಯ ಬೀಟಾ ವರ್ಶನ್‌ನಲ್ಲಿ ಈ ಫೀಚರ್ ಲಭ್ಯವಿದೆ. ಶೀಘ್ರದಲ್ಲೇ ಎಲ್ಲರಿಗೂ ನೂತನ ಫೀಚರ್ ಬಳಕೆಗೆ ಲಭ್ಯವಾಗಲಿದೆ.
undefined
ವ್ಯಾಟ್ಸ್ಆ್ಯಪ್‌ನಲ್ಲಿ ಡಿಲೀಟ್ ಮೆಸೇಜ್ ಓದುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್!
ಇದೀಗ ಇದೇ ಪ್ರೊಫೈಲ್ ಜೊತೆಗೆ ಆಲ್ಟರ್‌ನೇಟ್ ಪ್ರೊಫೈಲ್ ಕ್ರಿಯೇಟ್ ಮಾಡಲು ಸಾಧ್ಯವಿದೆ. ಜನರಲ್ ಪ್ರೊಫೈಲ್ ರೀತಿ ಮತ್ತೊಂದು ಪ್ರೊಫೈಲ್ ಕ್ರಿಯೇಟ್ ಮಾಡಿ ಬೇರೊಂದು ಹೆಸರು, ಬೇರೆ ಡಿಪಿ ಹಾಕಬಹುದು. ಈ ಆಲ್ಟರ್‌ನೆಟ್ ಖಾತೆಯನ್ನು ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಕಾಣುವಂತೆ ಮಾಡಬಹುದು. ಈ ನಿರ್ದಿಷ್ಟ ವ್ಯಕ್ತಿಗಳಿಗೆ ನಿಮ್ಮ ಜನರಲ್ ಪ್ರೊಫೈಲ್ ಕಾಣಿಸುವುದಿಲ್ಲ. ಆಲ್ಟರ್‌ನೇಟ್ ಪ್ರೊಫೈಲ್ ಮೂಲಕ ನಿಮ್ಮ ಲಾಸ್ಟ್ ಸೀನ್ ಸ್ಟೇಟಸ್ ಕಾಣಿಸದಂತೆ ಮಾಡಲು ಸಾಧ್ಯವಿದೆ.
ಈಗಾಗಲೇ ವ್ಯಾಟ್ಸ್ಆ್ಯಪ್ ಹಲವು ಫೀಚರ್ ಲಾಂಚ್ ಮಾಡಿದೆ. ಈ ಪೈಕಿ ಅಪರಿಚಿತ ಅಥವಾ ಸ್ಪಾಪ್ ಕರೆಗಳೆಳನ್ನು ಸೈಲೆಂಟ್ ಮಾಡುವ ಫೀಚರ್ ಕೂಡ ಪರಿಚಯಿಸಿದೆ. ಇದಕ್ಕಾಗಿ ವಾಟ್ಸಾಪ್ ಸೆಟ್ಟಿಂಗ್‌ನಲ್ಲಿ ಸೈಲೆಂಟ್ ಅನ್‌ನೋನ್ ನಂಬರ್ಸ್ ಆಯ್ಕೆಯನ್ನು ಎನೇಬಲ್ ಮಾಡಿದರೆ ಸಾಕು. ಗೊತ್ತಿಲ್ಲದ ನಂಬರ್‌ಗಳಿಂದ ಬರುವ ಕರೆಗಳನ್ನು ವಾಟ್ಸಾಪ್ ಸೈಲೆಂಟ್ ಮಾಡಲಿದೆ. ಈ ಹೊಸ ಫೀಚರನ್ನು ಮಂಗಳವಾರ ಘೋಷಿಸಿದ ಮೆಟಾ ಸಿಇಒ ಮಾರ್ಕ್ ಜ್ಯೂಕರ್ ಬಗ್‌ರ್, ಈಗ ವಾಟ್ಸಾಪ್ ಅನ್‌ನೋನ್ ಕಾಲ್‌ಗಳನ್ನು ಸೈಲೆಂಟ್ ಮಾಡಲಿದೆ. ಆ್ಯಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರು ಈಗ ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ವ್ಯಾಟ್ಸ್ಆ್ಯಪ್ ಚಾನೆಲ್ ಆರಂಭಿಸಿದ ಒಂದೇ ದಿನಕ್ಕೆ ಪ್ರಧಾನಿ ಮೋದಿಗೆ 1 ಮಿಲಿಯನ್ ಫಾಲೋವರ್ಸ್!