ವಿಶ್ವದ ಮೊದಲ 10ಜಿ ಇಂಟರ್ನೆಟ್ ಸೇವೆ ಆರಂಭಿಸಿದ ಚೀನಾ, ಡೌನ್ಲೋಡ್ ಸ್ಪೀಡ್ 9834 Mbps

Published : Apr 29, 2025, 09:06 AM ISTUpdated : Apr 29, 2025, 09:38 AM IST
ವಿಶ್ವದ ಮೊದಲ 10ಜಿ  ಇಂಟರ್ನೆಟ್ ಸೇವೆ ಆರಂಭಿಸಿದ ಚೀನಾ, ಡೌನ್ಲೋಡ್ ಸ್ಪೀಡ್ 9834 Mbps

ಸಾರಾಂಶ

ಭಾರತ ಸೇರಿದಂತೆ ಹಲವು ರಾಷ್ಟ್ರಗಳು 5ಜಿ ಸೇವೆ ಸಂಭ್ರಮಿಸುತ್ತಿದೆ. ಆದರೆ ಚೀನಾ ಎಲ್ಲಾ ದೇಶದ ನೆಟ್‌ವರ್ಕ್ ಕಸದ ಬುಟ್ಟಿಗೆ ಹಾಕಿದೆ. ಕಾರಣ ಚೀನಾ ವಿಶ್ವದ ಮೊದಲ 10ಜಿ ಬ್ರಾಡ್‌ಬ್ಯಾಂಡ್ ಸೇವೆ ಆರಂಭಿಸಿದೆ.

ಬೀಜಿಂಗ್(ಏ.29) ತಂತ್ರಜ್ಞಾನ ಬಳಕೆಯಲ್ಲಿ ಚೀನಾ ಹಿಂದಿಕ್ಕಿಲು ಸದ್ಯ ಯಾವುದೇ ದೇಶಕ್ಕೆ ಸಾಧ್ಯವಿಲ್ಲ. ಪ್ರತಿ ಕ್ಷೇತ್ರದಲ್ಲಿ ಚೀನಾ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡುತ್ತದೆ. ಇನ್ನು ತಂತ್ರಜ್ಞಾನ ಆವಿಷ್ಕಾರ, ಸಂಶೋಧನೆಯಲ್ಲೂ ಚೀನಾ ಇತರ ಎಲ್ಲಾ ದೇಶಗಳಿಗಿಂತ ಮುಂದಿದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳು 5ಜಿ ನೆಟ್‌ವರ್ಕ್ ಸೇವೆ ಆನಂದಿಸುತ್ತಿದೆ. ಹೈಸ್ಪೀಡ್ ಇಂಟರ್ನೆಟ್, ಬ್ರ್ಯಾಂಡ್‌ಬ್ಯಾಂಡ್ ಸೇವೆಗಳನ್ನು ಬಳಸಿಕೊಳ್ಳುತ್ತಿದೆ. ಆದರೆ ಚೀನಾ ಊಹೆಗೂ ನಿಲುಕದ ರೀತಿಯಲ್ಲಿ ವಿಶ್ವದ ಮೊದಲ 10ಜಿ ಬ್ರಾಡ್‌ಬ್ಯಾಂಡ್ ಸೇವೆ ಆರಂಭಿಸಿದೆ. ಮುಂಚಿನ ವೇಗದ ಇಂಟರ್ನೆಟ್ ಚೀನಾದಲ್ಲಿ ಲಭ್ಯವಿದೆ. ಚೀನಾದ 10ಜಿ ಇದೀಗ ವಿಶ್ವದಲ್ಲೇ ಭಾರಿ ಕೋಲಾಹಲ ಸೃಷ್ಟಿಸಿದೆ.

ಚೀನಾದ ಹೆಬೈ ಪ್ರಾಂತ್ಯದ ಕ್ಸಿಯಾಂಗನ್ ಸಿಟಿಯಲ್ಲಿ 10ಜಿ ನೆಟ್‌ವರ್ಕ್ ಬ್ರಾಡ್‌ಬ್ಯಾಂಡ್ ಸೇವೆ ಆರಂಭಿಸಲಾಗಿದೆ. ಈ 10ಜಿ ಸೇವೆ ಜಾಗತಿಕ ಡಿಜಿಟಲ್ ಮೂಲಭೂತ ಸೌಕರ್ಯದ ಚಿತ್ರಣವನ್ನು ಬದಲಿಸಿದೆ.ಚೀನಾ ಸರ್ಕಾರದ ಟೆಲಿಕಮ್ಯೂನಿಕೇಶನ್ ಭಾಗಾಗಿ ಹುವೈ ಹಾಗೂ ಯುನಿಕಾಮ್ ಜಂಟಿಯಾಗಿ ಈ 10ಜಿ ಸೇವೆ ಅಭಿವೃದ್ಧಿಪಡಿಸಿ ಲಾಂಚ್ ಮಾಡಿದೆ. ಈ 10ಜಿ ಸೇವೆ ಊಹೆಗೆ ನಿಲುಕದ ವೇಗದಲ್ಲಿ ಇಂಟರ್ನೆಟ್ ಲಭ್ಯವಿದೆ. ಸದ್ಯ ಭಾರತದಲ್ಲಿರುವ 5ಜಿ  ಸೇವೆಯ ಡೌನ್ಲೋಡ್ ಹಾಗೂ ಅಪ್ಲೋಡ್, ಲ್ಯಾಟೆನ್ಸಿ ಸ್ಪೀಡ್‌ಗೂ 10ಜಿ ಸೇವೆಯ ಸ್ಪೀಡ್‌ಗೂ ಅಜಗಜಾಂತರ ವ್ಯತ್ಯಾಸವಿದೆ.

BSNL ಬಳಕೆದಾರರಿಗೆ ಡಬಲ್ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ

10ಜಿ ಸೇವೆಯ ಸ್ಪೀಡ್
ಎಕಾನಿಕ್ ಟೈಮ್ಸ್ ವರದಿ ಪ್ರಕಾರ ಚೀನಾದಲ್ಲಿ ಆರಂಭಿಸಿರುವ ವಿಶ್ವದ ಮೊದಲ 10 ಜಿ ಸೇವೆಯ ಡೌನ್ಲೋಡ್ ಸ್ಪೀಡ್ ಬರೋಬ್ಬರಿ 9,834Mbps. ಇನ್ನು ಅಪ್‌ಲೋಡ್ ಸ್ಪೀಡ್ 1,008Mbps. ಬಳಕೆದಾರ ಯಾವುದೇ ಇಂಟರ್ನೆಟ್ ಬಳಕೆ ಮಾಡುವಾಗ ಅಂದರೆ ವೆಬ್‌ಸೈಟ್, ಆ್ಯಪ್, ಯೂಟ್ಯೂಬ್, ವಿಡಿಯೋ, ಮೂವಿ, ರೀಲ್ಸ್ ಸೇರಿದಂತೆ ಯಾವುದೇ ನೆಟ್ ಕನೆಕ್ಟೆಟ್ ಸೈಟ್ ಅಥವಾ  ಆ್ಯಪ್ ಕ್ಲಿಕ್ ಮಾಡಿದರೆ ಲ್ಯಾಟೆನ್ಸಿ ಕೇವಲ 3 ಮಿಲಿ ಸೆಕೆಂಡ್ ಮಾತ್ರ. ಅಷ್ಟು ವೇಗದಲ್ಲಿ ಬಳಕೆದಾರ ಕ್ಲಿಕ್ ಮಾಡಿದ ಬೆನ್ನಲ್ಲೇ ಆ್ಯಪ್ ಅಥವಾ ಸೈಟ್ ಕಾರ್ಯಪ್ರವೃತ್ತಗೊಳ್ಳಲಿದೆ. ಸಾಮಾನ್ಯವಾಗಿ 5ಜಿ ಅಥವಾ 4ಜಿಯಲ್ಲಿ ಕ್ಲಿಕ್ ಮಾಡಿ ಕೆಲ ಹೊತ್ತಿನ ಬಳಿ ಲೋಡ್ ಆಗಲಿದೆ. ಆದರೆ ಇಲ್ಲಿ ಈ ಲ್ಯಾಟೆನ್ಸಿ ಅತೀ ಕಡಿಮೆ ಅಂದರೆ ಕೇವಲ 3 ಮಿಲಿಸೆಕೆಂಡ್ ಸಾಕು.  
 
ಚೀನಾ ಲಾಂಚ್ ಮಾಡಿದ 10ಜಿ ಬ್ರಾಡ್‌ಬ್ಯಾಂಡ್ ಸೇವೆ, ಸದ್ಯ ಜಗತ್ತಿನಲ್ಲಿರುವ ಅತೀ ವೇಗ ಇಂಟರ್ನೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಯುನೈಟೆಡ್ ಅರಬ್ ಎಮಿರೈಟ್ಸ್ ಹಾಗೂ ಸಿಂಗಾಪೂರ ಸೇವೆಗಿಂತ ವೇಗವಾಗಿದೆ. ಅರಬ್ ಎಮಿರೈಟ್ಸ್‌ನಲ್ಲಿರುವ ಇಂಟರ್ನೆಟ್ ಸ್ಪೀಡ್ 313.5 Mbps ಸ್ಪೀಡ್ ಇನ್ನು ಸಿಂಗಾಪುರದಲ್ಲಿ 345.3 Mbps ಸ್ಪೀಡ್.

20 ಸೆಕೆಂಡ್‌ನಲ್ಲಿ 20ಜಿಬಿ 4ಕೆ ಮೂವಿ ಡೌನ್ಲೋಡ್
ಚೀನಾದ 10ಜಿ ನೆಟ್‌ವರ್ಕ್ ಸ್ಪೀಡ್ ಒಂದು ಟಚ್ ಸಾಕು, ಕಣ್ಮುಚ್ಚಿ ತೆರೆಯೊದರೊಳಗೆ ಡೌನ್ಲೋಡ್ ಆಗಿರುತ್ತೆ. ಉದಾಹರಣೆಗೆ 20ಜಿಬಿ ಗಾತ್ರದ 4ಕೆ ರೆಸಲ್ಯೂಶನ್ ಹೊಂದಿರುವ ಸಿನಿಮಾವನ್ನು ಕೇವಲ 20 ಸೆಕೆಂಡ್‌ನಲ್ಲಿ ಡೌನ್ಲೋಡ್ ಮಾಡಲು ಸಾಧ್ಯವಿದೆ. 1ಜಿ ಜಿಬಿಪಿಎಸ್ ಸ್ಪೀಡ್ ಕನೆಕ್ಷನ್‌ನಲ್ಲಿ ಇದೇ ವಿಡಿಯೋ ಡೌನ್ಲೋಡ್ ಮಾಡಲು 7 ರಿಂದ 10 ನಿಮಿಷ ಬೇಕು.

ಕ್ಲೌಡ್ ಕಂಪ್ಯೂಟಿಂಗ್, ವರ್ಚುವಲ್ ರಿಯಾಲಿಟಿ, ಆಗ್ಮೆಂಟೆಡ್ ರಿಯಾಲಿಟಿ ಸೇರಿದಂತೆ ಹಲವು ಅತ್ಯಾಧುನಿಕ ತಂತ್ರಜ್ಞಾವನ್ನು 10ಜಿ ನೆಟ್‌ವರ್ಕ್ ಸ್ಪೀಡ್ ಸಪೋರ್ಟ್ ಮಾಡಲಿದೆ.   ಫೈಬರ್‌ ಆಪ್ಟಿಕ್‌ ಆರ್ಕಿಟೆಕ್ಚರ್‌ ಅನ್ನು ಅಪ್‌ಗ್ರೇಡ್‌ ಮಾಡಿದಾಗ ಸಿಂಗಲ್‌ ಯೂಸರ್‌ ಬ್ಯಾಂಡ್‌ವಿಡ್ತ್‌ ಅನ್ನು ಸಾಂಪ್ರದಾಯಿಕ ಗಿಗಾಬೈಟ್‌ನಿಂದ 10ಜಿ ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಲಾಗಿದೆ. ಬ್ರಾಡ್‌ಬ್ಯಾಂಡ್‌ ವೇಗವರ್ಧನೆಯು ಭವಿಷ್ಯದಲ್ಲಿ 8ಕೆ ವಿಡಿಯೋ ಸ್ಟ್ರೀಮಿಂಗ್‌ ಆ್ಯಪ್‌ಗಳು ಹಾಗೂ ಅಡ್ವಾನ್ಸ್ಡ್‌ ಕ್ಲೌಡ್‌ ಕಂಪ್ಯೂಟಿಂಗ್‌ ಹಾಗೂ ಅತ್ಯುನ್ನತ ವರ್ಚುವಲ್‌ ರಿಯಾಲಿಟಿ(ಎಆರ್‌/ವಿಆರ್‌ ಗೇಮಿಂಗ್‌)ಅನುಭವಕ್ಕೆ ಹೊಸ ಬಾಗಿಲುಗಳನ್ನು ತೆರೆಯಲಿದೆ ಎನ್ನಲಾಗಿದೆ.

ರಿಲಯನ್ಸ್ ಜಿಯೋ 26 ರೂ ರೀಚಾರ್ಜ್ ಪ್ಲಾನ್, 28 ದಿನ ವ್ಯಾಲಿಟಿಡಿ 2 ಜಿಬಿ ಡೇಟಾ ಉಚಿತ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?