Samsung India Guinness Record: ಗಿನ್ನೆಸ್ ರೆಕಾರ್ಡ್ ಸೇರಿದ ಸ್ಯಾಮ್ಸಂಗ್, ಏನದು ದಾಖಲೆ?

Suvarna News   | Asianet News
Published : Mar 08, 2022, 09:55 AM IST
Samsung India Guinness Record: ಗಿನ್ನೆಸ್ ರೆಕಾರ್ಡ್ ಸೇರಿದ ಸ್ಯಾಮ್ಸಂಗ್, ಏನದು ದಾಖಲೆ?

ಸಾರಾಂಶ

* ಸ್ಯಾಮ್ಸಂಗ್ ಇಂಡಿಯಾ ತನ್ನ ವಿಶಿಷ್ಟ ಇವೆಂಟ್‌ಗಾಗಿ ಗಿನ್ನೆಲ್ ವಿಶ್ವ ದಾಖಲೆಗೆ ಸೇರಿದೆ * ಸ್ಯಾಮ್ಸಂಗ್ ಕಂಪನಿಯು ದೇಶದ ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ ಅನ್ ಬಾಕ್ಸಿಂಗ್ ಆಯೋಜಿಸಿತ್ತು * ಮಾ.5ರಂದು ದೇಶದ 17 ನಗರಗಳಲ್ಲಿ ಸಾವಿರಾರು ಜನರು ಇದರಲ್ಲಿ ಪಾಲ್ಗೊಂಡಿದ್ದರು.

Tech Desk: ಸ್ಯಾಮ್ಸಂಗ್ ಇಂಡಿಯಾ ತನ್ನ ಒಂದು ವಿಶಿಷ್ಟ ಕೆಲಸಕ್ಕಾಗಿ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ. ಇತ್ತೀಚೆಗೆ ಅಂದರೆ, ಮಾರ್ಚ್ 5ರಂದು, ದೇಶದ ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ ಅನ್‌ಬಾಕ್ಸಿಂಗ್ ಪ್ರಕ್ರಿಯೆ ನಡೆಸಿದರು. ಈ ಸಂಗತಿಯೇ ಇದೀಗ ಗಿನ್ನೆಸ್ ರೆಕಾರ್ಡ್ ಸೇರಿದೆ. ಅಂದರೆ, ಮಾರ್ಚ್ 5ರಂದು ದೇಶದ 17 ನಗರಗಳಲ್ಲಿ ಗ್ರಾಹಕರು ಏಕಕಾಲಕ್ಕೆ ಗ್ಯಾಲಕ್ಸಿ ಎಸ್22 ಅಲ್ಟ್ರಾ ಸ್ಮಾರ್ಟ್‌ಫೋನ್ ಅನ್ನು ಅನ್‌ಬಾಕ್ಸಿಂಗ್ ಮಾಡಿ ವಿಶಿಷ್ಟ ದಾಖಲೆಯನ್ನು ಮಾಡಿದರು.

ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ, ಈ ಮೊದಲೇ Galaxy S22 ಅಲ್ಟ್ರಾವನ್ನು ಮೊದಲೇ ಬುಕ್ ಮಾಡಿದ ಆಯ್ದ ಗ್ರಾಹಕರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಹಾಗಾಗಿ, ಅವರಿಗೆ ಬಿಡುಗಡೆಯ ಮುಂಚೆಯೇ ಸ್ಯಾಮ್ಸಂಗ್ ನ ಈ ಪ್ರೀಮಿಯಂ ಸ್ಮಾರ್ಟ್‌ಫೋನ್ ವಿತರಣೆಯನ್ನು ಮಾಡಲಾಗಿತ್ತು. ಆಯ್ಕೆಯಾದ ಈ  ವಿಶೇಷ ಗ್ರಾಹಕರು Galaxy S22 Ultra ಜೊತೆಗೆ Galaxy Watch4 ಮತ್ತು Galaxy Buds2 ಹೊಂದಿರುವ ಸೀಮಿತ ಆವೃತ್ತಿಯ ಸಾಧನಗಳಿಗೆ ಅಕ್ಸೆಸ್ ಕೂಡ ಪಡೆದುಕೊಂಡರು ಎಂದು ಹೇಳಬಹುದು. ಲಿಮಿಟೆಡ್ ಎಡಿಷನ್ ಗ್ಯಾಲಕ್ಸಿ ಎಸ್22 ಅಲ್ಟ್ರಾ ಬಾಕ್ಸ್‌ನಲ್ಲಿ ವಿಶೇಷ ಧನ್ಯವಾದ ಹೇಳುವ ಸೀಡ್ ಪೇಪರ್ ಒಳಗೊಂಡಿತ್ತು. ಇದು ಸ್ಯಾಮ್ಸಂಗ್ ಇಂಡಿಯಾದ ತನ್ನ ಸುಸ್ಥಿರ ಭವಿಷ್ಯದೆಡೆಗಿನ ತನ್ನ ಬದ್ದತೆಯನ್ನು ತೋರಿಸುತ್ತದೆ.

ಇದನ್ನೂ ಓದಿ: iPhone SE to iPad Air: ಮಾ.8ರ ಆ್ಯಪಲ್‌ ಈವೆಂಟ್‌ ಮೇಲೆ ಎಲ್ಲರ ಕಣ್ಣು, ಏನೆಲ್ಲ ಲಾಂಚ್?
 
"ಇದು ನಿಜಕ್ಕೂ ನಮಗೆ ಒಂದು ದೊಡ್ಡ ದಿನವಾಗಿದೆ. 17 ನಗರಗಳಲ್ಲಿ ಈ ರೆಕಾರ್ಡ್ ಬ್ರೇಕಿಂಗ್ ಈವೆಂಟ್ ಅನ್ನು ನಿರ್ವಹಿಸಿದ ತಂಡದ ಭಾಗವಾಗಲು ನಾನು ತುಂಬಾ ಹೆಮ್ಮೆಪಡುತ್ತೇನೆ. ಸ್ಯಾಮ್‌ಸಂಗ್‌ಗೆ ಇದನ್ನು ನಿಜವಾದ ಐತಿಹಾಸಿಕ ದಿನವನ್ನಾಗಿ ಮಾಡಲು ಒಗ್ಗೂಡಿದ ನಮ್ಮ ಎಲ್ಲಾ ಗ್ರಾಹಕರು ಮತ್ತು  ಅಭಿಮಾನಿಗಳಿಗೆ ನಾನು ಕೃತಜ್ಞನಾಗಿದ್ದೇನೆ. #EpicUnboxing ನೊಂದಿಗೆ ನಾವು ಅಧಿಕೃತವಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಪ್ರವೇಶಿಸಿದ್ದೇವೆ ಮತ್ತು ಈ  ಸಾಧನೆಯನ್ನು ನಮ್ಮ ಅಭಿಮಾನಿಗಳೊಂದಿಗೆ ಆಚರಿಸಲು ನಾವು ಸಂತೋಷಪಡುತ್ತೇವೆ,”  ಸ್ಯಾಮ್ಸಂಗ್ ಇಂಡಿಯಾದ ಸಿನೀಯರ್ ಡೈರೆಕ್ಟರ್ ಮತ್ತು ಪ್ರಾಡಕ್ಟ್ ಮಾರ್ಕೆಟಿಂಗ್ ಹೆಡ್ ಆದಿತ್ಯ ಬಬ್ಬರ್ (Aditya Babbar) ತಿಳಿಸಿದ್ದಾರೆ.

"ಸ್ಯಾಮ್ಸಂಗ್ ಇಂಡಿಯಾ ಎಲೆಕ್ಟ್ರಾನಿಕ್ಸ್ ಪ್ರೈ ಲಿ. ಆಯೋಜಿಸಿದ್ದ ಅನ್ ಬಾಕ್ಸಿಂಗ್‌ನಲ್ಲಿ ದೇಶದ ವಿವಿಧ ಸ್ಥಳಗಳಿಂದ 1820 ಜನರು ಭಾಗವಹಿಸಿದ್ದರು. ಈ ಇವೆಂಟ್ ಗಿನ್ನೆಸ್ ದಾಖಲೆ ಸೇರಿದೆ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ ಎಂದು ಗಿನ್ನೆ ವರ್ಲ್ಡ್ ರೆಕಾರ್ಡ್‌(Guinness World Records)ನ ಅಧಿಕಾರಿ (Official Adjudicator) ಸ್ವಪ್ನಿಲ್ ಡಂಗಾರಿಕರ್ (Swapnil Dangarikar) ತಿಳಿಸಿದ್ದಾರೆ.

ಅಸಾಧಾರಣ ಈವೆಂಟ್ ಅನ್ನು 19 ಸ್ಥಳಗಳಲ್ಲಿ ಆಯೋಜಿಸಲಾಗಿದೆ ಮತ್ತು ಇದರಲ್ಲಿ ಭಾಗವಹಿಸಿದ್ದವರು ಸಂತೋಷದಿಂದಲೇ ತಮ್ಮ ಫೋನ್ ಪಡೆದುಕೊಂಡು ದಾಖಲೆಯ ಭಾಗವಾದರು. ಈ ರೀತಿಯ ಪ್ರಯತ್ನವನ್ನು ಈ ಹಿಂದೆ ಯಾರೂ ಮಾಡಿರಲಿಲ್ಲ. ಇಂಥ ಪ್ರಯತ್ನವನ್ನು ಮಾಡಿದ್ದಕ್ಕಾಗಿ ನಾನು ಸ್ಯಾಮ್‌ಸಂಗ್ ಅನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದ್ದಾರೆ.
 
#EpicUnboxing ಕಾರ್ಯಕ್ರಮವನ್ನು ನವದೆಹಲಿ (Delhi), ಮುಂಬೈ (Mumbai), ಚೆನ್ನೈ (Chennai), ಕೋಲ್ಕತ್ತಾ (Kolkata), ಬೆಂಗಳೂರು (Bengaluru), ಹೈದರಾಬಾದ್ (Hyderabad), ಪುಣೆ (Pune), ಅಹಮದಾಬಾದ್ (Ahmedabad), ಚಂಡೀಗಢ (Chandigarh), ಜೈಪುರ (Jaipur), ಲುಧಿಯಾನ (Ludhiana), ಪಾಟ್ನಾ (Patna), ಇಂದೋರ್ (Indore) ಸೇರಿದಂತೆ 17 ನಗರಗಳಲ್ಲಿ ನಡೆಸಲಾಯಿತು.

ಇದನ್ನೂ ಓದಿ: Creator Economy : 2020ರ ಭಾರತೀಯ ಜಿಡಿಪಿಗೆ 6,800 ಕೋಟಿ ರೂ. ಕೊಡುಗೆ ನೀಡಿದ ಯೂಟ್ಯೂಬ್ ಕ್ರಿಯೇಟರ್ಸ್
 
ಭಾರತದಲ್ಲಿನ ಗ್ರಾಹಕರು ತಮ್ಮ Galaxy S22 Ultra, Galaxy S22+ ಮತ್ತು Galaxy S22 ಅನ್ನು ಪ್ರಮುಖ ಚಿಲ್ಲರೆ ಮಳಿಗೆಗಳು, Samsung Exclusive ಸ್ಟೋರ್‌ಗಳು, Samsung ಆನ್‌ಲೈನ್ ಸ್ಟೋರ್ ಮತ್ತು Amazon.in ನಲ್ಲಿ ಮಾರ್ಚ್ 10 ರವರೆಗೆ ಮುಂಗಡ ಬುಕ್ ಮಾಡಬಹುದು. Galaxy S22 ಸರಣಿ ಸ್ಮಾರ್ಟ್‌ಫೋನ್  ಮಾರ್ಚ್ 11, 2022 ರಿಂದ ಮಾರಾಟವಾಗಲಿವೆ.

ಸಖತ್ ಆಫರ್ಸ್:  Galaxy S22 Ultra ನೋಟ್ ಸರಣಿಯ ಅಪ್ರತಿಮ ಶಕ್ತಿ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಗೆ ಹೊಸ ಮಾನದಂಡವನ್ನು ಹೊಂದಿಸಲು ಪ್ರೊ-ಗ್ರೇಡ್ ಕ್ಯಾಮೆರಾ ಮತ್ತು S ಸರಣಿಯ ಕಾರ್ಯಕ್ಷಮತೆಯೊಂದಿಗೆ ಐಕಾನಿಕ್ S-ಪೆನ್ ಅನ್ನು ಸಂಯೋಜಿಸುತ್ತದೆ. Galaxy S22 Ultra ಅನ್ನು ಮುಂಗಡವಾಗಿ ಬುಕ್ ಮಾಡುವ ಗ್ರಾಹಕರು 26999 ರೂ. ಮೌಲ್ಯದ Galaxy Watch4 ಅನ್ನು ಕೇವಲ 2999 ರೂ.ಗೆ ಪಡೆಯಲಿದ್ದಾರೆ.

Galaxy S22+ ಮತ್ತು Galaxy S22 ಅನ್ನು ಮುಂಗಡವಾಗಿ ಬುಕ್ ಮಾಡುವ ಗ್ರಾಹಕರು 999 ರೂ.ಗೆ 11999 ಮೌಲ್ಯದ Galaxy Buds2 ಅನ್ನು ಖರೀದಿಸಬಹುದು. ಹೆಚ್ಚುವರಿಯಾಗಿ, Galaxy S ಮತ್ತು Galaxy Note ಖರೀದಿಸುವ ಗ್ರಾಹಕರು 8000 ರೂ. ಅಪ್‌ಗ್ರೇಡ್ ಬೋನಸ್ ಅನ್ನು ಪಡೆಯುತ್ತಾರೆ ಮತ್ತು ಇತರ ಸಾಧನ ಹೊಂದಿರುವವರು 5000 ರೂ.ನ ಅಪ್‌ಗ್ರೇಡ್ ಬೋನಸ್  ಪಡೆದುಕೊಳ್ಳಬಹುದು. ಪರ್ಯಾಯವಾಗಿ, ಯಾರು Samsung Finance+ ಮೂಲಕ ಈ ಸಾಧನಗಳನ್ನು ಖರೀದಿಸಲು ಮುಂದಾಗುತ್ತಾರೋ ಅವರಿಗೆ 5000 ರೂ. ಕ್ಯಾಶ್‌ಬ್ಯಾಕ್  ಕೂಡ ಸಿಗಲಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?