Bengaluru Man: ಬೆಂಗಳೂರಿನಲ್ಲಿ‌ ಫುಡ್‌ ಡೆಲಿವರಿ ಬಾಯ್ ರೆಸ್ಯೂಮ್‌ ನೋಡಿ ಹೌಹಾರಿದ ಗ್ರಾಹಕ! ಅಂಥದ್ದೇನಿತ್ತು?

Published : Jun 12, 2025, 02:40 PM ISTUpdated : Jun 12, 2025, 04:33 PM IST
bengaluru

ಸಾರಾಂಶ

ಬೆಂಗಳೂರಿನಲ್ಲಿ ಗ್ರಾಹಕನ ಮನೆಗೆ ಫುಡ್‌ ಆರ್ಡರ್‌ ಬಂದಿದೆ. ಆಗ ಅವರ ರೆಸ್ಯೂಮ್‌ ನೋಡಿ ಆರ್ಡರ್‌ ಮಾಡಿದ ವ್ಯಕ್ತಿಯೇ ಹೆದರಿದ್ದಾರೆ. 

ಬೆಂಗಳೂರಿನಲ್ಲಿ ಓರ್ವ ಗ್ರಾಹಕನ ಮನೆ ಬಾಗಿಲಿಗೆ ಆರ್ಡರ್ ಮಾಡಿದ್ದ ಫುಡ್ ಬಂದಿದೆ. ತಾನು ತಿನ್ನುವ ಆಹಾರ ಸಿಕ್ಕಿದ್ರೆ ಸಾಕು ಅಂತ ಅರು ಅಂದುಕೊಂಡಿದ್ದರು. ಆದರೆ ಆಗಿದ್ದೇ ಬೇರೆ. X ಖಾತೆಯಲ್ಲಿ ನಿತಿನ್ ಕುಮಾರ್ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪದ್ಮನಾಬನ್ ಎಂಬ ಉದ್ಯಮಿಯೊಂದಿಗಿನ ತನ್ನ ಸಂವಾದದ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಪದ್ಮನಾಬನ್ ಕೇವಲ ಜೀವನಕ್ಕಾಗಿ ಫುಡ್‌ ಡೆಲಿವರಿ ಮಾಡದೆ, ತನ್ನ ವ್ಯಾಪಾರವನ್ನು ಚೇತರಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರಂತೆ.

ಕುಮಾರ್‌ ಹೇಳಿದ್ದೇನು?

ಕುಮಾರ್‌ ಅವರು “ನನ್ನ ಸ್ವಿಗ್ಗಿ ಡೆಲಿವರಿ ಬಾಯ್‌ ನನಗೆ ಇಂದು ಫುಡ್‌ ನೀಡಿದ್ದಾನೆ. ಕಾಳಜಿಯಿಂದ ಡೆಲಿವರಿ ಮಾಡಲಾಯ್ತು, ಕೋಡ್‌ನೊಂದಿಗೆ ನಿರ್ಮಿತವಾಗಿದೆ” ಎಂಬ ಶೀರ್ಷಿಕೆಯ ಒಂದು ಪುಟದ ರೆಸ್ಯೂಮ್‌ ಕೂಡ ಇಲ್ಲಿ ಹಂಚಿಕೊಂಡಿದ್ದಾರೆ. ಡೆಲಿವರಿ ಬಾಯ್‌ ಪದ್ಮನಾಭನ್‌ರ ರೆಸ್ಯೂಮ್‌ನಲ್ಲಿ “19+ ವರ್ಷಗಳ ಅನುಭವವಿರುವ ಫುಲ್-ಸ್ಟಾಕ್ ಡೆವಲಪರ್” ಎಂಬ ಮಾಹಿತಿಯನ್ನು ಒಳಗೊಂಡಿದೆ.

ಪದ್ಮನಾಭನ್ ರೆಸ್ಯೂಮ್‌ನಲ್ಲಿ ಏನಿದೆ?

ಕುಮಾರ್ ಅವರು ಲಿಂಕ್ಡ್‌ಇನ್‌ನಲ್ಲಿ ಬರೆದಂತೆ, “ಪದ್ಮನಾಭನ್ ಒಮ್ಮೆ ಜಾಗತಿಕ ಗ್ರಾಹಕರಿಗೋಸ್ಕರ ಸಾಫ್ಟ್‌ವೇರ್ ಕಂಪನಿಯನ್ನು ನಡೆಸುತ್ತಿದ್ದರು. ಅವರ ರೆಸ್ಯೂಮ್‌ನಲ್ಲಿ ಈಗ ತಾನು ಫುಡ್‌ ಡೆಲಿವರಿಯನ್ನು “ಕೇವಲ ಜೀವನಕ್ಕಾಗಿ ಮಾತ್ರವಲ್ಲ, ತನ್ನ ಬ್ಯುಸಿನೆಸ್‌ ಡೆವಲಪ್‌ಮಾಡಲು ಮಾಡ್ತಿದ್ದೇನೆ ಎಂದು ಹೇಳಿದ್ದಾರೆ” ಎಂದಿದ್ದಾರೆ.

ಕೆಲಸ ಬೇಕಾಗಿಲ್ಲ!

ಕುಮಾರ್‌ ಅವರು ಕೆಲಸ ಸಿಗಲು ಸಹಾಯ ಮಾಡಬೇಕೆ ಎಂದು ಪ್ರಶ್ನೆ ಮಾಡಿದ್ದರಂತೆ. ಆಗ ಪದ್ಮನಾಭನ್‌ ಅವರು “ಇಲ್ಲ, ನನ್ನ ವ್ಯಾಪಾರವನ್ನು ಮತ್ತೆ ದಾರಿಗೆ ತರಲು ಪ್ರಯತ್ನ ಮಾಡುತ್ತಿದ್ದೇನೆ” ಎಂದು ಹೇಳಿದ್ದರಂತೆ.

ಪದ್ಮನಾಭನ್‌ರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ತಮಿಳುನಾಡಿನಲ್ಲಿ ಅವರು 2018ರಲ್ಲಿ ತನ್ನ ಕಂಪನಿಯನ್ನು ಸ್ಥಾಪಿಸಿದ್ದಾರೆ. ಈ ಟೆಕ್ ವ್ಯಕ್ತಿಯು ಎಲೆಕ್ಟ್ರಾನಿಕ್ಸ್, ಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.

ತನ್ನ ರೆಸ್ಯೂಮ್‌ನಲ್ಲಿ, ಪದ್ಮನಾಭನ್ ಅವರು quick turnaround with professional results, direct support, clear communication, providing affordable pricing for small businesses ವಿಷಯದಲ್ಲಿ ಪರಿಣಿತಿ ಪಡೆದಿದ್ದಾರಂತೆ.

“ರೊಬೊಟಿಕ್ಸ್ ಮತ್ತು IoT ಕ್ಷೇತ್ರದಲ್ಲಿ ನನ್ನ ವಿಶೇಷ ಆಸಕ್ತಿಯಿದೆ. ನಾನು ಈ ಬಗ್ಗೆ ಹಲವು ಸಂಶೋಧನೆಗಳನ್ನು ಮಾಡುತ್ತಿದ್ದೇನೆ. ಇದನ್ನು ಮುಂದಿನ ಪೀಳಿಗೆಗೆ ತಲುಪಿಸಲು, ಮುಂದಿನ ಪೀಳಿಗೆಯನ್ನು ಇದರಲ್ಲಿ ಅಭಿವೃದ್ಧಿ ಮಾಡಲು, ಹೊಸ ಆಲೋಚನೆಗಳು, ಆವಿಷ್ಕಾರಗಳನ್ನು ತರೋದಿಕ್ಕೆ ನಾನು ಆಸಕ್ತಿ ಹೊಂದಿದ್ದೇನೆ. ಕಾಲೇಜು,ಶಾಲೆಗಳಲ್ಲಿ ಸೆಮಿನಾರ್‌ಗ ಮಾಡುವುದು, ವಿದ್ಯಾರ್ಥಿಗಳು & ಉದ್ಯಮದ ನಡುವೆ ಸೇತುವೆಯನ್ನು ನಿರ್ಮಿಸುವುದು ನನ್ನ ಹವ್ಯಾಸ” ಎಂದು ಪದ್ಮನಾಭನ್ ಬರೆದುಕೊಂಡಿದ್ದಾರೆ.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?