ಅಂಗವಿಕಲರಿಗೆ ಬದುಕು ಕೊಟ್ಟ ವ್ಹೀಲ್‌ಚೇರ್‌!

Published : Nov 20, 2019, 04:32 PM IST
ಅಂಗವಿಕಲರಿಗೆ ಬದುಕು ಕೊಟ್ಟ ವ್ಹೀಲ್‌ಚೇರ್‌!

ಸಾರಾಂಶ

ಅಂಗವಿಕಲರಿಗೆ ಬದುಕು ಕೊಟ್ಟವ್ಹೀಲ್‌ಚೇರ್‌!| ಅಂಗವಿಕಲರಿಗೆ ಆಸರೆಯಾದ ವ್ಹೀಲ್‌ಚೇರ್‌!| ಬ್ಯಾಟರಿ ಚಾಲಿತ ವ್ಹೀಲ್‌ಚೇರ್‌ ತಗ್ಗು ದಿಣ್ಣೆಯಲ್ಲೂ ಸಮತೋಲನ ಕಾಯ್ದುಕೊಂಡು ಚಲಿಸುವ ವಿಶೇಷತೆ| ಮಡಚಿ ಸಾಗಿಸಲು ಅನುಕೂಲ

 ಬೆಂಗಳೂರು[ನ.20]: ಕೇರಳದ ಕೊಚ್ಚಿನ್‌ ನಿವಾಸಿ ಸತ್ಯ ಅವರು ಕೈ-ಕಾಲು ಇಲ್ಲದೆ ಮತ್ತೊಬ್ಬರ ಮೇಲೆ ಅವಲಂಬಿತರಾಗಿ ಬದುಕುವಂತಾಗಿತ್ತು. ಹುಟ್ಟಿನಿಂದಲೇ ಅಂಗವಿಕಲರಾದ ವಿಜಯಪುರದ ಜಮಾಲ್‌ ಬದುಕು ದುಸ್ತರವಾಗಿತ್ತು. ಇವರ ಬದುಕಿಗೆ ಆಸರೆಯಾಗಿದ್ದು ಎಲೆಕ್ಟ್ರಿಕಲ್‌ ಬ್ಯಾಟರಿ ಚಾಲಿತ ವ್ಹೀಲ್‌ಚೇರ್‌!

ಈ ವ್ಹೀಲ್‌ಚೇರ್‌ ಮೇಲೆ ಕುಳಿತು ವಿಜಯಪುರದ ಜಮಾಲ್‌ ರಸ್ತೆ ಬದಿ ಚಹಾ ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಕೊಚ್ಚಿನ್‌ ನಿವಾಸಿ ಸತ್ಯ ಅವರು ಎಳನೀರು, ಸಿಮ್‌ಕಾರ್ಡ್‌, ಲಾಟರಿ ಮಾರಾಟ ಮಾಡುತ್ತಾರೆ. ಇದರಿಂದಾಗಿ ಈಗ ಅರ್ಥಪೂರ್ಣ ಜೀವನ ನಡೆಸುತ್ತಿದ್ದಾರೆ.

ಹೀಗೆ ಹಲವರು ಅಂಗವೈಕಲ್ಯತೆ, ವೃದ್ಧಾಪ್ಯ, ಬೆನ್ನುಮೂಳೆ ಮುರಿತ, ಪಾಶ್ರ್ವವಾಯು ಸೇರಿದಂತೆ ಇನ್ನಿತರ ಘಟನೆಗಳಿಂದ ತಮ್ಮ ಬದುಕಿನ ಬಗ್ಗೆ ಭರವಸೆ ಕಳೆದುಕೊಂಡಿವರಿಗೆ ಪುನರ್ಜನ್ಮ ನೀಡಿರುವ ನೂರಾರು ಘಟನೆಗಳ ಹಿಂದೆ ಆಸ್ಟ್ರಿಚ್‌ ಕಂಪನಿಯ ಪರಿಶ್ರಮ ಹಾಗೂ ಸಾಮಾಜಿಕ ಕಳಕಳಿಯಿದೆ ಎನ್ನುತ್ತಾರೆ ಕಂಪನಿಯ ಮಾರುಕಟ್ಟೆವಿಭಾಗದ ಮುಖ್ಯ ನಿರ್ದೇಶಕ ಕೃಷ್ಣ ರೇವಣಕರ್‌.

ಮಾಹಿತಿ ತಂತ್ರಜ್ಞಾನ, ಜ್ಞಾನಾಧಾರಿತ ಆರ್ಥಿಕತೆ ಉತ್ತೇಜನಕ್ಕೆ ಚಿಂತನೆ: ಸಿಎಂ

ಐಟಿ ಉದ್ಯಮದಲ್ಲಿ ತೊಡಗಿದ್ದ ಐವರು ಸ್ನೇಹಿತರು ಕಾಲೇಜಿನಲ್ಲಿದ್ದಾಗ ಪ್ರಾಜೆಕ್ಟ್ವೊಂದರ ಸಲುವಾಗಿ ವ್ಹೀಲ್‌ಚೇರ್‌ ತಯಾರಿಸಿದ್ದರು. ಇದು ಅತ್ಯಂತ ಸುಲಭವೂ, ಆರಾಮದಾಯಕವೂ ಆಗಿದ್ದರಿಂದ ಹಲವರು ಇದರ ಉಪಯೋಗ ಪಡೆದಿದ್ದರು. ಇದರಿಂದ ಪ್ರೇರಣೆಗೊಂಡ ಈ ಸ್ನೇಹಿತರು ಇದನ್ನೇ ಉದ್ಯಮವಾಗಿ ಕಟ್ಟಿಬೆಳೆಸಿದ್ದು, ಇದೀಗ ಆಸ್ಟ್ರೀಚ್‌ ಕಂಪನಿ ವಿವಿಧ ನಮೂನೆಯ ವ್ಹೀಲ್‌ಚೇರ್‌ ತಯಾರಿಕಾ ಕಂಪನಿಯಾಗಿ ಸಾವಿರಾರು ಮಂದಿಗೆ ಉದ್ಯೋಗ ನೀಡಿದೆ.

ಸುಮಾರು ಆರು ಗಂಟೆ ಚಾಜ್‌ರ್‍ ಮಾಡಿದರೆ 25 ಕಿ.ಮೀ.ವರೆಗೂ ಚಲಿಸುವ ಎಲೆಕ್ಟ್ರಿಕಲ್‌ ಬ್ಯಾಟರಿ ಚಾಲಿತ ವ್ಹೀಲ್‌ಚೇರ್‌ ತಗ್ಗು ದಿಣ್ಣೆಯಲ್ಲೂ ಸಮತೋಲನ ಕಾಯ್ದುಕೊಂಡು ಚಲಿಸುವ ವಿಶೇಷತೆ ಹೊಂದಿದೆ. ಈ ಚೇರ್‌ನಲ್ಲಿ ಕುಳಿತುಕೊಳ್ಳಬಹುದು, ನಿಂತುಕೊಳ್ಳಬಹುದು, ಮಲಗಲು ಕೂಡ ಸಹಕಾರಿಯಾಗುವಂತೆ ವಿನ್ಯಾಸಗೊಳಿಸಲಾಗಿದೆ. ಬೆರಳ ತುದಿಯಲ್ಲಿನ ಸಣ್ಣ ಸ್ಪರ್ಶದಿಂದ ಸುಲಲಿತವಾಗಿ ಚಲಿಸುವಂತೆ ನಿರ್ಮಿಸಲಾಗಿದೆ. ಸುಲಭವಾಗಿ ಸಾಗಾಣಿಕೆ ಮಾಡಲು ಅನುಕೂಲವಾಗುವಂತೆ ಮಡಚುವ ಸೌಲಭ್ಯವೂ ಇದೆ. ಕುಳಿತುಕೊಳ್ಳಲು ಚೇರ್‌ನಲ್ಲಿ ಕುಶನ್‌ ಹಾಕಲಾಗಿದೆ.

ಕೇವಲ .70 ಸಾವಿರದಿಂದ .3.5 ಲಕ್ಷದ ವರೆಗೂ ವಿವಿಧ ಮಾದರಿಯ ವ್ಹೀಲ್‌ಚೇರ್‌ಗಳು ಲಭ್ಯ ಇವೆ. ವವ್‌ರ್‍ ಎಲ್‌ಎಕ್ಸ್‌, ವವ್‌ರ್‍ ಎಫ್‌ಎಕ್ಸ್‌, ಗೆಲಾಕ್ಸಿ ಎಡಬ್ಲ್ಯೂಎ, ಕ್ಲಾಸಿಕ್‌ ಎಲ್‌ಎಕ್ಸ್‌, ಕ್ಲಾಸಿಕ್‌ ಎಕ್ಸ್‌, ಟೆಟ್ರಾ ಎಲ್‌ಎಕ್ಸ್‌ ಹೀಗೆ ಹಲವು ನಮೂನೆಯ ಬ್ಯಾಟರಿ ಚಾಲಿತ ವ್ಹೀಲ್‌ಚೇರ್‌ಗಳು ಇದ್ದು, ಸುಮಾರು 125ರಿಂದ 150 ಕೆ.ಜಿ. ಹೊರುವ ಸಾಮರ್ಥ್ಯವನ್ನು ಈ ಚೇರ್‌ಗಳು ಹೊಂದಿವೆ. ಕೆಲವು ಗಂಟೆಗೆ ಆರು ಕಿ.ಮೀ. ವೇಗದಲ್ಲಿ ಓಡಿದರೆ, ಮತ್ತೆ ಕೆಲವು 10 ಕಿ.ಮೀ. ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿವೆ. ಮಾಲಿನ್ಯ ರಹಿತ, ಮೊಬೈಲ್‌ ಮಾದರಿಯಲ್ಲಿ ಚಾಜ್‌ರ್‍ ಮಾಡುವ, ಮಡಚಿ ಕಾರಿನಲ್ಲಿ ಸಾಗಿಸುವ, ಆರಾಮದಾಯಕ ವೀಲ್‌ಚೇರ್‌ ದೈಹಿಕ ನ್ಯೂನತೆ ಉಳ್ಳವರ ಬಾಳಿನ ಆಶಾಕಿರಣ.

ಮನೆ ಮನೆಗೆ ತಂತ್ರಜ್ಞಾನ: ಸರ್ಕಾರದ ಐಟಿ ಸಮ್ಮೇಳನ ಬದಲಿಸಲಿದೆ ಜೀವನ!

ಆಸ್ಟ್ರಿಚ್‌ ವೀಲ್‌ಚೇರ್‌ ಅಷ್ಟೇ ಅಲ್ಲ, ಮ್ಯಾನುವಲ್‌ ಬೆಡ್ಸ್‌, ಆಟೋಮೇಟೆಡ್‌ ಬೆಡ್ಸ್‌, ಫ್ಲೋರ್ಬೆಡ್ಸ್‌, ಆಟೋಮೆಟಿಕ್‌ ಫ್ಲೋರ್ಬೆಡ್ಸ್‌ ಹೀಗೆ ಹಲವು ಮಾದರಿಯ ಬೆಡ್‌ಗಳು ಕೂಡ ಈ ಕಂಪನಿಯಲ್ಲಿ ಲಭ್ಯವಿವೆ.

ಹೆಚ್ಚಿನ ಮಾಹಿತಿಗೆ ಆಸ್ಟ್ರಿಚ್‌, ಬೊಮ್ಮಸಂದ್ರ 3ನೇ ಹಂತ, ಕೈಗಾರಿಕಾ ನಗರ, ಹೊಸೂರು ರಸ್ತೆ, ಬೆಂಗಳೂರು 99. ಮೊಬೈಲ್‌: 7847033033 ಸಂಪರ್ಕಿಸಬಹುದು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್