
ಬೆಂಗಳೂರು (ಮಾ.6): ಟೆಕ್ ದೈತ್ಯ ಆಪಲ್ ತನ್ನ ಗ್ರಾಹಕರಿಗಾಗಿ ಬಜೆಟ್ ಸ್ನೇಹಿ ಲ್ಯಾಪ್‌ಟಾಪ್ ಮ್ಯಾಕ್‌ಬುಕ್ ನಿಯೋ (MacBook Neo) ಅನ್ನು ಅನಾವರಣಗೊಳಿಸಿದೆ. ಈ ಹೊಸ ಮ್ಯಾಕ್‌ಬುಕ್ 13-ಇಂಚಿನ ಲಿಕ್ವಿಡ್ ರೆಟಿನಾ ಡಿಸ್‌ಪ್ಲೇ ಹೊಂದಿದ್ದು, ಐಫೋನ್ 16 ಪ್ರೊ ಸರಣಿಯಲ್ಲಿ ಬಳಸಲಾದ ಕಂಪನಿಯ ಶಕ್ತಿಯುತ A18 Pro ಚಿಪ್‌ಸೆಟ್ ಅನ್ನು ಒಳಗೊಂಡಿದೆ.
ಭಾರತದಲ್ಲಿ ಮ್ಯಾಕ್‌ಬುಕ್ ನಿಯೋ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. 8 GB RAM + 256 GB ಸ್ಟೋರೇಜ್ ಇರುವ ವೇರಿಯಂಟ್ ₹69,900 ರೂಪಾಯಿಗೆ ಲಭ್ಯವಿದ್ದರೆ, 8 GB RAM + 512 GB ಸ್ಟೋರೇಜ್ ಇರುವ ವೇರಿಯಂಟ್ ₹79,900 ರೂಪಾಯಿಗೆ ಸಿಗಲಿದೆ. ಬ್ಲಶ್ (Blush), ಸಿಟ್ರಸ್ (Citrus), ಇಂಡಿಗೋ (Indigo) ಮತ್ತು ಸಿಲ್ವರ್ (Silver) ಬಣ್ಣಗಳಲ್ಲಿ ಲ್ಯಾಪ್‌ಟಾಪ್ ಸಿಗಲಿದೆ. ವಿದ್ಯಾರ್ಥಿಗಳಿಗೆ 10,000 ರೂಪಾಯಿಗಳ ಎಜುಕೇಷನಲ್ ಡಿಸ್ಕೌಂಟ್ ಅನ್ನು ಆಪಲ್ ಘೋಷಣೆ ಮಾಡಿದೆ. ಈಗಾಗಲೇ ಪ್ರೀ-ಬುಕಿಂಗ್ ಆರಂಭವಾಗಿದ್ದು, ಮಾರ್ಚ್ 11 ರಿಂದ ಆಪಲ್ ವೆಬ್‌ಸೈಟ್ ಮತ್ತು ಅಧಿಕೃತ ರಿಟೇಲರ್‌ಗಳ ಬಳಿ ಮಾರಾಟಕ್ಕೆ ಸಿಗಲಿದೆ.
219 ppi ಪಿಕ್ಸೆಲ್ ಸಾಂದ್ರತೆಯಿರುವ 13-ಇಂಚಿನ ಲಿಕ್ವಿಡ್ ರೆಟಿನಾ IPS ಡಿಸ್‌ಪ್ಲೇಯ್ನು ಮ್ಯಾಕ್‌ಬುಕ್ ನಿಯೋ ಹೊಂದಿದ್ದು, A18 Pro ಚಿಪ್‌ನಿಂದಾಗಿ ಇದು ಸಾಮಾನ್ಯ ಕೆಲಸಗಳಲ್ಲಿ ಇಂಟೆಲ್ ಕೋರ್ ಅಲ್ಟ್ರಾ 5 ಚಿಪ್ ಹೊಂದಿರುವ ವಿಂಡೋಸ್ ಪಿಸಿಗಿಂತ ಶೇ. 50 ರಷ್ಟು ವೇಗವಾಗಿದೆ ಮತ್ತು AI ಕಾರ್ಯಗಳಲ್ಲಿ 3 ಪಟ್ಟು ಹೆಚ್ಚು ವೇಗವನ್ನು ಹೊಂದಿದೆ.
ಒಂದು ಬಾರಿ ಚಾರ್ಜ್ ಮಾಡಿದರೆ 16 ಗಂಟೆಗಳವರೆಗೆ ವಿಡಿಯೋ ಸ್ಟ್ರೀಮಿಂಗ್ ಅಥವಾ 11 ಗಂಟೆಗಳ ವೆಬ್ ಬ್ರೌಸಿಂಗ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ. ಇದು 36.5Wh ಬ್ಯಾಟರಿ ಮತ್ತು 20W USB ಟೈಪ್-C ಅಡಾಪ್ಟರ್ ಹೊಂದಿದೆ. ಇದು ಲೇಟೆಸ್ಟ್ macOS Tahoe ನಲ್ಲಿ ಕಾರ್ಯನಿರ್ವಹಿಸುತ್ತದೆ. 1080p ಫೇಸ್‌ಟೈಮ್ HD ವೆಬ್‌ಕ್ಯಾಮ್ ಮತ್ತು ವಾಯ್ಸ್ ಐಸೋಲೇಶನ್ ಸೌಲಭ್ಯವಿದೆ. ಡಾಲ್ಬಿ ಅಟ್ಮಾಸ್ ಮತ್ತು ಸ್ಪೇಷಿಯಲ್ ಆಡಿಯೋ ಸೌಲಭ್ಯವಿರುವ ಡ್ಯುಯಲ್ ಸ್ಪೀಕರ್ ಸೆಟಪ್ ಹೊಂದಿದೆ.
ಮ್ಯಾಕ್‌ಬುಕ್ ನಿಯೋ ವೈ-ಫೈ 6E ಮತ್ತು ಬ್ಲೂಟೂತ್ 6 ಅನ್ನು ಬೆಂಬಲಿಸುತ್ತದೆ. ಇದರಲ್ಲಿ ಒಂದು USB 3.0 ಟೈಪ್-C ಪೋರ್ಟ್ ಮತ್ತು ಒಂದು USB 2.0 ಟೈಪ್-C ಪೋರ್ಟ್ ನೀಡಲಾಗಿದ್ದು, ಎರಡೂ ಪೋರ್ಟ್‌ಗಳ ಮೂಲಕ ಚಾರ್ಜಿಂಗ್ ಮಾಡಬಹುದು. ಹೆಡ್‌ಫೋನ್ ಜಾಕ್ ಮತ್ತು ಬಯೋಮೆಟ್ರಿಕ್ ಸುರಕ್ಷತೆಗಾಗಿ ಟಚ್ ಐಡಿ (Touch ID) ಸೌಲಭ್ಯವೂ ಇದೆ.
ಆಪಲ್‌ನ ಈ ಕಡಿಮೆ ಬಜೆಟ್ ಮ್ಯಾಕ್‌ಬುಕ್ ಈಗ ಮಾರುಕಟ್ಟೆಯಲ್ಲಿರುವ 60-70 ಸಾವಿರ ರೂಪಾಯಿ ಬೆಲೆ ಶ್ರೇಣಿಯ HP, ಡೆಲ್ (Dell), ಏಸರ್ (Acer) ನಂತಹ ಬ್ರ್ಯಾಂಡ್‌ಗಳ ವಿಂಡೋಸ್ ಲ್ಯಾಪ್‌ಟಾಪ್‌ಗಳು ಮತ್ತು ಕ್ರೋಮ್‌ಬುಕ್‌ಗಳಿಗೆ ನೇರ ಸ್ಪರ್ಧೆ ನೀಡಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.