
ಯೂಟ್ಯೂಬ್ ವಿಡಿಯೋಗಳು ಅತೀ ಹೆಚ್ಚು ವೀಕ್ಷಣೆ ಪಡೆಯುತ್ತದೆ. ಶಿಕ್ಷಣ, ಸಾಮಾಜಿಕ, ಮಾನವೀಯತೆ, ಆಹಾರ, ಪ್ರವಾಸೋದ್ಯಮ ಸೇರಿದಂತೆ ಬಗೆ ಬಗೆಯ ವಿಡಿಯೋಗಳು ಯೂಟ್ಯೂಬ್ ಮೂಲಕ ಎಲ್ಲರನ್ನು ತಲುಪುತ್ತಿದೆ. ಹೀಗಾಗಿ ಯೂಟ್ಯೂಬ್ ವೀಕ್ಷಣೆ ಸಂಖ್ಯೆ ಅಧಿಕ. ಮಕ್ಕಳ ಕಾರ್ಟೂನ್ ಸೇರಿದಂತೆ ಶಿಕ್ಷಣದ ವಿಡಿಯೋಗಳು ಇದರಲ್ಲಿದೆ. ಹೀಗೆ ವಿಡಿಯೋ ನೋಡುತ್ತಿದ್ದಂತೆ ನಡುವೆ ಅಶ್ಲೀಲ ಚಿತ್ರದ ಜಾಹೀರಾತು ಪ್ರಸಾರವಾಗಿದೆ. ಇದು ಕೇವಲ ದೃಶ್ಯಮಾತ್ರವಲ್ಲ, ಜೊತೆಗೆ ಆಡಿಯೋ ಕೂಡ. ಇದರಿಂದ ಹಲವರು ಮುಜುಗರ ಅನುಭವಿಸಿದ್ದಾರೆ. ಬಹುತೇಕರಿಗೆ ಈ ರೀತಿ ಆಗಿದೆ. ಇದರ ಬೆನ್ನಲ್ಲೇ ಗೂಗಲ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಗೂಗಲ್ ಪೋರ್ನ್ ವಿಡಿಯೋ ಜಾಹೀರಾತನ್ನು ನಿರ್ಬಂಧಿಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.
ಯೂಟ್ಯೂಬ್ ವಿಡಿಯೋಗಳ ನಡುವೆ ಪೋರ್ನ್ ವಿಡಿಯೋ ಜಾಹೀರಾತು ಪ್ರಸಾರವಾಗುತ್ತಿರುವ ಕುರಿತು ಹಲವರು ರೆಡಿಟ್‌ನಲ್ಲಿ ಆಕ್ರೋಶಹೊರಹಾಕಿದ್ದಾರೆ. ಹಲವರು ಗೂಗಲ್‌ಗೆ ದೂರು ನೀಡಿದ್ದಾರೆ. ತಕ್ಷಣ ಸ್ಪಂದಿಸಿದ ಗೂಗಲ್, ಪ್ರಸಾರವಾಗುತ್ತಿದ್ದ ಪೋರ್ನ್ ದೃಶ್ಯಗಳನ್ನು ನಿರ್ಬಂಧಿಸಿದೆ. ಆದರೆ ಜಾಗತಿಕ ಮಟ್ಟದಲ್ಲಿ ಗೂಗಲ್ ಭಾರಿ ಆಕ್ರೋಶ ಎದುರಿಸಬೇಕಾಗಿದೆ.
ಒಂದೇ ವರ್ಷದಲ್ಲಿ 151 ಕೋಟಿ ರೂ ಆದಾಯ, ಪೊರ್ನ್ ವೆಬ್‌ಸೈಟ್ ಇನ್‌ಕಮ್ ಬಹಿರಂಗಪಡಿಸಿದ ನಟಿ!
ಲೈಂಗಿಕತೆ, ಅಶ್ಲೀಲ ದೃಶ್ಯಗಳು ಸೇರಿದಂತೆ ಹಲವು ದೃಶ್ಯಗಳನ್ನು ಯಟ್ಯೂಬ್ ಪ್ರಸಾರ ಮಾಡುವುದಿಲ್ಲ. ಜೊತೆಗೆ ಯೂಟ್ಯೂಬ್ ಪ್ಲಾಟ್‌ಫಾರ್ಮ್ ಇಂತಹ ವಿಡಿಯೋಗಳನ್ನು ಪ್ರಕಟಿಸಲು ಅನುಮತಿಸುವುದಿಲ್ಲ. ಇದು ನಮ್ಮ ನಿಯಮಾವಳಿಗೆ ವಿರುದ್ಧವಾಗಿದೆ. ಅದರೂ ಕೆಲ ಅಶ್ಲೀಲ ದೃಶ್ಯದ ಜಾಹೀರಾತು ಪ್ರಸಾರವಾಗಿದೆ. ಈ ಜಾಹೀರಾತನ್ನು ನಿರ್ಬಂಧಿಸಲಾಗಿದೆ. ಇದು ಅಚಾನಕ್ಕಾಗಿ ನಿಯಮ ಮೀರಿ ಹೇಗೆ ಪ್ರಸಾರವಾಯಿತು ಅನ್ನೋದು ವಿವರಣೆ ನಡೆಸಲಾಗುತ್ತಿದೆ ಎಂದು ಯೂಟ್ಯೂಬ್ ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ.
ಹಲವು ಬೋಗಸ್ ಖಾತೆಗಳು, ಫಿಶಿಂಗ್ ಲಿಂಕ್ಸ್ ಇದರ ಹಿಂದೆ ಕಾರ್ಯನಿರ್ವಹಿಸಿದೆ. ಗೂಗಲ್ ನಿಯಮಕ್ಕೆ ಬದ್ಧವಾಗಿದೆ ಎಂದಿದೆ. ಆಧರೆ ಕೆಲ ನಿಮಿಷಗಳ ಕಾಲ ಈ ರೀತಿ ಪೋರ್ನ್ ವಿಡಿಯೋಗಳು ಯೂಟ್ಯೂಬ್ ವಿಡಿಯೋ ನಡುವೆ ಪ್ರಸಾರವಾಗುವ ಜಾಹೀರಾತಿನಲ್ಲಿ ಪ್ರಕಟವಾಗಿದೆ. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವೇಳೆ ಯೂಟ್ಯೂಬ್ ಬಳಕೆದಾರರಿಗೆ ಜಾಹೀರಾತು ರಹಿತ ವಿಡಿಯೋ ಕುರಿತು ಆಗ್ರಹಗಳು ಕೇಳಿಬಂದಿದೆ. ಪ್ರೀಮಿಯಂ, ಚಂದಾದಾರಿಕೆ ಇಲ್ಲದೆ ಜಾಹೀರಾತು ರಹಿತ ವಿಡಿಯೋ ಬಳಕೆದಾರರಿಗೆ ಸಿಗಬೇಕು ಅನ್ನೋ ಆಗ್ರಹ ಮತ್ತೆ ಕೇಳಿಬಂದಿದೆ. ಈ ವಿಡಿಯೋಗಳ ಕೆಲ ತುಣುಕುಗಳನ್ನು ಪೋಸ್ಟ್ ಮಾಡಿ ಯೂಟ್ಯೂಬ್ ಹಾಗೂ ಗೂಗಲ್ ವಿರುದ್ದ ಟ್ರೋಲ್, ಮೀಮ್ಸ್‌ಗಳು ಹರಿದಾಡುತ್ತಿದೆ.
ಪೊರ್ನ್ ವಿಡಿಯೋ ಶೂಟಿಂಗ್ ವೇಳೆ ಸಹ ನಟನ ಜನನಾಂಗಕ್ಕೆ ಕಚ್ಚಿದ ನಟಿಯ ಸಾಕು ಹಾವು!
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.