ಎಲ್ಲವೂ ರೋಬೋಟ್ ಮಯ. ಕೋವಿಡ್ ಪರೀಕ್ಷೆ ನಡೆಸುವುದು ರೋಬೋಟ್, ನಿಮ್ಮ ಮಾತುಗಳನ್ನು ಕೇಳಿಸಿಕೊಂಡು ಅದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ನೀಡುತ್ತೆ. ಇದರ ಜೊತೆಗೆ ಮನುಷ್ಯನ ಹಲವು ಕೆಲಸಗಳನ್ನು ರೋಬೋಟ್ ಮಾಡುತ್ತೆ. ಇದು ಅತೀ ದೊಡ್ಡ ರೋಬೋಟ್ ಉತ್ಸವದಲ್ಲಿ ಬೆರಗುಗೊಳಿಸಿದ ವಿಚಾರ.
ಬೀಜಿಂಗ್(ಆ.20): ಅತೀ ದೊಡ್ಡ ರೋಬೋಟ್ ಕಾನ್ಫರೆನ್ಸ್ ಚೀನಾದಲ್ಲಿ ಆರಂಭಗೊಂಡಿದೆ. ತಂತ್ರಜ್ಞಾನದಲ್ಲಿ ಮುಂದುವರಿದಿರುವ ಚೀನಾ ಈ ರೋಬೋಟ್ ಉತ್ಸವದಲ್ಲಿ ಹಲವು ರೀತಿಯ ರೋಬೋಟ್‌ಗಳನ್ನು ಪ್ರದರ್ಶಿಸಲಾಗಿದೆ. ವಿಶೇಷ ಅಂದರೆ ನಿಮ್ಮ ಮಾತುಗಳನ್ನು ಕೇಳಿಸಿಕೊಂಡು ಅದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ರೋಬೋಟ್ ನೀಡುತ್ತದೆ. ಇನ್ನು ಕೋವಿಡ್ ಟೆಸ್ಟ್‌ನ್ನು ರೋಬೋಟ್ ಯಾವುದೇ ಸಮಸ್ಯೆ ಇಲ್ಲದೆ ಮಾಡುತ್ತಿದೆ. ಚೀನಾದಲ್ಲಿ ಕೋವಿಡ್ ಪರೀಕ್ಷೆ ಅತೀ ಅಗತ್ಯ ಹಾಗೂ ಕಡ್ಡಾಯವಾಗಿದೆ. ಇದೀಗ ಈ ಕಾರ್ಯವನ್ನು ರೋಬೋಟ್ ನಿರಾಯಾಸವಾಗಿ ಮಾಡುತ್ತಿದೆ. ಈ ರೀತಿಯ ಹತ್ತು ಹಲವು ಉಪಯುಕ್ತ ರೋಬೋಟ್‌ಗಳನ್ನು ಚೀನಾದ ರೋಬೋಟ್ ಕಾನ್ಪರೆನ್ಸ್ 2022ರಲ್ಲಿ ಪ್ರದರ್ಶಿಸಲಾಗಿದೆ. ಈ ರೋಬೋಟ್ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಇಷ್ಟೇ ಅಲ್ಲ ರೋಬೋಟ್ ಕಾರ್ಯಗಳನ್ನು ಕಂಡು ಆಶ್ಚರ್ಯಚಕಿತರಾಗುತ್ತಿದ್ದಾರೆ.
ವಿಜ್ಞಾನಿ ಆಲ್ಬರ್ಟ್ ಐನ್ಸ್ಟೀನ್ ತದ್ಬ್ರೂಪಿ ರೋಬೋಟ್ ನಿರ್ಮಿಸಲಾಗಿದೆ. ಆಲ್ಬರ್ಟ್ ರೀತಿಯಲ್ಲೇ ಮಾತನಾಡುವ ರೋಬೋಟ್ ಇದಾಗಿದೆ. ಇದರ ಜೊತೆಗೆ ಮನೆಯ ಕೆಲಸಗಳನ್ನು ಮಾಡುವ ರೋಬೋಟ್, ವಸ್ತುಗಳನ್ನು ಸಾಗಿಸಬಲ್ಲ ರೋಬೋಟ್ ಸೇರಿದಂತೆ ಹಲವು ರೋಬೋಟ್‌ಗಳನ್ನು ಈ ಉತ್ಸವದಲ್ಲಿ ಪ್ರದರ್ಶಿಸಲಾಗಿದೆ.
ಚಾ.ನಗರದ ಸರ್ಕಾರಿ ಶಾಲೆಯಲ್ಲಿ ಇನ್ನು ಮಕ್ಕಳಿಗೆ ರೋಬೋ ಪಾಠ!
ಭಾರತದಲ್ಲಿ ಹಲವು ಸ್ತರದಲ್ಲಿ ರೋಬೋಟ್‌ಗಳನ್ನು ಬಳಸಲಾಗುತ್ತಿದೆ. ಹಲವು ಹೊಟೆಲ್‌ಗಳಲ್ಲಿ ತಿನಿಸುಗಳನ್ನು ವಿತರಿಸುವ ರೋಬೋಟ್ ಸಪ್ಲೈರ್ ನೇಮಿಸಲಾಗಿದೆ. ಕಂಪನಿಗಳಲ್ಲಿ ಕೆಲಸ ಸುಲಭಗೊಳಿಸಲು ರೊಬೋಟ್ ನೇಮಕ ಮಾಡಲಾಗಿದೆ
ದೆಹಲಿಯಲ್ಲಿ ಬೆಂಕಿ ನಂದಿಸಲು ರೊಬೋಟ್ ಬಳಕೆ
ದೆಹಲಿಯ ಮುಂಡ್ಕಾದ ವಸತಿ ಸಮುಚ್ಚಯದಲ್ಲಿ ನಡೆದ ಅಗ್ನಿ ದುರಂತದಲ್ಲಿ ಸುಮಾರು 27 ಜನರು ಮೃತಪಟ್ಟ ಬಳಿಕ ಬೆಂಕಿ ನಂದಿಸಲು ರೊಬೋಟ್‌ಗಳನ್ನು ಬಳಸುವ ವಿಶಿಷ್ಟಯೋಜನೆಗೆ ಚಾಲನೆ ನೀಡಲಾಗಿದೆ. ದೆಹಲಿಯ ಅಗ್ನಿಶಾಮಕ ದಳಕ್ಕೆ 2 ರೊಬೋಟ್‌ಗಳನ್ನು ಸೇರಿಸಿದ್ದು, ಇವು ಕಿರಿದಾದ ರಸ್ತೆಗಳು, ಗೋದಾಮು, ನೆಲಮಾಳಿಗೆ, ಮೆಟ್ಟಿಲುಗಳು, ಕಾಡುಗಳಿಗೆ ತಲುಪಿ ಬೆಂಕಿಯನ್ನು ನಂದಿಸಲು ಸಹಾಯಕಾರಿಯಾಗಿವೆ. ಅಲ್ಲದೇ ಬೆಂಕಿ ತಗುಲಿರುವ ತೈಲ ಮತ್ತು ರಾಸಾಯನಿಕ ಟ್ಯಾಂಕರ್‌ಗಳು ಮತ್ತು ಕಾರ್ಖಾನೆಗಳಂತಹ ಸ್ಥಳಗಳನ್ನು ಪ್ರವೇಶಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ರೊಬೋಟ್‌ಗಳನ್ನು ರಿಮೋಟ್ ಕಂಟ್ರೋಲ್ ಮೂಲಕ ದೂರದಿಂದಲೇ ನಿಯಂತ್ರಿಸಬಹುದಾಗಿದೆ. ಇವು ಪ್ರತಿ ನಿಮಿಷಕ್ಕೆ 2400 ಲೀ. ನೀರನ್ನು ಸಿಂಪಡಿಸಿ ಬೆಂಕಿ ನಂದಿಸುವ ಸಾಮರ್ಥ್ಯ ಹೊಂದಿವೆ. ಪ್ರಯೋಗಾರ್ಥವಾಗಿ ಅಗ್ನಿಶಾಮಕದಳದಲ್ಲಿ 2 ರೊಬೋಟ್‌ಗಳನ್ನು ಸೇರಿಸಲಾಗಿದ್ದು, ಸಫಲವಾದರೆ ಇನ್ನಷ್ಟುಬೆಂಕಿ ನಂದಿಸುವ ರೊಬೋಟ್‌ಗಳನ್ನು ಸೇರಿಸಲಾಗುವುದು ಎಂದು ರಾಜ್ಯದ ಗೃಹ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ.
ಯುದ್ಧಭೂಮಿಯಲ್ಲಿನ್ನು ರೋಬೋಟ್ ನಾಯಿ, ರಷ್ಯಾದ ಸಂಶೋಧಕನ ವಿಡಿಯೋ ವೈರಲ್!
ಅಂಬಾನಿಯಿಂದ ರೋಬೋಟ್ ಸ್ಟಾರ್ಟಪ್ ಖರೀದಿ
ಕೋಟ್ಯಧಿಪತಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ರೋಬೋಟ್ ತಯಾರಿಕಾ ಸ್ಟಾರ್ಟಪ್ ಅಡ್ವರ್ಬ್ ಟೆಕ್ನಾಲಜಿ ಖರೀದಿಸಲು ಮುಂದಾಗಿದೆ. ಈ ಮೂಲಕ ಇ-ಕಾಮರ್ಸ್ ಕ್ಷೇತ್ರದಿಂದ ಹೊಸ ಇಂಧನ ಕ್ಷೇತ್ರದ ವರೆಗೆ ತನ್ನ ವ್ಯವಹಾರದ ಕಬಂಧಬಾಹುವನ್ನು ವಿಸ್ತರಿಸಲು ಮುಂದಾಗಿದೆ. ರೊಬೋಟ್‌ಗಳ ಮೂಲಕ ಇ-ಕಾಮರ್ಸ್ ಮತ್ತು ಇಂಧನ ಉತ್ಪಾದಕತೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು 13.2 ಕೋಟಿ ಡಾಲರ್ (984 ಕೋಟಿ ರು.)ಪಾವತಿಸಿ ಅಡ್ವರ್ಬ್ ಕಂಪನಿಯ ಬಹುಪಾಲು ಷೇರು ಖರೀದಿಸಿದೆ ಎಂದು ಸಾರ್ಟಪ್ ಸಹಸಂಸ್ಥಾಪಕ ಸಂಗೀತ್ ಕುಮಾರ್ ತಿಳಿಸಿದ್ದಾರೆ.