Weekly Horoscope: ಅನಗತ್ಯ ಖರ್ಚಿನಿಂದ ಮಿಥುನ ಹೈರಾಣ, ನಿಮ್ಮ ಈ ವಾರ ಹೇಗಿರಲಿದೆ?

By Chirag Daruwalla  |  First Published Jun 26, 2022, 7:19 AM IST

ತಾರೀಖು ಜೂನ್ 27ರಿಂದ ಜುಲೈ 3 2022ರವರೆಗೆ ನಿಮ್ಮ ಭವಿಷ್ಯ ಹೇಗಿರಲಿದೆ?
ನಿಮ್ಮ ರಾಶಿಗೆ ಈ ವಾರದ ಫಲ ಏನಿದೆ ನೋಡಿ..


ಮೇಷ(Aries)
ನಿಮ್ಮ ಕನಸುಗಳು ಮತ್ತು ಭರವಸೆಗಳನ್ನು ನನಸಾಗಿಸುವ ಸಮಯ ಬಂದಿದೆ. ಇತರರ ಸಲಹೆಯ ಬದಲಿಗೆ ನಿಮಗೆ ಸರಿ ಅನಿಸಿದಂತೆ ಮಾಡಿ. ಪ್ರಕೃತಿಯು ನಿಮಗೆ ಶುಭ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಆದಾಯಕ್ಕಿಂತ ವೆಚ್ಚ ಹೆಚ್ಚಾಗಬಹುದು. ನಿಮ್ಮ ಕುಟುಂಬ ಮತ್ತು ವ್ಯವಹಾರದಲ್ಲಿ ಯಾವುದೇ ಹೊರಗಿನವರು ಹಸ್ತಕ್ಷೇಪ ಮಾಡಲು ಬಿಡಬೇಡಿ. ಉದ್ಯೋಗಿಗಳೊಂದಿಗಿನ ಸಂಬಂಧ ಹಾಳು ಮಾಡಿಕೊಳ್ಳಬೇಡಿ. ಅವರ ಸಹಕಾರ ನಿಮಗೆ ಅತ್ಯಗತ್ಯ. ವ್ಯಾಪಾರ ಸ್ಥಳದಲ್ಲಿ ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶ ಸಿಗದ ಕಾರಣ ಮನಸ್ಸಿನಲ್ಲಿ ಸ್ವಲ್ಪ ಚಿಂತೆ ಇರುತ್ತದೆ. ಪ್ರೇಮ ವ್ಯವಹಾರಗಳಿಂದ ದೂರವಿರುವುದು ಉತ್ತಮ. ಆರೋಗ್ಯ ಚೆನ್ನಾಗಿರಲಿದೆ.

ವೃಷಭ(Taurus)
ಯಾವುದೇ ಕೆಲಸ ಮಾಡುವ ಮೊದಲು ಸಂಪೂರ್ಣ ಯೋಜನೆ ರೆಡಿಯಿಟ್ಟುಕೊಳ್ಳಿ. ಮನೆ ನಿರ್ವಹಣೆಗೆ ಯೋಜನೆ ಇದ್ದರೆ ಆ ಕಾರ್ಯಕ್ಕೆ ಸರಿಯಾದ ಸಮಯ. ಅತ್ತೆಯ ಜೊತೆಗಿನ ಸಂಬಂಧ ಹದಗೆಡಲು ಬಿಡಬೇಡಿ. ಈ ಸಮಯದಲ್ಲಿ ಹೊರಾಂಗಣ ಚಟುವಟಿಕೆಗಳಲ್ಲಿ ಸಮಯ ವ್ಯರ್ಥ ಮಾಡಬೇಡಿ, ಏಕೆಂದರೆ ಇದು ಯಾವುದೇ ಸರಿಯಾದ ಫಲಿತಾಂಶವನ್ನು ಸಾಧಿಸುವುದಿಲ್ಲ ಮತ್ತು ಮನಸ್ಸನ್ನು ಹದಗೆಡಿಸುತ್ತದೆ. ವ್ಯಾಪಾರ ಚಟುವಟಿಕೆಗಳು ಸಾಮಾನ್ಯವಾಗಿರುತ್ತವೆ. ಅಹಂಕಾರವು ವೈವಾಹಿಕ ಸಂಬಂಧದಲ್ಲಿ ಸಮಸ್ಯೆಗಳನ್ನು ಉಂಟು ಮಾಡಬಹುದು. ಅಸಿಡಿಟಿ ಸಮಸ್ಯೆ ಕಾಡಲಿದೆ.

Tap to resize

Latest Videos

undefined

ಮಿಥುನ(Gemini)
ನೀವು ಯಾವುದೇ ಸಾಮಾಜಿಕ ಸಂಸ್ಥೆಗೆ ಕೊಡುಗೆ ನೀಡಬಹುದು. ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಅಪರಿಚಿತರನ್ನು ಭೇಟಿಯಾಗುವುದನ್ನು ತಪ್ಪಿಸಿ. ನಿಮ್ಮ ಕ್ರಿಯೆಗಳ ಮೇಲೆ ಗಮನ ಕೇಂದ್ರೀಕರಿಸಿ. ಭೂಮಿ ಅಥವಾ ವಾಹನ ಖರೀದಿಗೆ ಸಂಬಂಧಿಸಿದಂತೆ ಯಾವುದೇ ಯೋಜನೆ ಜಾರಿಗೊಳಿಸಬೇಡಿ. ಅನಗತ್ಯ ಖರ್ಚುಗಳು ಕಾಡಬಹುದು. ಪ್ರಸ್ತುತ ವ್ಯಾಪಾರ ಚಟುವಟಿಕೆಗಳು ನಿಧಾನವಾಗಿರುತ್ತವೆ. ಗಂಡ ಹೆಂಡತಿ ಪರಸ್ಪರ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಮನೆಯ ಹಿರಿಯ ಸದಸ್ಯರ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷ್ಯಿಸಬೇಡಿ.

ಕರ್ಕಾಟಕ(Cancer)
ಮಾರ್ಕೆಟಿಂಗ್ ಮತ್ತು ಮಾಧ್ಯಮ ಸಂಬಂಧಿತ ಕಾರ್ಯಗಳತ್ತ ಗಮನಹರಿಸಿ. ಯಾವುದೇ ಫೋನ್ ಕರೆಗಳನ್ನು ನಿರ್ಲಕ್ಷಿಸಬೇಡಿ. ಈ ಸಮಯದಲ್ಲಿ ಯಾವುದೇ ಪ್ರಮುಖ ಅಧಿಸೂಚನೆಗಳನ್ನು ಸ್ವೀಕರಿಸುವ ಸಾಧ್ಯತೆಯಿದೆ. ಯಾವುದೇ ರೀತಿಯ ಭವಿಷ್ಯದ ಯೋಜನೆಗಳನ್ನು ಮಾಡುವಾಗ, ಇತರರ ನಿರ್ಧಾರಕ್ಕಿಂತ ನಿಮ್ಮ ಸ್ವಂತ ನಿರ್ಧಾರಕ್ಕೆ ಆದ್ಯತೆ ನೀಡಿ. ಉದ್ಯೋಗಸ್ಥರು ತಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ನಿಮ್ಮ ಸಂಗಾತಿಯ ಸಹಕಾರ ಮತ್ತು ಸಲಹೆಯು ನಿಮಗೆ ಪ್ರಯೋಜನಕಾರಿಯಾಗುತ್ತದೆ.

ಸಿಂಹ(Leo)
ಈ ಸಮಯದಲ್ಲಿ ಯಾವುದೇ ಬಾಕಿ ಕೆಲಸ ಪೂರ್ಣಗೊಳ್ಳುವುದು. ನಿಮ್ಮೊಳಗೆ ಆತ್ಮವಿಶ್ವಾಸ ಮತ್ತು ಅಧಿಕಾರವನ್ನು ಅನುಭವಿಸುವಿರಿ. ಒಂದು ಪ್ರಮುಖ ವಿಷಯವನ್ನು ನಿಕಟ ಸಂಬಂಧಿಯೊಂದಿಗೆ ಚರ್ಚಿಸಬಹುದು. ಸಣ್ಣ ವಿಷಯಗಳಿಗೆ ನೆರೆಹೊರೆಯವರೊಂದಿಗೆ ವಿವಾದಗಳು ಉಂಟಾಗಬಹುದು. ತಪ್ಪು ಚಟುವಟಿಕೆಗಳಿಗೆ ಗಮನ ಕೊಡಬೇಡಿ. ರಾಜಕೀಯ ವ್ಯವಹಾರಗಳಲ್ಲಿ ಸ್ವಲ್ಪ ಜಾಗರೂಕರಾಗಿರಿ. ವ್ಯಾಪಾರ ಸ್ಥಳದಲ್ಲಿ ಸಹೋದ್ಯೋಗಿಗಳ ಸಹಾಯ ಮತ್ತು ಸಲಹೆಯೊಂದಿಗೆ, ಸ್ಥಗಿತಗೊಂಡ ಚಟುವಟಿಕೆಗಳನ್ನು ಪುನರಾರಂಭಿಸುವಲ್ಲಿ ಯಶಸ್ವಿಯಾಗುತ್ತೀರಿ. ಅಸಿಡಿಟಿ ಮತ್ತು ಗ್ಯಾಸ್ ಸಮಸ್ಯೆ ಕಾಡಬಹುದು.

ಮನೆಯೊಳಗೆ ಹಾವು ಬಂದರೆ ಏನರ್ಥ? ನೀವೇನು ಮಾಡಬೇಕು?

ಕನ್ಯಾ(Virgo)
ಧಾರ್ಮಿಕ ಸಂಘಟನೆಯೊಂದಿಗೆ ಪೂರ್ಣ ಹೃದಯದಿಂದ ಸಹಕರಿಸುವುದು ನಿಮಗೆ ಸಂತೋಷ ತರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಆಸ್ತಿ ಖರೀದಿಸಲು ಪ್ರಯತ್ನಿಸುತ್ತಿದ್ದರೆ ಈ ಸಮಯವು ಮಂಗಳಕರವಾಗಿರುತ್ತದೆ. ಅಹಂ ಮತ್ತು ಕೋಪ ನಿಯಂತ್ರಿಸಿ. ಹೊಸ ಪ್ರಭಾವಿ ಸಂಪರ್ಕಗಳಾಗುವುದು. ಮನೆ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳಲ್ಲಿ ಸಂಗಾತಿಯ ಸಂಪೂರ್ಣ ಸಹಕಾರ ಇರುತ್ತದೆ. ದಿನಚರಿಯನ್ನು ಕ್ರಮವಾಗಿ ಇರಿಸಿ.

ತುಲಾ(Libra)
ಕೆಲ ಆಪ್ತರೊಂದಿಗೆ ನೆಮ್ಮದಿಯ ವಾತಾವರಣ ಇರುತ್ತದೆ. ಪರಸ್ಪರ ಸಂವಹನ ನಡೆಸುವ ಮೂಲಕ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಮನೆಕೆಲಸಕ್ಕೆ ಕೈ ಜೋಡಿಸಿ ಮತ್ತು ಮಕ್ಕಳ ಸಮಸ್ಯೆಗಳನ್ನು ಆಲಿಸಿ ಪರಿಹರಿಸಿ. ಯಾರೊಂದಿಗಾದರೂ ವಿವಾದದ ಪರಿಸ್ಥಿತಿ ಇರಬಹುದು. ನಿಮ್ಮ ಯಶಸ್ಸನ್ನು ಅತಿಯಾಗಿ ಅಂದಾಜು ಮಾಡದೆ ಶಾಂತವಾಗಿ ನಿಮ್ಮ ಕಾರ್ಯಗಳ ಮೇಲೆ ಕೇಂದ್ರೀಕರಿಸಿ. ವ್ಯಾಪಾರದ ಸ್ಥಳದಲ್ಲಿ ಹೊರಗಿನವರ ಹಸ್ತಕ್ಷೇಪವು ಉದ್ಯೋಗಿಗಳಲ್ಲಿ ವಿವಾದ ಉಂಟು ಮಾಡಬಹುದು. 

ವೃಶ್ಚಿಕ(Scorpio)
ಜಮೀನು-ಆಸ್ತಿ ಪ್ರಕರಣ ಸಿಕ್ಕಿ ಹಾಕಿಕೊಂಡಿದ್ದರೆ ಈ ಹೊತ್ತಿನಲ್ಲಿ ಇತ್ಯರ್ಥ ಆಗುವ ಸಾಧ್ಯತೆ ಇದೆ. ಭವಿಷ್ಯದ ಯೋಜನೆಗಳನ್ನು ಪರಿಗಣಿಸುವುದು ಸಹ ಮುಖ್ಯವಾಗಿದೆ. ದೀರ್ಘಕಾಲದಿಂದ ಬಾಕಿ ಉಳಿದ ಸಾಲ ಹಿಂದಿರುಗಲಿದೆ. ವಾರದ ಆರಂಭದಲ್ಲೇ ನಿಮ್ಮ ಹೆಚ್ಚಿನ ಕೆಲಸವನ್ನು ಮಾಡಲು ಪ್ರಯತ್ನಿಸಿ. ಏಕೆಂದರೆ ನಂತರ ಪರಿಸ್ಥಿತಿಗಳು ಸ್ವಲ್ಪ ಪ್ರತಿಕೂಲವಾಗಬಹುದು. ಅಡೆತಡೆಗಳು ಉಂಟಾಗುವ ಸಾಧ್ಯತೆ ಇದೆ. ವೃತ್ತಿಪರ ಮಟ್ಟದಲ್ಲಿ ನಿಮ್ಮ ಗೌರವ ಮತ್ತು ಪ್ರಾಬಲ್ಯ ಕಾಪಾಡಿಕೊಳ್ಳಲಾಗುತ್ತದೆ, ಪತಿ-ಪತ್ನಿ ಸಂಬಂಧವು ಮಧುರವಾಗಿರುತ್ತದೆ. 

ಧನು(Sagittarius)
ಈ ಸಮಯದಲ್ಲಿ ನಿಮ್ಮೊಳಗೆ ಹೊಸ ಚೈತನ್ಯ ಮತ್ತು ಶಕ್ತಿ ಅನುಭವಿಸುವಿರಿ. ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸುವಿರಿ. ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮ ಅನೇಕ ಪ್ರಮುಖ ಕಾರ್ಯಗಳನ್ನು ನಿಲ್ಲಿಸಲು ಕಾರಣವಾಗಬಹುದು. ವ್ಯಾಪಾರ ಚಟುವಟಿಕೆಗಳಲ್ಲಿ ನಿರ್ಲಕ್ಷ್ಯ ಬೇಡ. ಸಂಗಾತಿಯ ಭಾವನಾತ್ಮಕ ಬೆಂಬಲವು ನಿಮ್ಮ ದಕ್ಷತೆಗೆ ಹೊಸ ದಿಕ್ಕನ್ನು ನೀಡುತ್ತದೆ. ಋತುಮಾನದ ತೊಂದರೆಗಳ ದೂರು ಇರುತ್ತದೆ.

ಈ ರೀತಿ ವಿಮಾನದ ಕನಸು ಬಿದ್ರೆ ನಿಮ್ಮ ಆಸೆಗಳೆಲ್ಲ ಈಡೇರುತ್ತವೆ ಎಂದರ್ಥ!

ಮಕರ(Capricorn)
ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯಿರಿ. ನಿಮ್ಮ ಅರ್ಹತೆಯ ಮೂಲಕ ನೀವು ಕೆಲ ಪ್ರಮುಖ ನಿರ್ಧಾರಗಳನ್ನು ಮಾಡುತ್ತೀರಿ. ಮಕ್ಕಳ ಯಶಸ್ಸಿನಿಂದ ಕುಟುಂಬದಲ್ಲಿ ಹಬ್ಬದ ವಾತಾವರಣ ಇರುತ್ತದೆ. ಯಾವುದೇ ರೀತಿಯ ಅಕ್ರಮ ಕೆಲಸಗಳಿಂದ ದೂರವಿರಿ. ಇಲ್ಲದಿದ್ದರೆ ತೊಂದರೆಗೆ ಸಿಲುಕಬಹುದು. ಇದು ನಿಮ್ಮ ದಕ್ಷತೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು. ಸಹೋದರರೊಂದಿಗೆ ಸಂಬಂಧವನ್ನು ಉಳಿಸಿಕೊಳ್ಳುವ ಅವಶ್ಯಕತೆಯಿದೆ. ಹೆಚ್ಚು ಚಿಂತಿಸುವುದರಿಂದ ನಿಮ್ಮೊಳಗೆ ಕಡಿಮೆ ಶಕ್ತಿ ಇರುತ್ತದೆ.

ಕುಂಭ(Aquarius)
ವಿಶೇಷ ವ್ಯಕ್ತಿಗಳನ್ನು ಸಂಪರ್ಕಿಸುವುದು ನಿಮ್ಮ ಆಲೋಚನಾ ಶೈಲಿಯನ್ನು ಧನಾತ್ಮಕವಾಗಿ ಬದಲಾಯಿಸುತ್ತದೆ. ನಿಮ್ಮ ಕೆಲಸದ ಬಗ್ಗೆ ಹೆಚ್ಚು ತಿಳಿದಿರುವುದು ಮತ್ತು ಏಕಾಗ್ರತೆಯನ್ನು ಹೊಂದಿರುವುದು ಖಂಡಿತವಾಗಿಯೂ ನಿಮಗೆ ಯಶಸ್ಸನ್ನು ನೀಡುತ್ತದೆ. ನಿಮ್ಮ ಹತ್ತಿರ ಇರುವವರ ಟೀಕೆಗಳು ನಿಮ್ಮನ್ನು ಹತಾಶೆಗೊಳಿಸಬಹುದು. ಯಾರನ್ನೂ ಹೆಚ್ಚು ಅವಲಂಬಿಸಬೇಡಿ ಮತ್ತು ನಿಮ್ಮ ಯೋಜನೆಗಳನ್ನು ಘೋಷಿಸಿ. ಈ ಸಮಯದಲ್ಲಿ ವೆಚ್ಚಗಳು ಹೆಚ್ಚಾಗಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. 

ಮೀನ(Pisces)
ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸವನ್ನು ಈ ಸಮಯದಲ್ಲಿ ಪೂರ್ಣಗೊಳಿಸಬಹುದು. ನಿಕಟ ಸಂಬಂಧಿಗಳೊಂದಿಗೆ ಪ್ರಮುಖ ವಿಷಯ ಚರ್ಚಿಸುವುದರಿಂದ ಉತ್ತಮ ಫಲಿತಾಂಶ ಪಡೆಯುತ್ತೀರಿ. ನಿಮ್ಮ ಕೋಪ ಮತ್ತು ಆಲೋಚನೆಗಳನ್ನು ನಿಯಂತ್ರಿಸಿ. ಪರಿಸ್ಥಿತಿಯ ಪ್ರತಿಕೂಲತೆ ಒತ್ತಡ ಮತ್ತು ಕೋಪಕ್ಕೆ ಕಾರಣವಾಗಬಹುದು. ಅಪರಿಚಿತರನ್ನು ನಂಬಬೇಡಿ. ಯಾವುದೇ ವ್ಯವಹಾರವನ್ನು ಸ್ಥಿರ ಬಿಲ್ ಮೂಲಕ ಮಾತ್ರ ಮಾಡಿ. ಗಂಡ ಹೆಂಡತಿ ಕೆಲಸದಲ್ಲಿ ನಿರತರಾಗಿದ್ದರೂ ಒಬ್ಬರಿಗೊಬ್ಬರು ಸಮಯ ಮೀಸಲಿಡಲು ಸಾಧ್ಯವಾಗುತ್ತದೆ. ಆಯಾಸದಿಂದ ಕೋಪ ಉಂಟಾಗುತ್ತದೆ. 

click me!