ವಾರ ಭವಿಷ್ಯ: ಹಣಕಾಸಿನ ವಿಚಾರದಲ್ಲಿ ಈ ರಾಶಿಯವರಿಗೆ ಒಳ್ಳೆಯದಾಗಲಿದೆ!

By Suvarna News  |  First Published May 24, 2020, 7:56 AM IST

ಈ ವಾರದ ಭವಿಷ್ಯ| ಯಾರಿಗೆ ಶುಭ? ಯಾರಿಗೆ ಶುಭ ವಾರ? ಇಲ್ಲಿದೆ ಈ ವಾರದ ರಾಶಿ ಫಲ
 


ಮೇಷ: ಒಳ್ಳೆ ಕೆಲಸಗಳನ್ನು ಮಾಡುವಾಗ ಹಲವು ರೀತಿಯ ಅಡೆತಡೆಗಳು ಬರುವುದು ಸಹಜ. ಆದರೆ ಎಲ್ಲವನ್ನೂ ಸಮಚಿತ್ತದಿಂದ ಎದುರಿಸಿ ನಿಮ್ಮ ಸುತ್ತಲಿನವರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಲಿದ್ದು, ವಾರಂತ್ಯದಲ್ಲಿ ಕಿರಿಕಿರಿ ಎದುರಾಗಲಿದೆ. ಮಹಿಳೆಯರಿಗೆ ಈ ವಾರ ಲಾಭ

ವೃಷಭ: ಮನೆಯಲ್ಲಿ ಧಾರ್ಮಿಕ ಚಟುವಟಿಕೆಗಳು ನಡೆಯಲಿವೆ. ಲಕ್ಷ್ಮೀ ಕಟಾಕ್ಷ ಹೆಚ್ಚಾಗಿದ್ದು, ಆದಾಯದಲ್ಲಿ ಗಣನೀಯ ಏರಿಕೆ ಕಂಡುಬರಲಿದೆ. ಮಕ್ಕಳ ಆರೋಗ್ಯದ ಕಡೆ ನಿಗಾ ವಹಿಸಿ. ತಲೆ ನೋವು, ಬೆನ್ನು ನೋವುಗಳ ತಾತ್ಕಾಲಿಕ ಶಮನವಾಗಲಿದೆ. ಶುಭ ಲಾಭ. ತಂದೆ-ತಾಯಿ ಮಾತಿಗೆ ಬದ್ಧರಾಗಿ ನಡೆದುಕೊಳ್ಳಿ. 

Tap to resize

Latest Videos

undefined

ಮಿಥುನ: ಸ್ನೇಹಿತರ ಮೇಲೆ ನೀವಿಟ್ಟದ್ದ ನಂಬಿಕೆ ಈ ವಾರಾಂತ್ಯದಲ್ಲಿ ಹುಸಿಯಾಗಲಿದೆ. ಜೀವನದಲ್ಲಿ ಎಷ್ಟೋ ಕಷ್ಟಗಳನ್ನು ಎದುರಿಸಿದ ನಿಮಗೆ ಇನ್ನು ಮುಂದೆ ಒಳ್ಳೆಯ ದಿನಗಳು ಬಂದೊದಗುವುದು. ಪ್ರಾಣಿ ಹಿಂಸೆ ಬೇಡ. ಮಹಿಳೆಯರು ಗೋಮಾತೆಯ ಪೂಜೆ ಮಾಡಿ.

ಕಟಕ:  ಇಷ್ಟು ದಿನ ಕಾಯುತ್ತಿದ್ದ ಆ ಸಮಯ ನಿಮ್ಮ ಜೀವನದಲ್ಲಿ ಈಗ ಬಂದಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದ್ದು, ಅಂದುಕೊಂಡ ಕೆಲಸಗಳೂ ಈ ವಾರ ಈಡೇರಲಿದೆ. ಸ್ನೇಹಿತರು, ಸಂಬಂಧಿಕರಿಂದ ಪ್ರಶಂಸೆ ಸಿಗಲಿದೆ. ವಾರಾಂತ್ಯದಲ್ಲಿ ಕಹಿ ಸುದ್ದಿಗಳನ್ನು ಕೇಳಲಿದ್ದೀರಿ. ಮಕ್ಕಳ ಓದಿನಲ್ಲಿ ಉತ್ತಮ ಬೆಳವಣಿಗೆ. ಮಹಿಳೆಯರಿಗೆ ಶುಭ ವಾರ.

ಈ ವಸ್ತುಗಳು ಮನೆಯಲ್ಲಿದ್ದರೆ ಮನೆಗೆ ಒಳಿತಾಗುವುದಿಲ್ಲವಂತೆ!

ಸಿಂಹ: ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಒಳ್ಳೆಯ  ದಿನಗಳ ಪ್ರಾರಂಭ. ಹಣಕಾಸಿನ ವಿಚಾರದಲ್ಲಿ ಒಳ್ಳೆಯದಾಗಲಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗುವಿರಿ. ಹೆಚ್ಚು ಹೆಚ್ಚು ವಿಚಾರಗಳನ್ನು ತಿಳಿದುಕೊಳ್ಳುವಿರಿ. ಸಾಲದಿಂದ ಮುಕ್ತರಾಗುವಿರಿ. ಶುಭಫಲ.

ಕನ್ಯಾ: ಪುಸ್ತಕ ಓದುವ ಹವ್ಯಾಸವು ಅಧಿಕವಾಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ. ಮನೆಯಲ್ಲಿ ಶೀಘ್ರವೇ ಶುಭ ಕಾರ್ಯಗಳು ನಡೆಯಲಿವೆ. ಹೊಸ ಕೆಲಸಕ್ಕೆ ಮುಂದಾಗುವಿರಿ. ವಿನಾಕಾರಣ ಕೋಪ ಬೇಡ. ನೆಮ್ಮದಿ ಇರಲಿದೆ.

ತುಲಾ: ಗುರುವಿನ ಮಾರ್ಗದರ್ಶನದಿಂದ ಸರಿಯಾದ ನಿರ್ಧಾರ ತೆಗೆದುಕೊಂಡರೆ, ಕೈ ಹಾಕಿದಲ್ಲಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಯಾರಿಗೇ ಆಗಲಿ ಮಾತಿನಿಂದಲೇ ನೋವು ನೀಡಬೇಡಿ. ಹಳೆಯ ತಪ್ಪುಗಳಿಂದ ತಿದ್ದುಕೊಂಡು, ಹೊಸ ಹಾದಿಯನ್ನು ಹಿಡಿದರೆ ಒಳಿತು. ಅವಿವಾಹಿತರಿಗೆ ಕಲ್ಯಾಣ ಭಾಗ್ಯ. ಮಕ್ಕಳಿಗೆ ಶುಭ ದಿನ. 

ವೃಶ್ಚಿಕ: ಕಷ್ಟದ ಕೆಲಸ ಕಾರ್ಯಗಳು ಎದುರಾಗುವ ಸಾಧ್ಯತೆ. ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ವಾರವಿಡೀ ಬ್ಯುಸಿಯಾಗಿರುವಿರಿ. ವಾರಾಂತ್ಯದಲ್ಲಿ ಮನಸ್ಸಿಗೆ ನೆಮ್ಮದಿ. ಕುಟುಂಬ ದೊಡನೆ ದೂರ ಪ್ರಯಾಣ. ಮಕ್ಕಳಿಗೆ ಓದಿನಲ್ಲಿ ನೆಮ್ಮದಿ. ಆದರೂ ಮನಸ್ಸಿನಲ್ಲಿ ಕಿರಿಕಿರಿ ಸಾಧ್ಯತೆ. ಧ್ಯಾನ ಮಾಡಿ, ತೋಷದಿಂದಿರುವಿರಿ.

ಧನುಸ್ಸು: ಕೆಲಸ ಕೆಲಸ ಎಂದು ಜಾಸ್ತಿ ಒತ್ತಡ ನೀಡಬೇಡಿ. ಇದರಿಂದ ಆರೋಗ್ಯ ಹದಗೆಡುವ ಸಾಧ್ಯತೆಗಳು. ಇವೆ. ಮಕ್ಕಳ ಬಗ್ಗೆ ಜಾಗೃತರಾಗಿರಿ. ಮನೆಗೆ ಸ್ನೇಹಿತರ ಆಗಮನ. ಪುರುಷರು ದೂರ ಪ್ರಯಾಣ ಕೈಗೊಳ್ಳುವ ಸಾಧ್ಯತೆಗಳಿದ್ದು, ಪ್ರಯಾಣದ ಬಗ್ಗೆ ಎಚ್ಚರವಿರಲಿ. ಹೊರಗೆ ಹೋಗುವಾಗ ಇಷ್ಟ ದೇವರನ್ನು ನೆನೆದರೆ ಉತ್ತಮ.

ಮಕರ: ಸಹನೆ, ವಿನಯ ನಿಮ್ಮ ಜೀವನದ ಗುರಿ ಮುಟ್ಟಿಸಲು ಸಹಕಾರಿಯಾಗಲಿದೆ. ಹಿರಿಯರಲ್ಲಿ ಗೌರವ ಹೆಚ್ಚಲಿದೆ. ಮಕ್ಕಳಿಗೆ ಓದಿನಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು. ಮಹಿಳೆಯರಿಗೆ ಆರೋಗ್ಯದಲ್ಲಿ ಏರುಪೇರಾಗಬಹುದು. ಸೇವಿಸುವ ಆಹಾರದಲ್ಲಿ ಸ್ವಲ್ಪ ಹಿಡಿತ ಹಾಗೂ ಎಚ್ಚರವಹಿಸಿ.

ಕುಂಭ: ವಿನಾಕಾರಣ ಕೋಪ ಮಾಡಿಕೊಳ್ಳಬೇಡಿ. ಆರ್ಥಿಕ ವಿಚಾರಗಳಲ್ಲಿ ಬಹಳ ಜಾಗ್ರತೆ ಬೇಕು. ಸಣ್ಣ ಎಡವಟ್ಟೂ ದೊಡ್ಡ ಹಾನಿಗೆ ಕಾರಣವಾಗಬಹುದು. ಸಂಬಂಧದ ವಿಷಯದಲ್ಲೂ ದೊಡ್ಡ ಪಾಠ ಕಲಿಯಬಹುದು. ಹುಂಬತನ ಬೇಡ, ತಾಳ್ಮೆಯಿಂದಿರಿ.

ಮೀನ: ನಿಮ್ಮ ನಗುಮುಖವೇ ನಿಮಗೆ ಮಿತ್ರ. ಸಂಬಂಧದ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಸಂಗಾತಿಯ ಜೊತೆ ಭಿನ್ನಾಭಿಪ್ರಾಯ ಬರಬಹುದು. ಸಹನೆಯಿಂದ ವರ್ತಿಸುವುದು ಕಲಿಯಿರಿ. ಉದ್ಯೋಗದಲ್ಲಿ ಮತ್ತೊಂದು ಸ್ತರಕ್ಕೆ ಬೆಳೆದು ಆತ್ಮವಿಶ್ವಾಸ ಹೆಚ್ಚುತ್ತೆ. ಬ್ಯುಸಿನೆಸ್ ಕ್ಷೇತ್ರದಲ್ಲಿರುವವರಿಗೆ, ವಿದ್ಯಾರ್ಥಿಗಳಿಗೆ ಪ್ರಗತಿಯಿದೆ.

click me!