ನಿಮ್ಮ ರಾಶಿಗೆ ಈ ವಾರ ಹೇಗಿರಲಿದೆ? ಯಾವ ಪ್ರಮುಖ ನಿರ್ಧಾರಗಳನ್ನು ನೀವು ಮಾಡಬಹುದು? ತಾರೀಖು 13 ನೇ ಮೇ ರಿಂದ 19 ನೇ ಮೇ 2024ರವರೆಗೆ ನಿಮ್ಮ ಭವಿಷ್ಯ ಹೀಗಿರಲಿದೆ.
ಮೇಷ: ವಾರದ ಆರಂಭದಲ್ಲೇ ಶುಭ ಸುದ್ದಿ. ಮನೆಯಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದ್ದು, ವಾರಾಂತ್ಯದಲ್ಲಿ ಎಲ್ಲವೂ ಸರಿದೂಗಲಿದೆ. ಕಾರ್ಮಿಕರಿಗೆ ಲಾಭ. ಹಣಕಾಸಿನ ವಿಚಾರದಲ್ಲಿ ಮನೆಯವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಮಕ್ಕಳ ಓದಿನಲ್ಲಿ ಉತ್ತಮ.
ವೃಷಭ: ಪರೀಕ್ಷೆ ಸಮಯವಾದ್ದರಿಂದ ಮಕ್ಕಳಲ್ಲಿ ಓದಿನಲ್ಲಿ ಒತ್ತಡ ಜಾಸ್ತಿ. ಮನಸ್ಸಲ್ಲಿ ಕಿರಿಕಿರಿ ಎದುರಾಗಲಿದೆ. ಮನೆಯಲ್ಲಿ ನೆಮ್ಮದಿ ನೆಲಸಲಿದ್ದು, ಖುಷಿಯಿಂದ ಕಾಲಕಳೆಯಲಿದ್ದೀರಿ. ಅನಿರೀಕ್ಷಿತ ಸನ್ನಿವೇಶಗಳು ಎದುರಾಗಲಿದ್ದು, ಚಾಣಾಕ್ಷತನದಿಂದ ಪಾರಾಗಲಿದ್ದೀರಿ. ವಾರಾಂತ್ಯ ದಲ್ಲಿ ಬಂಧುಗಳ ಆಗಮನ ಸಾಧ್ಯತೆ. ಶುಭ ಫಲ.
ಮಿಥುನ: ನಿಮ್ಮ ಸನ್ನಡತೆ ಹಾಗೂ ಒಳ್ಳೆಯ ಮಾತುಗಳು ಕೆಲವರಿಗೆ ದಾರಿ ದೀಪವಾಗಲಿದೆ. ಇನ್ನೊಬ್ಬರಿಗೆ ಒಂದು ಉತ್ತಮ ಕಾರ್ಯಕ್ಕೆ ನಿಮ್ಮ ಸಲಹೆ ಅಮೃತ ಸಿಕ್ಕಂತಾಗುತ್ತದೆ. ಕಷ್ಟದಲ್ಲಿರುವವರನ್ನು ನೋಡಿ ಮಿಡಿಯುವ ನಿಮಗೆ ಹಿಂದಿನಿಂದಲೇ ಬಂದು ಚೂರಿಚು ಚ್ಚುವವರು ಇದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ
ಕಟಕ: ಒಳ್ಳೆ ಕೆಲಸಗಳನ್ನು ಮಾಡುವಾಗ ಹಲವು ರೀತಿಯ ಅಡೆತಡೆಗಳು ಬರುವುದು ಸಹಜ. ಆದರೆ ಎಲ್ಲವನ್ನೂ ಸಮಚಿತ್ತದಿಂದ ಎದುರಿಸಿ ನಿಮ್ಮ ಸುತ್ತಲಿನವರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಲಿದ್ದು, ವಾರಂತ್ಯದಲ್ಲಿ ಕಿರಿಕಿರಿ ಎದುರಾಗಲಿದೆ. ಮಹಿಳೆಯರಿಗೆ ಈ ವಾರ ಲಾಭ
ಸಿಂಹ: ನಿಮ್ಮ ಸಂಗಾತಿಯೊಂದಿಗೆ ತಾಳ್ಮೆ ಕಳೆದುಕೊಳ್ಳದಿರಿ. ಕೂತು ಮಾತನಾಡುವುದರಿಂದ ಎಲ್ಲವೂ ಸರಿದೂಗಲಿದೆ. ಕುಟುಂಬದಲ್ಲಿ ಪ್ರೀತಿ ಕೊಂಡಿಯಂತಿರಲಿ. ಮನಸ್ಸು ಶಾಂತವಾಗಿರಲು ಆದಷ್ಟು ಧ್ಯಾನ ಮಾಡಿ, ದೇಗುಲಗಳಿಗೂ ಭೇಟಿ ನೀಡಿ. ಮಹಿಳಿ ಯರ ಆರೋಗ್ಯದಲ್ಲಿ ಕೊಂಚ ಬದಲಾವಣೆ ಸಾಧ್ಯತೆ.
ಕನ್ಯಾ: ಮಕ್ಕಳು ಮಾಡಿದ ತಪ್ಪುಗಳನ್ನೆಲ್ಲಾ ಸಮರ್ಥಿಸಿ ಕೊಳ್ಳುವುದು ಪೋಷಕರ ದೊಡ್ಡ ತಪ್ಪಾಗುತ್ತದೆ. ಆದ ತಪ್ಪನ್ನು ಯಾವ ರೀತಿಯಲ್ಲಿ ಪರಿಹರಿಸ ಬೇಕು ಹಾಗೂ ಮಕ್ಕಳಿಗೆ ತಿಳಿ ಹೇಳುವುದು ಹೇಗೆ ಎಂಬ ಉತ್ತರ ನಿಮ್ಮ ಕೈನಲ್ಲಿದೆ. ಮಹಿಳೆಯರ ಆಸಕ್ತಿದಾಯಕ ವಿಚಾರಗಳು ಈ ವಾರ ಈಡೇರಲಿದೆ. ಶುಭ ಫಲ.
ತುಲಾ: ಪುರುಷರು ವಾಹನ ಚಲಾಯಿಸುವಾಗ ಎಚ್ಚರಿಕೆ ಯಿಂದ ಇರಿ. ಹಣಕಾಸಿನ ವ್ಯವಹಾರಗಳಲ್ಲಿ ಬೇರೆಯವರ ಅಭಿಪ್ರಾಯ ಪಡೆದುಕೊಂಡರೂ ಅಂತಿಮವಾಗಿ ನಿಮ್ಮ ನಿರ್ಧಾರವೇ ಇದ್ದರೆ ಒಳ್ಳೆಯದು. ಅತಿಯಾಗಿ ಯಾರನ್ನೂ ನಂಬುವುದು ಒಳ್ಳೆಯದಲ್ಲ. ವಾರ ಮಧ್ಯೆ ಮನೆಯಲ್ಲಿ ನೆಮ್ಮದಿ. ಮಕ್ಕಳಿಗೆ ಶುಭ ಫಲ.
ವೃಶ್ಚಿಕ: ಆರ್ಥಿಕ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಹಾಗೂ ವಾರಾಂತ್ಯದಲ್ಲಿ ಲಾಭ ತಂದುಕೊಡಲಿದೆ. ಆಮಿಷಗಳಿಂದ ದೂರ ಇರಿ. ನಿಮ್ಮ ಒತ್ತಡದ ಕೆಲಸವನ್ನು ಮನೆಯವರ ಮೇಲೆ ಹೇರದಿರಿ. ಇದರಿಂದ ಮನೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ.
ಧನುಸ್ಸು: ಅವಸರದಲ್ಲಿ ತೆದುಕೊಂಡ ನಿರ್ಧಾರ ಮುಂದೊಮ್ಮೆ ಕಂಟಕ ತಂದೊಡ್ಡಬಹುದು. ನಿಮ್ಮ ಶ್ರಮದ ಕೆಲಸದಿಂದ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಮಕ್ಕಳ ಮನಸ್ಸಲ್ಲಿ ಗೊಂದಲ, ಆತಂಕ ಮೂಡಲಿದ್ದು, ಪೋಷಕರ ಮಾತುಗಳೇ ಔಷಧವಾಗಲಿದೆ.
ಮಕರ: ಅತಿಯಾದ ಪ್ರಯಾಣ ನಿಮ್ಮ ಆರೋಗ್ಯದ ಏರುಪೇರಿಗೆ ಕಾರಣವಾಗಲಿದೆ. ಹಿರಿಯ ಮಾರ್ಗದರ್ಶನದಿಂದ ಅಂದುಕೊಂಡ ಕಾರ್ಯ ಪೂರ್ಣ. ಎಲ್ಲರಲ್ಲೂ ಒಳ್ಳೆಯದನ್ನೇ ಬಯಸದಿರಿ. ಮಹಿಳೆಯರ ಕುಟುಂಬ ನಿರ್ವಹಣೆಯಲ್ಲಿ ಉತ್ತಮ.
ಕುಂಭ: ನಿಮ್ಮ ದಯನೀಯ ಹಾಗೂ ನಿಶ್ಕಲ್ಮಶ ಸೇವೆ ಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಉನ್ನತ ವ್ಯಾಸಂಗ ಮಾಡುವವರಿಗೆ ಕೊಂಚ ಸವಾಲುಗಳು ಎದುರಾಗಲಿದೆ. ಉದ್ಯೋಗದಲ್ಲಿ ಭಡ್ತಿ. ವಾತಾವರಣದ ವ್ಯತ್ಯಾಸದಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರು. ಆಹಾರ ಸೇವನೆಯಲ್ಲಿ ಎಚ್ಚರಿಕೆ.
ಮೀನ: ಯಾರೂ ಪರಿಪೂರ್ಣರಲ್ಲ. ತಪ್ಪು ಮಾಡುವುದು ಸಹಜ. ಯಾರಿಗೂ ನಿಮ್ಮ ಕಠೋರ ನಡತೆ ಹಾಗೂ ಮಾತುಗಳಿಂದ ನೋಯಿಸದಿರಿ. ಆದಷ್ಟು ಸಾಂತ್ವಾನ, ಸಹಕಾರ, ಧೈರ್ಯ ತುಂಬಿ. ಮನೆಯಲ್ಲಿ ನೆಮ್ಮದಿ. ಬಂಧುಗಳ ಆಗಮನ ಸಾಧ್ಯತೆ.