ಟೊಟೊ ಪುರಸ್ಕಾರಕ್ಕೆ ಕಥೆ, ಕವಿತೆ, ನಾಟಕ ಆಹ್ವಾನ

By Web Desk  |  First Published Jul 3, 2019, 10:59 AM IST

ಯುವ ಬರಹಗಾರರನ್ನು ಉತ್ತೇಜಿಸುವ ಸಲುವಾಗಿ ನೀಡುವ ಟೊಟೊ ಪುರಸ್ಕಾರಕ್ಕೆ ಕಥೆ, ಕವಿತೆಗಳನ್ನು ಆಹ್ವಾನಿಸಲಾಗಿದೆ.


ಬೆಂಗಳೂರು [ಜು.3]: ಸೃಜನಶೀಲ ಯುವ ಬರಹಗಾರರನ್ನು ಉತ್ತೇಜಿಸುವ ಸಲುವಾಗಿ ನೀಡುವ ಟೊಟೊ ಪುರಸ್ಕಾರಕ್ಕೆ ಕನ್ನಡದ ಸೃಜನಶೀಲ ಯುವಬರಹಗಾರರಿಂದ ಪ್ರವೇಶಗಳನ್ನು ಆಹ್ವಾನಿಸಲಾಗಿದೆ. 

ಪುರಸ್ಕಾರಕ್ಕಾಗಿ ಬರಹಗಳನ್ನು ಕಳುಹಿಸುವವರು ಭಾರತೀಯ ನಾಗರಿಕರಾಗಿರಬೇಕು. 18 ರಿಂದ 29 ವರ್ಷ ವಯಸ್ಸಿನವರಾಗಿರಬೇಕು. ಕಥೆ, ಕವಿತೆ ಮತ್ತು ನಾಟಕ ಈ ಮೂರರಲ್ಲಿ ಯಾವುದೇ ಪ್ರಕಾರದಲ್ಲಿಯಾದರೂ ಪ್ರವೇಶಗಳನ್ನು ಕಳಿಸಬಹುದು. 6ರಿಂದ 10 ಕವಿತೆ, 7500 ಪದಗಳಿಗೆ ಮೀರದಂತೆ ಒಂದಕ್ಕಿಂತ ಹೆಚ್ಚು ಕತೆ, 10000 ಪದಗಳಿಗೆ ಮೀರದಂತೆ ನಾಟಕ ಕಳುಹಿಸಬಹುದು. ಈ ಮೂರು ಪ್ರಕಾರಗಳಿಂದ ಒಬ್ಬರನ್ನು ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗುತ್ತದೆ. 

Latest Videos

ಈ ಆಯ್ಕೆಯನ್ನು ಕನ್ನಡದ ಹಿರಿಯ ಬರಹಗಾರರ ಸಮಿತಿಯು ಪ್ರತಿವರ್ಷದಂತೆ ಮಾಡಲಿದೆ. ಟೊಟೊ ಪುರಸ್ಕಾರವು 50,000 ರೂಪಾಯಿಗಳ ನಗದು ಬಹುಮಾನವನ್ನು ಒಳಗೊಂಡಿದೆ. ಪ್ರವೇಶಗಳನ್ನು ಕಳುಹಿಸಲು ಕೊನೆಯ ದಿನ ಆಗಸ್ಟ್‌ 27. ಪ್ರವೇಶಗಳನ್ನು ಈ ವಿಳಾಸಕ್ಕೆ ಕಳಿಸಿ: ಟೊಟೊ ಫಂಡ್ಸ್‌ ದಿ ಆಟ್ಸ್‌ರ್‍, ಎಚ್‌ 301, ಆದರ್ಶ ಗಾರ್ಡನ್‌, 8ನೇ ಬ್ಲಾಕ್‌, 47ನೇ ಕ್ರಾಸ್‌, ಜಯನಗರ ಬೆಂಗಳೂರು-82, ದೂರವಾಣಿ-080 2699059  http://totofundsthearts.blogspot.com

click me!