ಊಟ ತಡವಾಯ್ತು ಅಂದ ಡೆಲಿವರಿ ಬಾಯ್.. ಟ್ರ್ಯಾಕ್ ಮಾಡಿದ್ರೆ ಬೇರೆಯೇ ಕಥೆ, ಜೊಮ್ಯಾಟೋ ಗ್ರಾಹಕನಿಗೆ ಶಾಕ್

Published : Sep 07, 2026, 11:16 PM IST
Gurugram man tracks down delayed Zomato order

ಸಾರಾಂಶ

ಗುರುಗ್ರಾಮದಲ್ಲಿ ಜೊಮ್ಯಾಟೋ ಡೆಲಿವರಿ ಎಜೆಂಟ್ ಒಬ್ಬ ಗ್ರಾಹಕನ ಊಟವನ್ನ ದಾರಿಯಲ್ಲೇ ಬೇರೆಯವರಿಗೆ 100 ರೂಪಾಯಿಗೆ ಮಾರಿ ವಂಚಿಸಿದ್ದಾನೆ. ಹಸಿದು ಕಾಯುತ್ತಿದ್ದ ಗ್ರಾಹಕನೇ ಖುದ್ದಾಗಿ ಲೊಕೇಶನ್‌ಗೆ ಹೋಗಿ ಡೆಲಿವರಿ ಬಾಯ್ ಅಸಲಿ ಆಟವನ್ನ ಬಯಲಿಗೆಳೆದಿದ್ದಾರೆ.

ಹಸಿದು ಮನೆಗೆ ಊಟ ಆರ್ಡರ್ ಮಾಡಿ ಕಾಯುತ್ತಾ ಕೂರುವುದು ಒಂದು ಕಡೆಯಾದರೆ.. ಆ ಊಟ ಬರದೇ ಇದ್ದಾಗ ಆಗುವ ಸಿಟ್ಟು ಇನ್ನೊಂದು ಕಡೆ. ಇಲ್ಲೊಬ್ಬ ಜೊಮ್ಯಾಟೋ ಡೆಲಿವರಿ ಬಾಯ್ ಮಾಡಿರೋ ಕೆಲಸ ಕೇಳಿದ್ರೆ ನೀವು ದಂಗಾಗ್ತೀರಾ! ಗ್ರಾಹಕನಿಗೆ ಊಟ ತಲುಪಿಸಬೇಕಿದ್ದ ಎಜೆಂಟ್, ಅದನ್ನು ದಾರಿಯಲ್ಲೇ ಬೇರೆಯವರಿಗೆ ಮಾರಿ ದುಡ್ಡು ಮಾಡಿಕೊಂಡಿದ್ದಾನೆ!

ಅಸಲಿಗೆ ಆಗಿದ್ದೇನು?

ಹರಿಯಾಣದ ಗುರುಗ್ರಾಮದ ನಿವಾಸಿ ರಿಷಭ್ ಕೌಶಿಕ್ ಎಂಬುವವರು ಭಾನುವಾರ ರಾತ್ರಿ 10.58ಕ್ಕೆ ಖಡಕ್ ಸಿಂಗ್ ದಾ ಧಾಬಾದಿಂದ ಜೊಮ್ಯಾಟೋ ಮೂಲಕ ಊಟ ಆರ್ಡರ್ ಮಾಡಿದ್ದರು. ಊಟ ಮನೆ ಹತ್ತಿರವೇ ಇದೆ ಎಂದು ಆಪ್‌ನಲ್ಲಿ ತೋರಿಸುತ್ತಿತ್ತು. ಆದರೆ ಎಷ್ಟು ಸಮಯ ಕಳೆದರೂ ಡೆಲಿವರಿ ಬಾಯ್ ಮಾತ್ರ ಮನೆಗೆ ಬರಲೇ ಇಲ್ಲ.

ಸುಮಾರು 40 ನಿಮಿಷಗಳಿಂದ ಡೆಲಿವರಿ ಎಜೆಂಟ್ ಒಂದೇ ಜಾಗದಲ್ಲಿ ನಿಂತಿರುವುದನ್ನು ರಿಷಭ್ ಗಮನಿಸಿದರು. ಏನೋ ಸಮಸ್ಯೆ ಇರಬಹುದು ಎಂದುಕೊಂಡ ರಿಷಭ್, ತಾವೇ ಖುದ್ದಾಗಿ ಆ ಜಾಗಕ್ಕೆ ಹೋಗಿ ನೋಡಲು ನಿರ್ಧರಿಸಿದರು. ಅಲ್ಲಿ ಹೋದಾಗ ಅವರಿಗೆ ಕಾದಿತ್ತು ದೊಡ್ಡ ಶಾಕ್!

ರಿಷಭ್ ಆರ್ಡರ್ ಮಾಡಿದ ಊಟದ ಪ್ಯಾಕೆಟ್ ಅನ್ನು ಆ ಡೆಲಿವರಿ ಬಾಯ್ ಇಬ್ಬರು ಅಪರಿಚಿತ ವ್ಯಕ್ತಿಗಳಿಗೆ ಕೇವಲ 100 ರೂಪಾಯಿಗೆ ಮಾರಿಬಿಟ್ಟಿದ್ದ! ರಿಷಭ್ ಅಲ್ಲಿಗೆ ಹೋಗುವಷ್ಟರಲ್ಲಿ ಆ ಇಬ್ಬರು ವ್ಯಕ್ತಿಗಳು ರಿಷಭ್ ಅವರ ಊಟವನ್ನು ಆರಾಮವಾಗಿ ತಿನ್ನುತ್ತಾ ಕೂತಿದ್ದರು. ಈ ದೃಶ್ಯವನ್ನು ನೋಡಿ ಹೌಹಾರಿದ ರಿಷಭ್, ತಕ್ಷಣವೇ ಫೋಟೋ ತೆಗೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಘಟನೆಯ ಫೋಟೋಗಳನ್ನು ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಂಡಿರುವ ರಿಷಭ್ ಜೊಮ್ಯಾಟೋ ಸಂಸ್ಥಾಪಕ ದೀಪಿಂದರ್ ಗೋಯಲ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಇದು ಕೇವಲ ಫುಡ್ ಡೆಲಿವರಿ ಅಲ್ಲ, ಇದೊಂದು ಫುಲ್ ಫ್ಲೆಡ್ಜ್ಡ್ ಫುಡ್ ಶೇರಿಂಗ್ ಎಕಾನಮಿ (Food Sharing Economy) ಎಂದು ವ್ಯಂಗ್ಯವಾಗಿ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಜೊಮ್ಯಾಟೋ ಕೇರ್ ಆರ್ಡರ್ ಐಡಿ ನೀಡುವಂತೆ ಕೇಳಿದ್ದು, ತನಿಖೆ ಮಾಡುವುದಾಗಿ ತಿಳಿಸಿದೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕೂಡ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ರಾತ್ರಿ ವೇಳೆ ಆರ್ಡರ್ ಮಾಡುವಾಗ ಕ್ಯಾಶ್ ಆನ್ ಡೆಲಿವರಿ (COD) ಆಯ್ಕೆ ಮಾಡಿಕೊಳ್ಳಿ, ಆಗ ಇಂತಹ ಅವಾಂತರಗಳು ತಪ್ಪುತ್ತವೆ ಎಂದು ಕೆಲವರು ಸಲಹೆ ನೀಡಿದ್ದಾರೆ.

PREV
Read more Articles on
click me!

Recommended Stories

Delhi Building Collapse: ಅಣ್ಣ ಎಲ್ಲಿದ್ದಾನೆ ಪತ್ತೆ ಮಾಡಿ; ಕಣ್ಣೀರಿಟ್ಟು ಹುಚ್ಚಿಯಂತೆ ಆಸ್ಪತ್ರೆಯಿಂದ ಆಸ್ಪತ್ರೆ ಅಲೆಯುತ್ತಿರುವ ತಂಗಿ!
ಈ ಕಾಡಿನಲ್ಲಿ ತ್ರಿಫಲ ವೃಕ್ಷ ಉಂಟು: ಈ ಮರದ ಒಂದೇ ಹಣ್ಣು ತಿಂದರೆ ಮುಪ್ಪು ಬರಲ್ವಂತೆ!