
ದೇಶದ ಅತಿದೊಡ್ಡ ಯೂಟ್ಯೂಬ್ ವ್ಲಾಗರ್ಗಳಲ್ಲಿ ಒಬ್ಬರಾದ ಸೌರವ್ ಜೋಶಿ ಹೊಸ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಬಂದಿದೆ. ಹೊಸ ವಿಡಿಯೋಗಳ ಮೂಲಕ ಜನರ ಮೆಚ್ಚುಗೆಗೆ ಕಾರಣವಾರಾಗ್ತಿದ್ದ ಸೌರವ್ ಜೋಶಿ ಈ ಬಾರಿ ಜನರ ಟೀಕೆಗೆ ಗುರಿಯಾಗಿದ್ದಾರೆ. ಬಳಕೆದಾರರು ಅವರನ್ನು ಟ್ರೋಲ್ ಮಾಡ್ತಿದ್ದಾರೆ. ವ್ಲಾಗ್ ಗಾಗಿ ಸಾವಿರಗಟ್ಟಲೆ ನೀರನ್ನು ವ್ಯರ್ಥ್ಯ ಮಾಡಿರೋದು ಇದಕ್ಕೆ ಕಾರಣ.
ವ್ಲಾಗ್ ನ ಪ್ರಕಾರ, ಸೌರವ್ ಒಂದು ತಾತ್ಕಾಲಿಕ ಸ್ವಿಮ್ಮಿಂಗ್ ಪೂಲ್ ನಿರ್ಮಿಸಿದ್ದಾರೆ. ಅದರ ಮೇಲೆ ದಪ್ಪ ಪ್ಲಾಸ್ಟಿಕ್ ಶೀಟ್ ಹಾಕಿದ್ದಾರೆ. ನಂತ್ರ ಟ್ಯಾಂಕರ್ನಿಂದ ಸುಮಾರು 6,000 ಲೀಟರ್ ಶುದ್ಧ ನೀರನ್ನು ಅದಕ್ಕೆ ತುಂಬಿದಲಾಗ್ತಿದೆ. ಇದು 6 ಸಾವಿರ ಲೀಟರ್ ಇರುವ ಟ್ಯಾಂಕರ್ ಎಂದು ಸೌರವ್ ವ್ಲಾಗ್ ನಲ್ಲಿ ಹೇಳ್ತಾರೆ.
ಸ್ಯಾಂಡಲ್‌ವುಡ್‌ನಲ್ಲಿರೋ ಸಮಸ್ಯೆಗಳನ್ನು ಬಹಿರಂಗಗೊಳಿಸಿದ ಹಿರಿಯ ನಟಿ ಜಯಮಾಲಾ
ಸೌರವ್, ಅವರ ಸ್ನೇಹಿತರು ಮತ್ತು ಇತರ ಹಲವಾರು ಮಕ್ಕಳು ಕೊಳಕ್ಕೆ ಹಾರಿ, ಸ್ನಾನ ಮಾಡ್ತಿರೋದು, ಆಟ ಆಡ್ತಿರೋದನ್ನು ನೀವು ಕಾಣ್ಬಹುದು. ನೀರಿನಲ್ಲಿ ಅವರು ಖುಷಿಯಾಗಿ ಆಡ್ತಿದ್ದಾರೆ ಆದ್ರೆ ಅಷ್ಟೊಂದು ನೀರನ್ನು ಹಾಳು ಮಾಡಿರೋದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ.
ದೇಶದ ಅನೇಕ ಭಾಗಗಳಲ್ಲಿ, ಪ್ರತಿ ಹನಿ ನೀರಿಗಾಗಿ ಜನರು ಕಷ್ಟಪಡುತ್ತಿದ್ದಾರೆ. ಕೆಲವು ಸ್ಥಳಗಳಲ್ಲಿ ಕುಡಿಯುವ ನೀರಿನ ಕೊರತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಸಾವಿರಾರು ಲೀಟರ್ ಶುದ್ಧ ನೀರನ್ನು ಕೇವಲ ವ್ಲಾಗ್ ಮಾಡಲು ಬಳಸುವುದು ಸರಿಯಲ್ಲ ಎಂಬುದು ನೆಟ್ಟಿಗರ ವಾದ. ಇಷ್ಟು ನೀರಿದ್ರೆ ಅನೇಕ ಕುಟುಂಬಗಳು ಬದುಕಬಹುದು ಎಂದು ಕಮೆಂಟ್ ಮಾಡಿದ್ದಾರೆ. ನೀವು ಅಷ್ಟು ದೊಡ್ಡ ಯೂಟ್ಯೂಬರ್ ಆಗಿದ್ದು, ಸಮಾಜಕ್ಕೆ ಮಾದರಿಯಾಗುವ ಕೆಲ್ಸ ಮಾಡ್ಬೇಕು ಎಂದು ಸಲಹೆ ನೀಡಿದ್ದಾರೆ. ಇತ್ತ ಸೌರವ್ ಫ್ಯಾನ್ಸ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ನೀರಿನ ಟ್ಯಾಂಕರ್ ಆರ್ಡರ್ ಮಾಡಲು ತಮ್ಮ ಸ್ವಂತ ಹಣವನ್ನು ಬಳಸಿಕೊಂಡಿದ್ದಾರೆ. ಅದು ಅವರ ವೈಯಕ್ತಿಕ ನಿರ್ಧಾರ ಎಂದು ಕೆಲವರು ಸೌರವ್ ಪರ ವಾದವಿಟ್ಟಿದ್ದಾರೆ.
'ಸರ್ಕಾರಿ ನ್ಯಾಯಬೆಲೆ ಅಂಗಡಿ'ಯಲ್ಲಿ ರಾಗಿಣಿ.. ಜುಲೈ 31ರಂದು ಇಡೀ ಕರ್ನಾಟಕದಲ್ಲಿ 'ಪಾರ್ವತಿ' ಆಗಮನ!
ಸೌರವ್ ಜೋಶಿ ಒಂದೇ ವೀಡಿಯೊದಿಂದ ಸುಮಾರು 5–10 ಲಕ್ಷ ಗಳಿಸುತ್ತಾರೆ. ನೀರಿನ ಟ್ಯಾಂಕರ್ಗೆ ಸುಮಾರು 20,000 ಖರ್ಚು ಮಾಡಿರ್ಬಹುದು. ಅದು ಅವರಿಗೆ ಯಾವ ಲೆಕ್ಕವೂ ಅಲ್ಲ. ಆದ್ರೆ ಇಷ್ಟೊಂದು ನೀರನ್ನು ಹಾಳು ಮಾಡುವ ಬದಲು ಅಗತ್ಯವಿರುವವರಿಗೆ ನೀಡಿದ್ರೆ ಸೌರವ್ ಮೇಲಿನ ಅಭಿಮಾನ ಡಬಲ್ ಆಗ್ತಿತ್ತೇನೋ.