29ನೇ ವಯಸ್ಸಿಗೆ ಕಾರ್ಪೋರೇಟ್ ಕೆಲಸದಿಂದ ನಿವೃತ್ತಿ, ವಿಶ್ರಾಂತಿ ಜೀವನಕ್ಕೆ 4 ಸೂತ್ರ ನೀಡಿದ ಯುವತಿ

Published : Aug 26, 2026, 05:19 PM IST
Retired at 29 Young Woman Reveals 4 Secrets

ಸಾರಾಂಶ

ಕಾರ್ಪೋರೇಟ್ ವಲಯದಲ್ಲಿ 29ನೇ ವಯಸ್ಸಿಗೆ ಕಂಪನಿ ಬದಲಾಯಿಸುವ, ವೇತನ ಹೆಚ್ಚಿಸುವ, ಮದುವೆ ಕುರಿತು ಆಲೋಚಿಸುತ್ತಾರೆ. ಆದರೆ ಇಲ್ಲೊಬ್ಬ ಯುವತಿ 29ನೇ ವಯಸ್ಸಿಗೆ ನಿವೃತ್ತಿಯಾಗಿದ್ದಾರೆ. ಇಷ್ಟೇ ಅಲ್ಲ ನಿವೃತ್ತಿ ಪ್ಲಾನ್‌ಗೆ 4 ಸೂತ್ರ ನೀಡಿದ್ದಾರೆ.

ಪುಣೆ (ಆ.26) ಕಾಲೇಜು, ಕೋರ್ಸ್, ಶಿಕ್ಷಣ ಮುಗಿಸಿ ಕೆಲಸಕ್ಕೆ ಸೇರುವಾಗಲೇ 23 ದಾಟಿರುತ್ತೆ. ಇನ್ನು ಒಂದೆರೆಡು ಕಂಪನಿ ಬದಲಾಯಿಸಿ ಉತ್ತಮ ಸ್ಯಾಲರಿ ಪಡೆಯುವಷ್ಟರಲ್ಲಿ ವಯಸ್ಸು 30 ದಾಟಿರುತ್ತದೆ. ಭಾರತದಲ್ಲಿ ಬಹುತೇಕರು 40ರ ವಯಸ್ಸಿನಲ್ಲಿ ಕೆಲಸ ಹುಡುಕುವವರ ಸಂಖ್ಯೆ ಹೆಚ್ಚು. ಇನ್ನು ನಿವೃತ್ತಿ ದೂರದ ಮಾತು. ನಿವೃತ್ತಿಯ ವಯಸ್ಸಾದಾರೂ ಸಂಕಷ್ಟಗಳು, ಸಾಲ ಮುಗಿದಿರುವುದಿಲ್ಲ. ಆದರೆ ಇಲ್ಲೊಬ್ಬ ಯುವತಿ 29ರ ಹರೆಯದಲ್ಲೇ ಕಾರ್ಪೋರೇಟ್ ಕೆಲಸಕ್ಕೆ ಗುಡ್ ಬೈ ಹೇಳಿ ವಿಶ್ರಾಂತಿ ಜೀವನಕ್ಕೆ ಜಾರಿದ್ದಾರೆ. ನಿವೃತ್ತಿ ಪ್ಲಾನ್‌ಗೆ 4 ಸೂತ್ರವನ್ನು ನೀಡಿದ್ದಾರೆ.

ಸಣ್ಣ ವಯಸ್ಸಿಗೆ ನಿವೃತ್ತಿ

ಪುಣೆ ಮೂಲದ 29ರ ಹರೆಯದ ಸ್ನೇಹಾ ರಾಜಗುರು ಇದೀಗ ಸಣ್ಣ ವಯಸ್ಸಿಗೆ ನಿವೃತ್ತಿಯಾಗಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ನಿಧಾನಗತಿಯಲ್ಲಿ ರೈತ ಜೀವನಶೈಲಿಗೆ ಹೊಂದಿಕೊಳ್ಳುತ್ತಿದ್ದೇನೆ. ನೀವೂ ಸಣ್ಣ ವಯಸ್ಸಿಗೆ ನಿವೃತ್ತಿಯಾಗಿ ಒತ್ತಡ ಮುಕ್ತ ಬದುಕಿಗೆ ಹೊಂದಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಈ ರೀತಿ ಮಾಡಲು ಕೆಲಸದಲ್ಲಿರುವಾಗಲೇ ನಾಲ್ಕು ಸೂತ್ರ ಅನುಸರಿಸಿ ಎಂದಿದ್ದಾರೆ.

ನಿವೃತ್ತಿ ಹಿಂದಿನ ನಾಲ್ಕು ಹಂತಗಳನ್ನು ಸೂತ್ರವಾಗಿ ವಿವರಿಸಿದ್ದಾರೆ. ವಿಶೇಷವಾಗಿ ಸ್ವಾವಲಂಬಿ ಜೀವನ ಕುರಿತು ಒತ್ತಿ ಹೇಳಿದ್ದಾರೆ. ಇದೇ ಸೂತ್ರ ಅನುಸರಿಸಿದರೆ ಎಲ್ಲವೂ ಹಾಯಾಗಿರಲಿದೆ ಎಂದಿದ್ದಾರೆ. ಮೊದಲ ಹಂತದಲ್ಲಿ ಕೆಲಸದಲ್ಲಿರುವಾಗಲೇ ಆದಾಯದಿಂದ ಸಣ್ಣ ಭೂಮಿ ಖರೀದಿಸಿ ಎಂದಿದ್ದಾರೆ. ಇದಕ್ಕೆ ಉದಾಹರಣೆಯಾಗಿ ತಮ್ಮ ಫಾರ್ಮ್ ತೋರಿಸಿದ್ದಾರೆ. ಈ ಮೂಲಕ ತಾವು ಹೇಗೆ 29ರ ಹರೆಯದಲ್ಲಿ ನಿವೃತ್ತಿ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಯಿತು ಅನ್ನೋದು ಹೇಳಿದ್ದಾರೆ.

ಸ್ನೇಹಾ ಸೂಚಿಸಿದ ನಾಲ್ಕು ಸೂತ್ರ

ಭೂಮಿ ಖರೀದಿಸಿದ ಬಳಿಕ ಎರಡನೇ ಹಂತದಲ್ಲಿ ಹಣ್ಣಿನ ಗಿಡಗಳನ್ನು ನೆಡಬೇಕು. ಈ ಗಿಡಗಳು ಮರಗಳಾಗಿ ಬೆಳೆಯುತ್ತದೆ. ಬಳಿಕ ಹಣ್ಣುಗಳನ್ನು ನೀಡಲು ಆರಂಭಿಸುತ್ತದೆ, ಪ್ರತಿ ತಿಂಗಳು ಒಂದಲ್ಲಾ ಒಂದು ಹಣ್ಣಿನ ಗಿಡ ಹಣ್ಣು ನೀಡುತ್ತಲೇ ಇರುತ್ತದೆ. ಮೂರನೇ ಹಂತದಲ್ಲಿ ಬೇಕಾದಷ್ಟು ಆಹಾರ, ತರಕಾರಿ, ಧಾನ್ಯಗಳನ್ನು ಅದೇ ಭೂಮಿಯಲ್ಲಿ ಬೆಳೆಯುವುದು. ಇದರಿಂದ ಮಾರುಕಟ್ಟೆಯಲ್ಲಿ ಯಾವುದೇ ಪರಿಸ್ಥಿತಿ ಇದ್ದರೂ ಸಮಸ್ಯೆ ಇಲ್ಲ. ಅವಲಂಬನೆ ಇಲ್ಲದೆ ಜೀವನ ಸಾಗಿಸಲು ಸಾಧ್ಯವಿದೆ. ಲಾಕ್‌ಡೌನ್, ಯುದ್ದ ಸಂದರ್ಭದಲ್ಲೂ ಸಮಸ್ಯೆಯಾಗುವುದಿಲ್ಲ ಎಂದಿದ್ದಾರೆ. ನಾಲ್ಕನೇ ಹಂತದಲ್ಲಿ ಇದೇ ಭೂಮಿಯಲ್ಲಿ ಒಂದಷ್ಟು ಹೂವಿನ ತೋಟ ಮಾಡಿ. ಇದರಿಂದ ಮನಸ್ಸಿಗೂ ಹಿತವೆನಿಸುತ್ತದೆ ಎಂದಿದ್ದಾರೆ.

ಇವಿಷ್ಟು ಪ್ಲಾನ್ ಮಾಡಿಕೊಂಡರೆ ನಿವೃತ್ತಿಯಾಗಲು ಸಾಧ್ಯ. ಯಾವುದೇ ಆತಂಕವಿಲ್ಲದೆ ಜೀವನ ಸಾಗಿಸಲು ಸಾಧ್ಯ. ಈ ಭೂಮಿಯಲ್ಲಿ ನೀವು ಕೆಲಸ ಮಾಡಿ, ಬೆಳೆ ಬೆಳೆದು ನಿಮ್ಮ ಅಗತ್ಯ ಪೂರೈಸಿದರೆ ನೀವು ಆಸ್ಪತ್ರೆಗಳಿಂದ ದೂರವಿರಬಹುದು. ಖರ್ಚು ಕಡಿಮೆ ಮಾಡಬಹುದು. ಉತ್ತಮ ಆಹಾರ, ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.

ಸ್ನೇಹಾ ಸೂತ್ರಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ 29 ವಯಸ್ಸಿಗೆ ನಿವೃತ್ತಿಯಾಗಲು ಮೊದಲ ದಿನದಿಂದಲೇ ದೊಡ್ಡ ಮಟ್ಟದ ಸ್ಯಾಲರಿ ಇರಬೇಕು. ಈ ವೇತನದಲ್ಲಿ ಭೂಮಿ ಖರೀದಿ, ತಮ್ಮ ಮುಂದಿನ ಜೀವನಕ್ಕೆ ಒಂದಷ್ಟು ಉಳಿತಾಯ, ಫಿಕ್ಸೆಡ್ ಸೇರಿದಂತೆ ವಿವಿದ ಬ್ಯಾಂಕ್ ಹೂಡಿಕೆ ಮಾಡಿರಬೇಕು. ಇಲ್ಲದಿದ್ದರೆ ಅಪ್ಪ ಮಾಡಿದ ಆಸ್ತಿ ಇರಬೇಕು. ಇದಿಲ್ಲದಿದ್ದರೆ 29ರ ಹರೆಯ ಅಲ್ಲ 59 ಆದರೂ ಮುಕ್ತಿ ಸಿಗುವುದಿಲ್ಲ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

PREV
Read more Articles on
click me!

Recommended Stories

"ಮನೆಯಿಂದಲೇ ಕೆಲಸ ಮಾಡುತ್ತೇನೆ" ಎಂದ ಉದ್ಯೋಗಿಗೆ ಕಾದಿತ್ತು ಬಿಗ್ ಸರ್‌ಪ್ರೈಸ್! ಮ್ಯಾನೇಜರ್ ಹೇಳಿದ್ದೇನು?
'ಆಗಸ್ಟ್ 25ಕ್ಕೆ ಬಿಗ್ ರಿವೀಲ್', ಸೋಶಿಯಲ್ ಮೀಡಿಯಾ ಕ್ರಿಯೇಟರ್‌ನಿಂದ ಕೋಟಿ ಕೋಟಿ ರೂಪಾಯಿ ವಂಚನೆ