ನೀನು ಯಾವ ದೇಗುಲ ಹೊಕ್ರೂ ಬಿಡೋಳಲ್ಲ, ಓಡಿ ಹೋಗಲು ಕೊನೆ ಅವಕಾಶ ಇದು: ಪ್ರಧಾನಿಗೆ ಧಮ್ಕಿ- ವಿಡಿಯೋ ಇಲ್ಲಿದೆ

Published : Apr 29, 2026, 08:44 PM IST
Lady threatning PM

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯವರಿಗೆ ಜೀವ ಬೆದರಿಕೆ ಹಾಕುತ್ತಿರುವ ಮಹಿಳೆಯ ವಿಡಿಯೋವೊಂದು ವೈರಲ್ ಆಗಿದೆ. ಅಧಿಕಾರದಿಂದ ಕೆಳಗಿಳಿಯದಿದ್ದರೆ ದೇವಸ್ಥಾನದಲ್ಲಿಯೇ ಮುಗಿಸುವುದಾಗಿ ಆಕೆ ಎಚ್ಚರಿಸಿದ್ದಾಳೆ. ಈ ವಿಡಿಯೋದ ಸತ್ಯಾಸತ್ಯತೆ ಮತ್ತು ಮಹಿಳೆಯ ಗುರುತು ಇನ್ನೂ ದೃಢಪಟ್ಟಿಲ್ಲ.

ಕೆಲವರಿಗೆ ಹೇಗಾದರೂ ಮಾಡಿ ವೈರಲ್​ ಆಗುವ ಹುಚ್ಚು. ಒಳ್ಳೆಯತನದಿಂದ ವೈರಲ್​ ಆಗುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಎಂದು ತಿಳಿದಿರುವ ಕಾರಣಕ್ಕಾಗಿಯೇ ಕಾಂಟ್ರವರ್ಸಿ ಮಾಡುವ ಮೂಲಕ ಹೇಗೆ ಫೇಮಸ್​ ಆಗಬೇಕು ಎಂದು ಒಂದಿಷ್ಟು ಮಂದಿ ಕಾಯುತ್ತಲೇ ಇರುತ್ತಾರೆ. ಕೆಲವು ಕ್ಷೇತ್ರಗಳಲ್ಲಿ ಕಾಂಟ್ರವರ್ಸಿ ಮಾಡಿಕೊಂಡು, ಜೈಲಿಗೆ ಹೋಗಿಬಂದು, ಟ್ರೋಲ್​ ಆದವರಿಗಾಗಿಯೇ ಕೆಲವೊಂದು ರಿಯಾಲಿಟಿ ಷೋಗಳು ರೆಡ್​ ಕಾರ್ಪೆಟ್​ ಹಾಸುವುದು ಗೊತ್ತಿರುವ ಕಾರಣ, ಕಾಂಟ್ರವರ್ಸಿ ಮೂಲಕ ಫೇಮಸ್​​ ಆಗುವುದು ಮುಂದೆ ಬರುವುದು ಇದೆ.

ಒಂದು ಲೆವೆಲ್​ ಮುಂದಕ್ಕೆ

ಇದು ಸಾಮಾನ್ಯ ಜನರ ಮಾತಾಯಿತು. ಆದರೆ ಈ ಲೆವೆಲ್​ಗಿಂತಲೂ ಇನ್ನೊಂದು ಲೆವೆಲ್​ ಮುಂದೆ ಹೋಗಿ ಫೇಮಸ್​ ಆಗಬೇಕು. ಇಡೀ ದೇಶದ ತುಂಬೆಲ್ಲಾ ರಾತ್ರೋರಾತ್ರಿ ವೈರಲ್​ ಆಗಬೇಕು ಎಂತಾದರೆ, ಇನ್ನೂ ದೊಡ್ಡ ಮಟ್ಟದಲ್ಲಿಯೇ ಕಾಂಟ್ರವರ್ಸಿ ಮಾಡಿಕೊಳ್ಳಬೇಕಲ್ಲ. ಅದಕ್ಕಾಗಿಯೇ ಕಾಯುತ್ತಿರುತ್ತಾರೆ ಕೆಲವರು. ಅವರಿಗೆ ಸುಲಭದಲ್ಲಿ ಸಿಗುವುದು ದೊಡ್ಡ ದೊಡ್ಡ ರಾಜಕಾರಣಿಗಳು. ಏಕೆಂದರೆ ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ ಆಗಿರುವ ಕಾರಣ, ಯಾರಿಗೆ ಏನು ಬೇಕಾದರೂ ಹೇಳಬಹುದಾಗಿದೆ.

ಪ್ರಧಾನಿಗೆ ಖುಲ್ಲುಂಖುಲ್ಲಾ ಬೆದರಿಕೆ

ಇದೀಗ ಮಹಿಳೆಯೊಬ್ಬಳು ಪ್ರಧಾನಿ ನರೇಂದ್ರ ಮೋದಿಗೆ ಖುಲ್ಲಂಖುಲ್ಲಾ ಜೀವ ಬೆದರಿಕೆ ಹಾಕಿದ್ದಾಳೆ. ಇದರ ವಿಡಿಯೋ ವೈರಲ್​ ಆಗಿದೆ. ಇದರಲ್ಲಿ ಮಹಿಳೆ, ಮೋದಿ, ನೀನು ಅಧಿಕಾರದಿಂದ ಇಳಿ. ಒಂದು ವೇಳೆ ನೀನು ಹೀಗೆ ಮಾಡಿಲ್ಲವೆಂದರೆ, ನಾನು ಸುಮ್ಮನೇ ಬಿಡುವುದಿಲ್ಲ. ನೀನು ಯಾವ ದೇವಸ್ಥಾನವನ್ನು ಹೊಕ್ಕರೂ ಅಲ್ಲಿಯೇ ಮುಗಿಸುತ್ತೇನೆ. ವಿಮಾನ ಹೇಗೆ ಬ್ಲಾಸ್ಟ್​ ಆಗಿತ್ತು ಎಂದು ನೀನು ಹೇಳ್ತಿಯೋ, ಇಲ್ಲಾ ನಾನು ಹೇಳಲೋ ಎಂದು ಮಹಿಳೆ ಪ್ರಶ್ನಿಸಿದ್ದಾಳೆ. ಒಂದು ವೇಳೆ ನಾನೇ ಮಾತನಾಡಿದ್ರೆ ನಿನ್ನ ಜೊತೆ ತುಂಬಾ ಕೆಟ್ಟದ್ದು ಆಗುತ್ತದೆ. ನಿನಗೆ ಅವಕಾಶ ಕಲ್ಪಿಸುತ್ತಿದ್ದೇನೆ. ಎಲ್ಲಿ ಓಡಿ ಹೋಗ್ತಿಯೋ ಹೋಗು ಎಂದು ಹೇಳಿದ್ದಾಳೆ.

ಅಧಿಕೃತ ದೃಢೀಕರಣವಿಲ್ಲ

harshyadavind ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ ಮಾಡಲಾಗಿದೆ. ಈ ಮಹಿಳೆಯ ಗುರುತು ಅಥವಾ ವೀಡಿಯೊವನ್ನು ರೆಕಾರ್ಡ್ ಮಾಡಿದ ಸಂದರ್ಭದ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಹೇಳಿಕೆಗಳು ದೊಡ್ಡ ಚರ್ಚೆಯ ಭಾಗವಾಗಿದೆಯೇ, ಸ್ಕ್ರಿಪ್ಟ್ ಮಾಡಿದ ಪ್ರದರ್ಶನವೇ ಅಥವಾ ಸರಳವಾಗಿ ಸ್ವಯಂಪ್ರೇರಿತ ರೆಕಾರ್ಡಿಂಗ್ ಆಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಅದರಲ್ಲಿ ತಿಳಿಸಲಾಗಿದೆ.

 

 

PREV
Read more Articles on
click me!

Recommended Stories

ಮನೆಯ ಡ್ರಾಯರ್‌ನಲ್ಲಿದ್ದ ಚಿನ್ನದ ಉಂಗುರ ಕದ್ದು ಮೈಗೆ ಹಾಕಿಕೊಂಡ ಹಾವು; ಬಳಿಕ ನಡೆದಿದ್ದೇ ರಣ ರೋಚಕ ಕಥೆ!
'ಆ ನಟನಿಗೆ ನನ್ನ ಹೃದಯದಲ್ಲಿ ಸ್ಪೆಷಲ್ ಸ್ಥಾನ ಇದೆ'.. ಸ್ವತಃ ತಾವೇ ಗುಟ್ಟು ಬಿಟ್ಟುಕೊಟ್ಟ ನಟಿ ಅನುಷ್ಕಾ ಶೆಟ್ಟಿ!