ಔಷಧಿ ಸ್ಟಾಪ್‌ ಮಾಡುವಂತೆ ಸಲಹೆ ChatGPT, ಪ್ರಾಣಬಿಟ್ಟ ಯುವತಿ; OpenAI ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಪೋಷಕರು

Published : Oct 31, 2026, 08:24 AM IST
ChatGPT Advised Woman To Stop Taking Medication

ಸಾರಾಂಶ

ಚಾಟ್‌ಜಿಪಿಟಿ ನೀಡಿದ ವೈದ್ಯಕೀಯ ಸಲಹೆಯಿಂದಾಗಿ ತಮ್ಮ ಮಗಳು ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಆರೋಪಿಸಿ ಪೋಷಕರು ಓಪನ್‌ಎಐ ವಿರುದ್ಧ ದೂರು ದಾಖಲಿಸಿದ್ದಾರೆ. ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದ ಯುವತಿಗೆ ಔಷಧಿ ನಿಲ್ಲಿಸುವಂತೆ ಚಾಟ್‌ಬಾಟ್ ಸೂಚಿಸಿತ್ತು ಎನ್ನಲಾಗಿದೆ.

ನನ್ನ ಮಗಳು ChatGPT ಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಆರೋಪಿಸಿ ಯುತಿಯ ಪೋಷಕರು ಪೊಲೀಸ್‌ ದೂರು ದಾಖಲಿಸಿದ್ದಾರೆ. ಪೊಲೀಸರು ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.

ಚೀನಾದ ದಂಪತಿ ಈ ಆರೋಪ ಮಾಡಿದೆ. ಇವರು 31 ವರ್ಷದ ಮಗಳು ಬೋವೆನ್ ವಾನ್ ಸಿಯಾಟಲ್‌ನಲ್ಲಿ ವಾಸವಿದ್ದರು. ಕಳೆದ ಎರಡು ಎರಡು ದಿನಗಳಿಂದ ಮನೆಯವರ ಸಂಪರ್ಕದಲ್ಲಿ ಇರಲಿಲ್ಲ. ಇದರಿಂದ ಪೋಷಕರು ಆಘಾತಕ್ಕೆ ಒಳಗಾದರು. ನಂತರ ತಮ್ಮ ಹತ್ತಿರದ ಸ್ನೇಹಿತರಿಗೆ ಕರೆ ಮಾಡಿ ಆಕೆಯನ್ನು ಭೇಟಿ ಆಗುವಂತೆ ಕೇಳಿಕೊಂಡರು. ಅವರು ಆಕೆ ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿದ್ದರು. ಈ ವೇಳೆ ಕುಟುಂಬವು ಲೈವ್ ವೀಡಿಯೊ ಕರೆಯನ್ನು ವೀಕ್ಷಿಸುತ್ತಿತ್ತು. ಅಪಾರ್ಟ್‌ಮೆಂಟ್‌ ಒಳಗೆ ಆಕೆ ವಾಸವಿದ್ದ ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿರೋದು ಕಂಡುಬಂದಿದೆ.

ವೈದ್ಯಕೀಯ ತಪಾಸಣೆ ಬಳಿಕ ವಾನ್‌ Epilepsy ಎಂಬ ನರಸಂಬಂಧಿ ಕಾಯಿಲೆಂದ ಮೃತಪಟ್ಟಿದ್ದಾಳೆ ಎಂದು ತಿಳಿಸಿದರು. ವಾನ್ ಹಲವು ವರ್ಷಗಳಿಂದ ಲ್ಯಾಮೋಟ್ರಿಜಿನ್ ಅನ್ನು ತೆಗೆದುಕೊಳ್ಳುತ್ತಿದ್ದರು. ಆಕೆಯನ್ನ ಜೀವಂತ ವಾಗಿಟ್ಟಿರೋದೇ, ಆ ಔಷಧಿ ಆಗಿತ್ತು ಎಂದು ಕುಟುಂಬ ಹೇಳಿಕೊಂಡಿದೆ. ಈಗ ಆಕೆಯ ಪೋಷಕರು ChatGPT OpenAI ವಿರುದ್ಧ ದೂರ ದಾಖಲಿಸಿದ್ದಾರೆ.

ಚಾಟ್‌ಬಾಟ್ ತನ್ನ ChatGPT 4o ಆವೃತ್ತಿಯಲ್ಲಿ, ವಾನ್‌ಗೆ ಔಷಧಿಯಿಂದ ದೂರವಿರಲು ತರಬೇತಿ ನೀಡಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ವಾನ್‌ ಕುಟುಂಬ ಆರೋಪ ಮಾಡಿದ್ದು, ಕೋರ್ಟ್‌ನಲ್ಲಿ ಇನ್ನೂ ಸಾಬೀತಾಗಿಲ್ಲ. ದೂರಿನ ಪ್ರಕಾರ, ವಾನ್ ಔಷಧದ ಅಡ್ಡಪರಿಣಾಮಗಳ ಬಗ್ಗೆ ಚಿಂತೆ ಶುರುಮಾಡಿದ್ದರು. ಅದಕ್ಕೆ ಚಾಟ್‌ಜಿಪಿಟಿ ಸಹಾಯ ಕೇಳಿದ್ದರು. ಚಾಟ್‌ಜಿಪಿಟಿ ಲ್ಯಾಮೋಟ್ರಿಜಿನ್ ಕಡಿಮೆ ಮಾಡಲು ಪ್ಲಾನ್‌ ನೀಡಿದೆ ಎಂದು ಯುವತಿ ಕುಟುಂಬಸ್ಥರು ಆರೋಪಿಸಿದ್ದಾರೆ.

ChatGPT ಲ್ಯಾಮೋಟ್ರಿಜಿನ್ ಕಡಿಮೆ ಮಾಡಲು ಪ್ಲಾನ್‌ ನೀಡಿದೆ. ಆ ಮೂಲಕ ಅದು ವೈದ್ಯರಿಂದ ದೂರ ಇಡಲು ಪ್ರಯತ್ನಿಸಿದೆ. ತನ್ನ ಚಾಟ್‌ನಲ್ಲಿ ಎಲ್ಲಿಯೂ ವೈದ್ಯರನ್ನ ಭೇಟಿ ಆಗುವಂತೆ ಕೇಳಿಕೊಂಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವಾನ್ ಔಷಧಿ ಸಂಪೂರ್ಣವಾಗಿ ತ್ಯಜಿಸುವ ದಿನಾಂಕವನ್ನೂ ಚಾಟ್‌ಜಿಪಿಟಿ ನೀಡಿದೆ ಎಂದು ದೂರಿನಲ್ಲಿ ನೀಡಲಾಗಿದೆ. ಕಳೆದ ಫೆಬ್ರವರಿ 2 ರಂದು ಚಾಟ್‌ಬಾಟ್ ಇಂಥ ಸಲಹೆ ನೀಡಿದೆ. ಫೆಬ್ರವರಿ 15 ರ ಹೊತ್ತಿದೆಗೆ ಔಷಧಿ ಸಂಪೂರ್ಣ ತ್ಯಜಿಸುವ ಬಗ್ಗೆ ಸೂಚಿಸಿತ್ತು. ಆದರೆ ಫೆಬ್ರವರಿ 14 ರಂದ ಮಗಳು ಮೃತಪಟ್ಟಿದ್ದಳು. ಅಷ್ಟರಲ್ಲಾಗಲೇ ಮಗಳು ಔಷಧಿ ತೆಗೆದುಕೊಳ್ಳುವುದನ್ನ ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.

OpenAI ಹೇಳಿದ್ದೇನು?

CNET ಗೆ ನೀಡಿದ ಹೇಳಿಕೆಯಲ್ಲಿ.. OpenAI ವಕ್ತಾರ ಡ್ರೂ ಪುಸಟೆರಿ ಪ್ರತಿಕ್ರಿಯಿಸಿ.. ಇದು ನಂಬಲಾಗದಷ್ಟು ಹೃದಯವಿದ್ರಾವಕ. ಕಂಪನಿಯ ಆಲೋಚನೆಗಳು ಬಾಧಿತ ಪ್ರತಿಯೊಬ್ಬರೊಂದಿಗೂ ಇವೆ. ಸೂಕ್ಷ್ಮ ಮತ್ತು ತುರ್ತು ಸಂದರ್ಭಗಳಲ್ಲಿ ChatGPT ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು OpenAI ಬಲಪಡಿಸುವುದನ್ನು ಮುಂದುವರೆಸಿದೆ. ವೈದ್ಯರು ಮತ್ತು ಇತರ ತಜ್ಞರೊಂದಿಗೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ. ಕಂಪನಿಯು ChatGPT ವೈದ್ಯಕೀಯ ಆರೈಕೆಗೆ ಪರ್ಯಾಯವಲ್ಲ. AI ಜನರು ಆರೋಗ್ಯ ಮಾಹಿತಿಯನ್ನು ಅರ್ಥಮಾಡಿಕೊಳ್ಳಲು, ವಿಮೆ ಮತ್ತು ಸಂಕೀರ್ಣ ಆರೋಗ್ಯ ವ್ಯವಸ್ಥೆಗಳನ್ನು ನಿರ್ವಹಿಸಲು ಮತ್ತು ಅಪಾಯಿಂಟ್‌ಮೆಂಟ್‌ಗಳಿಗೆ ತಯಾರಿ ಮಾಡಲು ಸಹಾಯ ಮಾಡುತ್ತದೆ ಎಂದು ಕಂಪನಿ ಹೇಳಿದೆ.

PREV
Read more Articles on
click me!

Recommended Stories

ಬೀದಿ ನಾಯಿಗಳ ಹಿಂಡಿನಿಂದ ಬಚಾವಾಗಲು 'ಸತ್ತಂತೆ' ನಟಿಸಿದ ಚಾಲಾಕಿ ನಾಯಿ! ಆಸ್ಕರ್ ಲೆವೆಲ್ ನಟನೆಗೆ ನೆಟ್ಟಿಗರು ಫಿದಾ
ಮೊದಲ ಪತ್ನಿಗೆ ಡಿವೋರ್ಸ್ ಬೆನ್ನಲ್ಲೇ ಖ್ಯಾತ ಪತ್ರಕರ್ತೆ ಜೊತೆ ಮದುವೆ; CM ಓಮರ್ ಅಬ್ದುಲ್ಲಾ ಕೈಹಿಡಿದ ನೂತನ ವಧು ಏನು ಓದಿದ್ದಾರೆ?