ನಮಗ್ಯಾರಿಗೆ ಆಗಲಿ ರೈಲಿನಲ್ಲಿ ಅಪರಿಚಿತರ ಭೇಟಿಯಾಗುವುದು ಕಾಮನ್. ಕೆಲವೊಮ್ಮೆ ಆ ಪರಿಚಿತರೇ ಮುಂದೆ ಸ್ನೇಹಿತರಾಗುತ್ತಾರೆ. ಆದರೆ ಇಲ್ಲೋರ್ವ ಯುವತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾಳೆ. ಹೌದು ಆಕೆಗೆ ಟಿಸಿ ಮೇಲೆಯೇ ಕ್ರಶ್ ಆಗಿದೆ. ಯಾವ ಲೆವೆಲ್‌ಗೆ ಅಂದರೆ ಆಕೆ ಕದ್ದು ಮುಚ್ಚಿ ಟಿಸಿ ವಿಡಿಯೋ ಮಾಡಿದ್ದಲ್ಲದೆ, ಅದನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವುದಲ್ಲದೆ, ಜನರು ಇದೀಗ ಈ ಹ್ಯಾಂಡ್‌ಸಂ ಟಿಕೆಟ್ ಕಲೆಕ್ಟರ್ ಅನ್ನ ಹುಡುಕಲು ಪ್ರಾರಂಭಿಸಿದ್ದಾರೆ.
ಕದ್ದು ಮುಚ್ಚಿ ವಿಡಿಯೋ ಮಾಡಿದ ಯುವತಿ
ಗಡ್ಡಧಾರಿ ಟಿಕೆಟ್ ಕಲೆಕ್ಟರ್ (ಟಿಸಿ) ರೈಲಿನ ಎಸಿ ವಿಭಾಗದಲ್ಲಿ ಬಹುಶಃ ವಂದೇ ಭಾರತ್ ಕೋಚ್ ಅನ್ಸುತ್ತೆ. ಟಿಕೆಟ್ ಪರಿಶೀಲಿಸುತ್ತಿರುವುದು ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಒಂದು ಸಣ್ಣ ರೀಲ್ಸ್ ಆಗಿದೆ. ಅಂದಹಾಗೆ ಕ್ಲಿಪ್ ನೋಡಿದಾಗ ಟಿಸಿ ರೈಲಿನೊಳಗೆ ನಡೆದುಕೊಂಡು ಹೋಗುತ್ತಿರುವಾಗ ಟಿಕೆಟ್‌ಗಳನ್ನು ಪರಿಶೀಲಿಸುತ್ತಿರುವುದನ್ನು ಕಾಣಬಹುದು. ಒಬ್ಬ ಮಹಿಳೆ ಅವನ ಮುಂದೆ ಕುಳಿತಿದ್ದಾಳೆ. ಸುಂದರ ಟಿಸಿ ತನ್ನ ಕೆಲಸದಲ್ಲಿ ಮಗ್ನನಾಗಿ ಕಾಣುತ್ತಾರೆ. ಅವರನ್ನು ನೋಡಿದೊಡನೆ ಕಂಪಾರ್ಟ್‌ಮೆಂಟ್‌ನಲ್ಲಿರುವ ಅನೇಕ ಹೆಣ್ಮಕ್ಕಳ ಹೃದಯಗಳು ವೇಗವಾಗಿ ಬಡಿಯುತ್ತಿರುವಂತೆ ಕಾಣುತ್ತಿದೆ. ವಿಡಿಯೋ ಶೇರ್ ಮಾಡಿರುವ ಯುವತಿ, "ನಾನು ಇನ್ಮೇಲೆ ದಿನಾ ರೈಲಿನಲ್ಲಿ ಓಡಾಡ್ತೀನಿ " ಎಂದು ಕ್ಯಾಪ್ಷನ್ ಕೊಟ್ಟಿದ್ದಾಳೆ. ವಿಡಿಯೋದ ಹಿನ್ನೆಲೆಯಲ್ಲಿ 'ಕಮಾಂಡೋ 3' ಚಿತ್ರದ ಅರಿಜಿತ್ ಸಿಂಗ್‌ರ "ಅಖಿಯಾನ್ ಮಿಲವಂಗಾ" ಹಾಡು ಪ್ಲೇ ಆಗುತ್ತಿರುವುದನ್ನು ಕಾಣಬಹುದು.
ವೈರಲ್ ವಿಡಿಯೋಗೆ ಕೆಲವು ಬಳಕೆದಾರರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಟಿಸಿ ಲುಕ್ ನೋಡಿ "ಟಿಕೆಟ್ ಅನ್ನು ಕಿಟಕಿಯಿಂದ ಎಸೆಯಿರಿ, ನಂತರ ಅವರು ನಿಮ್ಮನ್ನು ಹಿಡಿದು ಕರೆದುಕೊಂಡು ಹೋಗುತ್ತಾರೆ." ಎಂದರೆ ಮತ್ತೆ ಕೆಲವರು "ಅವರು ಸರ್ಕಾರಿ ಸೇವಕ, ಅವರಿಗೆ ತುಂಬಾ ಸುಂದರವಾದ ಹೆಂಡತಿ ಸಿಗುತ್ತಾಳೆ, ಕನಸು ಕಾಣಬೇಡ." ಎಂದಿದ್ದಾರೆ. ಹಾಗೆಯೇ, "ಇತರರ ಸಹೋದರ, ಮಗ, ಗೆಳೆಯನನ್ನು ನೋಡಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಅಂದಹಾಗೆ, ಇದು ಯಾವ ಮಾರ್ಗದ ರೈಲು?", "ನನ್ನ ಬಳಿ ಟಿಕೆಟ್ ಇಲ್ಲ, ದಯವಿಟ್ಟು ನನ್ನನ್ನು ಹಿಡಿಯಿರಿ." "ನನಗೆ ಅವರು ಗೊತ್ತು, ಅವರು ಮದುವೆಯಾಗಿದ್ದಾರೆ." ಎಂದೆಲ್ಲಾ ಪ್ರತಿಕ್ರಿಯೆ ಕೊಟ್ಟಿರುವುದುನ್ನು ನೀವಿಲ್ಲಿ ನೋಡಬಹುದು. ವಿಡಿಯೋ ವೈರಲ್ ಆದ ತಕ್ಷಣ ಈ ಟಿಸಿ ಪ್ರಸಿದ್ಧವಾದರು. ಸದ್ಯ ಜನರು ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು ಹುಡುಕಲು ಪ್ರಾರಂಭಿಸಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ
ನೊಣದಿಂದಾಗಿ 8 ಕೋಟಿ ರೂ.ಗಳಿಸಿದ ಗಾಲ್ಫ್ ಆಟಗಾರನ ವಿಡಿಯೋ
ಗಾಲ್ಫ್ ಆಟವು ಯಾವಾಗಲೂ ಅದರ ತಂತ್ರ, ಕಠಿಣ ಪರಿಶ್ರಮ ಮತ್ತು ಸ್ಟ್ರಾಟರ್ಜಿಗೆ ಹೆಸರುವಾಸಿಯಾಗಿದೆ. ಆದರೆ ಇತ್ತೀಚೆಗೆ ಕ್ರೀಡಾ ಜಗತ್ತನ್ನು ಅಚ್ಚರಿಗೊಳಿಸಿದ ಒಂದು ಘಟನೆ ಬೆಳಕಿಗೆ ಬಂದಿದೆ. ಒಂದು ಸಣ್ಣ ನೊಣವು ಗಾಲ್ಫ್ ಆಟಗಾರನ ಭವಿಷ್ಯವನ್ನೇ ಬದಲಾಯಿಸಿದ್ದು, ಆತ ಪಂದ್ಯವನ್ನು ಗೆಲ್ಲುವಂತೆ ಮಾಡಿದೆ. ಅಷ್ಟು ಮಾತ್ರವಲ್ಲದೆ 8 ಕೋಟಿ ರೂ.ಗಳ ಬಹುಮಾನದ ಹಣವನ್ನೂ ಗೆಲ್ಲುವಂತೆ ಮಾಡಿದೆ.
ಚೆಂಡನ್ನು ರಂಧ್ರಕ್ಕೆ ಹಾಕಿದ ನೊಣ
ಪಂದ್ಯದ ಸಮಯದಲ್ಲಿ, ಒಬ್ಬ ಗಾಲ್ಫ್ ಆಟಗಾರನು ಒಂದು ಶಾಟ್ ಹೊಡೆದನು, ಆದರೆ ಚೆಂಡು ರಂಧ್ರದಿಂದ ಕೆಲವು ಇಂಚುಗಳಷ್ಟು ದೂರದಲ್ಲಿ ನಿಂತಿತು. ಪ್ರೇಕ್ಷಕರು ಮತ್ತು ಆಟಗಾರರು ಚೆಂಡು ಈಗ ಹೊರಗೆ ಉಳಿಯುತ್ತದೆ ಎಂದು ಭಾವಿಸಿದ್ದರು. ನಂತರ ಇದ್ದಕ್ಕಿದ್ದಂತೆ, ಒಂದು ನೊಣ ಬಂದು ಚೆಂಡಿನ ಮೇಲೆ ಕುಳಿತಿತು. ನೊಣದ ಸ್ವಲ್ಪ ತೂಕ ಮತ್ತು ಚಲನೆಯಿಂದಾಗಿ, ಚೆಂಡು ನಿಧಾನವಾಗಿ ಜಾರಲು ಪ್ರಾರಂಭಿಸಿತು ಮತ್ತು ನೇರವಾಗಿ ರಂಧ್ರಕ್ಕೆ ಬಿದ್ದಿತು. ಅಲ್ಲಿದ್ದ ಎಲ್ಲರೂ ಈ ದೃಶ್ಯವನ್ನು ನೋಡಿ ಆಶ್ಚರ್ಯಚಕಿತರಾದರು. ಗಾಲ್ಫ್ ಆಟಗಾರ ಕೂಡ ನಿರಾಶೆಗೊಂಡಿದ್ದನು. ಆದರೆ ನಿಯಮಗಳ ಪ್ರಕಾರ ಚೆಂಡು ರಂಧ್ರದಲ್ಲಿತ್ತು ಮತ್ತು ಅದನ್ನು ಸ್ಕೋರ್‌ನಲ್ಲಿ ಸೇರಿಸಲಾಯಿತು, ನಂತರ ಗಾಲ್ಫ್ ಆಟಗಾರನ ಅದೃಷ್ಟ ಬದಲಾಯಿತು. ಕೊನೆಗೆ ಗಾಲ್ಫ್ ಆಟಗಾರ ಸಂತೋಷದಿಂದ ಸಲೆಬ್ರೇಟ್ ಮಾಡಲು ಪ್ರಾರಂಭಿಸಿದನು.