ಗೆಲುವಿಗಾಗಿ ರೂಲ್ಸ್ ಬ್ರೇಕ್ ಮಾಡಿದ ಗಿಳಿ ! ಬುದ್ಧಿವಂತಿಕೆ ಮೆಚ್ಚಿಕೊಂಡ ನೆಟ್ಟಿಗರು

Published : Jul 25, 2025, 03:28 PM ISTUpdated : Jul 25, 2025, 03:31 PM IST
Smart parrot

ಸಾರಾಂಶ

ಸೋಶಿಯಲ್ ಮೀಡಿಯಾದಲ್ಲಿ ಗಿಳಿಗಳ ವಿಡಿಯೋ ಒಂದು ವೈರಲ್ ಆಗಿದೆ. ಎರಡು ಗಿಳಿಗಳು ಗೆಲುವಿಗಾಗಿ ಸ್ಪರ್ಧೆ ನಡೆಸಿದ್ದು, ಒಂದು ಗಿಳಿಯ ಬುದ್ಧಿವಂತಿಕೆ ಎಲ್ಲರ ಗಮನ ಸೆಳೆದಿದೆ. 

ಸಾಮಾನ್ಯವಾಗಿ ಗೆಲುವಿಗೆ ನಿಯಮ ಅಡ್ಡಿಯಾಗುತ್ತೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ವ್ಯಕ್ತಿ ರೂಲ್ಸ್ ಫಾಲೋ ಮಾಡ್ಬೇಕು. ನೀವು ಸ್ಪರ್ಧೆಯಲ್ಲಿ ಮುಂದೆ ಬಂದ್ರೂ ರೂಲ್ಸ್ ಮುರಿದ್ರೆ ನಿಮಗೆ ಗೆಲ್ಲುವ ಅವಕಾಶ ಸಿಗೋದಿಲ್ಲ. ಗೆಲುವಿಗಾಗಿ ಪ್ರತಿಯೊಬ್ಬ, ಪ್ರತಿ ಕ್ಷಣ ಹೋರಾಟ ನಡೆಸ್ತಾನೆ. ಅದಕ್ಕೆ ಈ ಮುದ್ದಾದ ಗಿಳಿಗಳು ಹೊರತಾಗಿಲ್ಲ. ಒಂದು ಗಿಳಿಗೆ ರೂಲ್ಸ್ ಮುಖ್ಯ. ಇನ್ನೊಂದು ಗಿಳಿಗೆ ಗೆಲುವು ಮುಖ್ಯ. ಸ್ಪರ್ಧೆ ಗೆಲ್ಲುವ ಗುರಿಯಲ್ಲಿ ಮುನ್ನುಗ್ಗಿದ ಗಿಳಿ, ತನ್ನ ಬುದ್ಧಿವಂತಿಕೆ ಉಪಯೋಗಿಸಿದೆ. ಸ್ಮಾರ್ಟ್ ಆಗಿ ಆಟ ಆಡಿದೆ. ಹೆಚ್ಚಿನ ಪರಿಶ್ರಮ ಇಲ್ಲದೆ ತನಗೆ ನೀಡಿದ್ದ ಟಾಸ್ಕ್ ಪೂರೈಸಿದೆ. ಅದಕ್ಕೆ ಗೆಲುವು ಮುಖ್ಯವಾಗಿತ್ತೇ ವಿನಃ ರೂಲ್ಸ್ ಅಲ್ಲ. ಸೋಶಿಯಲ್ ಮೀಡಿಯಾದಲ್ಲಿ ಎರಡು ಕ್ಯೂಟ್ ಗಿಳಿಗಳ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು, ಗಿಳಿಯ ಬುದ್ಧಿವಂತಿಕೆಯನ್ನು ಹಾಡಿ ಹೊಗಳಿದ್ದಾರೆ. ಜೊತೆಗೆ ರೂಲ್ಸ್ ಪಾಲನೆ ಬಗ್ಗೆಯೂ ಇಲ್ಲಿ ಚರ್ಚೆ ನಡೆದಿದೆ.

Thrilllofficial ಹೆಸರಿನ ಇನ್ಸ್ಟಾಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಎರಡು ಗಿಳಿ (Parrot)ಗಳು ಸ್ಪರ್ಧೆಯ ಆರಂಭದಲ್ಲಿ ನಿಂತಿರೋದನ್ನು ನೋಡ್ಬಹುದು. ಅವರ ಟಾಸ್ಕ್ ಅಂದ್ರೆ ರಿಂಗನ್ನು ಸ್ವಲ್ಪ ದೂರದಲ್ಲಿರುವ ಸ್ಯಾಂಡ್ ಒಳಗೆ ಹಾಕೋದು. ಎರಡೂ ಗಿಳಿಗಳು ಆಟ ಶುರು ಮಾಡುತ್ವೆ. ಒಂದು ಗಿಳಿ ಅತಿ ವೇಗದಲ್ಲಿ ಹೋಗಿ ಒಂದು ರಿಂಗನ್ನು ಸ್ಯಾಂಡ್ ಗೆ ಹಾಕುತ್ತೆ. ಇನ್ನೊಂದು ಸ್ವಲ್ಪ ನಿಧಾನ. ಇನ್ನೊಂದು ಗಿಳಿ ಒಂದು ರಿಂಗ್ ಹಾಕೋ ಟೈಂನಲ್ಲಿ ಮೊದಲ ಗಿಳಿ ಎರಡು ರಿಂಗ್ ಹಾಕುತ್ತೆ. ಎರಡನೇ ರಿಂಗ್ ಹಾಕಿದ ಮೊದಲ ಗಿಳಿ ನಂತ್ರ ಮಾಡಿದ ಕೆಲ್ಸ ಅಚ್ಚರಿಗೊಳಿಸುತ್ತೆ. ಮತ್ತೆ ಹಿಂದೆ ಹೋಗಿ, ರಿಂಗ್ ತರುವ ಬದಲು, ಪಕ್ಕದಲ್ಲಿ ಇನ್ನೊಂದು ಗಿಳಿ ಗೂಟಕ್ಕೆ ಸಿಕ್ಕಿಸಿದ್ದ ರಿಂಗ್ ತೆಗೆದು ತನ್ನ ಗೂಟಕ್ಕೆ ಹಾಕಿಕೊಳ್ಳುತ್ತೆ. ಸ್ಪರ್ಧೆ ಆರಂಭವಾದ ಜಾಗದಲ್ಲಿದ್ದ ರಿಂಗ್ ಖಾಲಿಯಾಗೋವರೆಗೂ ಇದೇ ನಡೆಯುತ್ತೆ.

ಸ್ಪರ್ಧೆ (competition)ಯಲ್ಲಿ ರೂಲ್ಸ್ ಬ್ರೇಕ್ ಮಾಡಿ, ಎಲ್ಲ ರಿಂಗನ್ನು ತನ್ನ ಗೂಟಕ್ಕೆ ಸಿಕ್ಕಿಸಿಕೊಂಡ ಗಿಳಿ ನೋಡಿ ನೆರೆದಿದ್ದವರು ಬಿದ್ದು ಬಿದ್ದು ನಕ್ಕಿದ್ದಾರೆ. ನೆಟ್ಟಿಗರು, ಗಿಳಿ ಅತೀ ಬುದ್ಧಿವಂತ ಅಂತ ಕಮೆಂಟ್ ಮಾಡಿದ್ದಾರೆ. ಬುದ್ಧಿವಂತಿಕೆಯಿಂದ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕು ಎಂಬುದಕ್ಕೆ ಪಾಠ ಅಂತ ಕೆಲವರು ಕಮೆಂಟ್ ಮಾಡಿದ್ದಾರೆ. ವಿಡಿಯೋ ಪೋಸ್ಟ್ ಆದ 17 ಗಂಟೆಗೂ ಮೊದಲೇ ಈ ವಿಡಿಯೋಕ್ಕೆ 14 ಲಕ್ಷಕ್ಕೂ ಹೆಚ್ಚು ಲೈಕ್ ಸಿಕ್ಕಿದೆ. ಅನೇಕರು ಕಮೆಂಟ್ ಮಾಡಿದ್ದಾರೆ.

ವಿಡಿಯೋಕ್ಕೆ ʻನಿಯಮಗಳಿಗಿಂತ ಗೆಲುವೇ ಮುಖ್ಯವಾದಾಗʼ ಅಂತ ಶೀರ್ಷಿಕೆ ನೀಡಲಾಗಿದೆ. ಇದು ಗಿಳಿಗಳಿಗೆ ನೀಡುವ ಒಂದು ತರಬೇತಿ ವ್ಯಾಯಾಮ. ಅವುಗಳ ಬುದ್ಧಿವಂತಿಕೆ ಮತ್ತು ಕೌಶಲ್ಯವನ್ನು ಹೆಚ್ಚಿಸಲು ಮಾಡುವ ಒಂದು ಚಟುವಟಿಕೆಯಾಗಿದೆ. ಇದು ಅಮೆಜಾನ್ನ ಬರ್ಡಿ ರಿಂಗ್ ಟಾಸ್ ಮತ್ತು ವಿಕಿಹೌಸ್ ಗಿಣಿ ತರಬೇತಿ ಗೈಡ್ಲೈನ್ಸ್ ನಿಂದ ಪ್ರೇರಣೆಗೊಂಡಿದೆ. ಇಲ್ಲಿನ ಗಂಭೀರ ವಿಷ್ಯ ಅಂದ್ರೆ ವೀಡಿಯೊದಲ್ಲಿರುವ ಗಿಣಿ ಮತ್ತೊಂದು ಗಿಣಿಯಿಂದ ರಿಂಗ್ ತೆಗೆದುಕೊಳ್ಳುವ ಮೂಲಕ ಸ್ಪರ್ಧಾತ್ಮಕ ನಡವಳಿಕೆಯನ್ನು ಪ್ರದರ್ಶಿಸುತ್ತದೆ. ನೈಸರ್ಗಿಕವಾಗಿ ಬದುಕುವ ಬದಲು ಬಂಧಿಯಾಗಿ ಬದುಕುವುದು ಅವರ ಸಂತಾನೋತ್ಪತ್ತಿ ಮತ್ತು ಪ್ರಾದೇಶಿಕ ನಡವಳಿಕೆ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಇದು ತೋರಿಸುತ್ತದೆ.

ಗಿಳಿಗಳಿಗೆ ತರಬೇತಿ ನೀಡುವ ಮುನ್ನ ಪ್ರತ್ಯೇಕ ಗಿಳಿಗಳ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಗಿಳಿಗಳ ವ್ಯಕ್ತಿತ್ವಕ್ಕೆ ತಕ್ಕಂತೆ ತರಬೇತಿ ನೀಡಬೇಕಾಗುತ್ತದೆ. ವಿಕಿಹೌಸ್ ತರಬೇತಿ ವಿಧಾನದ ಪ್ರಕಾರ ಪ್ರತಿ ಗಿಣಿಗೆ ತಂತ್ರ, ತಾಳ್ಮೆ ಮತ್ತು ಸಕಾರಾತ್ಮಕ ಬಲವರ್ಧನೆಯ ವಿಶಿಷ್ಟ ಮಿಶ್ರಣದ ಅಗತ್ಯವಿರುತ್ತದೆ. ಅದನ್ನು ಸರಿಯಾಗಿ ಅರ್ಥ ಮಾಡಿಸುವುದು ತರಬೇತುದಾರನ ಕೈನಲ್ಲಿದೆ.

ವಿಡಿಯೋ ನೋಡಲು ಇದನ್ನು ಕ್ಲಿಕ್‌ ಮಾಡಿ : https://www.instagram.com/reel/DMeUhFMSjHD/?utm_source=ig_web_button_share_sheet&igsh=ZDNlZDc0MzIxNw== 

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್