ಪೆಟ್ರೋಲ್​ ತುಂಬಿಸುವಾಗ ನೋಡಿ ಹೇಗೆ ಮೋಸ ಮಾಡ್ತಾರೆಂದು: ವಿಡಿಯೋ ಮಾಡಿದ್ದಕ್ಕೆ ಅಸಲಿಯತ್ತು ಗೊತ್ತಾಯ್ತು

Published : Aug 25, 2026, 05:43 PM IST
Petrol Bunk Fraud

ಸಾರಾಂಶ

ಪೆಟ್ರೋಲ್ ಬಂಕ್‌ನಲ್ಲಿ ಯುವಕನೊಬ್ಬನಿಗೆ ನಡೆದ ಮೋಸದ ಘಟನೆಯೊಂದು ವಿಡಿಯೋ ಮೂಲಕ ಬಯಲಾಗಿದೆ. 900 ರೂಪಾಯಿ ಪೆಟ್ರೋಲ್ ಹಾಕಲು ಹೇಳಿದಾಗ, ಬಂಕ್ ಸಿಬ್ಬಂದಿ ಮೀಟರ್ ರೀಡಿಂಗ್‌ನಲ್ಲಿ ಜಾಣ್ಮೆಯಿಂದ ವಂಚಿಸಿ 100 ರೂಪಾಯಿ ಕಡಿಮೆ ಪೆಟ್ರೋಲ್ ಹಾಕಿದ್ದಾನೆ. ವಿಡಿಯೋ ಸಾಕ್ಷಿ ಹಿಡಿದು ಪ್ರಶ್ನಿಸಿದಾಗ, ಬಂಕ್‌ನವರು ಹಣವನ್ನು ವಾಪಸ್ ನೀಡಿದ್ದಾರೆ.

ಪೆಟ್ರೋಲ್​ ಬಂಕ್​ಗಳಲ್ಲಿ ಪೆಟ್ರೋಲ್​, ಡೀಸೆಲ್​ ತುಂಬಿಸುವಾಗ ಮಾಡುವ ಮೋಸಗಳ ಬಗ್ಗೆ ಹಲವಾರು ಮಂದಿ ಕಂಪ್ಲೇಂಟ್​ ಮಾಡುತ್ತಲೇ ಇರುತ್ತಾರೆ. 100 ರೂಪಾಯಿ ಪೆಟ್ರೋಲ್​, ಡೀಸೆಲ್​ ಹಾಕಿದ್ರೆ, ನಿಮ್ಮ ಗಾಡಿಯಲ್ಲಿ ಅವರು ಹಾಕೋದು 60-70 ರೂಪಾಯಿಗಳದ್ದಷ್ಟೇ ಎನ್ನುವ ಗಂಭೀರ ಆರೋಪ ಕೆಲವು ಕಡೆಗಳಲ್ಲಿ ಕೇಳಿಬರುವುದು ಇದೆ. ಆದರೆ ವಾಹನ ಸವಾರರು ಗಲಾಟೆ ಮಾಡುವಂತಿಲ್ಲ, ಏಕೆಂದರೆ ನಿಮ್ಮ ಬಳಿ ಆಧಾರವೇಇರುವುದಿಲ್ಲವಲ್ಲ. ಇಲ್ಲೇನೋ ಮೋಸ ನಡೀತಿದೆ ಎಂದು ತಿಳಿದರೂ ಕಂ ಕಿಂ ಅನ್ನುವಂತಿಲ್ಲ. ಕೆಲವೊಮ್ಮೆ ಫುಲ್​ ಟ್ಯಾಂಕ್​ ಖಾಲಿಯಾದಾಗ ನೀವು ಪ್ರತಿಬಾರಿ ಅಷ್ಟೇ ಮೊತ್ತದ ಪೆಟ್ರೋಲ್​ ಹಾಕಿಸಿದಾಗ, ಕೆಲವೊಮ್ಮೆ ಫುಲ್​ ಟ್ಯಾಂಕ್​ ತೋರಿಸುತ್ತದೆ, ಕೆಲವೊಮ್ಮೆ ಸ್ವಲ್ಪ ಆಚೀಚೆ ಬಂದಿರುತ್ತದೆ. ಇದನ್ನು ಕೇಳಿದಾಗ, ಅವರು ನಿಮ್ಮ ಟ್ಯಾಂಕ್​ನಲ್ಲಿ ಮೊದಲೇ ಪೆಟ್ರೋಲ್​ ಇತ್ತು. ಅದಕ್ಕೆ ಹಾಗೆ, ಹೀಗೆ ಎನ್ನುವ ಸಬೂಬು ಹೇಳ್ತಾರೆ.

ಆದರೆ, ಇದೀಗ ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದರಿಂದ ಪೆಟ್ರೋಲ್​ ಬಂಕ್​ ಒಂದರ ಅಸಲಿಯತ್ತು ಬಯಲಿಗೆ ಬಂದಿದೆ. indiaviralpost ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಪೋಸ್ಟ್​ ಮಾಡಲಾಗಿದೆ. ಅಲ್ಲಿಗೆ ಬಂದ ಯುವಕ ತಮ್ಮ ಬೈಕ್​ಗೆ 900 ರೂಪಾಯಿ ಪೆಟ್ರೋಲ್​ ಹಾಕುವಂತೆ ಹೇಳಿದ್ದಾನೆ. ಬಂಕ್​ ಉದ್ಯೋಗಿ ಮೊದಲಿಗೆ 100 ರೂಪಾಯಿ ಹಾಕಿ ಸ್ಟಾಪ್​ ಮಾಡಿದ್ದಾನೆ. ಉದ್ದೇಶಪೂರ್ವಕವಾಗಿ ಯುವಕ, ತನ್ನ ಸ್ನೇಹಿತನ ಜೊತೆ ಮಾತನಾಡುತ್ತಿದ್ದಾನೆ. ಅದನ್ನು ಗಮನಿಸಿದ ಪೆಟ್ರೋಲ್​ ಬಂಕ್​ನವ 100 ರೂಪಾಯಿಗೆ ಹಾಕಿ ಸ್ಟಾಪ್​ ಮಾಡಿದ್ದಾನೆ. ಬಳಿಕ ಯುವಕ, ನಾನು ಹೇಳಿದ್ದು 900 ರೂಪಾಯಿ ಎಂದಾಗ, ಬಂಕ್​ನವ ಅಲ್ಲಿಯೇ ಒಂದು ಪ್ಲ್ಯಾನ್​ ಮಾಡಿದ್ದಾನೆ.

ಅಧಿಕ ತಲೆ ಉಪಯೋಗಿಸಿದ ಬಂಕ್​ನವ

ಅಂದರೆ ಉಳಿದ 800 ರೂಪಾಯಿ ಹಣದ ಪೆಟ್ರೋಲ್​ ಹಾಕಬೇಕಿತ್ತು. ಆದರೆ ಆತ ಭಾರಿ ತಲೆ ಉಪಯೋಗಿಸಿದ್ದಾನೆ. 0 ದಿಂದ ಆರಂಭ ಮಾಡದೇ 100 ರೂಪಾಯಿ ಹಿಂದೆ ಇದ್ದದನ್ನೇ ಮುಂದುವರೆಸಿ 800 ರೂಪಾಯಿಗೆ ನಿಲ್ಲಿಸಿದ್ದಾನೆ. ಇದರ ಅರ್ಥ, ಅವನು ಹಾಕಿದ್ದು ಕೇವಲ 800 ರೂಪಾಯಿಯದ್ದು ಆಗಿದೆ. ಮೀಟರ್​ ಮೇಲೆ ಗಮನ ಹೋಗಬಾರದು ಎಂದು ತಮ್ಮ ಬೈಕ್​ ಗುಣಗಾನ ಮಾಡಲು ಆತ ಶುರು ಮಾಡಿದ ಎಂದೂ ಹೇಳಿದ್ದಾನೆ ಯುವಕ. ಆದರೆ, ಆ ಸಮಯದಲ್ಲಿ ಇದರ ಬಗ್ಗೆ ತಿಳಿಯದೇ 900 ರೂಪಾಯಿ ಕೊಟ್ಟು ಬಂದಿದ್ದಾನೆ ಯುವಕ. 'ಇದರ ಬಗ್ಗೆ ಆಗ ನನಗೆ ಡೌಟ್​ ಬಂದರೂ ಏನೂ ಹೇಳದೇ ಬಂದೆ' ಎಂದಿರುವ ಕಂಟೆಂಟ್​ ಕ್ರಿಯೇಟರ್​ ಆ ಬಳಿಕ ಮನೆಗೆ ಬಂದು ವಿಡಿಯೋ ನೋಡಿದಾಗ ತಾನು ಮೋಸ ಹೋಗಿರುವುದು ತಿಳಿದಿದೆ.

100 ರೂಪಾಯಿ ವಾಪಸ್​

ಕೂಡಲೇ ಪೆಟ್ರೋಲ್​ ಬಂಕ್​ಗೆ ಹೋಗಿ ವಿಷಯ ತಿಳಿಸಿ, ಗಲಾಟೆ ಮಾಡಿದ ಬಳಿಕ 100 ರೂಪಾಯಿ ವಾಪಸ್​ ಕೊಟ್ಟಿದ್ದಾರೆ. ಈ ರೀತಿಯ ಮೋಸ ತುಂಬಾ ಜನಕ್ಕೆ ಆಗುವುದು ಇದೆ. ಆದರೆ, ಗೊತ್ತೇ ಆಗುವುದಿಲ್ಲ. ಗೊತ್ತಾದರೂ ಸಾಕ್ಷಿ ಇರುವುದಿಲ್ಲ ಎನ್ನುವುದೇ ಅವರಿಗೆ ಪ್ಲಸ್​ ಪಾಯಿಂಟ್​ ಆಗಿರುತ್ತದೆ. ಪೆಟ್ರೋಲ್​ ಹಾಕುವಾಗ ಟೈಟ್​ ಹಿಡಿದು ಹಾಕುವುದು, ರೀಡಿಂಗ್​ನಲ್ಲಿ ತಿಳಿಯದೇ ಗೋಲ್​ಮಾಲ್​ ಮಾಡುವುದು... ಇಂಥ ಘಟನೆಗಳು ನಡೆಯುತ್ತಿವೆ ಎಂದು ಹಲವರು ಗಂಭೀರ ಆರೋಪ ಮಾಡುವುದೂ ಇದೆ. ಆದರೆ ಅದನ್ನು ಸಾಬೀತು ಮಾಡುವುದು ಅಷ್ಟು ಸುಲಭವಲ್ಲ. ಅದರಲ್ಲಿಯೂ ಪೆಟ್ರೋಲ್​, ಡೀಸೆಲ್​ ಬೆಲೆ ಗಗನಕ್ಕೆ ಏರುತ್ತಿರುವ ಕಾರಣ, ಇಂಥ ಮೋಸ ಮಾಮೂಲಾಗಿಬಿಟ್ಟಿದೆ!

PREV
Read more Articles on
click me!

Recommended Stories

ಕಸದಲ್ಲಿ ಸಿಕ್ಕಿತು ಚಾಕೊಲೇಟ್‌ಗಳ ರಾಶಿ; ಚೀಲ, ಪಾತ್ರೆ ಹಿಡಿದು ಮುಗಿಬಿದ್ದ ಜನ
ಭಾರತಕ್ಕೆ ಬಂದ್ರು ಸುಂದರ ಕ್ರಿಕೆಟ್‌ ಆಟಗಾರ್ತಿ; ರಾತ್ರೋರಾತ್ರಿ ಫ್ಯಾನ್ಸ್‌ ಕ್ರಶ್, ಸ್ಮೃತಿ ಮಂಧನಾರನ್ನೇ ಹಿಂದಿಕ್ಕಿದ ಚೆಲುವೆ..! ಯಾರೀಕೆ?