ಅಜ್ಜನ ಜೊತೆ ಸೇರಿ ಆಟಿಕೆ ಕ್ಲೀನ್ ಮಾಡಿದ ನೀರುನಾಯಿ ಮರಿಗಳು! ಬಹುಮಾನ ಏನು ಸಿಕ್ತು ನೋಡಿ! (ವಿಡಿಯೋ)

Published : Jun 09, 2026, 01:38 PM IST
Viral Video Shows Otter Pups in Norway Cleaning Toys and Getting an Ice Cube Reward

ಸಾರಾಂಶ

ನಾರ್ವೆಯ ಅಕ್ವೇರಿಯಂ ಒಂದರಲ್ಲಿ ನೀರುನಾಯಿ ಮರಿಗಳು ತಮ್ಮ ಅಜ್ಜನ ಜೊತೆ ಸೇರಿ ಆಟಿಕೆಗಳನ್ನು ಅಚ್ಚುಕಟ್ಟಾಗಿ ಸ್ವಚ್ಛಗೊಳಿಸಿವೆ. ಕೆಲಸ ಮುಗಿದ ಮೇಲೆ ಅಜ್ಜ ಪ್ರೀತಿಯಿಂದ ಐಸ್ ಕ್ಯೂಬ್ಸ್ ಬಹುಮಾನ ನೀಡಿದ್ದು, ಪ್ರಾಣಿಗಳ ಈ ಬಾಂಧವ್ಯ ಮತ್ತು ಬುದ್ಧಿವಂತಿಕೆಯ ವಿಡಿಯೋ ಈಗ ವೈರಲ್ ಆಗಿದೆ.

ನಾರ್ವೆಯ ಅಕ್ವೇರಿಯಂ ಒಂದರಲ್ಲಿ ಮನಸಿಗೆ ತಟ್ಟುವ ವಿಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಕತ್ ವೈರಲ್ ಆಗ್ತಿದೆ. ಈ ವಿಡಿಯೋ ಎಷ್ಟು ಮುದ್ದಾಗಿದೆ ಎಂದರೆ ಇದನ್ನ ಇಷ್ಟಪಡದ ಜೀವಗಳೇ ಇರಲಿಕ್ಕಿಲ್ಲ. ಮನುಷ್ಯನಿಗೆ ಮಾತ್ರ ಬುದ್ಧಿ ಇದೆ ಅಂತಾ ಹೇಳೋದು ಕೇಳಿರ್ತಿರಿ. ಆದರೆ ಈ ವಿಡಿಯೋ ನೋಡುವಾಗ ಮನುಷ್ಯನಷ್ಟೇ ನೀರುನಾಯಿಗಳು ಸ್ಮಾರ್ಟ್, ನಮ್ಮಂತೆ ಅವುಗಳಿಗೆ ಸೂಕ್ಷತೆ ಇದೆ. ಭಾವನೆಗಳಿವೆ ಅಂತಾ ಅನ್ನಿಸದೆ ಇರದು. ಸದ್ಯ ವೈರಲ್ ಆಗಿರುವ ಈ ವಿಡಿಯೋದಲ್ಲಿ ಅಕ್ವೇರಿಯಂ ಮುಚ್ಚಿದ ನಂತರ, ಕೆಲವು ನೀರುನಾಯಿ ಮರಿಗಳು ತಮ್ಮ ಅಜ್ಜನ ಜೊತೆ ಸೇರಿ ಆಟಿಕೆಗಳನ್ನು ಕ್ಲೀನ್ ಮಾಡುವ ದೃಶ್ಯ ಕಾಣಬಹುದಾಗಿದೆ. ಪ್ರಾಣಿಗಳ ನಡುವಿನ ಈ ಸಹಕಾರ ಮತ್ತು ಶಿಸ್ತನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಈ ವಿಡಿಯೋವನ್ನು ನಾರ್ವೆ ಮೂಲದ್ದು ಎಂದು ಹೇಳಲಾಗಿದೆ.

ವಿಡಿಯೋ ಶುರುವಾದಾಗ, ನೀರುನಾಯಿ ಮರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಆಟಿಕೆಗಳನ್ನು ಒಂದೊಂದಾಗಿ ಸಂಗ್ರಹಿಸುವುದನ್ನು ಕಾಣಬಹುದು. ಹಿರಿಯ ನೀರುನಾಯಿ (ಅಜ್ಜ) ಎಲ್ಲವನ್ನೂ ಗಮನಿಸುತ್ತಾ, ಎಲ್ಲ ಆಟಿಕೆಗಳನ್ನು ಸರಿಯಾದ ಜಾಗದಲ್ಲಿ ಇಡುವುದನ್ನು ಖಚಿತಪಡಿಸಿಕೊಳ್ಳುತ್ತದೆ. ಈ ಕ್ಲೀನಿಂಗ್ ಕೆಲಸ ಮುಗಿದ ತಕ್ಷಣ, ಅಜ್ಜ ಆ ಮರಿಗಳಿಗೆ ಬಹುಮಾನವಾಗಿ ಐಸ್ ಕ್ಯೂಬ್‌ಗಳನ್ನು ನೀಡುತ್ತಾನೆ. ಈ ದೃಶ್ಯ ನೋಡಿದ ಪ್ರೇಕ್ಷಕರಿಗೆ ಅಷ್ಟೇ ಖುಷಿ ಕೊಟ್ಟಿದೆ.

 

ವಿಡಿಯೋ ನೋಡಿ ನೆಟ್ಟಿಗರು ಏನಂದ್ರು?

ಸೋಶಿಯಲ್ ಮೀಡಿಯಾ(Social media)ದಲ್ಲಿ ಈ ವೈರಲ್ ವಿಡಿಯೋ(Viral video) ನೋಡಿದ ಜನ, ಪ್ರಾಣಿಗಳ ಬುದ್ಧಿವಂತಿಕೆ ಮತ್ತು ಕುಟುಂಬದ ಬಾಂಧವ್ಯವನ್ನು ಕೊಂಡಾಡಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಮಕ್ಕಳು ಜವಾಬ್ದಾರಿ ಕಲಿಯುವಂತೆಯೇ ಈ ನೀರುನಾಯಿ ಮರಿಗಳು ವರ್ತಿಸುತ್ತಿವೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಬಹುಮಾನವಾಗಿ ಐಸ್ ಕ್ಯೂಬ್ಸ್ ನೀಡಿರುವುದು, ಶಿಸ್ತಿನ ಜೊತೆಗೆ ಪ್ರೀತಿಯನ್ನೂ ತೋರಿಸುತ್ತದೆ ಎಂದು ಹೇಳಿದ್ದಾರೆ.

ಪ್ರಾಣಿ ಪ್ರಪಂಚದಲ್ಲೂ ಸಹಕಾರ ಮತ್ತು ನಿಯಮಗಳನ್ನು ಕಲಿಸುವುದು ಎಷ್ಟು ಮುಖ್ಯ ಎಂಬುದನ್ನು ಈ ವಿಡಿಯೋ ನೆನಪಿಸುತ್ತದೆ ಎಂದು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ಈ ವಿಡಿಯೋ ಈಗಾಗಲೇ ಹಲವು ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿದಾಡುತ್ತಿದ್ದು, ನೈಸರ್ಗಿಕ ಪಾಲನೆ ಮತ್ತು ತಂಡ ಸ್ಫೂರ್ತಿಗೆ ಉತ್ತಮ ಉದಾಹರಣೆಯಾಗಿದೆ.

ಪ್ರಾಣಿಗಳ ವರ್ತನೆಯಿಂದ ಪಾಠ

ತಜ್ಞರ ಪ್ರಕಾರ, ನೀರುನಾಯಿಗಳಂತಹ ಅನೇಕ ಡೊಮೆಸ್ಟಿಕ್ ಎನಿಮಲ್ಸ್ ಮಾನವ ಸಂವಹನವನ್ನು ಹೋಲುವ ಸಂಕೀರ್ಣ ನಡವಳಿಕೆಗಳನ್ನು ಪ್ರದರ್ಶಿಸುತ್ತವೆ. ನಾರ್ವೆಯ ಈ ಕ್ಲಿಪ್, ಪ್ರಾಣಿಗಳು ತಮ್ಮ ಮರಿಗಳಿಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹದ ಮೂಲಕ ಹೇಗೆ ಕಲಿಸುತ್ತವೆ ಎಂಬ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ.

ಉತ್ತಮ ನಡವಳಿಕೆಗೆ ಐಸ್ ಕ್ಯೂಬ್ಸ್ ಬಹುಮಾನವಾಗಿ ನೀಡಿರುವುದು ಅವುಗಳು ಆ ರೀತಿ ಶಿಸ್ತು, ಉತ್ತಮ ನಡೆವಳಿಕೆ ಕಲಿಯಲು ಸಾ ಈ ದೃಶ್ಯ ಕೇವಲ ಮನರಂಜನೆ ಮಾತ್ರವಲ್ಲ, ಪ್ರಾಣಿಗಳ ಶಿಸ್ತು ಮತ್ತು ಬಾಂಧವ್ಯದ ಬಗ್ಗೆ ಒಂದು ಒಳನೋಟ ನೀಡುವ ಶೈಕ್ಷಣಿಕ ಪಾಠವೂ ಆಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

PREV
Read more Articles on
click me!

Recommended Stories

ರೈಲಿನಲ್ಲಿ ಟಿಕೆಟ್ ಕೇಳಿದ್ದಕ್ಕೆ ಟಿಟಿಇ ಮೇಲೆ ಹಲ್ಲೆ ಮಾಡಿದ ಯುವತಿ: ವೈರಲ್ ವಿಡಿಯೋದ ಅಸಲಿಯತ್ತೇನು?
ಬೆಂಗಳೂರು Vs ಮುಂಬೈ ಆಟೋ ಚಾಲಕರು: 'ಇಲ್ಲಿ ಮೀಟರ್ ಹಾಕಲ್ಲ, ಅಲ್ಲಿ ಚೌಕಾಸಿಯೇ ಮಾಡಲ್ಲ!' ಪೋಸ್ಟ್ ವೈರಲ್