
ರಾಜಕಾರಣ, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳ ಅಂಗರಕ್ಷಕರಿಗೆ ಸಾಧಾರಣವಾಗಿ ಯಾವಾಗಲೂ ಡಿಮಾಂಡ್ ಇದ್ದೇ ಇರುತ್ತದೆ. ಸೆಲೆಬ್ರಿಟಿಗಳ ಜೊತೆ ಅವರು ಸದಾ ಕಾಣಿಸಿಕೊಳ್ಳುವ ಕಾರಣದಿಂದ ಅವರ ಮೇಲೂ ಜನರ ದೃಷ್ಟಿ ನೆಟ್ಟಿರುತ್ತದೆ. ಅದರಲ್ಲಿಯೂ ಅವರು ಹ್ಯಾಂಡ್ಸಮ್ ಇದ್ದರಂತೂ ಯುವತಿಯರು ಅಟ್ರ್ಯಾಕ್ಟ್ ಆಗುವುದು ಸಹಜವಾಗಿದೆ. ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಂಗರಕ್ಷಕನಿಗೂ ಅದೇ ರೀತಿ ಆಗಿದೆ. ಹಲವು ಕಡೆಗಳಲ್ಲಿ ರಾಷ್ಟ್ರಪತಿಗಳ ಆಗಮಿಸುವಾಗ ಅವರಿಂತಲೂ ಹೆಚ್ಚಾಗಿ ಯುವತಿಯರು ಅಂಗರಕ್ಷಕನನ್ನೇ ನೋಡಲು ಹಾತೊರೆಯುವುದಾಗಿ ವರದಿಯಾಗಿದೆ.
ಅಷ್ಟಕ್ಕೂ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹ್ಯಾಂಡ್ಸಮ್ ಅಂಗರಕ್ಷಕನ ಹೆಸರು ಮೇಜರ್ ರಿಷಬ್ ಸಿಂಗ್ ಸಂಬ್ಯಾಲ್. ಅವರು ರಾಷ್ಟ್ರಪತಿ ಅವರಂತೆಯೇ ಜನಪ್ರಿಯರಾಗಿದ್ದಾರೆ. ಅವರ ಅಟ್ರ್ಯಾಕ್ಟಿವ್ನೆಸ್ನಿಂದಾಗಿ ಜನರು ಅದರಲ್ಲಿಯೂ ಹೆಚ್ಚಾಗಿ ಯುವತಿಯರು ರಿಷಬ್ ಸಿಂಗ್ ಅವರು ಬಂದಾಗಲೆಲ್ಲಾ ಮುತ್ತಿಗೆ ಹಾಕುವುದು ಇದೆ. ಇದೇ ಕಾರಣಕ್ಕೆ, ಎಲ್ಲೇ ಹೋದರೂ ಅವರನ್ನು ಯುವತಿಯರಿಂದ ತಡೆಯುವುದು ಕಷ್ಟವಾಗಿದ್ದು, ಬಾಡಿಗಾರ್ಡ್ಗೇ ಬೇಕಿದೆ ಬಾಡಿಗಾರ್ಡ್ ಎನ್ನುವ ವಿಷಯ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಅಂದಹಾಗೆ, ಮೇಜರ್ ರಿಷಬ್ ಸಿಂಗ್ ಸಂಬ್ಯಾಲ್ (Aide-de-Camp) ಜಮ್ಮುವಿನ ಸಾಂಬಾ ಮೂಲದವರು. ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (NDA) ಹಳೆಯ ವಿದ್ಯಾರ್ಥಿ ಮತ್ತು 4 ಪ್ಯಾರಾ (ವಿಶೇಷ ಪಡೆ)ಯಲ್ಲಿ ಕೆಲಸ ಮಾಡಿದವರು. ಇವರು, ಭದ್ರತಾ ನಿರ್ವಹಣೆ ಮತ್ತು ವಿದ್ಯುಕ್ತ ಪ್ರೋಟೋಕಾಲ್‌ಗಳಿಗೆ ಸಹಾಯ ಮಾಡುವ ಮೂಲಕ ರಾಷ್ಟ್ರಪತಿಗಳಿಗೆ ನಿರಂತರ ನೆರಳಿನಂತೆ ಸೇವೆ ಸಲ್ಲಿಸುತ್ತಾರೆ. ಅವರು ತಮ್ಮ ವೃತ್ತಿಪರ ಶಿಸ್ತಿನಿಂದಾಗಿ ವೈರಲ್ ಆಗುತ್ತಲೇ ಇರುತ್ತಾರೆ.
ಇವರು ಒಬ್ಬರೇ ಹೋದಾಗ, ಯುವತಿಯರು ಇವರನ್ನು ಸುತ್ತುವರಿಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಬಾಡಿಗಾರ್ಡ್ಗೇ ಬೇಕಿಗೆ ಬಾಡಿಗಾರ್ಡ್ ಎನ್ನುತ್ತಿದ್ದಾರೆ.