
ಮನೆಯ ಕೋಣೆಯೊಂದರಲ್ಲಿ ಕುಳಿತುಕೊಂಡು ಯಾವುದೇ ಕಾರಣವನ್ನೂ ಹೇಳದೇ ಕಣ್ಣೀರು ಹಾಕುತ್ತಿದ್ದ ಹೆಂಡತಿಯ ಬಳಿ ಹೋದ ಗಂಡ ಆಕೆಯ ಕಣ್ಣೀರಿಗೆ ಕಾರಣವೇನೆಂದು ಕಂಡುಹಿಡಿಯಲು ಮುಂದಾಗಿದ್ದಾನೆ. ಹೆಂಡತಿ ಕಣ್ಣೀರನ್ನು ಮೈಕ್ರೋಸ್ಕೋಪ್‌ನಲ್ಲಿ ಪರೀಕ್ಷಿಸಿ ಗಂಡನೇ ಮೂರ್ಛೆ ಹೋದ ವಿಡಿಯೋ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಹೊಸತನಕ್ಕಾಗಿ ಜನ ಹಾತೊರೆಯುತ್ತಿದ್ದಾರೆ. ವಿಭಿನ್ನವಾದ ವಿಷಯಗಳನ್ನು ಸೃಷ್ಟಿಸಲು ಏನೇನೋ ಪ್ರಯತ್ನಗಳು ನಡೆಯುತ್ತಿವೆ. ಆದರೆ ಕೆಲವೊಮ್ಮೆ ಇವು ವೀಕ್ಷಕರನ್ನು ಕೆರಳಿಸುತ್ತವೆ. ಆದರೆ ಇತ್ತೀಚೆಗೆ ಹಂಚಿಕೊಂಡ ಒಂದು ವಿಡಿಯೋ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದೆ.
ಡ್ರೀಮ್ ಬೋಟ್ 0227 ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಇದೀಗ ಭಾರೀ ವೈರಲ್ ಆಗಿದೆ. ಇದು ಹಳೆಯ ವಿಡಿಯೋ ಆಗಿದ್ದರೂ ಅದೇ ಕಂಟೆಂಟ್ ಅನ್ನು ಪುನಃ ಪ್ರಯತ್ನಿಸಿ ಅಗತ್ಯವಿದ್ದಲ್ಲಿ ಎಡಿಟ್ ಮಾಡಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮನೆಯ ಕೋಣೆಯೊಂದರಲ್ಲಿ ಅಳುತ್ತಿದ್ದ ಹೆಂಡತಿಯ ಬಗ್ಗೆ ಅನುಮಾನಗೊಂಡ ಆಕೆಯ ಗಂಡ ಕಣ್ಣೀರನ್ನು ಒಂದು ಚಮಚದಲ್ಲಿ ತೆಗೆದುಕೊಂಡು ಹೋಗಿ ಮೈಕ್ರೋಸ್ಕೋಪ್‌ನಲ್ಲಿ ಪರಿಶೀಲಿಸುತ್ತಾನೆ. ಅಲ್ಲಿ ಕಂಡ ದೃಶ್ಯಗಳು ವಿಡಿಯೋದ ವಿಷಯವಾಗಿದೆ.
ಇದನ್ನೂ ಓದಿ: ಮದುವೆಗೆ 15 ದಿನ ಮುನ್ನವೇ ಮಸಣ ಸೇರಿದ ಯುವತಿ; ಆಪತ್ತು ತಂದ ಅಣ್ಣನ ಬೈಕ್!
ಹೆಂಡತಿಯ ಕಣ್ಣೀರಿನಲ್ಲಿ ಅವಳ ಮನದಾಳದ ಆಸೆಗಳ ಪ್ರತಿಬಿಂಬವಿದೆ ಎಂದು ತಮಾಷೆಯಾಗಿ ತೋರಿಸುವುದೇ ಈ ವಿಡಿಯೋದ ಉದ್ದೇಶ. ಮಹಿಳೆ ಅಳುತ್ತಿರುವಾಗ, ಗಂಡ ಒಂದು ಚಮಚದಲ್ಲಿ ಅವಳ ಕಣ್ಣೀರನ್ನು ಸಂಗ್ರಹಿಸಿ ಮೈಕ್ರೋಸ್ಕೋಪ್‌ನಲ್ಲಿ ಇದಕ್ಕೆ ಕಾರಣವೇನಿರಬಹುದು ಎಂದು ನೋಡುತ್ತಾನೆ. ಆ ಕಣ್ಣೀರಿನ ಒಂದೊಂದು ಅಣುಗಳಲ್ಲಿಯೂ ಆಭರಣಗಳು, ಸೀರೆಗಳು, ವಿದೇಶ ಪ್ರವಾಸದ ದೃಶ್ಯಗಳು ಕಾಣಿಸಿಕೊಳ್ಳುತ್ತವೆ. ಹೆಣ್ಣನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಎಂಬ ವಿಚಾರವನ್ನು ಈ ವಿಡಿಯೋ ತಮಾಷೆಯಾಗಿ ಚಿತ್ರಿಸುತ್ತದೆ.
ಈ ವಿಡಿಯೋವನ್ನು 30 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅನೇಕರು ನಗುವಿನ ಇಮೋಜಿಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಕೆಲವರು ತಮಾಷೆಯ ಕಾಮೆಂಟ್‌ಗಳನ್ನು ಬರೆದಿದ್ದಾರೆ. ಕಣ್ಣೀರಿನ ಮಹತ್ವ ಮತ್ತು ಗಂಡ-ಹೆಂಡತಿಯ ಸಂಬಂಧದ ಬಗ್ಗೆಯೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಯಾರ ಮನೆಯಲ್ಲಿ ಇಷ್ಟು ಬೆಲೆಬಾಳುವ ಕಣ್ಣೀರು ಸುರಿಸುತ್ತಾರೆ ಎಂದು ಒಬ್ಬರು ಪ್ರಶ್ನಿಸಿದರೆ, ಒಂದು ತೊಟ್ಟು ಕಣ್ಣೀರಿನ ಬೆಲೆ ನಿಮಗೆ ಹೇಗೆ ಗೊತ್ತು ಎಂದು ಮತ್ತೊಬ್ಬರು ಕೇಳಿದ್ದಾರೆ.
ನನ್ನ ಹೆಂಡತಿ ಅಳುತ್ತಿದ್ದರೆ, ಅದರಲ್ಲಿ ಬಿರಿಯಾನಿ, ಚಿಕನ್ ರೈಸ್, ಪಾನಿ ಪೂರಿ, ಮಿಲ್ಕ್ ಕೋವಾ, ಐಸ್ ಕ್ರೀಮ್ ಎಲ್ಲವೂ ಇರುತ್ತಿತ್ತು ಎಂದು ಮತ್ತೊಬ್ಬ ವೀಕ್ಷಕ ಬರೆದಿದ್ದಾರೆ. ಗಂಡ-ಹೆಂಡತಿ ಜಗಳವನ್ನು ಮುಂಚಿತವಾಗಿ ತಿಳಿಸುವ ಯಂತ್ರ ಸಿಗಬಹುದೇ ಎಂದು ಇನ್ನೊಬ್ಬರು ಕೇಳಿದ್ದಾರೆ. ಆದರೆ, ಇದೆಲ್ಲವೂ ತಮಾಷೆಯಾಗಿದ್ದು, ಇಂತಹ ಅನೇಕ ಕಂಟೆಂಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ.