ಚಲಿಸೋ ಕಾರನ್ನೇ ಓಯೋ ರೂಮ್ ಮಾಡಿಕೊಂಡ ಜೋಡಿ! ಕ್ಯಾಬ್‌ ಕ್ಯಾಮರಾದಲ್ಲಿ ಸೆರೆಯಾಯ್ತು ರೊಮ್ಯಾನ್ಸ್ ವಿಡಿಯೋ

Published : Feb 14, 2026, 01:08 PM IST
Cab Driver

ಸಾರಾಂಶ

ಕ್ಯಾಬ್ ಚಾಲಕರು ಇತ್ತೀಚೆಗೆ ವಿಚಿತ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದೆಹಲಿಯಲ್ಲಿ ಮಹಿಳಾ ಗ್ರಾಹಕಿಯೊಬ್ಬಳು ಚಾಲಕನಿಗೆ ಸೆಕ್ಸ್ ಆಫರ್ ನೀಡಿದರೆ, ಮತ್ತೊಂದು ಘಟನೆಯಲ್ಲಿ ಜೋಡಿಯೊಂದು ಕಾರಿನಲ್ಲೇ ಕಾಮಕ್ರೀಡೆಯಲ್ಲಿ ತೊಡಗಿ ಚಾಲಕನಿಗೆ ಮುಜುಗರ ಉಂಟುಮಾಡಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿವೆ.

ಬೆಂಗಳೂರು: ಈಗೀಗ ಕ್ಯಾಬ್ ಡ್ರೈವರ್ಸ್ ಚಿತ್ರ ವಿಚಿತ್ರ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಅಲ್ಲದೇ ಕಸ್ಟಮರ್ಸ್ ಕೂತ ಕೂಡಲೇ ರೈಡ್ ಕ್ಯಾನ್ಸಲ್ ಮಾಡಲು ಹೇಳಿ ಅವರೇ ಮತ್ತೊಂದು ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಎಲ್ಲವೂ ಇರಲಿ. ಮೊನ್ನೆ ಕ್ಯಾಬ್ ಡ್ರೈವರ್ ಶೇರ್ ಮಾಡಿಕೊಂಡ ಸ್ಕ್ರೀನ್ ಶಾಟ್ ಒಂದು ವೈರಲ್ ಆಗಿತ್ತು. ಕಸ್ಟಮರ್ ಅನ್ನು ಪಿಕ್ ಮಾಡಲು ಇನ್ನೇನು ಹೋಗಬೇಕು ಎನ್ನುವಷ್ಟರಲ್ಲಿ ಆ ಕಡೆಯಿಂದ ಬಂದ ಮೆಸೇಜ್ ಡ್ರೈವರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು.

ಡೆಲ್ಲಿಯ ಕ್ಯಾಬ್ ಡ್ರೈವರ್‌ವೊಬ್ಬರಿಗೆ ಓರ್ವ ಕಸ್ಟಮರ್ ಇಸ್ಕಾನ್ ಟೆಂಪಲ್‌ಗೆ ಕಾರು ರೈಡ್ ಬುಕ್ ಮಾಡಿದ್ದರು. ಈ ಘಟನೆಯನ್ನು ಆ ಡ್ರೈವರ್ ವಿಡಿಯೋ ರೆಕಾರ್ಡ್ ಮಾಡಿ ತಮಗಾದ ವಿಚಿತ್ರ ಅನುಭವವನ್ನು ಲೈವ್ ಮೂಲಕ ಬಿಚ್ಚಿಟ್ಟಿದ್ದಾರೆ. ಈ ಘಟನೆಯ ಬಗ್ಗೆ ಮಾತನಾಡಿರುವ ಆ ಡ್ರೈವರ್, 'ಮೊದಲು ಈ ರೀತಿಯ ಘಟನೆಗಳು ಬೈಕ್ ರೈಡರ್, ರ್ಯಾಪಿಡೋ ಡ್ರೈವರ್‌ಗಳ ಜತೆ ಮಾತ್ರ ಆಗುತ್ತಿತ್ತು. ಈಗ ನನ್ನಂತ ಕ್ಯಾಬ್ ರೈಡರ್‌ ಜತೆಗೂ ಸಾಮಾನ್ಯವಾಗುತ್ತಿದೆ ಎಂದು ಹೇಳಿದ್ದರು.

ಕಾರನ್ನೇ ಓಯೋ ರೂಮ್ ಎಂದುಕೊಂಡು ರೊಮ್ಯಾನ್ಸ್ ಮಾಡಿದ ಜೋಡಿ

ಆದರೆ ಇದೀಗ ಜೋಡಿಯೊಂದನ್ನು ಪಿಕ್ ಮಾಡಿದ ಕ್ಯಾಬ್ ಡ್ರೈವರ್ ಮತ್ತೊಂದು ವೀಡಿಯೋ ಶೇರ್ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ಘಟನೆ ಎಲ್ಲಿ, ಯಾವಾಗ ಎನ್ನುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ, ಹಿಂದಿನ ಸೀಟಲ್ಲಿ ಕೂತ ಜೋಡಿಯೊಂದು ತೀರಾ ಮುಜುಗರಕ್ಕೀಡು ಮಾಡುವಂತೆ ತಮ್ಮ ಕಾ*ಮಕ್ರೀಡೆಯನ್ನು ಮುಂದುವರೆಸಿದ್ದು ಈ ಡ್ರೈವರ್‌ಗೆ ನುಂಗಲಾರದ ತುತ್ತಾಗಿದೆ. ಈ ಜೋಡಿ ಚಲಿಸುವ ಕಾರನ್ನೇ ಓಯೋ ರೂಮ್ ಎಂದುಕೊಂಡ ರೀತಿಯಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ. ಮುತ್ತಿನಿಂದ ಆರಂಭವಾದ ಅವರ ಪ್ರಣಯದಾಟ ಇಂಟಿಮೇಟ್ ಹಂತಕ್ಕೆ ತಲುಪಿತ್ತೆಂದು ತಮ್ಮ ಅನುಭವದ ವೀಡಿಯೋ ಹಂಚಿ ಕೊಂಡಿದ್ದಾರೆ. ಇಂಥ ಘಟನೆಗಳು ಅಲ್ಲಲ್ಲಿ ನಡೆಯುತ್ತಿರುವುದು, ವರದಿಯಾಗುತ್ತಿರುವುದು ಸುಳ್ಳಲ್ಲ. ಆದರೆ, ಹರಿದಾಡುತ್ತಿರುವ ವೈರಲ್ ವೀಡಿಯೋಗಳು ನೈಜವೋ ಅಥವಾ ರೀಲ್ಸ್‌ಗಾಗಿಯೇ ಮಾಡಿದ್ದವೆಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಳ್ಳುವುದು ಕಷ್ಟವಾಗುತ್ತಿದೆ.

 

ಸೆ*ಕ್ಸ್ ಆಫರ್ ಕೊಟ್ಟಿದ್ದ ಕಸ್ಟಮರ್!

ಒಂದೆರಡು ದಿನಗಳ ಹಿಂದೆ ವೈರಲ್ ಆದ ವೀಡಿಯೋದಲ್ಲಿ ಇಸ್ಕಾನ್ ಟೆಂಪಲ್‌ಗೆ ಮಹಿಳೆಯೊಬ್ಬಳು ರೈಡ್ ಬುಕ್ ಮಾಡಿದ್ದರು. ಮೊದಲಿಗೆ ಕಸ್ಟಮರ್ ಹೆಲೋ ಬ್ರೋ ಎಂದು ರೈಡಿಂಗ್ ಆ್ಯಪ್ ಮೂಲಕ ಮೆಸೇಜ್ ಕಳಿಸಿದ್ದಾರೆ. ಸಹಜವಾಗಿಯೇ ಈ ಕ್ಯಾಬ್ ಚಾಲಕ ಹಾಯ್ ಎಂದು ರಿಪ್ಲೆ ಮಾಡಿದರೆ, ಅವರು ಬ್ರೋ ಸೆ*ಕ್ಸ್ ಮಾಡುತ್ತೀರಾ ಎಂದು ಕೇಳಿದ್ದಾರೆ. ಅಷ್ಟೇ ಅಲ್ಲ ಮುಂದುವರಿದು, ವಾಟ್ಸ್ ಆ್ಯಪ್ ನಂಬರ್ ಶೇರ್ ಮಾಡಲು ಕೇಳಿದ್ದಾಳೆ. ಕಕ್ಕಾಬಿಕ್ಕಿಯಾದ ಚಾಲಕ ಮಹಿಳೆಯ ಆಫರ್ ರಿಜೆಕ್ಟ್ ಮಾಡಿದ್ದಾನೆ. ಕೂಡಲೇ ಆಕೆಯೂ ರೈಡ್ ಕ್ಯಾನ್ಸಲ್ ಮಾಡಿದ್ದಾರೆ.

 

ಅನ್ಯ ರಾಜ್ಯಗಳಿಂದ ಬೆಂಗಳೂರು ಸೇರಿ ದೇಶದ ಬೇರೆಡೆ ವಲಸೆ ಹೋಗುವವರಿಗೆ ಯಾರ ಕಟ್ಟುಪಾಡುಗಳೂ ಇರುವುದಿಲ್ಲ. ತಮ್ಮಿಚ್ಛೆಯಂತೆ ಸ್ವೇಚ್ಛೆಯಿಂದ ಬದುಕುವ ಯುವಕರು ಇಂಥ ಕೆಲವು ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ಆ ಮೂಲಕ ತಾವೆಲ್ಲಿದ್ದೇವೆ ಎಂಬುದನ್ನೇ ಮರೆತು, ಅಲ್ಲಿನ ಸಂಸ್ಕೃತಿ, ಭಾಷೆ ಹಾಗೂ ಜನರಿಗೆ ಗೌರವ ಕೊಡುವುದನ್ನು ಮರೆಯುತ್ತಿದ್ದಾರೆ.

ಅದರಲ್ಲಿಯೂ ಸಾಮಾನ್ಯವಾಗಿ ಸುಲಭವಾಗಿ ಕಮ್ಯೂಟ್ ಮಾಡಲು ಕ್ಯಾಬ್‌ಗಳನ್ನು ಪ್ರತಿಯೊಬ್ಬರೂ ಅವಲಂಬಿಸುತ್ತಾರೆ. ಬೆಂಗಳೂರಿನಂಥ ಊರಲ್ಲಿ ಭಾಷಾ ಸಮಸ್ಯೆಯಿಂದ ಅನ್ಯ ರಾಜ್ಯದ ವಲಸಿಗರೊಂದಿಗೆ ಸಮಸ್ಯೆ ಉದ್ಭವವಾದರೆ, ಮತ್ತೊಂದೆಡೆ ಕುಡಿದು ಅನುಚಿತ ವರ್ತನೆಯಿಂದ ಹಲವು ದುರ್ಘಟನೆಗಳು ನಡೆಯುತ್ತಿವೆ. ಆದರೆ, ಸೆ*ಕ್ಸ್ ಆಫರ್ ನೀಡುವುದು ಅಥವಾ ಕಾರಲ್ಲೇ ಕುಳಿತುಕೊಂಡೇ ನಾಲ್ಕು ಗೋಡೆಗಳ ನಡುವೆ ಮಾಡಬೇಕಾದ ಕಾರ್ಯವನ್ನು ಮಾಡೋದನ್ನು ಮಾಡಿದರೆ ಎಂಥವರಿಗಾದರೂ ಮುಜುಗರ ಆಗೋದು ಗ್ಯಾರಂಟಿ. ಇಂಥ ವರ್ತನೆಗಳಿಗೆ ಸಂಬಂಧಿಸಿದೆ ವೀಡಿಯೋಗಳು ಇನ್ನು ಮುಂದೆ ಆಗಾಗ ಶೇರ್ ಆಗುವುದರಲ್ಲಿ ಅನುಮಾನವೇ ಇಲ್ಲ.

 

PREV
Read more Articles on
click me!

Recommended Stories

ವಿಜಯ್-ವರ್ಜೀನಿ ಖಾಸಗಿ ಫೋಟೋ ವೈರಲ್ ಮಾಡ್ತಿರೋದು ಯಾರು? ರಶ್ಮಿಕಾಗೆ ಯಾಕ್ ಇಷ್ಟೊಂದು ಕಾಟ?
Rose Day : ಪತಿಗೆ ಪ್ರೀತಿಯ ಮಳೆಗೈದ ಪತ್ನಿ, ಮನೆಗೆ ಬಂದ ಪೊಲೀಸ್