ದೇವಸ್ಥಾನಕ್ಕೆ ಕ್ಯಾಬ್ ಬುಕ್; ಊಬರ್ ಡ್ರೈವರ್‌ಗೆ ಸೆ*ಕ್ಸ್ ಆಫರ್ ಕೊಟ್ಟ ಕಸ್ಟಮರ್! ಆಮೇಲೆ ಆಗಿದ್ದೇನು? ವಿಡಿಯೋ ನೋಡಿ

Published : Feb 14, 2026, 11:45 AM IST
Cab Driver

ಸಾರಾಂಶ

ದೆಹಲಿಯ ಊಬರ್ ಕ್ಯಾಬ್ ಚಾಲಕರೊಬ್ಬರಿಗೆ ಇಸ್ಕಾನ್ ದೇವಸ್ಥಾನಕ್ಕೆ ರೈಡ್ ಬುಕ್ ಮಾಡಿದ ಗ್ರಾಹಕರೊಬ್ಬರು ಅಸಭ್ಯ ಆಫರ್ ನೀಡಿದ್ದಾರೆ. ಈ ಆಫರ್ ಅನ್ನು ನಿರಾಕರಿಸಿದ ನಂತರ ಗ್ರಾಹಕರು ರೈಡ್ ಅನ್ನು ರದ್ದುಗೊಳಿಸಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಕ್ಯಾಬ್ ಡ್ರೈವರ್‌ಗಳು ಯಾವ ರೀತಿಯ ವಿಚಿತ್ರ ಸನ್ನಿವೇಷವನ್ನು ಎದುರಿಸುತ್ತಾರೆ ಎನ್ನುವ ಹಲವು ಸುದ್ದಿಗಳು ಪ್ರಕಟವಾಗುತ್ತಲೇ ಇವೆ. ಇದೀಗ ದೆಹಲಿಯ ಗುರುಗ್ರಾಮದಲ್ಲಿ ಊಬರ್ ಕ್ಯಾಬ್ ಡ್ರೈವರ್ ಒಬ್ಬರು ಅನುಭವಿಸಿದ ವಿಚಿತ್ರ ಸನ್ನಿವೇಷವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಡೆಲ್ಲಿಯ ಕ್ಯಾಬ್ ಡ್ರೈವರ್‌ವೊಬ್ಬರಿಗೆ ಓರ್ವ ಕಸ್ಟಮರ್ ಇಸ್ಕಾನ್ ಟೆಂಪಲ್‌ಗೆ ಕಾರು ರೈಡ್ ಬುಕ್ ಮಾಡಿದ್ದರು. ಇದನ್ನು ಆ ಡ್ರೈವರ್ ವಿಡಿಯೋ ರೆಕಾರ್ಡ್ ಮೂಲಕ ತಮಗಾದ ಅನುಭವವನ್ನು ಲೈವ್ ಮೂಲಕ ಬಿಚ್ಚಿಟ್ಟಿದ್ದಾರೆ. ಈ ಘಟನೆಯ ಬಗ್ಗೆ ಮಾತನಾಡಿರುವ ಆ ಡ್ರೈವರ್, 'ಮೊದಲು ಈ ರೀತಿಯ ಘಟನೆಯಗಳು ಬೈಕ್ ರೈಡರ್, ರ್ಯಾಪಿಡೋ ಡ್ರೈವರ್‌ಗಳ ಜತೆ ಆಗುತ್ತಿತ್ತು. ಈಗ ನನ್ನಂತ ಕ್ಯಾಬ್ ರೈಡರ್‌ ಜತೆಗೂ ಆಗುತ್ತಿದೆ. ಇಲ್ಲಿ ನೋಡಿ ಇಸ್ಕಾನ್‌ಗೆ ರೈಡ್ ಮಾಡಿದ್ದಾರೆ.

ಸೆ*ಕ್ಸ್ ಆಫರ್ ಕೊಟ್ಟ ಕಸ್ಟಮರ್!

ಇಸ್ಕಾನ್ ಟೆಂಪಲ್‌ಗೆ ರೈಡ್ ಬುಕ್ ಮಾಡಿದ್ದಾರೆ. ಮೊದಲಿಗೆ ಕಸ್ಟಮರ್ ಹೆಲೋ ಬ್ರೋ ಎಂದು ರೈಡಿಂಗ್ ಅಪ್ಲಿಕೇಷನ್ ಮೂಲಕ ಮೆಸೇಜ್ ಕಳಿಸಿದ್ದಾರೆ. ಅದಕ್ಕೆ ನಾನು ಹಾಯ್ ಎಂದು ರಿಪ್ಲೆ ಮಾಡಿದ್ದೇನೆ. ಅದಕ್ಕೆ ಅವರು ಬ್ರೋ ಸೆ*ಕ್ಸ್ ಮಾಡುತ್ತೀರಾ ಎಂದು ಕೇಳಿದ್ದಾರೆ. ಇದಾದ ಬಳಿಕ ಸೆ*ಕ್ಸ್ ಮಾಡಲು ಇಂಟ್ರೆಸ್ಟ್ ಇದ್ದರೇ ನಿಮ್ಮ ವಾಟ್ಸ್ಅಪ್ ನಂಬರ್ ಕಳಿಸಿ ಎಂದು ಆ ಕಸ್ಟಮರ್ ಕೇಳಿದ್ದಾರೆ. ಈ ಆಫರ್ ಕೇಳಿ ಒಂದು ಕ್ಷಣ ಡ್ರೈವರ್ ಕಕ್ಕಾಬಿಕ್ಕಿಯಾಗಿದ್ದಾನೆ. ಇದಾದ ನಂತರ ಇಲ್ಲ ಎಂದು ಡ್ರೈವರ್ ರಿಪ್ಲೆ ಮಾಡಿದ್ದಾರೆ. ಇದಾದ ಬಳಿಕ ಆ ಕಸ್ಟಮರ್ ಓಕೆ ಸಾರಿ ಎಂದು ಮೆಸೇಜ್ ಮಾಡಿದ್ದಾರೆ. ಇದಾದ ಕೆಲವೇ ಸೆಕೆಂಡ್‌ಗಳಲ್ಲಿ ಆ ಕಸ್ಟಮರ್ ರೈಡ್ ಕ್ಯಾನ್ಸಲ್ ಮಾಡಿದ್ದಾರೆ. ಎಂತಹ ಕಲಿಯುಗವಪ್ಪಾ ಇದು. ಹುಷಾರಾಗಿರಿ ಎಂದು ಆ ಡ್ರೈವರ್ ಹೇಳಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೀಗಿತ್ತು ನೋಡಿ ಆ ವಿಡಿಯೋ:
 

 

disclaimer: ಇದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿರುವ ವಿಡಿಯೋವಾಗಿದ್ದು, ಇದರ ಸತ್ಯಾಸತ್ಯೆಯ ಬಗ್ಗೆ ಖಚಿತ ಮಾಹಿತಿಯಿಲ್ಲ. ಈ ವಿಡಿಯೋ ನಿಜವೂ ಆಗಿರಬಹುದು ಅಥವಾ ರೀಲ್ಸ್‌ಗೋಸ್ಕರ ಅಥವಾ ರೀಲ್ಸ್ ವೈರಲ್ ಮಾಡುವ ಉದ್ದೇಶದಿಂದಲೂ ಆಗಿರಬಹುದು. ಹೀಗಾಗಿ ಈ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ.

PREV
Read more Articles on
click me!

Recommended Stories

ಬಾಳೆಹಣ್ಣಿನ ಸಿಪ್ಪೆ ಮೇಲೆ ಕಾಲಿಟ್ಟರೆ ಜಾರಿ ಬೀಳೋದು ಯಾಕೆ ಗೊತ್ತಾ? ಅಲ್ಲಿದೆ ವಿಜ್ಞಾನದ ಮಹಾ ಗುಟ್ಟು!
ಪ್ರೈವೇಟ್‌ ಜೆಟ್‌ನಲ್ಲಿ ಓಡಾಟ, ಕೋಟಿ ಕೋಟಿ ಆಸ್ತಿ.. ಶ್ರೀಮಂತ ನಟಿ ರಚಿತಾ ರಾಮ್‌ ಸಂಪಾದನೆ ಸೀಕ್ರೆಟ್ ಇದು!